ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ ನಡುವೆ ಅಂತಹ ಅನಿವಾರ್ಯತೆ ಏನಿತ್ತು?
27 ವರ್ಷಗಳ ಬಲಿಷ್ಠ ಸಂಬಂಧವೊಂದನ್ನು ಕಡಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಅದೇನು ವಿಷಯ ಅಂತ ಕೇಳಿ ನೀವು ದಂಗಾಗಿ ಹೋಗುತ್ತೀರಿ......
ಮೈಕ್ರೋಸಾಫ್ಟ್ ನ ಸಂಸ್ಥಾಪಕ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬಿಲ್ ಗೇಟ್ಸ್ ತಮ್ಮ ಹೆಂಡತಿ ಮೆಲಿಂಡಾ ಜೊತೆಗಿನ 27 ವರ್ಷದ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಹೇಳುವುದರ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅವರು ತಮ್ಮ ನಿರ್ಧಾರದ ಮಾಹಿತಿಯನ್ನು ಟ್ವಿಟರ್ ನಲ್ಲಿ ಈ ರೀತಿ ಹಾಕಿದ್ದರು.
``ಬಹಳಷ್ಟು ಯೋಚನೆ ಮಾಡುವುದರ ಮೂಲಕ ನಾವು ನಮ್ಮ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರ ಮಾಡಿದ್ದೇವೆ. ನಾವು ನಮ್ಮ ಹೊಸ ಜೀವನ ಆರಂಭಿಸಲಿದ್ದೇವೆ. ಹೀಗಾಗಿ ಜನರಿಂದ ನಮ್ಮ ಕುಟುಂಬಕ್ಕೆ ಸ್ಪೇಸ್ ಹಾಗೂ ಪ್ರೈವೆಸಿ ಕಾಯ್ದುಕೊಳ್ಳುವ ಅಪೇಕ್ಷೆ ಇದೆ.''
ಜೀವನದ ಸುಮಾರು 3 ದಶಕಗಳನ್ನು ಜೊತೆ ಜೊತೆಗೆ ಕಳೆದ ಬಳಿಕ ಅವರು ಕೈಗೊಂಡ ಈ ನಿರ್ಧಾರ ಹಲವರನ್ನು ಚಕಿತಗೊಳಿಸಿದೆ. ಬಿಲ್ ಹಾಗೂ ಮೆಲಿಂಡಾ ಅವರದ್ದು ಅಪ್ಪಟ ಸುಖೀ ದಾಂಪತ್ಯ ಎಂದು ಹೇಳಲಾಗುತ್ತಿತ್ತು. ಅವರ ವೈವಾಹಿಕ ಜೀವನದ ಬಗ್ಗೆ ಅದೆಷ್ಟೋ ಜೋಡಿಗಳು ಪ್ರೇರಣೆ ಪಡೆದುಕೊಳ್ಳುತ್ತಿದ್ದವು. ಅವರ ಸುಂದರ ವೈವಾಹಿಕ ಜೀವನದಲ್ಲಿ ಇಂತಹದೊಂದು ತಿರುವು ಬರಬಹುದು ಎಂದು ಯಾರೊಬ್ಬರೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ.
ನಂಬರ್ ಒನ್ ಕಿರೀಟ
ಅಕ್ಟೋಬರ್ 28, 1955ರಲ್ಲಿ ಸಿಯಾಟಲ್ ನಲ್ಲಿ ಜನಿಸಿದ ಬಿಲ್ ಗೇಟ್ಸ್. ಅವರ ಪೂರ್ಣ ಹೆಸರು ವಿಲಿಯಂ ಹೆನ್ರಿ ಗೇಟ್ಸ್. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾಗ, ಪೌಲ್ ಹೆಲನ್ ಜೊತೆಗೆ ಸ್ನೇಹವಾಗುತ್ತದೆ. ಅವರಿಬ್ಬರ ವಿಚಾರಗಳ ಪ್ರತಿಫಲವೇ ಮೈಕ್ರೊಸಾಫ್ಟ್ ಜನ್ಮತಳೆಯಲು ಕಾರಣವಾಗುತ್ತದೆ. 1990ರ ದಶಕದಲ್ಲಿ ಮೈಕ್ರೋಸಾಫ್ಟ್ ಜಗತ್ತಿನಾದ್ಯಂತ ಪಿಸಿ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಕಿರೀಟಕ್ಕೆ ಭಾಜನವಾಯಿತು.
1987ರಲ್ಲಿ ಕೆಲಸದ ಬಾಬತ್ತಿನಲ್ಲಿ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಆ ಸಂದರ್ಭದಲ್ಲಿ ಮೆಲಿಂಡಾಗೆ ಅನೇಕ ಬಾಯ್ ಫ್ರೆಂಡ್ ಗಳಿದ್ದರು. ಅದೊಂದು ದಿನ ಆಕಸ್ಮಿಕವಾಗಿ ತಮಾಷೆಗೆ ಎಂಬಂತೆ ಬಿಲ್ ಮೆಲಿಂಡಾಗೆ `ಐ ಲವ್ ಯೂ' ಎಂದು ಹೇಳುತ್ತಾರೆ. ಕ್ರಮೇಣ ಅವರ ನಡುವೆ ನಿಕಟತೆ ಹೆಚ್ಚುತ್ತಾ ಹೋಯಿತು. ಆ ಸಮಯದಲ್ಲಿ ಬಿಲ್ ಗೆ 39 ವರ್ಷ ಹಾಗೂ ಮೆಲಿಂಡಾಗೆ 29 ವರ್ಷ. 1994ರಲ್ಲಿ ಅವರು ಮದುವೆಯಾದರು.
ಬಿಲ್ ಹಾಗೂ ಮೆಲಿಂಡಾ ದಂಪತಿಗಳಿಗೆ ಮೂರು ಮಕ್ಕಳು. 1996ರಲ್ಲಿ ಮಗಳು ಜೆನಿಫರ್, 1999ರಲ್ಲಿ ಮಗ ರೋರಿ ಹಾಗೂ 2002ರಲ್ಲಿ ಮಗಳು ಪೆಯೆಬಾ ಜನಿಸಿದರು. ಮಗ ಹುಟ್ಟಿದ 9 ವರ್ಷದ ಬಳಿಕ ಮೆಲಿಂಡಾ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು.
ಪ್ರೊಫೆಶನಲ್ ವೈವಾಹಿಕ ಜೀವನದ ಜೊತೆ ಜೊತೆಗೆ ಬಿಲ್ ಗೇಟ್ಸ್ ಹಾಗೂ ಮೆಲಿಂಡಾ ಸಮಾಜಕ್ಕಾಗಿಯೂ ಬಹಳಷ್ಟನ್ನು ಮಾಡಿದರು. ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ಅವರು ತಮ್ಮದೇ ಆದ ಕಾಣಿಕೆ ನೀಡಲು 1994ರಲ್ಲಿ ಇಬ್ಬರೂ ಸೇರಿ `ಬಿಲ್ಮೆಲಿಂಡಾ ಗೇಟ್ಸ್ ಫೌಂಡೇಶನ್' ಆರಂಭಿಸಿದರು. 2008ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ನಿಂದ ಪ್ರತ್ಯೇಕಗೊಂಡು ಇದೇ ಫೌಂಡೇಶನ್ ಗಾಗಿ ಸಂಪೂರ್ಣ ಸಮಯವನ್ನು ನೀಡತೊಡಗಿದರು. ಕೊರೋನಾ ಅವಧಿಯಲ್ಲೂ ಅವರು ಸಮಾಜಕ್ಕಾಗಿ ಸಾಕಷ್ಟು ಕೆಲಸ ಮಾಡಿದರು.





