ಕಂಟೆಂಟ್‌ ಕ್ರಿಯೇಟರ್‌ ಡಿಜಿಟಲ್ ಕಂಟೆಂಟ್‌ ಕ್ರಿಯೇಟರ್‌ ಬಾಡಿ ಪಾಸಿಟಿವಿಟಿ ಅವಾರ್ಡ್‌

``ಬ್ಯೂಟಿ ಎಂಬುದು ಬಾಡಿ ಟೈಪ್‌ ನಲ್ಲಿ ಅಲ್ಲ, ಆತ್ಮವಿಶ್ವಾಸದಲ್ಲಿ ತುಂಬಿದೆ!'' ಎನ್ನುತ್ತಾರೆ ಪ್ರಬಲೀನ್‌ ಕೌರ್‌. ಈಕೆ ಆತ್ಮ ಸ್ವೀಕಾರ ಹಾಗೂ ಆತ್ಮವಿಶ್ವಾಸದ ಪ್ರೇರಕ ಧ್ವನಿಯಾಗಿ, ಸೋಶಿಯಲ್ ಮೀಡಿಯಾ ಅಂದ್ರೆ ಕೇವಲ ಫ್ಯಾಷನ್‌, ಗ್ಲಾಮರ್‌ ಗಷ್ಟೇ ಸೀಮಿತವಲ್ಲ, ಬದಲಿಗೆ ಆತ್ಮ ಪ್ರೇಮ, ಆತ್ಮವಿಶ್ವಾಸ, ಬಾಡಿ ಪಾಸಿಟಿವಿಟಿ ಕುರಿತು ವ್ಯಕ್ತಪಡಿಸಲು ಸಶಕ್ತ ಮಾಧ್ಯಮ, ಎನ್ನುತ್ತಾರೆ ಈ ಡಿಜಿಟಲ್ ಕ್ರಿಯೇಟರ್‌. ಜನ ತಮ್ಮನ್ನು ವಾಸ್ತವವಾಗಿ ಒಪ್ಪಿಕೊಳ್ಳುವ, ಸ್ವತಃ ತಮ್ಮನ್ನು ತಾವು ಪ್ರೀತಿಸಬೇಕೆನ್ನುವ ಮನೋಭಾವ ಬೆಳೆಸಿಕೊಳ್ಳುವಂತೆ ಈಕೆ ಕಂಟೆಂಟ್‌ ಕ್ರಿಯೇಟ್‌ ಮಾಡಿ FB‌, ಇನ್‌ ಸ್ಟಾ, ಟ್ವಿಟರ್‌ ನಲ್ಲಿ ಅತಿ ಜನಪ್ರಿಯರಾಗಿದ್ದಾರೆ.

ಸೋಶಿಯಲ್ ಮೀಡಿಯಾ ಅಂದ್ರೆ ಕೇವಲ ಅತಿ ಚೆಲುವನ್ನಷ್ಟೇ ಪ್ರದರ್ಶಿಸಬೇಕು ಎಂಬ ಧೋರಣೆ ಬಿಟ್ಟು, ವಾಸ್ತವತೆ ಏನಿದೆಯೋ ಒಪ್ಪಿಕೊಳ್ಳಿ, ಭಾವನಾತ್ಮಕ ಸತ್ಯಕ್ಕೆ ಬೆಲೆ ಕೊಡಿ, ಎಲ್ಲರೂ ನಮ್ಮವರೇ ಎಂಬ ಗುಣವಿರಲಿ ಎಂದು ನಿರೂಪಿಸಿದ್ದಾರೆ ಪ್ರಬಲೀನ್‌. ಆರಂಭ ಮತ್ತು ಡಿಜಿಟಲ್ ಜರ್ನಿ : ತಮ್ಮ ವೈಯಕ್ತಿಕ ಅನುಭವ, ಮನನೋಯಿಸುವ ಸಂಘರ್ಷಗಳಿಂದ ಈಕೆ ಈ ಜರ್ನಿ ಆರಂಭಿಸಿದರು. ಬಾಡಿ ಇಮೇಜ್‌, ಸಾಮಾಜಿಕ ಜಜ್‌ ಮೆಂಟ್‌, ಸೆಲ್ಫ್ ಕಾನ್ಛಿಡೆನ್ಸ್ ಗಳಿಗೆ ಸಂಬಂಧಿಸಿದ ಸವಾಲುಗಳು ಇವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ.

ನಿಧಾನವಾಗಿ ಇವರ ಕಂಟೆಂಟ್‌ ಕೇವಲ ವ್ಯಕ್ತಿಗತ ಅಭಿವ್ಯಕ್ತಿಯಾಗಿ ಉಳಿಯದೆ, ಮಹಿಳೆಯರು ಯಾವ ಸಂಕೋಚ ಇಲ್ಲದೆ ತಮ್ಮ ದೇಹ ಹಾಗೂ ಐಡೆಂಟಿಟಿಯನ್ನು ಸ್ವೀಕರಿಸಲು ಪ್ರೇರಣೆ ನೀಡುವಂಥ ಯಶಸ್ವೀ ಕಂಟೆಂಟ್‌ ಮಾಡತೊಡಗಿದ್ದಾರೆ. ಒಬ್ಬ ಸಿಖ್ ಮಹಿಳೆಯಾಗಿ, ಫ್ಯಾಷನ್‌ಲೈಫ್‌ ಸ್ಟೈಲ್ ‌ಸ್ಪೇಸ್‌ ನಲ್ಲಿ ಈಕೆಯ ಇರುವಿಕೆ, ಭಾರತೀಯ ಇನ್‌ ಫ್ಲೂಯೆನ್ಸರ್‌ ಕಲ್ಚರ್‌ ನಲ್ಲಿ ವೈವಿಧ್ಯತೆ, ಪ್ರತಿನಿಧಿತ್ವಗಳನ್ನು ಸಶಕ್ತಗೊಳಿಸಿದೆ.

ಕಂಟೆಂಟ್‌ ನ ವಿಶೇಷ ಐಡೆಂಟಿಟಿ : ಇವರ ಕಂಟೆಂಟ್‌ ಫ್ಯಾಷನ್‌ ಎಮೋಶನಲ್ ವೆಬ್ ‌ಬೀಯಿಂಗ್‌ ಆಧಾರಿತವಾಗಿದೆ. ಡ್ರೆಸ್‌ ಅಂದ್ರೆ ಕೇವಲ ಸ್ಟೈಲ್‌ ಗ್ಲಾಮರ್‌ ಅಲ್ಲ, ಅದನ್ನು ಸೆಲ್ಫ್ ಎಕ್ಸ್ ಪ್ರೇರಶನ್‌ ನ ಮಾಧ್ಯಮ ಎಂದೇ ಭಾವಿಸುತ್ತಾರೆ. ಇವರ ಕಂಟೆಂಟ್‌ ನ ಮುಖ್ಯ ವಿಷಯಗಳು :

ಬೇರೆ ಬೇರೆ ಬಾಡಿ ಟೈಪ್ಸ್ ಗೆ ಹೊಂದುವ ಸ್ಟೈಲಿಂಗ್‌

ಸೆಲ್ಫ್ ಆತ್ಮವಿಶ್ವಾಸ ತುಂಬಿದ ಸಂದೇಶಗಳು

ಬಾಡಿ ಇಮೇಜ್‌ ಸಾಮಾಜಿಕ ಒತ್ತಡಗಳ ಕುರಿತು ಮಾತುಕಥೆ ಪ್ರೇರಣಾದಾಯಕ ಮೀಮ್ಸ್ ಸಕಾರಾತ್ಮಕ ವಿಚಾರಗಳು

ಪ್ರಭಾವ ಹಾಗೂ ಸಾಮಾಜಿಕ ಪಾತ್ರ : ಇವರ ದೊಡ್ಡ ವೈಶಿಷ್ಟ್ಯ ಅಂದ್ರೆ ಎಮೋಶನಲ್ ಟ್ರಾನ್ಸ್ ಪರೆನ್ಸಿ. ತಮ್ಮನ್ನು ತಾವು ಅಸಹಾಯಕರು ಎಂದುಕೊಳ್ಳದೆ ಹೀಲಿಂಗ್‌ ಪರ್ಸನಲ್ ಗ್ರೋಥ್‌ ಕುರಿತಾಗಿ ಓಪನ್‌ ಮೈಂಡೆಡ್‌ ಆಗಿ ಮಾತನಾಡುತ್ತಾರೆ. ಇದರಿಂದ ವೀಕ್ಷಕರ ಜೊತೆ ಇವರ ಒಡನಾಟ ಹೆಚ್ಚು ಆತ್ಮೀಯವಾಗುತ್ತದೆ.

ಡಿಜಿಟಲ್ ಪ್ರಭಾವ : ಡಿಜಿಟಲ್ ಮೀಡಿಯಾದಲ್ಲಿ 6 ಲಕ್ಷಕ್ಕೂ ಅಧಿಕ ಫಾಲೊಯೆರ್ಸ್‌. ರೀಲ್ಸ್, ಸ್ಟೈಲಿಂಗ್‌ ವಿಡಿಯೋ ಪ್ರೇರಣಾದಾಯಕ ಕಂಟೆಂಟ್‌ ನಿಂದ ಸಶಕ್ತ ಪ್ರದರ್ಶನ. ಎಲ್ಲೆಡೆ ಹೆಚ್ಚುತ್ತಿರುವ ಜನಪ್ರಿಯತೆ, ಉತ್ಪ್ರೇಕ್ಷೆಗಿಂತ ವಾಸ್ತವ ಮುಖ್ಯ ಎನ್ನುವ ಧೋರಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ