ಪ್ರ : ನನ್ನ ದೇಹದಲ್ಲಿ ಎಲ್ಲ ಕಡೆ ಬಿಳಿ ಕಲೆಗಳು (ತೊನ್ನು) ಹರಡಿಹೋಗಿದೆ. ನಮ್ಮ ಒರಿಜಿನಲ್ ಚರ್ಮಕ್ಕೆ ಹತ್ತಿರದ ಬಣ್ಣದ ಪೇಂಟ್ ನ್ನು ದೇಹ ಪೂರ್ತಿ ಹಚ್ಚಿಸಿಕೊಂಡರೆ ಸರಿಹೋದೀತೇ?
ಉ : ತೊನ್ನು ಅಥವಾ ಲ್ಯೂಕೋಡರ್ಮಾ ಕುರಿತು ನಮ್ಮ ಸಮಾಜದಲ್ಲಿ ಹಲವು ಮೂಢನಂಬಿಕೆಗಳು ಹರಡಿವೆ. ಆಧುನಿಕ ಸಂಶೋಧನೆಗಳು ಇನ್ನೂ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಆಧುನಿಕ ವೈದ್ಯಕೀಯ ಪರ್ಮನೆಂಟ್ ಕಲರಿಂಗ್ ಮೂಲಕ ಒರಿಜಿನಲ್ ಚರ್ಮಕ್ಕೆ ಹತ್ತಿರದ ಬಣ್ಣ ಹಚ್ಚಬಹುದಾಗಿದೆ. ಇದರಿಂದ ಎಲ್ಲಾ ಬಿಳಿ ಕಲೆಗಳೂ ಮುಚ್ಚಿ ಹೋಗುತ್ತವೆ, ಎಷ್ಟೋ ವರ್ಷಗಳವರೆಗೆ ನಿಮ್ಮ ಕೀಳರಿಮೆ ತಗ್ಗುತ್ತದೆ. ಇದು ಬಹುತೇಕ ಚರ್ಮದ ಒರಿಜಿನಲ್ ಬಣ್ಣದಂತೆಯೇ ಕಂಡುಬರುತ್ತದೆ. ಹೆಚ್ಚು ಕಡಿಮೆ ಈ ಬಣ್ಣ 1-10 ವರ್ಷ ಕಾಲ ಹಾಗೇ ಉಳಿಯುತ್ತದೆ. ಈ ವಿಧಾನದಲ್ಲಿ ಹೆಚ್ಚು ಸಮಯ ತಗಲುವುದಿಲ್ಲ. ನಿಮ್ಮ ಕಲೆಗಳು ಹೆಚ್ಚುತ್ತಿದ್ದರೆ ಮೊದಲು ಅದಕ್ಕೆ ಏನಾದರೂ ಚಿಕಿತ್ಸೆ ಮಾಡಿಸಿ. ಕೊನೆಯಲ್ಲಿ ಪರ್ಮನೆಂಟ್ ಮೇಕಪ್ ಮಾಡಿಸಬಹುದು. ಈ ವಿಧಾನದ ಆರಂಭದಲ್ಲಿ ಒಂದು ಪ್ಯಾಚ್ ಟೆಸ್ಟ್ ಮಾಡಿಸಬೇಕು. ಕಲರ್ ಸೆಟ್ ಆದಾಗ, ಇಡೀ ಚರ್ಮಕ್ಕೆ ಕಲರ್ ಹಚ್ಚಾಗುತ್ತದೆ. ಇವೆಲ್ಲ ಅಪ್ರೂವ್ಡ್ ಕಲರ್ಸ್ ಆಗಿವೆ. ಇದರಿಂದ ಯಾವ ಸೈಡ್ ಎಫೆಕ್ಟ್ಸ್ ಇಲ್ಲ. ಇದರಲ್ಲಿ ನೀಡಲಿಂಗ್ ಟೆಕ್ನಿಕ್‌ಬಳಸಲಾಗುತ್ತದೆ. ಹೀಗಾಗಿ ಇದನ್ನು ನುರಿತ ತಜ್ಞರಿಂದಲೇ ಮಾಡಿಸಬೇಕು. ಹೀಗೆ ಮಾಡಿಸಿದ ನಂತರ, ಆಯಾ ಭಾಗಗಳ ಕಡೆ ಆರೋಗ್ಯ ಕಾಳಜಿ ವಹಿಸಿ, ಸ್ವಚ್ಛತೆ ಶುಭ್ರತೆಗೆ ಹೆಚ್ಚಿನ ಆದ್ಯತೆ ಕೊಡಿ.
ಪ್ರ. ನನ್ನ ವಯಸ್ಸು 23. ಇಷ್ಟರಲ್ಲೇ ನನ್ನ ಮದುವೆ ಆಗಲಿದೆ. ಬಾಡಿ ಮಸಾಜ್ ಮಾಡಿಸುವುದು ಉತ್ತಮ ಪ್ರಯತ್ನವಲ್ಲವೇ? ಮದುವೆಗೆ ಎಷ್ಟು ದಿನ ಮೊದಲು ಇದನ್ನು ಮಾಡಿಸಬೇಕು?
ಉ : ಬಾಡಿ ಮಸಾಜ್ ಗೆ ತನ್ನದೇ ಆದ ಮಹತ್ವವಿದೆ. ಇದರಿಂದ ದೇಹದ ಪ್ರತಿ ಕೀಲು, ಮಾಂಸಖಂಡ ಹೊಸ ಶಕ್ತಿ ಪಡೆಯಲಿದೆ, ರಕ್ತ ಸಂಚಾರ ವರ್ಧಿಸುತ್ತದೆ. ಇದರಿಂದಾಗಿ ಬಾಡಿ ಹೆಚ್ಚು ಎಲಾಸ್ಟಿಕ್‌ಬ್ಯೂಟಿಫುಲ್ ಆಗುತ್ತದೆ. ನಿಮ್ಮ ಚರ್ಮದ ಡೆಡ್ ಸೆಲ್ಸ್ ಸಹ ತೊಲಗುತ್ತವೆ. ಹಾಗಾಗಿ ಚರ್ಮ ಹೆಚ್ಚಿನ ಗ್ಲೋ ಪಡೆಯುತ್ತದೆ. ನಿಮ್ಮದು ಡ್ರೈ ಸ್ಕಿನ್ ಆಗಿದ್ದರೆ, ಆ ಬಾಧೆಯೂ ನೀಗುತ್ತದೆ. ಇದರಿಂದ ನೀವು ಎಷ್ಟೋ ಫ್ರೆಶ್ ಆಗುವಿರಿ. ಹೀಗಾಗಿ ನಿಮ್ಮ ತಲೆಯ ನರತಂತುಗಳು, ಪ್ರತಿ ಅಂಗಾಂಗದ ನರಗಳೂ ಕೂಡಿ ರಿಲ್ಯಾಕ್ಸ್ ಆಗಿ, ಸ್ಛೂರ್ತಿ ಪಡೆಯುತ್ತವೆ. ಸಾಧ್ಯವಾದಷ್ಟೂ ನುರಿತ ತಜ್ಞರಿಂದಲೇ ಬಾಡಿ ಮಸಾಜ್ ಮಾಡಿಸಿ.
ಮದುವೆಗೆ 2 ತಿಂಗಳು ಮೊದಲೇ ಮಸಾಜ್ ಮಾಡಿಸುವುದು ಲೇಸು. ಇದರಿಂದ ಮದುವೆ ಸಂದರ್ಭದಲ್ಲಿ ಹೊಸ ಲವಲವಿಕೆ ಮೈಗೂಡಿ, ಮದುವೆಯ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬಹುದು. ಮಸಾಜ್ ಗಾಗಿ ಬಳಸುವ ಬಾಡಿ ಆಯಿಲ್, ಚರ್ಮದೊಳಗೆ ಇಳಿದು, ಆಂತರಿಕ ಪೋಷಣೆ ನೀಡುತ್ತದೆ. ಹೀಗಾಗಿ ಮಸಾಜ್ ಹೊಸ ಚಮತ್ಕಾರ ಮಾಡಲಿದೆ.
ಬಾಡಿ ಮಸಾಜ್ ಗಾಗಿ ಆ್ಯರೋಮಾ ಆಯಿಲ್ ನ ಬಳಕೆ ಬಲು ಉತ್ತಮ. ಹಾಗೆಯೇ ಗಿಡಮೂಲಿಕೆಗಳು ತುಂಬಿದ ಹರ್ಬಲ್ ಆಯಿಲ್ ಸಹ ಒಳ್ಳೆಯದು. ಮಸಾಜ್ ನಂತರ ಒಂದು ವಿಶೇಷ ತರಹದ ಪ್ಯಾಕ್ ಬಳಸುವುದರಿಂದ, ಚರ್ಮ ನೀಟಾಗಿ ಟೋನ್ ಅಪ್ ಆಗುತ್ತದೆ. ಜೊತೆಗೆ ಮಸಾಜ್ ನಿಂದ ಓಪನ್ ಪೋರ್ಸ್ ಸಹ ಕ್ಲೋಸ್ ಆಗುತ್ತದೆ, ಇದರಿಂದ ಆಂತರಿಕ ಪೋಷಣೆಯ ತೀವ್ರತೆ ಹೆಚ್ಚುತ್ತದೆ.





