ಸ್ಟೈಲ್‌ಎಲಿಗೆನ್ಸ್ ಬೇಕೆನಿಸಿದರೆ, ಅಗತ್ಯವಾಗಿ ಮಾಡರ್ನ್ ಹ್ಯಾಂಡ್ ಲೂಮ್ ಬಳಸಿ ನೋಡಿ…..
ಒಂದು ಕಾಲದಲ್ಲಿ ಕೈಮಗ್ಗ ಎಂದ ತಕ್ಷಣ ಅದು ಕೇವಲ ಸೀರೆ, ದುಪ್ಪಟ್ಟಾಗೆ ಮಾತ್ರ ಎಂದಿತ್ತು. ಆದರೆ ಇಂದಿನ ಫ್ಯಾಷನ್ ಇಂಡಸ್ಟ್ರಿ, ಹ್ಯಾಂಡ್ ಲೂಮ್ ಗೆ ಒಂದು ಹೊಸ ಬಣ್ಣ, ಹೊಸ ರೂಪ, ಹೊಸ ಐಡೆಂಟಿಟಿ ನೀಡಿಬಿಟ್ಟಿದೆ. ಇದೀಗ ಕೇವಲ ಸಾಂಪ್ರದಾಯಿಕ ಸಾಧನ ಆಗಿರದೆ, ಹೊಸ ಟ್ರೆಂಡ್ ಸೆಟ್ ಮಾಡಿದೆ. ಅದೂ ಗ್ಲೋಬಲ್ ಟ್ರೆಂಡ್ ಎಂದರೆ ಆಶ್ಚರ್ಯವಾಗುತ್ತದೆ. ಇತ್ತೀಚೆಗೆ ಯುವಜನತೆ ಮಾತ್ರವಲ್ಲ, ಪ್ರೌಢರೂ ಸಹ ಈ ಹ್ಯಾಂಡ್ ಲೂಮಿನ ಎಲಿಗೆನ್ಸ್, ಸ್ಟೈಲ್, ಎದ್ದು ಕಾಣಿಸುವ ಗ್ಲಾಮರ್ ಗೆ ಮನಸೋಲುತ್ತಾರೆ. ಇತ್ತೀಚಿನ ಆಧುನಿಕ ತರುಣಿಯರು ಪ್ಲೇರ್ ಪ್ರಿಂಟ್ಸ್ ಗಿಂತ ಹೆಚ್ಚಾಗಿ ಜಯಪುರಿ ಸ್ಟಾಂಪ್ ಪ್ಯಾಂಟ್‌ಬಾಂಧನಿ ಪ್ರಿಂಟ್ಸ್ ನ್ನೇ ಹೆಚ್ಚಾಗಿ ಧರಿಸಲು ಬಯಸುತ್ತಾರೆ, ಅದರಲ್ಲಿ ಅವರಿಗೆ ಕಾನ್ಛಿಡೆನ್ಸ್ ಹೆಚ್ಚು.
ಬ್ರೊಕೇಡ್ ಫ್ಯಾಬ್ರಿಕ್ ನ ಬಳಕೆ : ಇದೀಗ ಬ್ರೊಕೇಡ್ ನ ಜಂಪ್ ಸೂಟ್ಸ್ ಹಾಗೂ ಕೋಟ್ ಪ್ಯಾಂಟ್ ಸೆಟ್ಸ್ ಬಹಳ ಟ್ರೆಂಡಿ ಎನಿಸಿದೆ. ಹಿಂದೆಲ್ಲ ಪಂಚೆ, ಸೀರೆಗೆ ಮಾತ್ರ ಸೀಮಿತವಾಗಿದ್ದ ಖಾದಿ ಫ್ಯಾಬ್ರಿಕ್, ಈಗ ಅದು ಕಾಟನ್ನಿನ ಮಿನಿ ಡ್ರೆಸ್, ಹ್ಯಾಂಡ್ ಲೂಮ್ ಕ್ವಾರ್ಡ್ ಸಿಟ್ಸ್, ಜ್ಯಾಕೆಟ್ ಪ್ಯಾಂಟ್, ಆಫೀಸ್ ವೇರ್ ಮಾತ್ರವಲ್ಲದೆ ದೈನಂದಿನ ಬಳಕೆಯ ನೈಟಿ, ಕುರ್ತಿ, ಸ್ಟ್ರೇಟ್ ಸ್ಟೈಲ್ ವೇರ್ ಗಳವರೆಗೂ ಮಾಡರ್ನ್ ಹ್ಯಾಂಡ್ ಲೂಮ್ ನ ಮೋಡಿ ವ್ಯಾಪಿಸಿದೆ. ಡಿಸೈನರ್ಸ್ ಇದನ್ನು ಸೀರೆ, ಶಾಲುಗಳಿಗೆ ಮೊಟಕುಗೊಳಿಸದೆ, ಫ್ಯಾಷನ್ ಎಲಿಮೆಂಟ್ ಆಗಿ ರೂಪಿಸಿದ್ದಾರೆ. ಹೀಗಾಗಿ ಇದೀಗ ಇದನ್ನು ವೆಸ್ಟರ್ನ್‌ಇಂಡಿಯನ್‌ಎರಡೂ ಸಿಲುಯೇಟ್ಸ್ ಗಳಲ್ಲಿ ಬ್ಯೂಟಿಫುಲ್ ಆಗಿ ಫಿಲ್ ಮಾಡಲಾಗುತ್ತದೆ.
ಹಾಗಾದರೆ, ಈ ಹ್ಯಾಂಡ್ ಲೂಮ್ಸ್ ಅಧಿಕ ಸಮಯ ಬೇಡುವ ವಸ್ತ್ರವಾಗದೆ, ಮೊದಲಿಗಿಂತ ಹೆಚ್ಚು ಲಾಭಕರ, ತೃಪ್ತಿದಾಯಕ ಹೇಗಾಗಿದೆ ಎಂದು ವಿವರವಾಗಿ ತಿಳಿಯೋಣವೇ? ನಮ್ಮ ದೇಶದ ಪ್ರತಿ ರಾಜ್ಯದಲ್ಲೂ ಯಾವ ಬಗೆಯ ಹ್ಯಾಂಡ್ ಲೂಮ್ ಅನಾದಿ ಕಾಲದಿಂದಲೂ ಫೇಮಸ್ ಹಾಗೂ ಅದಕ್ಕೆ ಈಗ ಹೇಗೆ ಹೊಸ ಐಡೆಂಟಿಟಿ ನೀಡಲಾಗುತ್ತಿದೆ ಎಂದು ಗಮನಿಸೋಣ :
ಹ್ಯಾಂಡ್ ಲೂಮ್ ನ ಕಾರ್ಯಶಕ್ತಿ ಹೆಚ್ಚಿಸಿರುವ ಯಂತ್ರಗಳು : ಹಿಂದೆಲ್ಲ ಒಬ್ಬ ನೇಕಾರ ಒಂದು ಕ್ಲಿಷ್ಟಕರ ಡಿಸೈನ್ ವುಳ್ಳ ಸೀರೆ ಯಾವ ಡ್ರೆಸ್ ಮೆಟೀರಿಯ್ ರೆಡಿ ಮಾಡಲು ಹಲವು ದಿನ, ಕೆಲವೊಮ್ಮೆ ತಿಂಗಳೇ ಆಗಿಹೋಗುತ್ತಿತ್ತು. ಆದರೆ ಈಗ ಟೆಕ್ನಾಲಜಿ ನೆರವಿನಿಂದ ಅವೇ ಡಿಸೈನ್ ಗಳು ಕೆಲವೇ ಘಂಟೆಗಳಲ್ಲಿ ತಯಾರಾಗುತ್ತಿವೆ! ಇವುಗಳಲ್ಲಿ ಕೆಲವು ಟ್ರೆಡಿಶನ್ ಹಾಗೂ ಹಲವು ಮಾಡರ್ನ್ ಟೆಕ್ನಾಲಜಿ ಬಳಸುತ್ತವೆ. ಉದಾ: ಸೆಮಿ ಆಟೋಮೆಟಿಕ್ ಮಗ್ಗಗಳು, ಜ್ಯಾಕ್ವರ್ಡ್‌ಡಾಬಿ ಟೆಕ್ನಿಕ್ಸ್ ಇತ್ಯಾದಿ.
ಜ್ಯಾಕ್ವರ್ಡ್ ವೀವಿಂಗ್ ನಲ್ಲಿ ಪ್ರತಿ ಎಳೆಯೂ ಬೇರೆಬೇರೆಯಾಗಿಯೇ ಕಂಟ್ರೋಲ್ ಆಗುತ್ತದೆ. ಇದರ ನೆರವಿನಿಂದ ಬಹಳ ಕಷ್ಟಕರ ಡೀಟೇಲ್ಡ್ ಪ್ಯಾಟರ್ನ್ಡ್ ಮಾಡಬಹುದು. ಉದಾ : ಹೂ, ಬಳ್ಳಿ, ಎಲೆ, ನೆಟ್ ಡಿಸೈನ್, ಪ್ರಾಣಿ ಇತ್ಯಾದಿ. ಇದರ ಬಳಕೆಯೂ ಅತಿ ಸುಲಭ. ಮಗ್ಗಕ್ಕೆ ಒಂದು ಹೆಚ್ಚುವರಿ ಜ್ಯಾಕ್ವರ್ಡ್ ಅಟ್ಯಾಚ್ ಮೆಂಟ್ ಜೋಡಿಸಿಕೊಳ್ಳಬೇಕಷ್ಟೆ. ಇದರಿಂದ ಪ್ರತಿ ಎಳೆಯನ್ನೂ ಪ್ರತಿ ಸಲ ಮೇಲೆತ್ತಿಕೊಳ್ಳುವುದೋ ಬಿಡುವುದೋ ಮಾಡಬಹುದು.
ಹಿಂದೆಲ್ಲ ಇದನ್ನು ಮ್ಯಾನ್ಯುಯೆಲ್ ಪಂಚ್ ಕಾರ್ಡ್ ನಿಂದ ನಿರ್ವಹಿಸಲಾಗುತ್ತಿತ್ತು, ಇದೀಗ ಡಿಜಿಟಲ್ ಜ್ಯಾಕ್ವರ್ಡ್ ಹಂತಕ್ಕೆ ಏರಿಸಲಾಗಿದೆ. ಈ ಟೆಕ್ನಿಕ್ ನಿಂದ ಬನಾರಸಿ ಬ್ರೋಕೇಡ್ ಸೀರೆ, ಕಾಂಜೀವರಂ ಸಿಲ್ಕ್, ಜರಿಯುಳ್ಳ ಭಾರೀ ಫ್ಯಾಬ್ರಿಕ್ ಸಹ ಸುಲಭವಾಗಿ ತಯಾರಾಗುತ್ತವೆ. ತುಸು ಡೀಟೇಲ್ಡ್ ಆಗಿರುವುದರಿಂದ, ಈ ಪ್ರೋಸೆಸ್ ತುಸು ಟೈಂ ಟೇಕಿಂಗ್ ಆಗಿದೆ. ಆದರೆ ಇದರಲ್ಲಿ ಬಲು ಸೂಕ್ಷ್ಮ ಡಿಸೈನ್ ಗಳೂ ತಯಾರಾಗುತ್ತವೆ ಎಂಬುದು ಮುಖ್ಯ. ಈ ಯಂತ್ರದಿಂದ ಒಂದೇ ಸಲ ಸಾವಿರಾರು ಎಳೆಗಳನ್ನು ಈ ತರಹ ನಿಯಂತ್ರಿಸಬಹುದು.
ನೇಯ್ಗೆಯ ಮತ್ತೊಂದು ಹೊಸ ಟೆಕ್ನಿಕ್ ಡಾಬಿ : ಇದು ತುಸು ಸಣ್ಣ ಹಾಗೂ ರಿಪೀಟೆಡ್ ಪ್ಯಾಟರ್ನ್ ಆಗಿದೆ. ಉದಾ: ಡೀಜ್ಯಾಮೆಟ್ರಿಕಲ್ ಸಿಂಪಲ್ ಮೋಟಿವ್ಸ್ ಗೆ ಅನ್ವಯಿಸುವಂತೆ. ಇದರಲ್ಲಿ ಡಾಬಿ ಮೆಕ್ಯಾನಿಸಮ್ ನ್ನು ಮಗ್ಗದ ಮೇಲೆ ಸೆಟ್ ಮಾಡಿ, ಕೆಲವು ವಿಶೇಷ ಎಳೆಗಳನ್ನು ತೆಗೆದೂಬಿಟ್ಟೂ ಮಾಡಲಾಗುತ್ತದೆ, ಇದರಿಂದ ಸರಳ ಡಿಸೈನ್ಸ್ ಸುಲಭವಾಗಿ ರೂಪುಗೊಳ್ಳುತ್ತವೆ. ಉದಾ : ಚೆಕ್ಸ್, ಡೈಮಂಡ್ಸ್, ಡಾಟ್ಸ್, ಝಿಗ್ ರ್ಯಗ್ ಇತ್ಯಾದಿ. ಈ ಟೆಕ್ನಿಕ್ ನಿಂದ ಖಾದಿ ಕುರ್ತಾ ಫ್ಯಾಬ್ರಿಕ್, ಲಿನೆನ್ ಯಾ ಕಾಟನ್ ಜ್ಯಾಕೆಟ್ ಮೆಟೀರಿಯಲ್ ತಯಾರಿಸಲಾಗುತ್ತದೆ. ಕೆಲವು ಒಡಿಸ್ಸಾದ ಪರಂಪರಾಗದ ಇಕತ್‌ಸಂಬ್ ಪುರೀ ಡಿಸೈನ್ಸ್ ಸಹ ಡಾಬಿಯಿಂದಲೇ ನಡೆಯುತ್ತದೆ.
ಡಿಜಿಟಲ್ ಡಿಸೈನ್ ಟೂಲ್ಸ್ ನೆರವಿನಿಂದ ನೇಯ್ಗೆ ಕೇವಲ ಸುಲಭ ಆಗಿರುವುದು ಮಾತ್ರವಲ್ಲ, ಇದರ ಉತ್ಪಾದನೆ ಹಾಗೂ ಕಮರ್ಶಿಯಲ್ ಸ್ಕೋಪ್ ಸಹ ಸಿಕ್ಕಾಪಟ್ಟೆ ಹೆಚ್ಚಿದೆ. ಇದರಿಂದಾಗಿ ನಮ್ಮ ಸಾಂಪ್ರದಾಯಿಕ ಕೈಮಗ್ಗ ನೇಯ್ಗೆಗೆ ಹೊಸ ದಿಕ್ಸೂಚಿ ತೋರಿದಂತಾಗಿದೆ. ಜೊತೆಗೆ ಇದು ನೇಕಾರರು ಹಾಗೂ ಡಿಸೈನರ್ಸ್ ಇಬ್ಬರಿಗೂ ಹೆಚ್ಚಿನ ಉದ್ಯೋಗಾವಕಾಶ ಹಾಗೂ ಆದಾಯ ಗಳಿಸಿಕೊಡುವಲ್ಲಿ ಮುಂದಾಗಿದೆ.
ಪಾರಂಪರ್ಯದಿಂದ ಟ್ರೆಂಡ್ ವರೆಗಿನ ಕಥೆ : ಭಾರತೀಯ ಕೈಮಗ್ಗದ ಎಣಿಕೆ, ವಿಶ್ವದ ಅತಿ ಪ್ರಾಚೀನ ಹಾಗೂ ಸಮೃದ್ಧ ಕಲಾ ಪರಂಪರೆಯಲ್ಲಿ ಬರುತ್ತದೆ. ಇದು ಕೇವಲ ವಸ್ತ್ರ ನೇಯುವ ಪ್ರಕ್ರಿಯೆ ಮಾತ್ರವಲ್ಲ, ಬದಲಿಗೆ ಸಂಸ್ಕೃತಿ, ಶಿಲ್ಪ, ಧೈರ್ಯ, ಸ್ವಾವಲಂಬನೆಗಳ ಪ್ರತೀಕ ಆಗಿದೆ. ಅನಾದಿ ಕಾಲದಿಂದ ನೇಕಾರರು ತಮ್ಮ ಮಗ್ಗಗಳಲ್ಲಿ ಕೇವಲ ಎಳೆಗಳನ್ನು ಮಾತ್ರವಲ್ಲ, ಅನೇಕರ ಕಥೆ, ಭಾವನೆ, ಪರಂಪರೆಗಳನ್ನೇ ನೇಯುತ್ತಾ ಬಂದಿದ್ದಾರೆ. ಬಹುತೇಕ ನೇಕಾರರು ಸೀರೆಗಳ ಮೇಲೆ ರಾಮಾಯಣ, ಮಹಾಭಾರತ, ಭಾಗವತದ ಚಿತ್ರಗಳನ್ನೆಲ್ಲ ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಷ್ಟೋ ಸಲ ಈ ನೇಯ್ಗೆಗಳಲ್ಲಿ ಚಿನ್ನ, ಬೆಳ್ಳಿಯ ಸಂಗಮ ಸಹ ಕಾಣಬಹುದು. ಕಾಲ ಸರಿದಂತೆ ಟೆಕ್ಸ್ ಟೈಲ್ಸ್ ನ ಡಿಮ್ಯಾಂಡ್ ನಲ್ಲಿ ಕೈಮಗ್ಗ ಹಿಂದೆ ಸರಿದದ್ದೂ ನಿಜ. ಆದರೆ ಈಗ ಮಾಡರ್ನ್ ಹ್ಯಾಂಡ್ ಲೂಮ್ ರೂಪದಲ್ಲಿ ಸಾಂಪ್ರದಾಯಿಕ ಕೈಮಗ್ಗಕ್ಕೆ ಒಂದು ಹೊಸ ಚೈತನ್ಯ ದೊರಕಿದೆ.
ಭಾರತದ ಫೇಮಸ್ ಹ್ಯಾಂಡ್ ಲೂಮ್ ನ ಕುರಿತು ಹೇಳುವುದಾದರೆ, ರಾಜ್ಯವಾರು ಮಟ್ಟದಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಎಂದರೆ, ಯಾವ ರಾಜ್ಯದಲ್ಲಿ ಯಾವ ಬಗೆಯ ಹ್ಯಾಂಡ್ ಲೂಮ್ ಪ್ರಚಲಿತ ಹಾಗೂ ಈಗ ಅದನ್ನು ಹೊಸ ದಿಕ್ಕಿನಿಂದ ಹೇಗೆಲ್ಲ ಬಳಸಿಕೊಳ್ಳಬಹುದು ಎಂಬುದು ಮುಖ್ಯವಾಗುತ್ತದೆ.
ಉತ್ತರ ಪ್ರದೇಶದ ಬನಾರಸಿ ಬ್ರೊಕೇಡ್ : ಬನಾರಸಿ ಸೀರೆಗಳಲ್ಲಿ ಜರಿಯ ಸೂಕ್ಷ್ಮ ಕೆಲಸ, ಮೊಘಲರ ಡಿಸೈನ್ ಹಾಗೂ ಚಿನ್ನ ಬೆಳ್ಳಿಯ ಎಳೆಗಳ ಬಳಕೆ ಆಗುತ್ತಿತ್ತು. ಟ್ರೆಡಿಶನಲ್ ವಿಧಾನದಿಂದ ತಯಾರಿಸಲಾಗುವ ಒಂದು ಭಾರಿ ಬನಾರಸಿ ಸೀರೆ ನೇಯಲು ಸುಮಾರು 20-30 ದಿನ ಬೇಕಾಗುತ್ತದೆ. ಇಂದು ಇದೇ ಬ್ರೊಕೇಡ್ ಫ್ಯಾಬ್ರಿಕ್ ನಿಂದ ಜಂಪ್ ಸೂಟ್, ಜ್ಯಾಕೆಟ್, ಕ್ವಾರ್ಡ್ ಸೆಟ್ಸ್ ತಯಾರಿಸಲಾಗುತ್ತದೆ. ಯುವ ಜನತೆ ತಮ್ಮ ತಾಯಿಯ ವಾರ್ಡ್ ರೋಬ್ ನಲ್ಲಿ ಇರಿಸಲಾದ ಎಷ್ಟೋ ವರ್ಷಗಳ ಹಳೆಯ ರೇಷ್ಮೆ ಸೀರೆಗಳನ್ನು ಮತ್ತೆ ರೀಯೂಸ್ ಮಾಡಲು, ಅದಕ್ಕೆ ಹೊಸ ಜೀವದಾನ ಮಾಡಿಸುತ್ತಿದ್ದಾರೆ. ಹಾಗಾದಾಗ ಮಾತ್ರ ಅದು ಬೀರುವಿನಲ್ಲಿ ಅಲಂಕಾರಪ್ರಾಯವಾಗಿರದೆ, ಶುಭ ಸಮಾರಂಭಗಳಲ್ಲಿ ಹೆಚ್ಚು ಮಿಂಚುವಂತಾಗುತ್ತದೆ.
ಪಶ್ಚಿಮ ಬಂಗಾಳದ ತಾಂತ್‌ಜಾಮದಾನಿ : ಜಾಮದಾನಿ ಸೀರೆಯ ನೇಯ್ಗೆ ಎಷ್ಟು ಕಷ್ಟಕರ ಅಂದ್ರೆ, ಪ್ರತಿ ಡಿಸೈನ್ ನ್ನೂ ಎಳೆಗಳ ನಡುವೆ ಬೇರೆಯಾಗಿ ಇನ್ ಸರ್ಟ್ ಮಾಡಬೇಕಾಗಿತ್ತು. ಇದಕ್ಕೆ ಬಲು ನುಣುಪಾದ ಕಾಟನ್ ಬಳಕೆಯಾಗುತ್ತದೆ. ಹೀಗಾಗಿ ಇಂಥ ಒಂದು ಸೀರೆ ನೇಯಲು 30-60 ದಿನ ಬೇಕಾಗುತ್ತಿತ್ತು. ಆದರೆ ಈಗ ಇದರ ಪ್ರೊಡಕ್ಷನ್ ಹೊಸ ಟೆಕ್ನಿಕ್ ನ ಬಳಕೆಯಿಂದ ಆಗುತ್ತಿದ್ದು, ಬಲು ಸುಲಭ ಎನಿಸಿದೆ. ಇಂದು ಈ ಬಗೆಯ ವಸ್ತ್ರದಿಂದ ಟೇಪರ್ಡ್ ಡ್ರೆಸೆಸ್ ಹಾಗೂ ಕ್ಯಾಪ್ ಸ್ಟೈಲ್ ಕುರ್ತಿಗಳು ತಯಾರಾಗುತ್ತಿವೆ. ಜೊತೆಗೆ ಇದರ ಕಾಫ್ತಾನ್ ಡ್ರೆಸ್ ಗೆ ಬಹು ಬೇಡಿಕ ಇದೆ.
ತಮಿಳುನಾಡಿನ ಕಾಂಜೀವರಂ ಸಿಲ್ಕ್ : ಇದನ್ನು ಭಾರತೀಯ ರೇಷ್ಮೆ ಸೀರೆಗಳ ರಾಣಿ ಎಂದೇ ಹೇಳುತ್ತಾರೆ. ದಪ್ಪ ರೇಷ್ಮೆ ಜರಿಯ ಇದರ ನೇಯ್ಗೆಯಲ್ಲಿ ಸೀರೆಯ ಬಾರ್ಡರ್‌ಸೆರಗು ಬೇರೆ ಬೇರೆ ನೇಯಲ್ಪಟ್ಟು, ನಂತರ ಜೋಡಿಸಲ್ಪಡುತ್ತದೆ. ಪಾರಂಪರಿಕ ವಿಧಾನದಿಂದ ಇದರ ವೀವಿಂಗ್ ನಲ್ಲಿ 30-45 ದಿನಗಳು ಒಂದು ಸೀರೆಗೇ ಮೀಸಲಿಡಬೇಕಾಗುತ್ತದೆ. ಇದೀಗ ಇದರ ಮೋಟಿಫ್ ನಿಂದ ಕ್ಲಚ್ ಬ್ಯಾಗ್ಸ್, ಬ್ಲೇಝರ್, ಇಂಡೋವೆಸ್ಟರ್ನ್ ಗೌನ್ ಇತ್ಯಾದಿ ಸಹ ತಯಾರಾಗುತ್ತಿವೆ.
ತೆಲಂಗಾಣದ ಪೋಚಂಪಲ್ಲಿ ಇಕತ್ : ಇಕತ್ ಎಂಬುದು ಒಂದು ವಿಶಿಷ್ಟ ಬಗೆಯ ನೇಯ್ಗೆ ಟೆಕ್ನಿಕ್ ಅಗಿದೆ. ಇದರಲ್ಲಿ ಮೊದಲು ಎಳೆಗೆ ಬಣ್ಣ ಕಟ್ಟಿ, ನಂತರ ನೇಯಲಾಗುತ್ತದೆ. ಇದರಲ್ಲಿ ಸಿಂಕ್ರನೈಸ್ಡ್ ಡಿಸೈನ್ಸ್ ಫಾರ್ಮೇಶನ್ ಬಲು ಕ್ಲಿಷ್ಟಕರ ಎನಿಸುತ್ತದೆ. ಹಾಗಾಗಿ ಇದನ್ನು `ಎಳೆಗಳ ಗಣಿತ’ ಎಂದೇ ವ್ಯಾಖ್ಯಾನಿಸುತ್ತಾರೆ. ಇದೀಗ ಪೋಚಂಪಲ್ಲಿ ಇಕತ್ ನಿಂದ ಪ್ಲೇಯಿ ಡ್ರೆಸ್, ಪ್ಯಾಂಟ್‌ಕುರ್ತಾ ಸೆಟ್ ತಯಾರಾಗುತ್ತವೆ. ಇದು ಎಲ್ಲಾ ವರ್ಗದ ಜನರಿಗೂ ಎಟುಕುವಂತಿದೆ.
ಒಡಿಸ್ಸಾದ ಸಂಬ್‌ಪುರೀ ಪಾಸಾಪಲ್ಲಿ ಇಕತ್ : ಸಂಬ್ ಪುರೀ ಇಕತ್ ನ ನೇಯ್ಗೆಯಲ್ಲಿ ಅತಿ ಕ್ಲಿಷ್ಟಕರ ಜ್ಯಾಮೆಟ್ರಿಕ್ ಡಿಸೈನ್ಸ್ ಇರುತ್ತವೆ. ಒಂದು ಡ್ರೆಸ್ ಮೆಟೀರಿಯಲ್ ತಯಾರಿಸಲು 2-3 ವಾರ ಆಗುತ್ತದೆ. ಇದೀಗ ಇದರ ಬ್ಲಾಕ್ ಪ್ಯಾಟರ್ನ್ ನ ಬಳಕೆ ಬಂದು, ಸ್ಕರ್ಟ್‌ಜ್ಯಾಕೆಟ್ ನಂಥ ಔಟ್ ಫಿಟ್ಸ್ ಸಹ ಸುಲಭವಾಗಿ ತಯಾರಾಗುತ್ತಿವೆ.
ರಾಜಾಸ್ಥಾನ್‌ಗುಜರಾತ್‌ನ ಬಂಧೇಜ್‌ಪಟೋಲಾ : ಬಂಧೇಜ್ ಅಂದ್ರೆ ಟೈ ಡೈ ಹಾಗೂ ಪಟೋಲಾದ ನೇಯ್ಗೆ ಎರಡರಲ್ಲೂ ಪ್ರಾಚೀನ ನೇಯ್ಗೆಯ ಪರಂಪರೆ ಇದೆ. ಪಟೋಲಾ ಡಬ್ ಇಕತ್ ನಲ್ಲಿ ಬರುತ್ತದೆ, ಇದು ಅತಿ ಕಠಿಣಕರ ನೇಯ್ಗೆ ಎನಿಸಿದೆ. ಪಟೋಲಾದ ಒಂದು ಸೀರೆ ನೇಯಲು 4-5 ತಿಂಗಳೇ ಬೇಕು! ಸೀರೆ ಹೊರುತಪಡಿಸಿ ಇದೀಗ ಇದರಲ್ಲಿ ದುಪಟ್ಟಾ, ಕಾಫ್ತಾನ್, ಕ್ಯಾಪ್ಸೂಲ್ ಡ್ರೆಸೆಸ್ ಸಹ ತಯಾರಾಗುತ್ತಿವೆ. ಇಂತೂ ಬಹಳ ಎಲಿಗೆಂಟ್ ಎನಿಸಿವೆ.
ಹ್ಯಾಂಡ್ ಲೂಮ್ ನ ಮಾಡರ್ನ್ ಕಂಬ್ಯಾಕ್ : ಮಾಡರ್ನ್ ಹ್ಯಾಂಡ್ ಲೂಮ್ ನ ವೈಶಿಷ್ಟ್ಯ ಅಂದ್ರೆ, ಇದು ಪ್ರಾಚೀನ ಪರಂಪರೆಯನ್ನು ಕಡೆಗಣಿಸುವುದಿಲ್ಲ, ಬದಲಿಗೆ ಅದನ್ನು ಇಂದಿನ ಅತ್ಯಾಧುನಿಕ ಫ್ಯಾಷನ್ ಗೆ ತಕ್ಕಂತೆ ಬದಲಾಯಿಸಲಾಗಿದೆ. ಬ್ರೊಕೇಡ್ ನ ಜಂಪ್ ಜೂಟ್, ಇಕತ್ ನ ಮಿನಿ ಡ್ರೆಸೆಸ್, ಖಾದಿ ಕಾಟನ್ನಿನ ಆಫೀಸ್ ವೇರ್, ಜ್ಯಾಕೆಟ್ ಪ್ಯಾಂಟ್, ಜಾಮದಾನಿಯ ಮ್ಯಾಕ್ಸಿ ಡ್ರೆಸ್ ಯಾ ಸಂಬ್ ಪುರಿಯ ಎಥ್ನಿಕ್ ಸ್ಕರ್ಟ್ಸ್… ಇತ್ಯಾದಿ ಎಲ್ಲ ಎಷ್ಟು ಆಧುನಿಕವಾಗಿ ಕಂಗೊಳಿಸುತ್ತವೆ ಎಂದರೆ, ಹ್ಯಾಂಡ್ ಲೂಮ್ ಇದೀಗ ಕೇವಲ ಶೋಪೀಸ್ ಅಲ್ಲದೆ ಡೇಲಿ ವೇರ್ ಫ್ಯಾಷನ್ನಿನ ಭಾಗವೇ ಆಗಿಹೋಗಿದೆ.
ಟೆಕ್ನಾಲಜಿ ಟ್ರೆಡಿಶನ್ನಿನ ಪಾರ್ಟ್ ನರ್ ಶಿಪ್ : ಸದ್ಯಕ್ಕೆ ಹ್ಯಾಂಡ್ ಲೂಮ್ ಡಿಸೈನರ್ ಕೇವಲ ಕೈಗಳಿಂದ ಮಾತ್ರವಲ್ಲದೆ, ಕಂಪ್ಯೂಟರ್ ಡಿಸೈನ್ಡ್ ಸಾಫ್ಟ್ ವೇರ್ ನಿಂದಲೂ ವಿನ್ಯಾಸಗೊಳ್ಳುತ್ತಿವೆ. ಟೂಲ್ ನಿಂದ ಡಿಸೈನ್ ತಯಾರುಗೊಂಡು ಜ್ಯಾಕ್ವರ್ಡ್‌ಯಾ ಡಾಬಿ ಕೈಮಗ್ಗಗಳಲ್ಲಿ ಟ್ರಾನ್ಸ್ ಸೀಟ್ ಆಗುತ್ತದೆ. ಇದರಿಂದಾಗಿ ಬಟ್ಟೆ ನೇಯುವ ಮೊದಲೇ, ಅದರ ಡಿಸೈನ್ ತಯಾರಿಸುವಲ್ಲಿ ಎಷ್ಟೋ ಸಮಯದ ಉಳಿತಾಯ ಆಗುತ್ತದೆ. ಜೊತೆಗೆ ಇದರಿಂದ ಪ್ರೊಡಕ್ಷನ್ ಟೈಂ ಸೇವೆ ಆಗುವುದಲ್ಲದೆ, ನೇಕಾರರಿಗೆ ಹೊಸ ಡಿಸೈನ್ ಗಳಲ್ಲಿ ಕೆಲಸ ಮಾಡಲು ಸಮಯಾವಕಾಶ ಸಹ ಸಿಗುತ್ತದೆ. ಇದರಿಂದ ಸಹಜವಾಗಿ ಪ್ರೊಡಕ್ಷನ್ ಹೆಚ್ಚುತ್ತದೆ.
ಮಾಡರ್ನ್ ಹ್ಯಾಂಡ್ ಲೂಮ್ ಕೇವಲ ಫ್ಯಾಷನ್ ಟ್ರೆಂಡ್ ಮಾತ್ರವಲ್ಲದೆ, ಇದರಲ್ಲಿ ನಾವು ನಮ್ಮ ಸಾಂಪ್ರದಾಯಿಕತೆಗೂ ಗೌರವಾದರ ನೀಡುತ್ತೇವೆ. ನೇಕಾರರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಕ್ಕಿ ಆದಾಯ ಹೆಚ್ಚುತ್ತದೆ, ಫ್ಯಾಷನ್ ಗೆ ಹೊಸ ಸ್ಟೆಬಿಲಿಟಿ ದೊರಕುತ್ತದೆ. ಹ್ಯಾಂಡ್ ಲೂಮ್ ಡ್ರೆಸೆಸ್ ಧರಿಸುವುದು ಕೇವಲ ಸ್ಟೈಲಿಶ್ ಮಾತ್ರವಲ್ಲ, ತಿಳಿವಳಿಕೆಯ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂಗಮವಾಗುತ್ತದೆ. ಇದರಿಂದ ನಮ್ಮ ಲೋಕಲ್ ಎಕಾನಮಿ ಬಲು ಸ್ಟ್ರಾಂಗ್ ಆಗುತ್ತದೆ.
– ಎಸ್. ಸರೋಜಾ ರಾವ್





