– ರಾಘವೇಂದ್ರ ಅಡಿಗ ಎಚ್ಚೆನ್.

ಕೊಟ್ಯಂತರ ಭಕ್ತರ ಮನೆಯಲ್ಲಿ ಪೂಜೆಗೊಳ್ಳುವ ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಚಿತ್ರವನ್ನು ರಚಿಸಿದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ ನಿಧನರಾಗಿದ್ದಾರೆ. 1970ರ ದಶಕದಲ್ಲಿ ಗರ್ಭಗುಡಿಯಲ್ಲಿದ್ದ ಸ್ವಾಮಿಯನ್ನು ಕಣ್ಣಾರೆ ಕಂಡು ಅವರು ಈ ಅದ್ಭುತ ಕಲಾಕೃತಿಯನ್ನು ರಚಿಸಿದ್ದರು.

ಭಕ್ತರ ಮನೆಯಲ್ಲಿ ನಿತ್ಯ ಪೂಜೆಗೊಳ್ಳುವ ತಿರುಪತಿ ತಿಮ್ಮಪ್ಪನ ಪ್ರಸಿದ್ಧ ಭಾವಚಿತ್ರವನ್ನು ಬಿಡಿಸಿದ ಖ್ಯಾತ ಕಲಾವಿದ ಎಸ್.ಎಂ. ಶ್ರೀನಿವಾಸನ್ (86) ಶನಿವಾರ ನಿಧನರಾಗಿದ್ದಾರೆ.

ತಮಿಳುನಾಡಿನ ಕೋವಿಲ್‌ಪಟ್ಟಿ ಮೂಲದವರಾದ ಶ್ರೀನಿವಾಸನ್, 1970ರ ದಶಕದ ಆರಂಭದಲ್ಲಿ ತಿರುಮಲ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ರೂಪವನ್ನು ಕಣ್ಣಾರೆ ಕಂಡು ಆ ಚಿತ್ರವನ್ನು ರಚಿಸಿದ್ದರು. ಬಳಿಕ ಟಿಟಿಡಿಯಿಂದ ಅನುಮೋದನೆ ಪಡೆದ ಅವರ ಈ ಕಲಾಕೃತಿ ಕ್ಯಾಲೆಂಡರ್ ಮತ್ತು ಪೋಸ್ಟರ್‌ಗಳ ಮೂಲಕ ದೇಶ-ವಿದೇಶಗಳ ಕೋಟ್ಯಂತರ ಭಕ್ತರ ಮನೆಗಳನ್ನು ತಲುಪಿ ಅಪಾರ ಜನಪ್ರಿಯತೆ ಪಡೆದಿತ್ತು.

ತಮಿಳುನಾಡಿನ ಶ್ರೀನಿವಾಸನ್ ಅವರು 10ನೇ ತರಗತಿ ವರೆಗೂ ಶಿಕ್ಷಣ ಪಡೆದುಕೊಂಡಿದ್ದು, ಆ ಬಳಿಕ ಖ್ಯಾತ ಚಿತ್ರಕಾರರಾದ ಕೆಂಡಯ್ಯರಾಜು ಅವರ ಬಳಿ ಶಿಷ್ಯರಾಗಿ ಸೇರ್ಪಡೆಯಾಗಿದ್ದರು. ಅವರ ಬಳಿ ತರಬೇತಿ ಪಡೆದು, ದೇವರ ಚಿತ್ರಗಳನ್ನು ರಚಿಸುವುದರಲ್ಲಿ ಕೌಶಲ್ಯ ಪಡೆದುಕೊಂಡಿದ್ದರು.

ಇದರೊಂದಿಗೆ ಇವರನ್ನು 1970ರಲ್ಲಿ ಟಿಟಿಟಿ ಅವರಿಗೆ ವಿಶೇಷ ಆಹ್ವಾನ ನೀಡಿತ್ತು. ತಿರುಮಲ ಶ್ರೀವಾರಿ ಆಲಯ ಗರ್ಭಗುಡಿಯಲ್ಲಿರುವ ಶ್ರೀವೆಂಕಟೇಶ್ವರನ ನೇರವಾಗಿ ನೋಡಿ ಸ್ವಾಮಿಯ ರೂಪವನ್ನು ಅದ್ಬುತವಾಗಿ ರಚಿಸಿದ್ದರು. ಶ್ರೀನಿವಾಸನ್ ತಿರುಮಲ ಶ್ರೀವಾರು ಸರ್ವಾಭರಣದೊಂದಿಗೆ ಧರಿಸಿದ್ದ ಚಿತ್ರವನ್ನು ರಚಿಸಿದ್ದರು. ಮತ್ತೊಂದು ಸರ್ವಾಭರಣಗಳನ್ನು ಧರಿಸದೆ ಇರುವ ಎರಡು ಚಿತ್ರಗಳನ್ನು ಅದ್ಭುತವಾಗಿ ರಚಿಸಿದ್ದರು. ಈ ಚಿತ್ರಗಳಿಗೆ ಟಿಟಿಡಿ ಅಧಿಕೃತವಾಗಿ ಅನುಮೋದನೆ ನೀಡಿತ್ತು.

ಶ್ರೀನಿವಾಸನ್ ಅವರು ತಿರುಮಲ ವೆಂಕಟೇಶ್ವರಸ್ವಾಮಿ ಅವರೊಂದಿಗೆ ಬೇರೆ ಬೇರೆ ದೇವರ ಮೂರ್ತಿಗಳ ಚಿತ್ರಗಳನ್ನು ಬಿಡಿಸಿದ್ದರು. ಅವರ ದೇವತಾ ಚಿತ್ರಗಳು ಹಲವರ ಮೆಚ್ಚುಗೆ ಗಳಿಸಿತ್ತು. ತಿರುಮಲ ಶ್ರೀವಾರಿ ಚಿತ್ರಗಳನ್ನು ಬಿಡಿಸುವ ಮೂಲಕ ಅವರ ಖ್ಯಾತಿ ಹೆಚ್ಚಾಗಿತ್ತು. ಶ್ರೀನಿವಾಸನ್ ಅವರಿಗೆ ತಿರುಮಲ ಗರ್ಭಗುಡಿಯಲ್ಲಿ ಕುಳಿತು ದೇವರ ಮೂರ್ತಿಯನ್ನು ಹತ್ತಿರದಿಂದ ನೋಡುವ ಅದ್ಭುತ ಅವಕಾಶ ಸಿಕ್ಕಿತ್ತು.

ಶ್ರೀನಿವಾಸನ್ ಅವರು ಚಿತ್ರಗಳನ್ನು ರಚಿಸಿದ ಬಳಿಕ ಟಿಟಿಡಿ ಹಾಡುಗಳನ್ನು ತಯಾರಿಸಿತ್ತು. ಭಕ್ತರು ದಿನ ಬೆಳಗ್ಗೆ ಭಕ್ತಿಯೊಂದಿಗೆ ತಮ್ಮ ಮನೆಯಲ್ಲೇ ದೇವರ ನಾಮಸ್ಮರಣೆಗೆ ಇದು ಅವಕಾಶ ನೀಡಿತ್ತು. ಶ್ರೀನಿವಾಸನ್ ರಚಿಸಿದ್ದ ಎರಡು ಚಿತ್ರಗಳನ್ನು ಟಿಟಿಡಿ ಕ್ಯಾಲೆಂಡರ್‌ನಲ್ಲಿ ಮುದ್ರಿಸಿ ಬಿಡುಗಡೆ ಮಾಡಿತ್ತು. ಶ್ರೀನಿವಾಸನ್ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ, ಸ್ಥಳೀಯರು, ಪ್ರಮುಖರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ತಿರುಮಲ ಶ್ರೀನಿವಾಸನ ಅದ್ಭುತ ರೂಪವನ್ನು ರಚಿಸಿದ ಕಲಾವಿದರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ