40+ನವರು ಸಹ 20+ನವರಂತೆ ಕಾಣಿಸಿಕೊಳ್ಳಲು ಅಗತ್ಯವಾಗಿ ಈ ಸಲಹೆ ಅನುಸರಿಸಬೇಕು…..

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಡೆ ಕಂಡುಬರುವ ಮೆಸೇಜ್‌ ಎಂದರೆ, ಯೂ ಡೋಂಟ್‌ ಲುಕ್‌ ಮೋರ್‌ ಏಜ್‌! ಈ ಕಾಂಪ್ಲಿಮೆಂಟ್‌ ಕೇಳಿಸಿಕೊಳ್ಳಲು ಯಾರಿಗೆ ತಾನೇ ಇಷ್ಟವಾಗದು? ಆದರೆ ಈ ಯಂಗ್‌ಫ್ರೆಶ್‌ ಲುಕ್ಸ್ ಹೊಂದುವುದು ಸುಲಭದ ಕೆಲಸವೇನಲ್ಲ, ಮ್ಯಾಜಿಕ್‌ ನಿಂದ ಏನೂ ನಡೆಯುವುದಿಲ್ಲ. ಇದಕ್ಕಾಗಿ ಅಪ್‌ ಡೇಟೆಡ್‌ ವಾರ್ಡ್‌ ರೋಬ್‌ ಇರಬೇಕು, ಸ್ಮಾರ್ಟ್‌ ಸ್ಕಿನ್ ಕೇರ್‌, ಕ್ಲಿಯರ್‌ ಸ್ಟೈಲಿಂಗ್‌ ಸೆನ್ಸ್, ಗುಡ್‌ ಪೋಸ್ಚರ್ಸ್‌, ಆ್ಯಕ್ಟಿವ್ ಲೈಫ್‌ ಸ್ಟೈಲ್ ಇತ್ಯಾದಿ.

ನೀವು 40+ನವರಾಗಿದ್ದು, 20+ನವರಂತೆ ಕಂಡುಬರಲು ಬಯಸಿದರೆ, ಟೀನೇಜ್‌ ಗರ್ಲ್ಸ್ ತರಹ ನೀವು ಸಹ ಗ್ಲೋಯಿಂಗ್‌ ಸ್ಕಿನ್‌ಟ್ರೆಂಡೀ ಫ್ಯಾಷನ್‌, ನೋ ಏಜಿಂಗ್‌ ವೈಬ್ಸ್ ಬಯಸಿದರೆ ನಿಮ್ಮನ್ನು ನೀವು ರೀಫ್ರೆಶ್‌ ಮಾಡಿಕೊಳ್ಳಿ. ಬನ್ನಿ, ಯಾವ ಸಲಹೆ ಅನುಸರಿಸಿ, ಲುಕ್‌ ಯಂಗ್‌ ದ್ಯಾನ್‌ ಯುವರ್‌ ಏಜ್‌, ಎನಿಸಿಕೊಳ್ಳಬಹುದು ಎಂದು ನೋಡೋಣ.

ಫ್ಯಾಷನ್‌ ಗೇಮ್ ಆನ್‌ ಪಾಯಿಂಟ್‌ ಟೀನ್‌ ಏಜರ್ಸ್‌ ನ ಫ್ಯಾಷನ್‌ ಸೆನ್ಸ್ ಈಗ ಕೇವಲ ಜೀನ್ಸ್ ಟೀ ಶರ್ಟ್ಸ್ ಗಷ್ಟೇ ಸೀಮಿತವಾಗಿಲ್ಲ ಅವರ ಬಳಿ ಕ್ರಾಪ್‌ ಟಾಪ್‌, ಕ್ವಾಡ್ಜ್, ಓವರ್‌ ಸೈರ್ಡ್‌ ಶರ್ಟ್‌ಟೀ ಶರ್ಟ್‌ ಇತ್ಯಾದಿ ಜೊತೆ ಕ್ಯೂಟ್‌ ಸ್ಕರ್ಟ್ಸ್ ನ ಇಡೀ ರೇಂಜ್‌ಇರುತ್ತದೆ. ನೀವು ಸಹ ಅವರೊಂದಿಗೆ ಪೈಪೋಟಿ ನಡೆಸಬಯಸಿದರೆ, ನಿಮ್ಮ ವಾರ್ಡ್‌ ರೋಬ್‌ ನಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ.

ಕ್ವಾರ್ಡ್ಸ್ ಸೆಟ್ಸ್ : ಈ ಲುಕ್‌ ಇನ್‌ ಸ್ಟೆಂಟ್ಲಿ ಪಾಲಿಶ್ಡ್ ಎನಿಸುತ್ತದೆ. ಜೊತೆಗೆ ಸ್ನೀಕರ್ಸ್‌, ಮೆಸ್ಸಿ ಬನ್‌ ಜೊತೆಗೆ ನೀವು ಯಾ ಎಫರ್ಟ್ಸ್ ಇಲ್ಲದೆ ನಿಮ್ಮ ಏಜಿನ ಉಳಿದ ಲೇಡೀಸ್‌ ಗೆ ಸ್ಟೈಲಿಂಗ್‌ ಸೆನ್ಸ್ ನಲ್ಲಿ ಎಷ್ಟೋ ಪಾಲು ಮುಂದಿದ್ದೀರಿ ಎಂದು ಮಿಂಚಬಹುದು.

ಓವರ್‌ ಸೈರ್ಡ್‌ ಟೀರ್‌ ವಿತ್‌ ಬೈಕ್‌ ಶಾರ್ಟ್ಸ್ : ಇದು ಜೆನ್‌Z ನ ಹೊಸ ಯೂನಿಫಾರ್ಮ್ ಎಂದೇ ಹೇಳಬಹುದು. ಇದು ಕಂಫರ್ಟೆಬಲ್ ಭಯಂಕರ ಸ್ಟೈಲಿಶ್‌ ಸಹ. ಪಾರ್ಟಿಗೆ ಯಾ ಹೊಸ ಡ್ರೆಸ್‌ ಧರಿಸಲಿ ಎಂದು ನೀವು ಗೊಂದಲಗೊಂಡಿದ್ದರೆ, ಇಂಥ ಒಂದು ಸಿಂಪಲ್ ಓವರ್‌ ಸೈರ್ಡ್‌ ಟೀಶರ್ಟ್‌ ಧರಿಸಿ ಹೊರಡಿ, ಇಡೀ ಪಾರ್ಟಿಗೆ ನೀವು ಮೋಸ್ಟ್ ಯಂಗ್‌, ಸ್ಟೈಲಿಶ್‌, ಫ್ಯಾಷನೆಬಲ್, ಗ್ಲಾಮರಸ್‌ ಫಿಗರ್‌ ಎನಿಸುವಿರಿ.

ಮೋನೋಕ್ರೋಂ ಲುಕ್ಸ್ : ಒಂದೇ ಕಲರ್‌ ನಲ್ಲಿ ಹೆಡ್‌ ಟೋ ಡ್ರೆಸ್ಸಿಂಗ್‌ ಇದ್ದರೆ, ನಿಮ್ಮನ್ನು ಅದು ಉದ್ದನೇ, ಲೀನ್‌ ವ್ಯಕ್ತಿಯಾಗಿ ಬಿಂಬಿಸುತ್ತದೆ. ಇದರಿಂದ ನೀವು ನಿಮ್ಮ ಬಾಡಿ ಫ್ಯಾಟ್‌ ನ್ನು ಸ್ಟೈಲಿಶ್‌ ಆಗಿ ಕವರ್‌ ಮಾಡಿಕೊಳ್ಳಬಹುದು. ಜೊತೆಗೆ ನೀವು ಯಾವುದೇ ಜಾಗ ಅಂದ್ರೆ ಆಫೀಸ್‌, ಗೆಟ್‌ ಟು ಗೆದರ್‌ ಪಾರ್ಟಿ ಇತ್ಯಾದಿಗಳಲ್ಲಿ ಇದನ್ನು ಧರಿಸಿ ಸ್ಟ್ಯಾಂಡ್‌ ಔಟ್‌ ಮಾಡಬಹುದು. ನಿಮ್ಮದೇ ವಯಸ್ಸಿನ ಫ್ರೆಂಡ್ಸ್ ನಿಮ್ಮ ಈ ಲುಕ್ಸ್ ಕಂಡು ಬೆರಗಾಗುವುದರಲ್ಲಿ ಸಂದೇಹವಿಲ್ಲ, ನಿಮ್ಮಿಂದ ಸ್ಟೈಲಿಶ್‌ ಸಲಹೆ ಪಡೆಯಲು ಧಾವಿಸುತ್ತಾರೆ.

ಲೇಯರಿಂಗ್‌ : ಟೀನ್‌ ಏಜರ್ಸ್‌ ಅಂತೂ ಲೇಯರಿಂಗ್‌ ನ ಮಾಸ್ಟರಿಂಗ್‌ ಮಾಡಿಕೊಂಡಿದ್ದಾರೆ ನೀವು ನಿಮ್ಮ ಹಳೆಯ ಡ್ರೆಸ್‌ ಗೆ ಹೊಸ ಸ್ವರೂಪ ನೀಡಬೇಕೇ? ನಿಮ್ಮ ಸ್ಟೈಲಿಂಗ್‌ ಗೇಮ್ ನ್ನು ನೆಕ್ಟ್ ಲೆವೆಲ್ ‌ಗೆ ಕೊಂಡೊಯ್ಯಬೇಕೇ? ಲೇಯರಿಂಗ್‌ ನಲ್ಲಿ ಬೆಸ್ಟ್ ಬೇಕೆಂದರೆ ಲೈಟ್‌ ವೆಯ್ಟ್ ಜ್ಯಾಕೆಟ್ಸ್, ಶ್ರಗ್ಸ್, ಡೆನಿಮ್ ಬಿಗಿ ಸೈಜ್‌ ಶರ್ಟ್‌ ಇತ್ಯಾದಿಗಳನ್ನು ಸದಾ ಬಳಸುತ್ತಿರಿ.

ಸ್ಕಿನ್‌ ಕೇರ್‌ ಈಸ್‌ ಕ್ವೀನ್‌ ಇದು ಐಸ್‌ ಡಿಪ್‌ ನಿಂದ ಹಿಡಿದು ರೆಟಿನಾಲ್ ವ‌ರೆಗೂ ಅನ್ವಯಿಸುತ್ತದೆ. ಟೀನೇಜರ್ಸ್‌ ಗ್ಲೋ ನಿಮಗೂ ಬೇಕೆಂದರೆ ಚರ್ಮ ಫರ್ಮ್ ನೆಸ್‌ ಖಾಯಂ ಆಗಿ ಉಳಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಸಾಲಿಡ್‌ ಸ್ಕಿನ್‌ ಕೇರ್‌ ಬ್ಯೂಟಿ ಥೆರಪಿ ಫಾಲೋ ಮಾಡಲೇಬೇಕು.

beautiful-young-woman-wearing-fashionable-clothes-walking-down-street

ಐಸ್‌ ಫೇಶಿಯಲ್/ ಐಸ್‌ ಡಿಪ್‌ : ಬೆಳಗ್ಗೆ ಮೇಕಪ್‌ ಮಾಡಿಕೊಳ್ಳಲು ಆರಂಭಿಸುವಾಗ, ಮೊದಲು ಒಂದು ಅಗಲದ ಮಗ್‌ ನೀರಿಗೆ ಒಂದಿಷ್ಟು ಐಸ್‌ ಕ್ಯೂಬ್ಸ್ ಹಾಕಿಡಿ. ಅದರಲ್ಲಿ ಮುಖವನ್ನು ಡಿಪ್‌ ಮಾಡುತ್ತಾ ನೀಟಾಗಿ ಸ್ವಚ್ಛ ಮಾಡಿ. ಇದರಿಂದ ಪೋರ್ಸ್‌ ಟೈಟ್ ಆಗುತ್ತದೆ. ಮುಖದ ಪಫಿನೆಸ್‌ ಕಡಿಮೆ ಆಗುತ್ತದೆ. ಹೀಗಾಗಿ ಮುಖದಲ್ಲಿ ಇನ್‌ ಸ್ಟೆಂಟ್‌ ಫ್ರೆಶ್‌ ನೆಸ್‌ ಕಾಣಿಸುತ್ತದೆ.

ರೆಟಿನಾಲ್ ‌: ನೀವು 40+ ಆಗಿದ್ದರೆ, ಈ ರೆಟಿನಾಲ್ ‌ಥೆರಪಿ ನಿಮಗೆ ಬೆಸ್ಟ್ ಎನಿಸಲಿದೆ. ಇದು ಫೈನಲ್ ಲೈನ್ಸ್, ಪಿಗ್ಮೆಂಟೇಶನ್‌, ವುಡ್‌ ನೆಸ್‌ ತಗ್ಗಿಸುತ್ತದೆ. ನೀವು ನಿಮ್ಮ ಚರ್ಮ ತಜ್ಞರಿಂದ ಸಲಹೆ ಪಡೆದು, ಇದನ್ನು ಆರಂಭಿಸಿ. ಹಿಂದೆ ಶುರು ಮಾಡಿರದಿದ್ದರೆ, ಉತ್ತಮ ಪಾರ್ಲರ್‌ ನಲ್ಲಿ ಮಾಡಿಸಿ. ಈ 0.3% ರೆಟಿನಾಲ್ ‌ಥೆರಪಿಯನ್ನು, ವಾರದಲ್ಲಿ 2 ಸಲ ರಾತ್ರಿ ಹೊತ್ತು ಬಳಸಿಕೊಳ್ಳಲು ಆರಂಭಿಸಿ. ಇದು ನಿಮ್ಮ ಮುಖದ ಏಜಿಂಗ್‌ ಎಫೆಕ್ಸ್ ನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಇದಕ್ಕಾಗಿ ರೆಟಿನಾಲ್ ‌ಸೀರಂ/ಕ್ರೀಂ ಇತ್ಯಾದಿ ಬಳಸಿಕೊಳ್ಳಬಹುದು.

ಸನ್‌ ಸ್ಕ್ರೀನ್‌ ಲೋಶನ್‌ : 40+ನವರಾದ ನೀವು ಮನೆಯಲ್ಲಿರಲಿ ಹೊರಗೆ ಹೋಗಲಿ, SPF 50 ಯುಕ್ತ ಸನ್‌ ಸ್ಕ್ರೀನ್‌ ಲೋಶನ್ ಬಳಸಲು ಮರೆಯದಿರಿ. ಇದು ಪ್ರಿಮೆಚ್ಯೂರ್‌ ಏಜಿಂಗ್‌ ನಿಂದ ನಿಮ್ಮನ್ನು ರಕ್ಷಿಸುತ್ತದೆ.

ಹೈಡ್ರೇಟಿಂಗ್‌ ಟೋನರ್ಸ್‌ಸೀರಂ : ಹ್ಯಾಲುರೋನಿಕ್‌ ಆ್ಯಸಿಡ್‌ ಹಾಗೂ ನಿಯಾಸಿನ್‌ ಮೈಲ್ಡ್ ಆ್ಯಸಿಡ್‌ ಯುಕ್ತ ಪ್ರಾಡಕ್ಟ್ಸ್ ನಿಮ್ಮ ಚರ್ಮವನ್ನು ಬೂಸ್ಟ್ ಮಾಡುತ್ತವೆ, ಇದರಿಂದ ಚರ್ಮ ಬಲು ಹೆಲ್ದಿಯಾಗುತ್ತದೆ.

ಮೇಕಪ್‌ ಗೇಮ್ : ವೆಸ್‌ ಈಸ್‌ ಮೋರ್‌ ಟೀನೇಜರ್ಸ್‌ ಮೇಕಪ್‌ ಸಟ್‌ ಎನಿಸಿದೆ, ಆದರೆ ಅಷ್ಟೇ ಇಂಪ್ಯಾಕ್ಟ್ ಪ್‌! ನೋ ಹೆವಿ ಬೇಸ್‌, ನೋ ಲೌಡ್‌ ಲಿಪ್‌ ಸ್ಟಿಕ್‌. ಟೀನೇಜರ್ಸ್‌ ನ ಇಷ್ಟವಾಗುವುದು ಎಂದರೆ ಸ್ಕಿನ್‌ ಲೈಕ್‌ ಬೇಸ್‌ರೋಝಿ ಚೀಕ್ಸ್.

ಟಿಂಟೆಡ್‌ ಮಾಯಿಶ್ಚರೈಸರ್‌ ಯಾ BB‌ ಕ್ರೀಂ : ನೀವು ನಿಮ್ಮ ಚರ್ಮವನ್ನು ಬ್ಯೂಟಿಫುಲ್ ಈವೆನ್‌ ಆಗಿ ತೋರಿಸಿಕೊಳ್ಳಬೇಕೆಂದರೆ, ಹೆವಿ ಫೌಂಡೇಶನ್ನಿನ ಅಗತ್ಯವಿಲ್ಲ. ನ್ಯಾಚುರಲ್ ಬ್ರೀದೆಬಲ್ ಬೇಸ್‌ ನಿಂದ ಸ್ಕಿನ್‌ ಯಂಗ್‌ ಆಗಿ ಕಾಣಿಸುತ್ತದೆ. ಇದಕ್ಕಾಗಿ ನೀವು ಟಿಂಟೆಡ್‌ ಮಾಯಿಶ್ಚರೈಸರ್‌, BB‌, ಕ್ರೀಂ ಇತ್ಯಾದಿ ಬಳಸಿಕೊಳ್ಳಿ.

ಬ್ಲಶ್‌ಹೈಲೈಟರ್‌ : ಪೌಡರ್‌ ಬ್ಲಶ್‌ ಬಳಸುವುದು ಸುಲಭ ಎನಿಸಿದರೂ, ಕ್ರೀಂ ಬ್ಲಶ್‌ ನ ಬಳಕೆಯಿಂದ ಕೆನ್ನೆ ನ್ಯಾಚುರಲಿ ಫುಶ್ಡ್ ಎನಿಸುತ್ತವೆ. ಅಂದ್ರೆ ನೀವು ಮುಖಕ್ಕೆ ಏನೂ ಹಚ್ಚಿಕೊಂಡೇ ಇಲ್ಲ ಹಾಗೂ ಇದು ನಿಮ್ಮದೇ ನ್ಯಾಚುರಲ್ ಗ್ಲೋ ಎಂಬಂತೆ ಕಾಣಿಸುತ್ತದೆ. ಸ್ವಲ್ಪ ಹೊತ್ತಿನ ನಂತರ ಕ್ರೀಂ ಬ್ಲಶ್‌ ನಿಮ್ಮ ಮುಖದಲ್ಲಿ ಸೆಟಲ್ ಆದಾಗ, ಮೇಕಪ್‌ ನಿಂದ ಅಂತರ ಉಂಟಾಗಿದೆ ಎಂದು ಯಾರೂ ಗುರುತಿಸಲು ಸಾಧ್ಯವಾಗುವುದಿಲ್ಲ. ನೀವು ನ್ಯಾಚುರಲ್ ಫೇಸ್‌ ಲಿಫ್ಟ್ ಗಾಗಿ ಚೀಕ್‌ ಬೋನ್ಸ್ ಮೇಲೆ ಹೈಲೈಟರ್ ಸಹ ಬಳಸಿಕೊಳ್ಳಬಹುದು.

ಫೆದರೀ ಬ್ರೋರ್‌ : ಥಿಕ್‌ನೀಟ್‌ ಲಿ ಬ್ರಶ್ಡ್ ಬ್ರೋರ್‌ ನಿಮ್ಮ ಮುಖಕ್ಕೆ ಫ್ರೆಶ್‌ಡಿಫೈನ್ಡ್ ಲುಕ್ಸ್ ನೀಡುತ್ತವೆ.

ಗ್ಲಾಸಿ ಲಿಪ್ಸ್ : ನ್ಯೂಡ್‌, ಬ್ರೌನ್‌ ಯಾ ಲೈಟ್‌ ಪಿಂಕ್‌ ಲಿಪ್‌ ಗ್ಲಾಸ್‌, ನಿಮ್ಮ ಲುಕ್ಸ್ ನ್ನು ಮತ್ತಷ್ಟು ಫ್ರೆಶ್‌ ಮಾಡಲಿದೆ. ಆದರೆ ಇಲ್ಲಿ ಗಮನಿಸಬೇಕಾದುದು ಎಂದರೆ, ಗ್ಲಾಸ್‌ ಗೆ ಟಚ್‌ ಅಪ್‌ ನ ಅಗತ್ಯವಿರುತ್ತದೆ. ಅಂದ್ರೆ ನೀವು ಯಾ ಶೇಡ್‌ ಬಳಸಿದ್ದೀರೋ, ಮರೆಯದೆ ಅದನ್ನು ನಿಮ್ಮ ಪರ್ಸನಲ್ ನಲ್ಲಿ ಕ್ಯಾರಿ ಮಾಡಿ. ಆಗ ಮಾತ್ರ ನೀವು ಬೇಕೆನಿಸಿದಾಗ ನಿಮ್ಮ ತುಟಿಗಳಿಗೆ ಗ್ಲಾಸಿ ಲುಕ್ಸ್ ನೀಡಬಹುದು.

ಯೂಥ್‌ ಫುಲ್ ಹೈರ್‌ ಸ್ಟೈಲಿಂಗ್‌ ಲುಕ್ಸ್ ಸ್ಟ್ರೇಟ್‌, ಸ್ಲೀಕ್‌ ಹೇರ್ಸ್‌ ಇದೀಗ ತುಸು ಔಟ್‌ ಡೇಟೆಡ್‌ ಎನಿಸಿದೆ. ಇದೀಗ ನಿಮ್ಮ ಕೂದಲಿಗೆ ಯೂಥ್‌ ಫುಲ್ ಟಚ್‌ ನೀಡಬೇಕಾದ ಅಗತ್ಯವಿದೆ.

ನ್ಯಾಚುರ್‌ ಲುಕಿಂಗ್‌ : ನಿಮ್ಮನ್ನು ಮತ್ತಷ್ಟು ಯಂಗ್‌ ಆಗಿಸಿ, ಚಿರಯೌವನ ಉಳಿಸಿಕೊಡಲಿದೆ. ನಿಮ್ಮ ಕೂದಲಿನ ಟೆಕ್ಸ್ ಚರ್‌ ಮೊದಲೇ ತುಸು ಲೈಟ್‌ ವೇವೀ ಆಗಿದ್ದರೆ, ನೀವು ಆಗ ಸೂಕ್ತ ಪ್ರಾಡಕ್ಟ್ಸ್ ಬಳಸಬೇಕು. ಆಗ ಮಾತ್ರ ಸಹಜ ಕೂದಲು ಸುಂದರವಾಗಿ ಕಂಗೊಳಿಸಲು ಸಾಧ್ಯ. ನಿಮ್ಮ ಕೂದಲು ಸ್ಟ್ರೇಟ್‌ ಆಗಿದ್ದರೆ, ಆಗಲೂ ಚಿಂತೆ ಇಲ್ಲ, ನೀವು ತಲೆಗೆ ಶಾಂಪೂ ಮಾಡಿದ ನಂತರ, ಚೆನ್ನಾಗಿ ಒಣಗಿಸಿಕೊಂಡು, ನಂತರ ಬ್ಲೋ ಡ್ರೈಯರ್‌ ನಿಂದ ವೇವೇ ‌ಕ್ರಿಯೇಟ್‌ ಮಾಡಿಕೊಳ್ಳಬಹುದು. ಕೂದಲಿನ ಸ್ಟೈಲ್ ಮೇಂಟೇನ್‌ ಮಾಡಲು, ನೀವು ಮಲಗುವಾಗ, ಸ್ಯಾಟಿನ್‌ ಹೇರ್‌ ಕ್ಯಾಪ್‌ ಧರಿಸಿ ಮಲಗಿರಿ. ನಿಮ್ಮ ದಿಂಬಿನ ಕವರ್‌ ಸಹ ಸ್ಯಾಟಿನ್ ದೇ ಆಗಿರಲಿ. ಆದಷ್ಟೂ ಬನ್‌ ಸ್ಟೈಲ್ ಇರಲಿ. ಇದರಿಂದ ಹೊಸ ಟಚ್‌ ಅಪ್‌ ನ ಅಗತ್ಯವಿಲ್ಲದೆ, ಮುಂದಿನ ಹಲವು ದಿನಗಳವರೆಗೂ, ಕೂದಲಿನಲ್ಲಿ ಬೌನ್ಸ್ ಉಳಿಯುತ್ತದೆ.

ಹಾಫ್‌ ಬನ್‌ ಯಾ ಮೆಸ್ಸಿ ಬನ್‌ : ಈ ಹೇರ್‌ ಸ್ಟೈಲ್ ‌ನಿಮಗೆ ಬಹುತೇಕ ಟೀನ್‌ ವೈಬ್ಸ್ ನೀಡುತ್ತದೆ. ಬಯಸಿದರೆ ನೀವು ಹಾಫ್‌ ಮೆಸ್ಸಿ ಬನ್‌ ಸಹ ಟ್ರೈ ಮಾಡಬಹುದು. ಒಟ್ಟಾರೆ, ಟೀನೇಜರ್ಸ್‌ ಸ್ಟೈಲ್ ಫಂಡಾ ಅಂದ್ರೆ, ಅವರು ತಮಗೆ ಇಂತಿಷ್ಟೇ ಎಂದು ಒಂದೇ ಬಗೆಯ ಹೇರ್‌ ಸ್ಟೈಲ್ ‌ಗೆ ಸ್ಟಿಕ್‌ ಆನ್‌ ಆಗುವುದಿಲ್ಲ. ಬದಲಿಗೆ ದಿನಕ್ಕೊಂದು ಪ್ರಯೋಗ ಮಾಡುತ್ತಿರುತ್ತಾರೆ. ನೀವು ಸಹ ಗಾಬರಿಗೊಳ್ಳದೆ, ಪ್ರತಿದಿನ ಒಂದೊಂದು ಹೊಸ ಸ್ಟೈಲ್ ‌ಟ್ರೈ ಮಾಡುತ್ತಾ ಇರಿ.

ಕ್ಲಾ ಕ್ಲಿಪ್ಸ್ ಹಾಗೂ ಫಂಕೀ ಹೇರ್‌ ಬಾಂಡ್ಸ್ : ಇವು ಕೇವಲ ಟ್ರೆಂಡಿ ಆಗಿರದೆ, ಬದಲಿಗೆ ಫೇಸ್‌ ನ್ನು ಲಿಫ್ಟ್ ಮಾಡಲಿಕ್ಕೂ ಸಹಕಾರಿ.

ಕರ್ಟನ್‌ ಬ್ಯಾಗ್ಸ್ ಯಾ ಸಾಫ್ಟ್ ಲೇಯರ್ಸ್‌ : ಫೇಸ್‌ ಫ್ರೇಮಿಂಗ್‌ ಲೇಯರ್ಸ್‌ ನಿಂದ, ನಿಮ್ಮ ಮುಖ ತೆಳು ಹಾಗೂ ಯಂಗ್‌ ಆಗಿ ಮಿಂಚುತ್ತದೆ.

ಲೈಫ್‌ ಸ್ಟೈಲ್ ‌ನಲ್ಲಿ ಬದಲಾವಣೆ

ಒಂದು ವಿಷಯ ನೆನಪಿಡಿ, ಆಂತರಿಕ ಗ್ಲೋ ಮಾತ್ರವೇ ಅಸಲಿ ಗ್ಲೋ ಆಗತ್ತದೆ. ಬ್ಯೂಟಿ ಕೇವಲ ಹೊರಗಿನಿಂದ ಅಲ್ಲ, ಒಳಗಿನಿಂದಲೂ ಮೂಡಿಬರಬೇಕು.

ಹೈಡ್ರೇಶನ್‌ : ಧಾರಾಳ ನೀರು ಕುಡಿಯಿರಿ. ಆಗ ಸ್ಕಿನ್‌ ಸದಾ ಹೈಡ್ರೇಟೆಡ್‌ ಆಗಿರುತ್ತದೆ, ರಿಂಕಲ್ಸ್ ದೂರ ಉಳಿಯುತ್ತದೆ.

ನಿದ್ದೆ : ನಿಮ್ಮ ಕೆಲಸದ ಒತ್ತಡ ಏನೇ ಇರಲಿ, ಕನಿಷ್ಠವೆಂದರೂ 7-8 ಗಂಟೆಗಳ ನಿದ್ದೆ ಅನಿವಾರ್ಯ. ಇದರಿಂದ ಮುಖ ಸಹಜವಾಗಿ ಯಂಗ್‌ ಆಗಿರುತ್ತದೆ.

ಡಯೆಟ್‌ : ಹಣ್ಣು, ಹಸಿ ತರಕಾರಿ, ಸಲಾಡ್‌, ಸೀಡ್ಸ್, ಹೆಲ್ದಿ ಫ್ಯಾಟ್‌ ಉದಾ. ಅವಕಾಡೋ, ನಟ್ಸ್ ನ್ನು ಆಹಾರದಲ್ಲಿ ಬೆರೆಸಿಕೊಳ್ಳಿ. ಇದು ಚರ್ಮವನ್ನು ಆಂತರಿಕವಾಗಿ ಪೋಷಿಸುತ್ತದೆ.

ವ್ಯಾಯಾಮ : ಯೋಗ, ಝುಂಬಾ ಡ್ಯಾನ್ಸ್, ಬ್ರಿಸ್ಕ್ ವಾಕ್‌, ಜಾಗಿಂಗ್‌…. ಏನೋ ಒಂದು ಮಾಡುತ್ತಿರಿ, ಆದರೆ ಮಧ್ಯೆ ಮಧ್ಯೆ ನಿರ್ಲಕ್ಷಿಸಬೇಡಿ. ಇದರಿಂದ ನಿಮ್ಮ ಪೋಸ್ಚರ್‌ ಬೆಟರ್‌ ಆಗುತ್ತದೆ, ಬಾಡಿ ಟೋನ್ಡ್ ಆಗಿರುತ್ತದೆ.

ಸ್ಟೈಲಿಂಗ್‌ ಸೆನ್ಸ್ : ಸ್ಟೈಲಿಶ್‌, ಗ್ಲಾಮರಸ್‌ ಆಗಿ ಕಂಗೊಳಿಸಲು ಕೇವಲ ದುಬಾರಿ ಬ್ರಾಂಡೆಡ್‌ ಡ್ರೆಸೆಸ್‌ ಧರಿಸಿದರೆ ಸಾಲದು. ಸೂಕ್ತ ಸ್ಟೈಲಿಂಗ್‌ ನಿಂದ ನೀವು ಯಾವುದೇ ಡ್ರೆಸ್‌ ನ್ನು ಹೈ ಫ್ಯಾಷನೆಬಲ್ ಮಾಡಿಕೊಳ್ಳಬೇಕಷ್ಟೆ.

ರೈಟ್‌ ಆ್ಯಕ್ಸೆಸರೀಸ್‌ : ಹೂಪ್‌ ಇಯರ್‌ ರಿಂಗ್ಸ್, ಡೆಲಿಕೇಟ್‌, ಚೇನ್ಸ್ ಲೇಯರ್ಡ್‌ ಬ್ರೇಸ್‌ ಲೆಟ್ಸ್ ಈ ಸಣ್ಣಪುಟ್ಟ ಎಲಿಮೆಂಟ್ಸ್ ನಿಮ್ಮ ಲುಕ್ಸ್ ಕಂಪ್ಲೀಟ್‌ ಮಾಡುತ್ತವೆ.

ಬ್ಯಾಗ್‌, ಫುಟ್‌ ವೇರ್‌ : ಒಂದು ಟ್ರೆಂಡೀ ಸ್ಲಿಂಗ್‌ ಬ್ಯಾಗ್‌ ಹಾಗೂ ಕಂಫರ್ಟೆಬಲ್, ಆದರೆ ಸ್ಟೈಲಿಶ್‌, ಸ್ನೀಕರ್ಸ್‌ ನಿಮ್ಮ ವಯಸ್ಸನ್ನು ತಗ್ಗಿಸಿ ತೋರಿಸಬಲ್ಲವು, ಟ್ರೈ ಮಾಡಿ ನೋಡಿ.

ಉಗುರು : ಗ್ರೂಮ್ಡ್ ನೇಲ್ಸ್ ಹಾಗೂ ನ್ಯಾಚುರಲ್ ಯಾ ಪೇಸ್ಟ್‌ ನೇಲ್ ‌ಕಲರ್ಸ್‌, ನಿಮಗೆ ಟ್ರೆಂಡೀ ಲುಕ್ಸ್ ತಂದುಕೊಡುತ್ತವೆ.

ಸುವಾಸನೆಗಾಗಿ : ಒಂದು ಹೊಸ ತಾಜಾ ಪ್ಲೇರ್‌ಪರ್ಫ್ಯೂಮ್ ನಿಮ್ಮ ಇಡೀ ಲುಕ್ಸ್ ನ್ನು ಚಾರ್ಮಿಂಗ್‌ ಮಾಡಬಲ್ಲದು.

ಸೋಶಿಯಲ್ ಮೀಡಿಯಾ ಔರಾ : ಇಲ್ಲಿ ಫಿಲ್ಟರ್‌ ನ ಅಗತ್ಯವಿಲ್ಲ, ಆ್ಯಟಿಟ್ಯೂಡ್‌ ಬಲು ಸ್ಮಾರ್ಟ್‌ ಆಗಿರಬೇಕು. ಇಂದಿನ ಕಾಲಕ್ಕೆ ತಕ್ಕಂತೆ ಕೇವಲ ಉತ್ತಮವಾಗಿ ಕಂಡುಬಂದರೆ ಸಾಲದು, ಸೋಶಿಯಲ್ ಮೀಡಿಯಾದಲ್ಲಿಯೂ ಸದಾ ಪ್ರೆಸೆನ್ಸ್ ಇರಬೇಕು. ಸೆಲ್ಛೀ ತೆಗೆದುಕೊಳ್ಳುವಾಗ ಗುಡ್‌ ಲೈಟಿಂಗ್‌ ಹಾಗೂ ನ್ಯಾಚುರಲ್ ಎಕ್ಸ್ ಪ್ರೆಶನ್‌ ಅತ್ಯಗತ್ಯ. ಕ್ಯಾಂಡಿಡ್‌ಬಿಹೈಂಡ್‌ ದಿ ಸೀನ್ಸ್ ವೈಬ್ಸ್ ನ ಫೋಟೋ ಜನರನ್ನು ಹೆಚ್ಚು ಆಕರ್ಷಿಸುತ್ತದೆ.

ಟ್ರೆಂಡೀ ಸೌಂಡ್‌ ನೊಂದಿಗೆ ರೀಲ್ ಹಾಗೂ ರಿಲೇಟೆಬಲ್ ಕಂಟೆಂಟ್‌ ನಿಂದ ನೀವು ನಿಮ್ಮ ಫಾಲೋಯರ್ಸ್‌ ನಡುವೆ ಟೀನ್‌ ಲೈಕ್‌ಬರ್‌ ಕ್ರಿಯೇಟ್‌ ಮಾಡಬಹುದು.

– ಜಿ.ಕೆ. ಸುಮಲತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ