ಇಂದಿನ ಸುಭಾಷಿತ : ಊಟ ಮಾಡುವಾಗ ಗಂಡ ಉಪ್ಪಿನಕಾಯಿ ಬೇಕೆಂದು ಕೇಳಿದರೆ, ಪಲ್ಯದಲ್ಲಿ ದಂ ಇಲ್ಲ ಅಂತ ಅರ್ಥ. ಅದನ್ನು ಆತನಿಗೆ ಹೇಳಲಿಕ್ಕೂ ದಂ ಇಲ್ಲ ಅಂತ....
ಟೀಚರ್ : ಕಿಟ್ಟಿ.... ಮಾನವರಿಗೂ ಮೊಬೈಲ್ ಗೂ ಇವರು ವ್ಯತ್ಯಾಸವೇನು?
ಕಿಟ್ಟಿ : ಬ್ಯಾಲೆನ್ಸ್ ಇಲ್ಲದಿದ್ದರೆ ಮಾನವರು ಸರಿಯಾಗಿ ಕಾಲು ಎತ್ತಿಟ್ಟು ನಡೆಯಲಾರರು ಅದೇ ಬ್ಯಾಲೆನ್ಸ್ ಇಲ್ಲದಿದ್ದರೆ ಮೊಬೈಲ್ ನಿಂದ ಕಾಲೇ ಹೋಗೋದಿಲ್ಲ....!
ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?
ಸ್ವದೇಶಿ : ನಮ್ಮ ದೇಶದ ರಸ್ತೆಗಳಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ನಾವು ಗಾಡಿ ಚಲಾಯಿಸುತ್ತೇವೆ!
ಜಡ್ಜ್ : ನಿಮ್ಮ ವಿಚ್ಛೇದನಕ್ಕೆ ನೆಲೆಯಾದರೂ ಏನು?
ಮಾಧವಿ : ನೆಲೆ ಏನು ಬಂತು? ಕೋರಮಂಗ್ಲಾ ಬಳಿ ಇರುವ ದೊಡ್ಡ ಬಂಗಲೆ, ಅದಕ್ಕೆ ಸಂಬಂಧಿಸಿದ ನೆಲದ್ದೇ ಈಗ ತಕರಾರು....
ಜಡ್ಜ್ : ಅಲ್ಲ..... ಅಲ್ಲಮ್ಮ...... ನಾನು ಕೇಳಿದ್ದು ನಿಮ್ಮ ಡೈವೋರ್ಸ್ ಗೆ ಗ್ರೌಂಡ್ಸ್ ಏನು ಅಂತ?
ಮಾಧವಿ : ಅದೇ ನಾನು ಹೇಳಿದ್ದು, ಗ್ರೌಂಡು ಬಂಗಲೆಯ ಜೊತೆಯಲ್ಲೇ ಇದೆ, ತುಂಬಾ ದೊಡ್ಡದೇನಲ್ಲ ಅದರದೇ ತಕರಾರು.
ಜಡ್ಜ್ : ಅಯ್ಯೋ... ನಿನಗೆ ಅರ್ಥ ಆಗ್ತಿಲ್ಲಮ್ಮ.... ನಾನು ವಿಚ್ಛೇದನಕ್ಕೆ ಆಧಾರ ಏನು ಅಂತ ಕೇಳಿದ್ದು?
ಮಾಧವಿ : ಆಧಾರ್ ಬಗ್ಗೆ ಕೇಳಿದ್ರಾ? ಅದ್ರಲ್ಲಿ ನನ್ನ ಫೋಟೋ ಚೆನ್ನಾಗಿ ಬರ್ಲಿಲ್ಲ ಅಂತ ಎಲ್ಲೂ ತೋರಿಸೋಲ್ಲ ಬಿಡಿ.
ಜಡ್ಜ್ : ಅದಲ್ಲಾ.....! ವಿಚ್ಛೇದನಕ್ಕೆ ತಳಹದಿ ಏನು ಅಂತ?
ಮಾಧವಿ : ಆ ಬಂಗಲೆಗೆ ತಳಹದಿ ಭದ್ರವಾಗಿದೆ, ಆ ಬಗ್ಗೆ ಯೋಚನೆ ಇಲ್ಲ ಬಿಡಿ.
ಜಡ್ಜ್ : ಅಯ್ಯೋ! ವಿಷಯ ಅದಲ್ಲ.... ನೀವು ಡೈವೋರ್ಸ್ ತಗೊಳ್ತಿರೋದು ಯಾಕೆ ಅಂತ?
ಮಾಧವಿ : ಡೈವೋರ್ಸಾ....? ಅದು ನನಗೆ ಬೇಡ, ನನ್ನ ಗಂಡಂಗೆ ಬೇಕಂತೆ.
ಜಡ್ಜ್ : ರೀ ಸ್ವಾಮಿ, ಯಾಕ್ರಿ ಬೇಕು ನಿಮಗೆ ಡೈವೋರ್ಸ್?
ಮದನ್ : ಮಹಾಸ್ವಾಮಿ, ನಿಮ್ಮ ಒಂದೊಂದು ಪ್ರಶ್ನೆಗೂ ಹಲವು ಉತ್ತರ ಬಂತಲ್ಲವೇ, 15 ವರ್ಷದಿಂದ ನಾನು ಎಷ್ಟು ಪ್ರಶ್ನೆ ಕೇಳಿರಬಹುದು ಅಂತ ಲೆಕ್ಕ ಹಾಕಿ....
ಜಡ್ಜ್ ಸಾಹೇಬರ ಕಣ್ಣಲ್ಲಿ ಗಳಗಳ ನೀರಿಳಿದಿತ್ತು......
ಹುಡುಗಿ : ಹಾಯ್
ಹುಡುಗ : ಹಲೋ
ಹುಡುಗಿ : ಹೌ ಆರ್ ಯೂ?
ಹುಡುಗ : ವೆರಿ ಫೈನ್
ಹುಡುಗಿ : ವೇರ್ ಆರ್ ಯೂ ಫ್ರಂ?
ಹುಡುಗ : ಬ್ಯಾಂಗಲೂರ್....
ಹುಡುಗಿ : ನೀವೆಷ್ಟು ಓದಿದ್ದೀರಿ....?
ಹುಡುಗ : ನಿಮ್ಮಷ್ಟೇ ಓದಿದ್ದೀನಿ....
ಹುಡುಗಿ : ನನ್ನಷ್ಟೇ.....? ಏನ್ರಿ ಹಾಗಂದ್ರೆ....?
ಹುಡುಗ : ಅಷ್ಟೇ.... ಇನ್ನೇನು ಮತ್ತೆ? ನೀವೆಲ್ಲಿಗೆ ನಿಲ್ಲಿಸಿದ್ರೋ ನನಗೂ ಅಷ್ಟೇ ಇಂಗ್ಲಿಷ್ ಬರೋದು..... ಅಲ್ಲಿಂದ ಸೀದಾ ಕನ್ನಡದಲ್ಲೇ ಮಾತನಾಡೋದು!
ಮಗ : ಅಮ್ಮ..... ನಾನು ಹೇಗೆ ಕಾಣ್ತೀದ್ದೀನಮ್ಮ?
ತಾಯಿ : ಅದನ್ನು ನಿನ್ನ ಗರ್ಲ್ ಫ್ರೆಂಡ್ ನ್ನೇ ಕೇಳಬೇಕಪ್ಪ.
ಮಗ : ಆದರೆ..... ನನಗೆ ಯಾರೂ ಗರ್ಲ್ ಫ್ರೆಂಡೇ ಇಲ್ಲವಲ್ಲಮ್ಮ.....?




