ನೀವು ಸಹ ಫೆಸ್ಟಿವ್ ‌ಸೀಸನ್‌ ನಲ್ಲಿ, ಗುಂಪಿನ ನಾಲ್ವರ ನಡುವೆ ಎದ್ದು ಕಾಣಿಸಲು ಬಯಸುವಿರಾ? ಹಾಗಿದ್ದರೆ ಆರ್ಗೆಂಝಾ ಫ್ಯಾಬ್ರಿಕ್‌…. ಇದೋ ನಿಮಗಾಗಿ!

ಹಬ್ಬದ ಸಡಗರ ಯಾವ ಶುಭ ಸಮಾರಂಭ, ಏನೇ ಸಂದರ್ಭವಿರಲಿ, ಎಲ್ಲಾ ಹೆಣ್ಣುಮಕ್ಕಳೂ ಗುಂಪಿನಲ್ಲಿ ನಾಲ್ವರ ನಡುವೆ ಎದ್ದು ಕಾಣಬೇಕೆಂದು ಬಯಸುತ್ತಾರೆ. ನಮ್ಮ ಪರ್ಸನಾಲಿಟಿಯನ್ನು ವಿಭಿನ್ನ, ವಿಶೇಷವಾಗಿ ಪ್ರಸ್ತುತಪಡಿಸುವಲ್ಲಿ ಎಲ್ಲಕ್ಕಿಂತ ಪ್ರಮುಖ ಪಾತ್ರ ವಹಿಸುವುದು ನಮ್ಮ ಡ್ರೆಸ್‌! ಈ ನಿಟ್ಟಿನಲ್ಲಿ ಇತ್ತೀಚೆಗೆ ಎಲ್ಲೆಲ್ಲೂ ಆರ್ಗೆಂಝಾ ಫ್ಯಾಬ್ರಿಕ್‌ ನ ಡ್ರೆಸೆಸ್‌ ಸಾಮಾನ್ಯರಿಂದ ಹಿಡಿದು ಬಾಲಿವುಡ್‌ ತಾರೆಯರವರೆಗೂ ಜನಪ್ರಿಯತೆ ಗಳಿಸಿದೆ. ಇದು ತೂಕದಲ್ಲಿ ಬಲು ಹಗುರ, ನೋಡಲು ವೆರಿ ಎಲಿಗೆಂಟ್ ಗ್ಲಾಮರಸ್‌, ಪಾರದರ್ಶಕ ಟೆಕ್ಸ್ ಚರ್‌ ಮತ್ತೊಂದು ಪ್ಲಸ್‌ ಪಾಯಿಂಟ್‌. ಇದಂತೂ ಬಲು ಬ್ಯೂಟಿಫುಲ್, ಮಾಡರ್ನ್‌ಕ್ಲಾಸಿಕ್ ಎನಿಸಿದೆ.

ಹಿಂದೆಲ್ಲ ಇದನ್ನು ಕೇವಲ ರೇಷ್ಮೆ ಎಳೆಯಿಂದಲೇ ನೇಯ್ದು ರೆಡಿ ಮಾಡುತ್ತಾರೆ. ರೇಷ್ಮೆಯಿಂದ ನೇಯ್ದ ಫ್ಯಾಬ್ರಿಕ್‌ ಗಿಂತ, ಈ ಆರ್ಗೆಂಝಾ ಇತ್ತೀಚಿನ ಪಾಲಿಸ್ಟರ್‌, ನೈಲಾನ್‌ ಗಳಲ್ಲಿ ಹೆಚ್ಚು ಸಶಕ್ತ ಎನಿಸಿದೆ. ಇದರಿಂದ ತಯಾರಾದ ಔಟ್‌ ಫಿಟ್ಸ್, ಪ್ಲೇಯಿ  ಫ್ಲೇರ್‌ ಹೊಂದಿರುತ್ತವೆ. ಇದರಿಂದ ನಿಮ್ಮ ವ್ಯಕ್ತಿತ್ವ ಹೆಚ್ಚು ಬೆಳಗುತ್ತದೆ.

ಬನ್ನಿ, ಈ ಫೆಸ್ಟಿಲ್ ‌ಸೀಸನ್‌ ನಲ್ಲಿ ನೀವು ಯಾವು ತರಹ ಆರ್ಗೆಂಝಾ ಫ್ಯಾಬ್ರಿಕ್‌ ನ್ನು ನಿಮ್ಮ ವಾರ್ಡ್‌ ರೋಬ್‌ ನಲ್ಲಿ ಶಾಮೀಲುಗೊಳಿಸಬಹುದು ಎಂದು ವಿವರವಾಗಿ ನೋಡೋಣ :

ಕ್ಲಾಸಿ ಕುರ್ತಿ : ಈ ಫ್ಯಾಬ್ರಿಕ್‌ ನಿಂದ ತಯಾರಾದ ಕುರ್ತಿಯಿಂದ ನಿಮಗೆ ನೀವು ಇಂಡೋವೆಸ್ಟರ್ನ್‌ ಲುಕ್ಸ್ ನೀಡಬಹುದು. ಜೊತೆಗೆ  ಕುರ್ತಿಯನ್ನು ನೀವು ಪ್ಲಾಜೋ ಪ್ಯಾಂಟ್‌ ಜೊತೆಗೂ ಪೇರ್‌ ಮಾಡಬಹುದು. ಹೆವಿ ಎಂಬ್ರಾಡರಿಯುಳ್ಳ ಕುರ್ತಿಯನ್ನು ನೀವು ಜೀನ್ಸ್ ಜೊತೆಗೂ ಧರಿಸಬಹುದು. ಇದರಿಂದ ನಿಮಗೆ ಸಾಲಿಡ್‌ ಸ್ಟೈಲಿಶ್‌ ಲುಕ್ಸ್ ಸಿಗುತ್ತದೆ. ಯಾವುದೇ ವಿಶೇಷ ಫಂಕ್ಷನ್‌ ಯಾ ಹಬ್ಬದಲ್ಲಿ ನೀವು ಆರ್ಗೆಂಝಾ ಫ್ಯಾಬ್ರಿಕ್‌ ನಿಂದ ತಯಾರಾದ ಕುರ್ತಿಯನ್ನು, ಫ್ಲೇರ್‌ ವುಳ್ಳ ಸ್ಕರ್ಟ್‌ ಧರಿಸಿ, ದೊಡ್ಡ ಗುಂಪಿನಲ್ಲೂ ಎಲ್ಲರಿಗಿಂತ ವಿಭಿನ್ನವಾಗಿ ಕಂಗೊಳಿಸಬಹುದು. ಯಾವುದೇ ಜೀನ್ಸ್ ಟಾಪ್‌ ಮೇಲೆ ಇದರ ಶ್ರಗ್‌ ಧರಿಸಿ, ನಿಮ್ಮನ್ನು ನೀವು ಸ್ಟೈಲಿಶ್‌ಗ್ಲಾಮರಸ್ ಆಗಿ ಪಡೆಯುವಿರಿ.

ಮ್ಯಾಕ್ಸಿ ಗೌನ್‌ ಡ್ರೆಸ್‌ : ಪ್ರಿಂಟೆಡ್‌ ಆರ್ಗೆಂಝಾ ಫ್ಯಾಬ್ರಿಕ್‌ ನಿಂದ ತಯಾರಾದ ಮ್ಯಾಕ್ಸಿ ಡ್ರೆಸ್‌, ಇತ್ತೀಚೆಗೆ ಫ್ಯಾಷನ್‌ ಪ್ರಿಯರ ಅಚ್ಚುಮೆಚ್ಚಿನ ಆಯ್ಕೆ ಎನಿಸಿದೆ. ಇದನ್ನು ಧರಿಸಿ ನೀವು ಟ್ರೆಂಡಿ, ಕ್ಲಾಸಿ ಹಾಗೂ ಸ್ಟೈಲಿಶ್‌ ಆಗಿ ಕಾಣುವಿರಿ. ನೀವು ಇದರಿಂದ ಫ್ಲೇರ್ ಯುಕ್ತ, ಅನಾರ್ಕಲಿ, ಆ್ಯಂಕಲ್ ಲೆಂಥ್‌ ನ ಮ್ಯಾಕ್ಸಿ ಡ್ರೆಸ್‌ ಮಾಡಿಸಿಕೊಳ್ಳಬಹುದು. ನೀವು ಉತ್ತಮ ಫಾಲ್ ‌ಗಾಗಿ ನಿಮ್ಮ ಡ್ರೆಸ್‌ ನಲ್ಲಿ ಅಗಲದ ಫ್ರಿಲ್ ‌ಸಹ ಅಳವಡಿಸಿಕೊಳ್ಳಬಹುದು. ಟ್ರಾವೆಲಿಂಗ್‌ ನಿಂದ ಹಿಡಿದು ಆಫೀಸ್‌ ವೇರ್‌ ವರೆಗೂ ಯಾವ ಹಬ್ಬದ ಸಂದರ್ಭವೇ ಇರಲಿ, ನೀವು ಇದನ್ನು ಹಾಯಾಗಿ ಧರಿಸಬಹುದು. ಯಾವುದೇ ಪ್ರಿಂಟೆಂಡ್‌ ಯಾ ಕಸೂತಿಯುಳ್ಳ ಫ್ಯಾಬ್ರಿಕ್‌ ನಿಂದ ಪ್ಲೇರ್‌ ಲೆಂತ್‌ ಗೌನ್‌ ಮಾಡಿಸಿಕೊಂಡು ನೀವು ಯಾವುದೇ ದೊಡ್ಡ ಫಂಕ್ಷನ್‌ ಯಾ ಹಬ್ಬಗಳಲ್ಲಿ ಇದನ್ನು ಧರಿಸಬಹುದು.

ಟೀ ಲೆಂತ್‌ ಡ್ರೆಸ್‌ : ವೆಕೇಶನ್‌ ಯಾ 1 ದಿನದ ಪಿಕ್‌ ನಿಕ್‌ ಯಾ ಫ್ರೆಂಡ್ಸ್ ಜೊತೆ ಪಾರ್ಟಿಗಳಲ್ಲಿ ನೀವು ಸ್ಟೈಲಶ್‌ ಆಗಿ ಕಂಡುಬರಬೇಕೇ? ಈಗ ಅಗತ್ಯವಾಗಿ ಈ ಆರ್ಗೆಂಧಾ ಫ್ಯಾಬ್ರಿಕ್‌ ನಿಂದ ತಯಾರಾದ ಟೀ ಲೆಂತ್‌ ಡ್ರೆಸ್‌ ನ್ನು ಟ್ರೈ ಮಾಡಿ ನೋಡಿ. ವೈಟ್‌ಕಂಫರ್ಟೆಬ್‌ ಆಗಿರುವವರ ಜೊತೆಯಲ್ಲೇ ಇದು ನಿಮಗೆ ಧಾರಾಳ ಸ್ಟೈಲಿಶ್‌ ಲುಕ್ಸ್ ನೀಡುತ್ತದೆ. ಇದರ ಜೊತೆ ನೀವು ಜೀನ್ಸ್, ಪ್ಯಾಂಟ್‌ ಯಾ ಕಾರ್ಗೋ ಪ್ಯಾಂಟ್‌ ಪೇರ್‌ ಮಾಡಬಹುದು.

ಟ್ರಾನ್ಸ್ ಪರೆಂಟ್‌ ಶಾರ್ಟ್ಸ್ : ಇತ್ತೀಚೆಗೆ ಮಹಿಳೆಯರಲ್ಲಿ ಶಾರ್ಟ್ಸ್ ಧರಿಸುವುದು ಮಾಮೂಲಿ ಎನಿಸಿದೆ. ನೀವು ಪ್ರಿಂಟೆಡ್‌ ಆರ್ಗೆಂಝಾ ಫ್ಯಾಬ್ರಿಕ್‌ ನಿಂದ ತಯಾರಾದ ಶಾರ್ಟ್ಸ್ ಟ್ರೈ ಮಾಡಿ ನೋಡಿ, ಇದು ನಿಮಗೆ ಬಹಳ ಇಷ್ಟವಾಗಲಿದೆ. ಇದರ ಜೊತೆಗೆ ಹೈ ವೆಯ್ಸ್ಟ್, ಅಗಲದ ಪ್ಯಾಂಟ್‌ ಪೇರ್‌ ಮಾಡಬಹುದು. ಇವನ್ನು ನೀವು ಆಫೀಸ್‌, ಪಾರ್ಟಿ, ಟ್ರಾವೆಲಿಂಗ್‌ ನಲ್ಲೂ ಆರಾಮವಾಗಿ ಧರಿಸಬಹುದು. ನಿಮ್ಮ ಇಷ್ಟದ ಪ್ರಕಾರ, ನೀವು ಕೋಟ್‌ ಯಾ ಸಿಂಪಲ್ ಕಾಲರ್‌ ನ ಶರ್ಟ್‌ ಮಾಡಿಸಿಕೊಳ್ಳಬಹುದು.

ಟ್ರೆಡಿಶನಲ್ ಸೂಟ್ಸ್ : ಇತ್ತಿಚೆಗೆ ಆರ್ಗೆಂಝಾ ಫ್ಯಾಬ್ರಿಕ್‌ ನ ಮೇಲೆ ಹೆವಿ ಲೈಟ್‌ ಎಂಬ್ರಾಯಿಡರಿಯ ಸೂಟ್ಸ್ ಫ್ಯಾಷನ್‌ ನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಇಷ್ಟದ ಪ್ರಕಾರ, ಇವನ್ನು ಟ್ರೈ ಮಾಡಿ ಖುದ್ದು ನಿಮಗೆ ಟ್ರೆಡಿಶನ್‌ ಲುಕ್ಸ್ ನೀಡಬಹುದು. ಸೇಮ್ ಕಲರ್‌ ದುಪಟ್ಟಾ ಖರೀದಿಸಿ, ನೀವು ನಿಮ್ಮ ಈ ಡ್ರೆಸ್‌ ಗೆ ಹೆಚ್ಚಿನ ಆಕರ್ಷಕ ಲುಕ್ಸ್ ನೀಡಬಹುದು.

ಆರ್ಗೆಂಝಾ ಸೀರೆ : ಪೇಸ್ಟಲ್ ಶೇಡ್ಸ್ ನ ಪ್ಲೇನ್‌ ಸೀರೆಯೊಂದಿಗೆ ಹೆವಿ ಬ್ಲೌಸ್‌ ಇತ್ತೀಚೆಗೆ ಹೆಚ್ಚು ಫ್ಯಾಷನ್‌ ನಲ್ಲಿದೆ. ನೀವು ನಿಮ್ಮ ಇಷ್ಟದ ಹಾಗೂ ಬಜೆಟ್‌ ಗೆ ತಕ್ಕಂತೆ, ಬೇಕಾದ ಇಂಥ ಸೀರೆ ಆರಿಸಬಹುದು. ಯಾವುದೇ ವಿಶೇಷ ಶುಭ ಸಮಾರಂಭ, ಫಂಕ್ಷನ್‌, ಹಬ್ಬಗಳಲ್ಲಿ ನೀವು ಈ ಆರ್ಗೆಂಝಾದ ಸೀರೆ ಉಡಬಹುದು. ಪ್ಲೇನ್‌ ಸೀರೆ ಜೊತೆ ಹೆವಿ ಬ್ಲೌಸ್‌ ಹಾಗೂ ಹೆವಿ ಸೀರೆಯೊಂದಿಗೆ ಪ್ಲೇನ್‌ ಬ್ಲೌಸ್‌ ಪೇರ್‌ ಮಾಡಬಹುದು.

ಆರ್ಗೆಂಝಾ ಲೆಹಂಗಾ : ಆರ್ಗೆಂಝಾದ ಫ್ಯಾಬ್ರಿಕ್‌ ಬಲು ಲೈಟ್‌ ಆಗಿರುವುದರಿಂದ, ಇದರಿಂದ ತಯಾರಾದ ಲೆಹಂಗಾವನ್ನು ಪ್ರೀ ವೆಡ್ಡಿಂಗ್‌ ಪಾರ್ಟಿ ಯಾ ದಸರಾ/ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ, ಆರ್ಗೆಂಝಾ ಫ್ಯಾಬ್ರಿಕ್‌ ನ ಲೆಹಂಗಾವನ್ನು ಸ್ಟೈಲಾಗಿ ಧರಿಸಬಹುದು. ವೆರಿ ಲೈಟ್‌ ಆದಕಾರಣ, ಇದು ಬಹಳ ದಿನಗಳವರೆಗೂ ಬಾಳಿಕೆ ಬರುತ್ತದೆ.

ಕೊನೆಗೊಂದು ಕಿವಿಮಾತು : ಆರ್ಗೆಂಝಾ ಫ್ಯಾಬ್ರಿಕ್‌ ವೈಟ್‌ಪಾರದರ್ಶಕ ಆಗಿರುತ್ತದೆ. ಹೀಗಾಗಿ ಇದನ್ನು ಸದಾ ಇನ್ನರ್‌ ಜೊತೆ ಮಾತ್ರ ಧರಿಸಬೇಕು. ಈ ಫ್ಯಾಬ್ರಿಕ್‌ ನಿಂದ ಡ್ರೆಸ್‌ ಮಾಡಿಸುವಾಗ ಸಹ, ಸ್ಯಾಟಿನ್‌ ಯಾ ಕಾಟನ್‌ ಪ್ಪ ಫ್ಯಾಬ್ರಿಕ್‌ ನ ಲೈನಿಂಗ್ ಕೊಡಿ. ಇದು ಬಲು ನಾಜೂಕಾದ ಫ್ಯಾಬ್ರಿಕ್‌.  ಹೀಗಾಗಿ ಒಗೆಯುವ ಬದಲು, ಡ್ರೈ ಕ್ಲೀನಿಂಗ್‌ ಗೆ ಕೊಟ್ಟು ನೀಟಾಗಿ ವಾರ್ಡ್‌ ರೋಬ್ ಸೇರಿಸಿ ಇದರ ಸೀರೆ ಉಡುವಾಗ, ಮ್ಯಾಚಿಂಗ್‌ ಪೆಟಿಕೋಟ್‌ ಯಾ ಡೀಕಾಟ್‌ ಧರಿಸಿರಿ. ಇಲ್ಲದಿದ್ದರೆ ಬೇರೆ ಬಣ್ಣದ ಪೆಟಿಕೋಟ್ ನಿಮ್ಮ ಸೀರೆಯ ಬ್ಯೂಟಿ ಹಾಳು ಮಾಡೀತು. ಈ ಫ್ಯಾಬ್ರಿಕ್‌ ನ ಔಟ್‌ ಫಿಟ್‌ ನ್ನು ಎಂದೂ ವಾಶಿಂಗ್‌ ಮೆಶೀನ್‌ ನಲ್ಲಿ ಒಗೆಯಬೇಡಿ, ಆಗ ಅದರ ಎಳೆಗಳು ಬಿಟ್ಟುಕೊಳ್ಳುತ್ತವೆ.

– ಪ್ರತಿಭಾ ರಾವ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ