`ನಿಮ್ಮ ಶಕ್ತಿ, ಸಾಮರ್ಥ್ಯಗಳಲ್ಲಿ ನಂಬಿಕೆ ಇರಲಿ. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಮಾನವೀಯತೆ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.......'

ನಾಳಿನ ಸದೃಢ ಪ್ರಜೆಗಳನ್ನು ರೂಪಿಸುವ ಪವಿತ್ರ ಕಾಯಕವಾದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಪ್ರಾಂಶುಪಾಲರಾದ ದಿವ್ಯ ಭಾರತಿಯವರ ವಿಶ್ವಾಸಭರಿತ ನುಡಿಗಳನ್ನು ಕೇಳುವಾಗ ಉತ್ಸಾಹ ಪುಟಿಯುವುದರಲ್ಲಿ ಸಂಶಯವೇ ಇಲ್ಲ.

ಪ್ರಸ್ತುತ ಬೆಂಗಳೂರಿನ ಯಲಹಂಕದ ಜ್ಞಾನಜ್ಯೋತಿ ಶಾಲೆಯಲ್ಲಿ ಪ್ರಿನ್ಸಿಪಾಲ್ ‌ಆಗಿರುವ ದಿವ್ಯ ಭಾರತಿ, ಹುಟ್ಟಿ ಬೆಳೆದದ್ದು ಸಾಂಸ್ಕೃತಿಕ ನಗರ ಮೈಸೂರಿನಲ್ಲಿ. ತಂದೆ ಮಾದೇಶ, ವೃತ್ತಿಯಲ್ಲಿ ಚಾಲಕರು. ತಾಯಿ ಜಯಶೀಲಾ ಗೃಹಿಣಿ. ಇವರ ಶಿಸ್ತುಬದ್ಧ, ತ್ಯಾಗಮಯ ಮೌಲ್ಯಾಧಾರಿತ ಜೀವನಶೈಲಿಯೇ ತಮ್ಮ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನವಾಯಿತು ಎಂಬ ಹೆಮ್ಮೆ, ಮಾತುಮಾತಿನಲ್ಲೂ ಮೊಳಗಿಸುತ್ತಾರೆ.

ಶೈಕ್ಷಣಿಕ ವಿದ್ಯಾಭ್ಯಾಸ

ಮೈಸೂರಿನ ಲಿಟಲ್ ಇನ್‌ ಫೆಂಟ್‌ ಹೈಸ್ಕೂಲ್ ‌ನಲ್ಲಿ ಶಾಲಾಶಿಕ್ಷಣ, ಪೀಪಲ್ಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಕೆ.ಎಸ್‌.ಒ ನಿಂದ ಬಿ.ಎ ಪದವಿ ಗಳಿಸಿ ನಂತರ ಬಿ.ಎಡ್‌ ಮತ್ತು ಹಿಂದಿ ವಿಷಯದಲ್ಲಿ ಎಂ.ಎ ಪದವಿಯನ್ನು ದಕ್ಷಿಣ ಭಾರತ್‌ ಹಿಂದಿ ಪ್ರಚಾರ್‌ ಸಭಾದಿಂದ ಪಡೆದಿದ್ದಾರೆ. ಹನ್ನೆರಡು ವರ್ಷಗಳ ಸುದೀರ್ಘ ಅನುಭವವಿರುವ ದಿವ್ಯ ಭಾರತಿ, ಮಕ್ಕಳಿಗೆ ಕಲಿಸುತ್ತಲೇ ತಮ್ಮ ಕಲಿಕೆಯನ್ನೂ ಮುಂದುವರಿಸಿ ಉನ್ನತ ಶಿಕ್ಷಣವನ್ನು ಪಡೆದದ್ದು ಹೆಗ್ಗಳಿಕೆಯೇ ಹೌದು.

ಬಾಲ್ಯದಲ್ಲೇ ಪ್ರತಿಭಾಂತ ವಿದ್ಯಾರ್ಥಿನಿಯಾಗಿ ಅನೇಕ ಅಂತರಶಾಲಾ ಮತ್ತು ಜಿಲ್ಲಾ ಮಟ್ಟದಲ್ಲಿ ನೃತ್ಯ, ಚರ್ಚಾ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾರೆ.

ಹವ್ಯಾಸ

ಸಂಗೀತ, ಓದುವುದರಲ್ಲಿ ಫಿಕ್ಷನ್‌ ಮತ್ತು ನಾನ್‌ಫಿಕ್ಷನ್‌ ಎರಡೂ ಇವರ ಆಸಕ್ತಿಕರ ಲಯ. ರತನ್‌ ಟಾಟಾರ ನಾಯಕತ್ವ, ಸೇವಾ ಮನೋಭಾವ ಇವರ ಮೇಲೂ ಪ್ರಭಾವ ಬೀರಿ ಆ ದಿಸೆಯಲ್ಲಿ ಹೆಜ್ಜೆ ಹಾಕಲು ಸ್ಛೂರ್ತಿ ತುಂಬಿದೆ.

ಸಾಮಾಜಿಕ ಕಳಕಳಿ ಇವರನ್ನು ಬಹಳವಾಗಿ ಉತ್ತೇಜಿಸುತ್ತದೆ. ಅದಕ್ಕೆ ಸಂಬಂಧಿತ ವಿಚಾರ ಸಂಕಿರಣ, ಚರ್ಚೆ, ವಿದ್ಯಾರ್ಥಿಗಳ ಬೆಳವಣಿಗೆಗಳನ್ನು ಕುರಿತ ಆಲೋಚನೆಗಳೇ ಇವರನ್ನು ಹೆಚ್ಚಾಗಿ ಸೆಳೆಯುವುದು ಮತ್ತು ಅದರೊಂದಿಗೆ ತೊಡಗಿಸಿಕೊಳ್ಳುವುದು ಇವರ ನೆಚ್ಚಿನ ಹವ್ಯಾಸದ ಸ್ವರೂಪ ಪಡೆದುಕೊಳ್ಳುತ್ತದೆ.

ಶೈಕ್ಷಣಿಕ ಸೇವೆ

ಇವರ ಮಾತುಗಳಲ್ಲೇ ಹೇಳುವುದಾದರೆ, `ಶೈಕ್ಷಣಿಕ ನಾಯಕತ್ವ, ವಿದ್ಯಾರ್ಥಿಗಳ ಕ್ಷೇಮ ಮತ್ತು ಸಮಗ್ರ ಅಭಿವೃದ್ಧಿಯ ಬಗ್ಗೆ ನನಗೆ ಅಪಾರ ಆಸಕ್ತಿ ಇದೆ.' ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುವೆ. ಇದೇ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳನ್ನು ಆಯೋಜಿಸುವುದು, ವಿದ್ಯಾರ್ಥಿ ಮತ್ತು ಶಿಕ್ಷಕವೃಂದಕ್ಕೆ ಸಕಾರಾತ್ಮಕ ಕಲಿಕಾ ವಾತಾವರಣವನ್ನು ಸೃಜಿಸುವುದರಲ್ಲಿ ಆನಂದಿಸುತ್ತೇನೆ.

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯುತ್ತಮ ಸೇವೆಗಳಲ್ಲಿ ಒಂದು ಎಂದು ನಂಬಿರುವ ಇವರು, ತಮ್ಮ ವೃತ್ತಿಯ ಮೂಲಕ ಯುವ ಮನಸ್ಸುಗಳನ್ನು ಧನಾತ್ಮಕವಾಗಿ ಉತ್ತೇಜಿಸುತ್ತ ನೈತಿಕ ಮೌಲ್ಯಗಳನ್ನು ಪರಿಚಯಿಸಿ. ಜವಾಬ್ದಾರಿಯುತ ನಾಗರಿಕರನ್ನಾಗಿ ನಿರ್ಮಿಸುತ್ತ ಇವರ ಒಡನಾಟವಿದೆ.

ಶಿಕ್ಷಣದಿಂದ ಸುಧಾರಣೆ

ಎಲ್ಲ ಮಕ್ಕಳ ಗ್ರಹಿಕಾ ಶಕ್ತಿಯು ಒಂದೇ ಮಟ್ಟದಲ್ಲಿ ಇರುವುದಿಲ್ಲ. ಕಲಿಕಾ ಸಾಮರ್ಥ್ಯದಲ್ಲಿ ಹಿಂದುಳಿದವರನ್ನು ಮುನ್ನೆಲೆಗೆ ತರುವಲ್ಲಿ ವಿಶೇಷ ಕಾಳಜಿ ವಹಿಸಿ ಅವರನ್ನೂ ಮುಖ್ಯ ವಾಹಿನಿಯಲ್ಲಿ ಸೇರಿಸುವುದು ಒಂದು ಸವಾಲು. ಅದನ್ನು ಸಮರ್ಥವಾಗಿ ನಿಭಾಯಿಸುತ್ತ ಇವರು ಗಂಭೀರವಾಗಿ ಚಿಂತಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ