ಫ್ಯಾಕ್ಟ್ ನ್ನು ಅಡಗಿಸಿ ಇಡಬಹುದು : ಬೆನಿನ್‌ ವೈಟ್‌ ಪಾಡ್‌ ಕಾಸ್ಟ್ ಕ್ರಿಯೇಟರ್‌ ಆಗಿ ಫೇಮಸ್‌. ಆಕೆ ಹೇಳುವುದೆಂದರೆ, ತಾನು ಹೇಳುವುದೆಲ್ಲ ಸತ್ಯ ಸಂಗತಿ ಮಾತ್ರ! ಈ ಸತ್ಯ ಶೋಧನೆಗಾಗಿ ಆಕೆ ಬಹಳ ಕಷ್ಟಪಡಬೇಕು. ಸಣ್ಣಪುಟ್ಟ ಸ್ಟುಡಿಯೋಗಳಲ್ಲಿ ಗಂಟೆಗಟ್ಟಲೆ ಕಾಯಬೇಕು. ಬಿಸ್‌ ನೆಸ್‌ ಇಂಡಸ್ಟ್ರಿಯ ತೆರೆಮರೆಯ ಗ್ರೀನ್‌ ರೂಮಿನಲ್ಲಿ ಬಹಳಷ್ಟು ನೈಜ ಘಟನೆಗಳು ನಡೆದುಹೋಗುತ್ತವೆ. ಅಲ್ಲಿ ಬಹಳಷ್ಟು ಫ್ಯಾಕ್ಟ್ ಅಡಗಿಹೋಗುತ್ತವೆ. ಬಹಳಷ್ಟು ಡೀಲ್ಸ್ ಆಗಿ, ಎಷ್ಟೋ ಕೆಡುತ್ತವೆ, ಎಷ್ಟೋ ಕೊಳಕು ಕಾರ್ಪೆಟ್‌ ಕೆಳಗೆ ಅಡಗಿಹೋಗುತ್ತವೆ. ಸ್ಕ್ರೀನ್‌ ಮೇಲೆ ಕಂಡಿದ್ದನ್ನು ಮಾತ್ರ ಆಡಿಯೆನ್ಸ್ನಿಜ ಅಂದುಕೊಳ್ಳುತ್ತಾರೆ. ತೆರೆಮರೆಯ ವಿಚಾರ ತಿಳಿಯ ಬಯಸುತ್ತಾರೆ, ಆದರೆ ತಿಳಿಯುವುದು ಹೇಗೆ? ಆಕೆ ಎಷ್ಟೋ ಜನರೊಂದಿಗೆ ವಿಚಾರವಿಮರ್ಶೆ ನಡೆಸಿ, ಫ್ಯಾಕ್ಟ್ಸ್ ಸಂಗ್ರಹಿಸುತ್ತಾರೆ. ಅವು ಮಾಮೂಲಿ ಆಡಿಯೆನ್ಸ್ ಜೊತೆ, ಇಂಡಸ್ಟ್ರಿಯ ಒಳಗುಟ್ಟು ಹಂಚಿಕೊಳ್ಳಬಲ್ಲವು. ಈಗ ವಿಶ್ವದೆಲ್ಲೆಡೆ ಪತ್ರಿಕೆ ಓದುವವರೇ ಕಡಿಮೆ ಆಗಿರುವಾಗ, ಗಾಸಿಪ್‌ ಉಣಬಡಿಸುವ ಪಾಡ್‌ ಕಾಸ್ಟ್ ಗಳಿಂದ ಜನ ಮಜಾ ಪಡೆಯುತ್ತಾರೆ.

image-1-ssl-elmo-s-got-the-move

ಮನಸ್ಸಿಗೆ ಮುದ ನೀಡುವ ನೆಪದಲ್ಲಿ : ಸೀಸಮ್ ಸ್ಟ್ರೀಟ್‌ ಡಿಕೇಡ್ಸ್ ನಿಂದ ಮಕ್ಕಳಿಗೆ ಮನರಂಜನೆ ಒದಗಿಸುವ ಟಿವಿ ಪ್ರೋಗ್ರಾಮ್ ಅಮೆರಿಕಾ ಹಾಗೂ ಇನ್ನಿತರ ಬಹಳಷ್ಟು ದೇಶಗಳಲ್ಲಿ ಬಲು ಜನಪ್ರಿಯ. ಇವರ ಪಪೆಟ್ಸ್ ಹಾಗೂ ಅವುಗಳ ಮನರಂಜನೀಯ ಆ್ಯಕ್ಷನ್ಸ್ ಸಣ್ಣ ಮಕ್ಕಳನ್ನು ಸದಾ ಟಿವಿಗೇ ಅಂಟಿಕೊಂಡಿರುವಂತೆ ಮಾಡುವಲ್ಲಿ ಯಶಸ್ವಿಯಾಗಿವೆ. ಇದೀಗ ಈ ಕಾರ್ಯಕ್ರಮಗಳು ಟಿವಿ ಬಿಟ್ಟು ವೇದಿಕೆಗಳಿಗೆ ನೇರ ಪರ್ಫಾರ್ಮೆನ್ಸ್ ನೀಡಲು ಬಂದಿವೆ! ಹಲವಾರು ನಗರಗಳಲ್ಲಿ ಮಕ್ಕಳು, ಪೋಷಕರನ್ನು ಸೇರಿಸಿಯೇ ಇಂಥ ಪರ್ಫಾರ್ಮೆನ್ಸ್ ಇರುತ್ತವೆ. ಬದಲಾಗುತ್ತಿರುವ ಪೀಳಿಗೆ ಹಾಗೂ ಒಬ್ಬಂಟಿ ಸಂತಾನದ ಕುಟುಂಬಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ಸೀಸಮ್ ಸ್ಟ್ರೀಟ್‌ ಕ್ಯಾರೆಕ್ಟರ್ಸ್‌ ಇಂದು ಮಕ್ಕಳಿಗೆ ಪೋಷಕರಿಗಿಂತ ಹೆಚ್ಚು ಪ್ರಿಯ! ಏಕೆಂದರೆ ಪೋಷಕರಂತೂ ಆಫೀಸ್‌, ಪಾರ್ಟಿ, ಮೊಬೈಲ್‌ಗಳಲ್ಲಿ ಸದಾ ಬಿಝಿ. ಹಾಗಾಗಿ ಮಕ್ಕಳಿಗೆ ಈ ಕ್ಯಾರೆಕ್ಟರ್‌ ಗಳೇ ಇಷ್ಟ!

dr-kiki-baker-barnes-with-stud-copy

ಸರ್ಕಾರವನ್ನು ನಂಬುವ ಹಾಗಿಲ್ಲ : ಇವರೆಲ್ಲರೂ ಅಥ್ಲೆಟಿಕ್ಸ್ ನಲ್ಲಿ ಮಹಾನ್‌ ಅಚೀವರ್ಸ್‌! ಮುಂದಿನ ಪೀಳಿಗೆಗೆ ಅಥ್ಲೆಟಿಕ್ಸ್ ಸಹ ದೊಡ್ಡ ಕೆರಿಯರ್‌ ಆಗಲಿದೆ ಎಂದು ಡಾ. ಕಿಕೀ ಬೇಕರ್‌ ಹೇಳುತ್ತಿದ್ದಾರೆ, ಇವರ ಪ್ರಕಾರ, ಜೆನ್‌Z ನವರಿಗೆ ಫಿಟ್ನೆಸ್‌ ಭೂತ ಮೆಟ್ಟಿಕೊಂಡಾಗಿನಿಂದ, ಅಥ್ಲೆಟಿಕ್ಸ್ ಚಾಂಪಿಯನ್‌ ಗಾಗಿ ಹೊಸ ನೌಕರಿಗಳು ಸಿಗತೊಡಗಿವೆ. ಅಥ್ಲೆಟಿಕ್ಸ್ ನಲ್ಲಿ ಯಶಸ್ವಿಯಾಗಲು ಬಾಡಿ ಪರ್ಫೆಕ್ಟ್ ಆಗಿರಬೇಕು. ಯಾರ ಬಾಡಿ ಇದಕ್ಕೆ ಸೂಕ್ತವೋ, ಅವರ ಬಳಿ ಕಲಿಯುವವರಿಗೇನೂ ಕಡಿಮೆ ಇಲ್ಲ. ಇಷ್ಟೆಲ್ಲ ಅಥ್ಲೆಟಿಕ್ಸ್ ನಡುವೆ ಯಶಸ್ಸು ಕಂಡ ಹುಡುಗಿಯರು, ಕಿಕೀ ಬಳಿ ಕಲಿಯಲು ಬಂದರು, ತಮ್ಮ ಪ್ರತಿಭೆಗೆ ಹೇಗೆ ಒರೆಹಚ್ಚಬೇಕೆಂದು ಕಲಿತರು. ಕೇವಲ ಸರ್ಕಾರ ನಂಬಿ ಕುಳಿತರೆ ಆಗದು, ಮಾಡೆಲ್ಸ್ ಗೆ ಫಿಟ್‌ ಆಗಿರಲು ಇಂಥವರ ತರಬೇತಿ ಅಗತ್ಯ ಬೇಕು.

lunar

ನಾವು ಯಾರಿಗೇನೂ ಕಡಿಮೆ ಅಲ್ಲ : ಮೋಜುಮಸ್ತಿ, ತಮಾಷೆ, ಪರ್ಫಾರ್ಮೆನ್ಸ್, ಡ್ಯಾನ್ಸ್, ಡ್ರಾಮಾ ಇತ್ಯಾದಿಗಳೆಲ್ಲ ಕೇವಲ ಬಿಳಿಯರ ಸ್ವತ್ತು ಎಂದು ಭಾವಿಸಿದ್ದರೆ ಅದು ಖಂಡಿತಾ ತಪ್ಪು! ಇತ್ತೀಚೆಗೆ ಆಫ್ರಿಕಾ ಸಹ ಅತ್ಯಂತ ಹೊಳೆಯುತ್ತಿದೆ, ವೇಗದ ಪ್ರಗತಿಪಥದಲ್ಲಿದೆ. ನ್ಯೂಯಾರ್ಕ್‌, ಲಂಡನ್ನಿನ ಥಳುಕುಬಳುಕು ಇಲ್ಲೂ ಎದ್ದು ಕಾಣುತ್ತಿದೆ. ದ.ಆಫ್ರಿಕಾದ ಜೊಹಾನ್ಸ್ ಬರ್ಗ್‌ ನಲ್ಲಿನ 39 ಲ್ಯೂನರ್‌ ಗ್ರೂಪ್‌ 10 ಆಫ್ರಿಕನ್‌ ದೇಶಗಳ ಸೂಪರ್‌ ಬೊಂಬಾಟ್‌ ಪರ್ಫಾರ್ಮೆನ್ಸ್ ಟೂರ್‌ ಮುಗಿಸಿ ಬಂದಿವೆ. ಜಿಂಬಾಬ್ವೆಯಲ್ಲಿ 35 ಸಾವಿರ ಮಂದಿಯ ಜನದಟ್ಟಣೆಯಲ್ಲಿ, ಇವರು ತಮ್ಮ ಸಾಧನೆ ಮೆರೆದಿದ್ದಾರೆ. ಹಲವು ದಶಕಗಳಿಂದ `ಕಪ್ಪು ಖಂಡ’ ಎಂದೇ ಹಣೆಹಟ್ಟಿ ಹೊಂದಿದ್ದ ಆಫ್ರಿಕಾ, ಇದೀಗ ಮೈಕೊಡವಿ ಮೇಲೆದ್ದಿದೆ! ಅಲ್ಲಿನ ಕೆಲವು ದೇಶಗಳಂತೂ ನಮ್ಮ ಭಾರತವನ್ನೂ ಮೀರಿಸಿವೆ!

female-mailboat-jumper

ಜನರ ಆಸೆ ಅಭಿಲಾಷೆ : ರನ್ನಿಂಗ್‌, ಜಂಪಿಂಗ್‌, ಪಬ್ಲಿಕ್‌ ಸ್ಪೀಕಿಂಗ್‌ ಜೊತೆ ಮೇಲ್ ಡೆಲಿವರಿ ಸ್ವಿಟ್ಝರ್‌ ಲ್ಯಾಂಡಿನ ಮುಖ್ಯ ಪಾರ್ಟ್ ಟೈಂ ಜಾಬ್‌ ಆಗಿದೆ. ಇದಕ್ಕಾಗಿ ಇಂಟರ್ನ್ಸ್, ಮೂವರೂ ಬಗೆಯ ಕೆಲಸಗಳನ್ನು ಲೇಕ್‌ ಜೆನೆವಾದ ಸುತ್ತಮುತ್ತಲೂ ಇರುವಂಥ ಸಣ್ಣಪುಟ್ಟ ಊರುಗಳಲ್ಲಿ ಬೋಟ್‌ ಮೂಲಕ ಅಂಚೆ ತಲುಪಿಸುತ್ತಾರೆ. ಹಾಗೆ ನೋಡಿದರೆ ಇಂದಿನ ಇಮೇಲ್ ಕಾಲದಲ್ಲಿ ಇಂಥ ಪತ್ರ ವಿನಿಮಯ ಬಲು ಅಪರೂಪ. ಆದರೂ ಎಷ್ಟೋ ವಸ್ತುಗಳು ಅಂಚೆ ಪಾರ್ಸೆಲ್ ಮೂಲಕವೇ ಹೋಗಬೇಕು. ಕೆಲವು ದೇಶಗಳಂತೂ ಈ ನಿಟ್ಟಿನಲ್ಲಿ ತಮಗೆ ಲಾಸ್‌ ಆದರೂ ಇದನ್ನು ಬಿಡುತ್ತಿಲ್ಲ. ಏಕೆಂದರೆ ಅತಿ ದೂರ ಇರುವಂಥ ಊರುಗಳಿಗೆ, ತಾವು ನಿರ್ಲಕ್ಷಿತರು ಎನಿಸಬಾರದೆಂದು ಕಾಳಜಿ. ಹೀಗೆ ದೋಣಿಯಿಂದ ದುಮುಕುತ್ತಿರುವ ಈ ಹುಡುಗಿಯನ್ನು ನೋಡಿ…. ಇವಳ ಬೆನ್ನಿಗಿರುವ ಬ್ಯಾಗಿನಲ್ಲಿ ಅಷ್ಟೂ ಜನರ ಆಸೆ, ಅಭಿಲಾಷೆಗಳು ತುಂಬಿವೆ ಎಂದರೆ ಅತಿಶಯೋಕ್ತಿಯಲ್ಲ!

senior-group-reading-together

ಒಂಟಿಯಾಗಿ ಬದುಕಲು ಕಲಿಯಿರಿ : ಒಂಟಿತನ ಈಗ ವಿಶ್ವದ ಎಲ್ಲೆಡೆಯ ಘೋರ ಶಾಪವಾಗಿದೆ. ಸಣ್ಣ ಕುಟುಂಬಗಳಲ್ಲೂ ಒಂದೇ ಸಂತಾನ, ಅವರವರ ಕೋಣೆಗೇ ಸೀಮಿತರು! ಕೆಲವು ವೈದ್ಯರು ಇದಕ್ಕೆ ಮಹಾಮಾರಿಯಂಥ ಸ್ಟೇಟಸ್‌ ನೀಡುತ್ತಾರೆ ಹಾಗೂ ಆರ್ಟಿಫಿಶಿಯಲ್ ರಿಲೇಶನ್‌ ಶಿಪ್‌ ಲೋನ್ಲಿ ಕ್ಲಬ್ಬುಗಳ ಮೂಲಕ ಪರಸ್ಪರ ಸಾಂಗತ್ಯ ಕಂಡುಕೊಳ್ಳಲು ಸೂಚಿಸುತ್ತಾರೆ. ಅಸಲಿಗೆ ಯಾರೂ ಒಬ್ಬಂಟಿಯಲ್ಲ, ಏಕೆಂದರೆ ಈ ಆಧುನಿಕ ಕಾಲದಲ್ಲಿ ಸಾವಿರಾರು ಸರ್ವೀಸ್‌ ಗಳು ಲಭ್ಯವಿದ್ದು, ಲೋನ್ಲಿಗಳ ಕಾಟ ತಪ್ಪಿಸುತ್ತಿವೆ! ಒಂಟಿತನ ದೂರ ಮಾಡುವ ನೆಪದಲ್ಲಿ, ಮನೆಯಲ್ಲಿದ್ದರು ಬಾಯಿ ಹೊಲಿದುಕೊಂಡು, ಮುಖ ದುಮ್ಮಿಕ್ಕಿಕೊಂಡು ಇದ್ದರೇನು ಲಾಭ? ನೋಡುಗರು ಮಾತ್ರ ಅವರು ಒಂಟಿಯಲ್ಲ ಎಂದು ಭಾವಿಸುತ್ತಾರೆ. ಆದ್ದರಿಂದ ಒಬ್ಬಂಟಿಯಾಗಿ ಬದುಕುವುದನ್ನು ಕಲಿಯಿರಿ, ನಿಮಗೆ ನೀವೇ ದಿಕ್ಕು, ಇದೇ ಸಮಸ್ಯೆಗೆ ಸೂಕ್ತ ಪರಿಹಾರ! ಇಲ್ಲಿ ಸಮಾನಮನಸ್ಕ ವಯೋವೃದ್ಧರನ್ನು ಒಟ್ಟೊಟ್ಟಿಗೆ ಪುಸ್ತಕ ಓದಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ