ಪ್ರ : ನನ್ನ ಗಂಡ ಇತ್ತೀಚೆಗೆ ಅಧಿಕಾರಿ ಹುದ್ದೆಯಿಂದ ನಿವೃತ್ತರಾದರು. ನನ್ನ ಇಬ್ಬರೂ ಮಕ್ಕಳು ಮದುವೆಯಾಗಿದ್ದು, ಅವರು ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಗಂಡ ನಿವೃತ್ತರಾದ ಬಳಿಕ ಜೀವನ ಹಾಯಾಗಿರುತ್ತದೆ ಎಂದುಕೊಂಡಿದ್ದೆ. ಆದರೆ ಗಂಡನ ಬದಲಾದ ವರ್ತನೆಯಿಂದ ನಾನು ರೋಸಿ ಹೋಗಿರುವೆ. ಅಂದಹಾಗೆ ಅವರು ತಿಂಗಳಿಗೆ 3-4 ಸಲ ಹೊಸ ಊರುಗಳಿಗೆ ಹೋಗಿ ಕಾಲ್ ಗರ್ಲ್ ಗಳ ಜೊತೆ ಸಮಯ ಕಳೆಯುತ್ತಾರೆ. ಇದು ನನಗೆ ಅವರ ಮೊಬೈಲ್ ನಿಂದ ಗೊತ್ತಾಯ್ತು. ಎರಡನೆಯ ಸಮಸ್ಯೆ ಎಂದರೆ, ಮನೆಯಲ್ಲಿದ್ದಾಗ ಅವರು ಪಾರ್ಟಿ ಮಾಡುತ್ತಿರುತ್ತಾರೆ. ಕುಡಿತದ ಪಾರ್ಟಿಗೆ ನಾವು ಇರುವ ನಗರದಲ್ಲಿರುವ ಮೈದುನರು ಬರುತ್ತಿರುತ್ತಾರೆ. ನಾನು ಎಲ್ಲ ವಿಷಯಗಳನ್ನು ನನ್ನ ಮಕ್ಕಳ ಮುಂದೆ ಹೇಳಬೇಕೆಂದುಕೊಳ್ಳುತ್ತೇನೆ. ಆದರೆ ಅಪ್ಪಮಕ್ಕಳ ನಡುವಿನ ಸಂಬಂಧ ಹಾಳಾಗಬಾರದು ಎಂದು ಸುಮ್ಮನೆ ಇರುತ್ತೇನೆ. ನಾನು ಗಂಡನಿಗೆ ಎಷ್ಟೋ ಸಲ ತಿಳಿ ಹೇಳಲು ಪ್ರಯತ್ನ ಮಾಡಿದೆ. ಆದರೆ ಅವರು ಜೀವನದುದ್ದಕ್ಕೂ ನಿಮಗಾಗಿ ದುಡಿದೆ. ಈಗ ಉಳಿದ ಜೀವನವನ್ನು ನನಗಾಗಿ ಜೀವಿಸುವೆ ಎಂದು ಹೇಳುತ್ತಾರೆ. ಗಂಡನನ್ನು ಸರಿಯಾದ ದಾರಿಗೆ ತರಲು ನನಗೆ ಯಾವುದೇ ಉಪಾಯ ಕಂಡುಬರುತ್ತಿಲ್ಲ. ನಾನೇನು ಮಾಡಬೇಕು ಹೇಳಿ?
ಉ : ಹೆಚ್ಚುತ್ತಿರುವ ವಯಸ್ಸಿನಲ್ಲಿ ಅಪೇಕ್ಷೆಗಳಾಗಲಿ ದೈಹಿಕ ಬಯಕೆಗಳಾಗಲಿ ಕಡಿಮೆ ಆಗುವುದಿಲ್ಲ. ನಿಮ್ಮ ಮಕ್ಕಳು ಇಷ್ಟರಲ್ಲೇ ಸ್ವಾವಲಂಬಿ ಆಗಿರುವುದು ಒಳ್ಳೆಯದಾಯ್ತು. ನೀವು ಆದಷ್ಟು ಹೆಚ್ಚೆಚ್ಚು ಹಳೆಯ ನೆನಪಗಳನ್ನು ಸ್ಮರಿಸಿಕೊಳ್ಳುತ್ತ ಪತಿಯ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯಲು ಪ್ರಯತ್ನಿಸಿ. ನೀವು ನಿಮ್ಮನ್ನು ವಯಸ್ಸಾದವರು ಎಂದು ಭಾವಿಸಿಕೊಳ್ಳದೆ ನಿಮ್ಮನ್ನು ನೀವು ಚೆನ್ನಾಗಿ ಅಲಂಕರಿಸಿಕೊಂಡು ಗಂಡನ ಜೊತೆ ಪಾರ್ಟಿಗೆ, ಮಾಲ್ ಗೆ ಹೋಗಿ. ನಿಮ್ಮ ಸಾಮೀಪ್ಯ ಗಂಡನಿಗೆ ಇಷ್ಟವಾಗಬಹುದು.
ಗಂಡನಲ್ಲಿ ಅಷ್ಟಿಷ್ಟು ಬದಲಾವಣೆ ಉಂಟಾಗಿದ್ದರೆ ಅವರಿಗೆ ಅಷ್ಟಿಷ್ಟು ತಿಳಿವಳಿಕೆ ಹೇಳಬಹುದು. ನಿಮ್ಮ ಮೈದುನರಿಗೂ ಮದ್ಯ ಮುಂತಾದ ಚಟಗಳಿಂದ ದೂರ ಇದ್ದರೆ ಈ ಮನೆಗೆ ನಿಮಗೆ ಒಳ್ಳೆಯ ಸ್ವಾಗತ ಸಿಗುತ್ತದೆ ಎಂದು ಬುದ್ಧಿವಾದ ಹೇಳಿ. ನೀವು ಅವರ ಜೊತೆ ಸೇರಿ ಪಾರ್ಟಿ ಮಾಡಿ. ಆದರೆ ಅಲ್ಲಿ ಕುಡಿತಕ್ಕೆ ಅವಕಾಶ ಇರಬಾರದು. ಬೇರೆಬೇರೆ ತೆರನಾದ ಡಿಶ್ ಗಳ ಪಾರ್ಟಿ ಎಲ್ಲರಿಗೂ ಖುಷಿ ಕೊಡಬಹುದು.
ಈ ಎಲ್ಲದರಿಂದಲೂ ಗಂಡ ಹಾಗೂ ಮೈದುನರು ಬದಲಾಗದಿದ್ದರೆ ನೀವು ಕಠೋರವಾಗಿ ವರ್ತಿಸಬಹುದು. ಸಮಯ ಬಂದರೆ ಮಕ್ಕಳಿಗೂ ಈ ವಿಷಯ ತಿಳಿಸಿ. ಅಂದಹಾಗೆ ಇಳಿವಯಸ್ಸಿನಲ್ಲಿ ವಿವಾಹಿತ ಪುರುಷ ಅಥವಾ ಮಹಿಳೆ ಗೆ ಸಂಗಾತಿಯ ಅವಶ್ಯಕತೆ ಹೆಚ್ಚಿಗೆ ಇರುತ್ತದೆ. ಗಂಡನ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯುವುದರಿಂದ, ಅವರಿಗೂ ನಿಮ್ಮ ಸಾಂಗತ್ಯ ಇಷ್ಟವಾಗಬಹುದು. ಅವರು ಸರಿದಾರಿಗೂ ಬರಬಹುದು.





