Sj*

ಸಿನಿ ಮಿನಿ (Cini Mini – ಟೆಂಟ್ ಸಿನಿಮಾ ಹಾಗೂ ಸತ್ಯ ಹೆಗ್ಡೆ ಸ್ಟುಡಿಯೋಸ್ ಜಂಟಿಯಾಗಿ ಆಯೋಜಿಸಿರುವ) ‘ಸಿನಿ ಮಿನಿ ಸೀಸನ್ – 2’ ಕನ್ನಡ ಕಿರುಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಈ ಕಿರುಚಿತ್ರೋತ್ಸವವು ಇದೇ ತಿಂಗಳ ನವೆಂಬರ್ 20 ಮತ್ತು 22ರಂದು ಬೆಂಗಳೂರಿನ ANK Convention Center – Puneeth Rajkumar Auditorium ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ವಿವಿಧ ನಿರ್ದೇಶಕರು ಹಾಗೂ ಚಿತ್ರತಂಡಗಳು ನಿರ್ಮಿಸಿರುವ ಆಯ್ದ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಯುವ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರನ್ನು ಪ್ರೋತ್ಸಾಹಿಸುವುದು ಈ ಕಿರುಚಿತ್ರೋತ್ಸವದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದ ಅಂಗವಾಗಿ ಕಿರುಚಿತ್ರ ಪ್ರದರ್ಶನದ ಜೊತೆಗೆ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. ಶ್ರೀಮತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ಧ್ರುವ ಸರ್ಜಾ, ನಿರ್ದೇಶಕ ತರುಣ್ ಸುಧೀರ್ ಹಾಗೂ ಮನೋಜ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಈ ವಿಶೇಷ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹಾಗೂ ಸಿನಿಮಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಿನಿ ಮಿನಿ ತಂಡ ಮನವಿ ಮಾಡುತ್ತದೆ.

ಸ್ಥಳ: ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣ, ಎ.ಎನ್.ಕೆ. ಕನ್ವೆನ್ಷನ್ ಸೆಂಟರ್, 4ನೇ ಮಹಡಿ, ಕನಕಪುರ ಮುಖ್ಯ ರಸ್ತೆ, ಜಯನಗರ, ಬೆಂಗಳೂರು.

ದಿನಾಂಕ: 20 ಮತ್ತು 22 ನವೆಂಬರ್ 2026

ಆಯೋಜಕರು: Cini Mini ತಂಡ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ