ಅಥ್ಲೀಟ್ ಸ್ಪೋರ್ಟ್ಸ್ ಅಚೀವರ್ ಅವಾರ್ಡ್
“ಅಸಲಿ ಶಕ್ತಿ ದೇಹದಲ್ಲಿ ಅಲ್ಲ, ಮನಸ್ಸಿನಲ್ಲಿ ಅಡಗಿದೆ. ಇಚ್ಛಾಶಕ್ತಿಯೊಂದೇ ಗುರಿ ಮುಟ್ಟಲು ನೆರವಾಗುವುದು….!”
ಪ್ಯಾರಾ ಆರ್ಚರ್ ಹಾಗೂ ಅದಮ್ಯ ಸಾಹಸದ ಪ್ರತೀಕ ಪಾಯಲ್ ನಾಗ್. ಗಂಭೀರ ದೈಹಿಕ ಸವಾಲುಗಳನ್ನು ಹಿಂದಿಕ್ಕಿ ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಸಾಧಿಸಿದ್ದಾರೆ. ತಮ್ಮ ಸಾಹಸ, ದೃಢ ಸಂಕಲ್ಪ, ಕ್ರೀಡಾ ಉತ್ಕೃಷ್ಟತೆಯಿಂದ ಲಕ್ಷಾಂತರ ಜನರನ್ನು ಪ್ರೇರಿತಗೊಳಿಸಿದ್ದಾರೆ.
“ದೇಹ ಒಂದು ಗಡಿಯನ್ನು ಹಾಕುವುದಿಲ್ಲ, ಮನಸ್ಸಿನ ನಂಬಿಕೆ ಹಾಗೆ ಮಾಡುತ್ತದೆ,” ಎನ್ನುತ್ತಾರೆ, ಒಡಿಶ್ಶಾದ ಬಾಂಗೀರ್ ಜಿಲ್ಲೆಯವರಾದ ಪಾಯಲ್, ಒಂದು ಪ್ಯಾರಾ ಆರ್ಚರಿಯ ಅಗ್ರಪಂಕ್ತಿಯಲ್ಲಿ ಮಿಂಚುತ್ತಿದ್ದಾರೆ.
ತನ್ನ ಕೈಕಾಲುಗಳನ್ನು ಕಳೆದುಕೊಂಡ ನಂತರ ಪಾಯಲ್ ಸಾಮಾನ್ಯ ಜೀವನ ನಡೆಸುತ್ತಾ, ಕ್ರೀಡೆಗೆ ಜಿಗಿದು, ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಡೆಂಟಿಟಿ ಪಡೆದುಕೊಂಡಿದ್ದಾರೆ.
ಆರಂಭದ ಸಂಘರ್ಷ : ಅತಿ ಬಡ ಕುಟುಂಬಕ್ಕೆ ಸೇರಿದ ಪಾಯಲ್, 2015ರಲ್ಲಿ ಒಂದು ಆಕಸ್ಮಿಕ ಶಾರ್ಟ್ ಸರ್ಕ್ಯೂಟ್ ದುರ್ಘಟನೆಯಿಂದ ತನ್ನ ಎರಡು ಕೈಕಾಲುಗಳನ್ನು ಕಳೆದುಕೊಂಡರು. ಹೀಗಾಗಿ ಮುಂದಿನ ಜೀವನವಿಡೀ ಸಂಘರ್ಷ ಒಂದೇ ಉಳಿಯಿತು. ಆಕೆ ಬಾಯಿಯಿಂದಲೇ ಬರವಣಿಗೆ, ಡ್ರಾಯಿಂಗ್ ಕಲಿತರು. ಶಿಕ್ಷಣದ ಮೂಲಕ, ಸರ್ಕಾರಿ ಸಹಾಯದಿಂದ ಮಂದುವರಿದರು.
ಆರ್ಚರಿವರೆಗಿನ ಪ್ರಯಾಣ : ಅಡ್ಯಾಪ್ಟಿಲ್ ಸ್ಪೋರ್ಟ್ಸ್ ಟ್ರೇನಿಂಗ್ ಗೆ ಸೇರಿದ ನಂತರ ಈಕೆಯ ಜೀವನದಲ್ಲಿ ದೊಡ್ಡ ತಿರುವು ಮೂಡಿತು. ಜಮ್ಮು ರಾಜ್ಯದ ವೈಷ್ಣೋದೇವಿ ಬೋರ್ಡ್ ಕಾಂಪ್ಲೆಕ್ಸ್ ನಿಂದ ಈಕೆ ಪ್ಯಾರಾ ಆರ್ಚರಿಯ ತರಬೇತಿ ಪಡೆದರು. ವಿಶೇಷ ಶೂಟಿಂಗ್ ಮೆಕ್ಯಾನಿಸಮ್ ಮೂಲಕ ತನ್ನ ಪ್ರೋಸ್ಥೆಟಿಕ್ ಸ್ಪೋರ್ಟ್ಸ್, ಶೋಲ್ಡರ್ ಪೊಸಿಷನಿಂಗ್, ಬಾಯಿ ಮುಖಾಂತರ ಬಿಲ್ಲುಗಾರಿಕೆಯ ಪ್ರದರ್ಶನ ನೀಡುತ್ತಾರೆ. ಸತತ ಅಭ್ಯಾಸದಿಂದ ಈಕೆ ರಾಷ್ಟ್ರೀಯ ಕ್ರೀಡೆಗಳಲ್ಲಿ ಮಿಂಚಿನ ಆಕರ್ಷಣೆ ಪಡೆದರು.
ರಾಷ್ಟ್ರಿಯ ಅಂತಾರಾಷ್ಟ್ರೀಯ ಸಾಧನೆಗಳು, 6ನೇ ನ್ಯಾಶನಲ್ ಪ್ಯಾರಾ ಆರ್ಚರಿ ಚ್ಯಾಂಪಿಯನ್ ಶಿಪ್, ಜೈಪುರ್(2025) : ಇದರಲ್ಲಿ 2 ಚಿನ್ನದ ಪದಕ, ಮುಖ್ಯ ರಾಷ್ಟ್ರೀಯ ಕ್ರೀಡೆಯಲ್ಲಿ ಮಹತ್ವದ ಸ್ಥಾನ.
7ನೇ ನ್ಯಾಶನಲ್ ಪ್ಯಾರಾ ಆರ್ಚರಿ ಚ್ಯಾಂಪಿಯನ್ ಶಿಪ್, ಪಂಜಾಬ್ (2026) : ರಾಂಕಿಂಗ್ ರೌಂಡ್ ನಲ್ಲಿ ಬೆಳ್ಳಿಪದಕ, ವ್ಯಕ್ತಿಗತವಾಗಿ ಕಂಚಿನ ಪದಕ.
ಏಷ್ಯನ್ ಯೂಥ್ ಪ್ಯಾರಾ ಗೇಮ್ಸ್, ದುಬೈ (2025) : ಅಂತಾರಾಷ್ಟ್ರೀಯ ಡೆಬ್ಯೂ, ರಾಂಕಿಂಗ್ ರೌಂಡ್ ನಲ್ಲಿ 4ನೇ ಸ್ಥಾನ. ಈ ರೀತಿ ಭವಿಷ್ಯದ ಪ್ಯಾರಾಲಿಂಪಿಕ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಒಂದು ದಟ್ಟ ಪ್ರೇರಣೆ, ಕೇವಲ ಕ್ರೀಡಾಪಟುವಲ್ಲ : ಈಕೆಯ ಜೀವನಗಾಥೆ ಇತರ ವಿಕಲಚೇತನರಿಗೆ ದಟ್ಟ ಪ್ರೇರಣೆ ನೀಡುವಂಥದ್ದು, ಕೇವಲ ಕ್ರೀಡಾಕ್ಷೇತ್ರದ ಸೌಲಭ್ಯ ಗಿಟ್ಟಿಸುವುದಲ್ಲ. `ಅಂಗೈಕಲ್ಯ ಶಾಪವಲ್ಲ’ ಎಂದು ಪ್ರಾಕ್ಟಿಕಲ್ ಆಗಿ ನಿರೂಪಿಸಿದ್ದಾರೆ. ಇಂದು ಪಾಯಲ್ ಭಾರತೀಯ ಪ್ಯಾರಾ ಸ್ಪೋರ್ಟ್ಸ್ ನ ಧ್ರುವತಾರೆಯಾಗಿ ನಮ್ಮಿಂದೇನೂ ಆಗದು ಎನ್ನುವವರಿಗೆ ದಿಕ್ಸೂಚಿ ಆಗಿದ್ದಾರೆ!





