ಹೆರಿಗೆಯ ನಂತರ ಸಾಮಾನ್ಯವಾಗಿ ಬಾಣಂತಿಯು ಅಪೌಷ್ಟಿಕತೆಗೆ ಗುರಿಯಾಗುತ್ತಾಳೆ. ಮಗು ಹುಟ್ಟಿದ ತಕ್ಷಣ ಅಪೌಷ್ಟಿಕತೆಯ ದುಷ್ಪರಿಣಾಮ, ತಾಯಿಮಗು ಇಬ್ಬರ ಮೇಲೂ ದಟ್ಟವಾಗಿ ಆಗುತ್ತದೆ. ಪ್ರೆಗ್ನೆನ್ಸಿ ಮತ್ತು ಅದರಾಚೆಗೆ ಆಗುವ ಅಪೌಷ್ಟಿಕತೆಯ ಪರಿಣಾಮಗಳು ಶಿಶುವನ್ನು ತೀವ್ರವಾಗಿ ಬಾಧಿಸುತ್ತದೆ.
ಹೆರಿಗೆ ನಂತರ ಅಪೌಷ್ಟಿಕತೆಗೆ ಕಾರಣಗಳು
ಸ್ತನ್ಯಪಾನ ಇದರ ಮೊದಲ ಹಾಗೂ ಮುಖ್ಯ ಕಾರಣ. ಮಗುವಿಗೆ ಮೊಲೆಯೂಡಿಸುವ ತಾಯಿಗೆ ಪ್ರತಿದಿನ ಕನಿಷ್ಠ 1000 ಕ್ಯಾಲೋರಿಯಷ್ಟು ಆಹಾರದ ಅಗತ್ಯವಿದ್ದೇ ಇದೆ. ಎಷ್ಟೋ ಬಾಣಂತಿಯರಿಗೆ ಈ ಸಮರ್ಪಕ ಡಯೆಟ್ ಚಾರ್ಟ್ ಬಗ್ಗೆ ಗೊತ್ತೇ ಇರುವುದಿಲ್ಲ ಅಥವಾ ಇದನ್ನು ನಿರ್ಲಕ್ಷಿಸುತ್ತಾರೆ. (ಅಸಹಾಯಕತೆಯೂ ಇರಬಹುದು). ಆ ಕಾರಣವಾಗಿ ಮಗುವಿಗೆ ಡೀಹೈಡ್ರೇಶನ್, ವಿಟಮಿನ್, ಮಿನರಲ್ಸ್ ಕೊರತೆ, ಅನೀಮಿಯಾ….. ಮುಂತಾದ ಕಾಡಬಹುದು. ಇದನ್ನೇ ಪೋಸ್ಟ್ ನೇಟ್ ಮಾಲ್ ನ್ಯೂಟ್ರಿಶನ್ ಎನ್ನುತ್ತಾರೆ (ಮುಖ್ಯವಾಗಿ ಹೆರಿಗೆಯಾದ ತಕ್ಷಣ ಆಗುವ ಅಪೌಷ್ಟಿಕತೆ).
ಸ್ತನ್ಯಪಾನ ಮಾಡಿಸುವ ತಾಯಿಗೆ ಹೆಚ್ಚು ಹಸಿವಾಗುತ್ತದೆ. ಎಷ್ಟೋ ಸಲ ಅವಳು ಪೌಷ್ಟಿಕವಲ್ಲದ, ಆರೋಗ್ಯಕ್ಕೆ ಹಿತಕರವಲ್ಲದ ಆಹಾರ ಸೇವಿಸಿಬಿಡುತ್ತಾಳೆ. ರುಚಿಯಲ್ಲಿ ಉತ್ತಮ ಎನಿಸುವ ಆಹಾರ ವಿಟಮಿನ್ಸ್, ಮಿನರ್ಸ್ ನ ಕೊರತೆ ಹೊಂದಿರುತ್ತದೆ. ಈ ಕಾರಣ ತಾಯಿ ಅಪೌಷ್ಟಿಕತೆಗೆ ತುತ್ತಾಗಿ ಮಗುವಿಗೆ ಸಾಕಷ್ಟು ಹಾಲುಣಿಸಲಾಗದು. ಆಗ ಸಹಜವಾಗಿಯೇ ಕೂಸು ಬಡಲಾಗುತ್ತದೆ.
ಮಗುವಿನ ಹುಟ್ಟಿಗೆ ಮುನ್ನ ಮತ್ತು ನಂತರ ಪ್ರೀನೇಟ್ ವಿಟಮಿನ್ಸ್ ಸೇವನೆ ಅತ್ಯಗತ್ಯವಾದುದು. ಪ್ರೀನೇಟ್ ವಿಟಮಿನ್ಸ್ ಅಂದ್ರೆ ಫಾಲಿಕ್ ಆ್ಯಸಿಡ್ಸ್ ನೀರಿನಲ್ಲಿ ವಿಲೀನವಾಗಿ, ಸುಲಭವಾಗಿ ದೇಹದಿಂದ ಹೊರಗೆ ವಿಸರ್ಜಿಸಲ್ಪಡುತ್ತಿರುತ್ತದೆ. ಈ ಕಾರಣದಿಂದಾಗಿ ಕೂಸು ಹುಟ್ಟಿದ ನಂತರ ತಾಯಂದಿರು ಫಾಲಿಕ್ ಆ್ಯಸಿಡ್ ನ ಕೊರತೆಯಿಂದಾಗಿ ಅನೀಮಿಯಾಗೆ ತುತ್ತಾಗುತ್ತಾರೆ, ಆಗ ಸಹಜವಾಗಿ ಮಗುವಿಗೆ ಪುಷ್ಟಿಕರ ಹಾಲು ಉಣಿಸಲಾಗದು.
ನವಜಾತ ಶಿಶುವಿಗೂ ರಿಸ್ಕ್
ಗರ್ಭವತಿಗೆ ಅಪೌಷ್ಟಿಕತೆಯ ದುಷ್ಪರಿಣಾಮ ನೇರವಾಗಿ ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆ ಆಗುತ್ತದೆ. ಆ ಕಾರಣ ಮಗುವಿನ ಬೆಳವಣಿಗೆ ಸರಿಯಾಗಿ ಆಗದು ಹಾಗೂ ಹೆರಿಗೆಯ ಸಮಯದಲ್ಲಿ ಮಗುವಿನ ತೂಕ ಸಾಮಾನ್ಯ ಆರೋಗ್ಯಕರ ಶಿಶುವಿಗಿಂತ ಬಹಳ ಕಡಿಮೆ ಇರುತ್ತದೆ. ಪ್ರೆಗ್ನೆನ್ಸಿಯಲ್ಲಿ ಗರ್ಭವತಿಗೆ ಅಪೌಷ್ಟಿಕತೆಗೆ ಮತ್ತು ಹೆರಿಗೆಯಲ್ಲಿ ಕಡಿಮೆ ತೂಕದ ದುಷ್ಪರಿಣಾಮ ಮಗುವಿಗಾಗುತ್ತದೆ, ಇದರ ಹಲವು ಪರಿಣಾಮಗಳಿವೆ.
ಮಗುವಿನ ಮೇಲೆ ಪರಿಣಾಮ
ಪ್ರೆಗ್ನೆನ್ಸಿ ಕಾರಣ ತಾಯಿಯ ಪೋಷಣೆಯಲ್ಲಿ ಕುಂದುಕೊರತೆಗಳಿದ್ದರೆ, ಮಗು ಮುಂದೆ ತನ್ನ ಜೀವನದಲ್ಲಿ ಈ ಕೆಳಗಿನ ರೋಗಗಳೊಂದಿಗೆ ನಿರಂತರ ಹೋರಾಡಬೇಕಾಗುತ್ತದೆ. ಆಸ್ಟಿಯೋಪೊರೋಸಿಸ್, ಕ್ರಾನಿಕ್ ಕಿಡ್ನಿ ಫೇಲ್ಯೂರ್, ಹೃದ್ರೋಗ, ಟೈಪ್ ಡಯಾಬಿಟೀಸ್, ಲಂಗ್ಸ್ ಡಿಸೀಸ್, ರಕ್ತದಲ್ಲಿ ಲಿಪಿಡ್ಸ್ ಪ್ರಮಾಣದ ಕೊರತೆ, ಗ್ಲೂಕೋಸ್ ಇನ್ ಟಾಲರೆನ್ಸ್ (ಇದು ಪ್ರೀಡಯಾಬಿಟಿಕ್ಸ್ಥಿತಿಯಾಗಿದ್ದು, ಮಗುವಿನ ದೇಹದಲ್ಲಿ ಗ್ಲೂಕೋಸ್ ನ ಮೆಟಬಾಲಿಸಂ ಅಸಾಮಾನ್ಯ ಆಗುತ್ತದೆ).
ತಾಯಿಯ ಕಾಡುವ ಸಮಸ್ಯೆಗಳು
ಪ್ರೆಗ್ನೆನ್ಸಿಯಲ್ಲಿ ಗರ್ಭವತಿಗೆ ಪೋಷಣೆ ಕೊರತೆಯಾದರೆ, ಅದು ಜೀವಕ್ಕೇ ಅಪಾಯಕಾರಿ ಆದೀತು. ಇದರ ಜೊತೆಗೆ ಪ್ರಿಮೆಚ್ಯೂರ್ಡೆಲಿವರಿ, ಗರ್ಭಪಾತದಂತಹ ಸಮಸ್ಯೆ ತಲೆದೋರಬಹುದು. ಹಾಗೆಯೇ ಬಾಣಂತಿ ಸೋಂಕು (ಸನ್ನಿ), ಅನೀಮಿಯಾ, ಸುಸ್ತುಸಂಕಟ, ನಿರಂತರ ಆಯಾಸ, ಆಸ್ಟಿಯೋಪೊರೋಸಿಸ್ ಇತ್ಯಾದಿ.
ಅಪೌಷ್ಟಿಕತೆ ತಡೆಯುವುದು ಹೇಗೆ?
ಬ್ಯಾಲೆನ್ಸ್ಡ್ ಅಂದ್ರೆ ಪುಷ್ಟಿ ತುಂಬಿದ ಆಹಾರ ಸೇವನೆಯೊಂದೇ ಇದಕ್ಕೆ ಪರಿಹಾರ. ಗರ್ಭವತಿ ತನ್ನ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಹಾಲು, ಹಣ್ಣು ಹಂಪಲು, ತಾಜಾ ಹಸಿ ತರಕಾರಿ, ಕಾದಾರಿದ ನೀರು, ಪ್ರೋಟೀನ್, ಕೊಬ್ಬು, ಕಾರ್ಬೊಹೈಡ್ರೇಟ್ಸ್ ಸೇವಿಸತಕ್ಕದ್ದು.
ಪೋಷಣೆಗೆ ಸಂಬಂಧಿಸಿದ ಅಗತ್ಯಗಳು
ಕಬ್ಬಿಣಾಂಶ : ದೇಹದಲ್ಲಿ ಹಿಮೋಗ್ಲೋಬಿನ್ ತಯಾರಾಗಲು ಕಬ್ಬಿಣಾಂಶ ಅತ್ಯಗತ್ಯ ಬೇಕು. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಅಡಗಿರುವುದರಿಂದ ಅದು ದೇಹದಲ್ಲಿ ಎಲ್ಲೆಡೆ ಸುಗಮವಾಗಿ ಹರಿದು ಆಮ್ಲಜನಕ ತಲುಪಿಸುತ್ತದೆ. ಗರ್ಭವತಿಗೆ ಕೆಂಪು ರಕ್ತಕಣಗಳ ಕೊರತೆಯಿದ್ದರೆ, ದೇಹದ ಎಲ್ಲಾ ಅಂಗಾಂಗಳಿಗೂ ಆಕ್ಸಿಜನ್ ಸಾಕಷ್ಟು ಪ್ರಮಾಣದಲ್ಲಿ ತಲುಪುದಿಲ್ಲ. ಗರ್ಭವತಿ ಸಾಕಷ್ಟು ಪ್ರಮಾಣದ ಕಬ್ಬಿಣಾಂಶದ ಆಹಾರ ಸೇವಿಸದಿದ್ದರೆ, ಕಾಲಕ್ರಮೇಣ ಹಿಮೋಗ್ಲೋಬಿನ್ ನ ಕೊರತೆಯುಂಟಾಗಿ, ಅವಳು ಅನೀಮಿಕ್ ಆಗುತ್ತಾಳೆ. ಅವಳಿಗೆ ದೇಹದಲ್ಲಿ ಸದಾ ಶಕ್ತಿಯ ಕೊರತೆ ಕಾಡುತ್ತಿರುತ್ತದೆ. ಹಾಗಾಗಿ ರೋಗನಿರೋಧಕ ಶಕ್ತಿ ಸಂಪೂರ್ಣ ಕ್ಷೀಣಿಸುತ್ತದೆ.
ಹೆರಿಗೆಯ ನಂತರ, ಬಾಣಂತಿಗೆ ತಕ್ಷಣ ಸುಸ್ತು ಸಂಕಟ ತಪ್ಪಿದ್ದಲ್ಲ. ಹಾಗಾಗಿ ಅವಳು ಹೆಚ್ಚು ಹೆಚ್ಚಾಗಿ ಕಬ್ಬಿಣಾಂಶದ ಆಹಾರ ಸೇವನೆ ಮಾಡಬೇಕು. ಪ್ರಸವ ಸಂದರ್ಭದಲ್ಲಿ ಎಷ್ಟೋ ಸಲ ಹೆಚ್ಚು ರಕ್ತ ಹೋಗಿಬಿಡುವುದರಿಂದ ಅನೀಮಿಯಾ ತಪ್ಪಿದ್ದಲ್ಲ. ಹೀಗಾಗಿ ಬಾಣಂತಿ ತನ್ನ ಆಹಾರದಲ್ಲಿ ಕಬ್ಬಿಣಾಂಶದ ಕಡೆ ಹೆಚ್ಚು ಗಮನ ಕೊಡಬೇಕು.
ಗ್ಲೂಕೋಸ್: ಕಬ್ಬಿಣಾಂಶ ಸಹಜವಾಗಿ ರಕ್ತದಲ್ಲಿ ವಿಲೀನಗೊಳ್ಳಲು, ಗ್ಲೂಕೋಸ್ ಪ್ರಧಾನ ಪಾತ್ರ ವಹಿಸುತ್ತದೆ ಇದರಿಂದಾಗಿ ಕಬ್ಬಿಣಾಂಶ ಬೇಗ ವಿಲೀನಗೊಳ್ಳಲು ಅನುಕೂಲವಾಗಿ, ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ.
ಮಗು ಹುಟ್ಟಿದ ನಂತರ
ಪೋಷಣೆ ಮತ್ತು ತೂಕದಲ್ಲಿ ಕೊರತೆ : ಮಗು ಹುಟ್ಟಿದ ನಂತರ ಬಾಣಂತಿಯರು ತಾವು ಆದಷ್ಟು ಬೇಗ ಸಣ್ಣಗಾಗಬೇಕೆಂದು ಏನೇನೋ ಪ್ರಯತ್ನ ನಡೆಸುತ್ತಾರೆ. ಆ ಕಾರಣ ಸೂಕ್ತ ಪೌಷ್ಟಿಕ ಆಹಾರ ಸೇವಿಸುವುದಿಲ್ಲ. ಇದು ಖಂಡಿತಾ ಹಾನಿಕರ. ಸ್ತನ್ಯಪಾನ ಮಾಡಿಸುವುದರಿಂದ ಸಹಜವಾಗಿಯೇ ದೇಹ ತೂಕ ಹೆಚ್ಚಾಗುತ್ತದೆ, ಜೊತೆಗೆ ಅದು ನೈಸರ್ಗಿಕ ಸಂತಾನ ನಿರೋಧಕ (ಕಾಂಟ್ರಾಸೆಪ್ಟಿವ್)ವಾಗಿ ಕೆಲಸ ಮಾಡುತ್ತಿರುತ್ತದೆ. ಮೊಲೆಯೂಡಿಸುವ ತಾಯಿಗೆ ಪ್ರತಿದಿನ 300 ಹೆಚ್ಚುವರಿ ಕ್ಯಾಲೋರಿ ಆಹಾರದ ಅಗತ್ಯವಿರುತ್ತದೆ. ಹೀಗಾಗಿ ಸಮತೋಲಿತ ಆಹಾರದ ಜೊತೆಗೆ ವ್ಯಾಯಾಮ ಸಹ ಮಾಡಿ, ಹೆಚ್ಚುವರಿ ಆಹಾರ ಸೇವನೆ ತಪ್ಪಿಸಿ. ಪ್ರಸವ ನಾರ್ಮಲ್ ಆಗಿದ್ದರೆ, ಮಗು ಹುಟ್ಟಿದ 2-3 ವಾರಗಳಲ್ಲೇ ಆಕೆ ಲಘು ವ್ಯಾಯಾಮಕ್ಕೆ ತೊಡಗಬಹುದು. ಆದರೆ ಸಿಸೇರಿಯನ್ ಆಗಿದ್ದರೆ, 7-8 ವಾರಗಳವರೆಗೂ ವ್ಯಾಯಾಮದ ಯೋಚನೆ ಬೇಡ. ಯಾವುದು ಹೇಗೇ ಇರಲಿ, ಪೌಷ್ಟಿಕ ಆಹಾರ ಸೇನೆಯನ್ನು ಖಂಡಿತಾ ಕಡೆಗಣಿಸಬಾರದು.
– ಪ್ರತಿನಿಧಿ





