ಆತ್ಮೀಯರೇ,
ಎಂದಿನಂತೆ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ, ಯಾಕೋ ಮನಸ್ಸು ಕಸಿವಿಸಿ ಆಗುತ್ತಿರುತ್ತದೆ. ಹೋಗಲಿ ಬಿಡು ಅಂತಾ ಅನ್ಕೊಂಡು ಹಾಸಿಗೆಯಿಂದ ಕೆಳಗಿಳಿದು ದೈನಂದಿನ ದಿನಚರಿ ಮುಗಿಸಿ ಕೂತಾಗಲೂ ಮನಸ್ಸಿಗೆ ಸಮಾಧಾನವಿಲ್ಲ. ಏನೋ ಒಂಥರಾ ಹೇಳಿಕೊಳ್ಳದ ಚಡಪಡಿಕೆ!!!. ಆಮೇಲೆ ಉಪಹಾರ ಮಾಡಿದರೂ ನಾಲಿಗೆಗೆ ರುಚಿ ಆಗುತ್ತಿಲ್ಲ. ಕೆಲಸಕ್ಕೂ ಹೋಗುವ ಮನಸ್ಸಿಲ್ಲ. ಅಷ್ಟರಲ್ಲಿ ಏನೋ ಒಂದು ದುರ್ಘಟನೆಯ ಇಲ್ಲವೇ ನಿಧನದ ಸುದ್ಧಿ ತಲುಪಿ ಬಿಡುತ್ತೆ!!.  ಆಗ ನಮ್ಮ ಬಾಯಲ್ಲಿ ಬರುವ ಮಾತು, *"ಯಾಕೋ ಮುಂಜಾನೆಯಿಂದ ಮನಸ್ಸೇ ಸರಿಯಿರಲಿಲ್ಲ. ಏನೋ ಕೆಟ್ಟದ್ದು ಆಗುತ್ತೆ ಅಂತಾ ಮನಸ್ಸು ಹೇಳುತ್ತಿತ್ತು"* ಅಂತಾ ಹೇಳಿಬಿಡುತ್ತೇವೆ. ಇದು ಕಾಕತಾಳೀಯವಾ?? ಅಥವಾ ಮನಸ್ಸಿಗೆ ಮೊದಲೇ ಈ ಬಗ್ಗೆ ಸಂದೇಶ ತಲುಪಿಯಾಗಿತ್ತಾ?? ನೋಡೋಣ ಬನ್ನಿ.

ದಿನನಿತ್ಯದ ಜೀವನದಲ್ಲಿ ಹತ್ತಿರದವರಿಗಷ್ಟೇ ಅಲ್ಲ, ದಾರಿಯಲ್ಲಿ ಹೋಗುವ ಅಪರಿಚಿತರಿಗೂ ಅಪಾಯವಾಗುತ್ತದೆ ಎನ್ನುವ ಮುನ್ಸೂಚನೆ ಸಿಕ್ಕಾಗ ಅಥವಾ ಅವರು ತೊಂದರೆಯಲ್ಲಿದ್ದಾಗ ನಮ್ಮ ಒಳಮನಸ್ಸು ದಿಢೀರನೆ ಚಡಪಡಿಸಲು ಪ್ರಾರಂಭಿಸುತ್ತದೆ. ನಮಗೇನೂ ಆಗಿರುವುದಿಲ್ಲ, ಆದರೂ ಎದೆಯೊಳಗೆ *ಸಣ್ಣ ಆತಂಕ, ಮೂಡ್ ಆಫ್ ಆಗುವುದು ಅಥವಾ ಏನೋ ಕೆಟ್ಟದ್ದು ಸಂಭವಿಸಲಿದೆ ಎಂಬ ತಳಮಳ* ಶುರುವಾಗುತ್ತದೆ. ಮನಃಶಾಸ್ತ್ರದಲ್ಲಿ ಇದನ್ನು ಕೇವಲ ಒಂದು ಮೂಢನಂಬಿಕೆ ಅಥವಾ ಕಾಕತಾಳೀಯ ಎನ್ನದೇ, ಇದಕ್ಕೆ ಸ್ಪಷ್ಟವಾದ ಜೈವಿಕ ಮತ್ತು ಮಾನಸಿಕ ಕಾರಣಗಳನ್ನು ಕಂಡುಕೊಳ್ಳಲಾಗಿದೆ. ಸರಳವಾಗಿ ಹೇಳಬೇಕೆಂದರೆ, ನಮ್ಮ *"ಮನದ ಅದೃಶ್ಯ ತಂತಿಗಳೇ"* ಇವುಗಳಿಗೆಲ್ಲ ಕಾರಣ. ಮತ್ತೊಬ್ಬರ ನೋವನ್ನು ತನ್ನದೇ ನೋವೆಂದು ಭಾವಿಸುವ ಗುಣಕ್ಕೆ *'ಎಂಪಥಿ'* ಎನ್ನಲಾಗುತ್ತದೆ. ಯಾವಾಗ ನಮಗೆ ಮತ್ತೊಬ್ಬರು ಅಪಾಯದಲ್ಲಿದ್ದಾರೆ ಎಂದು ತಿಳಿಯುತ್ತದೆಯೋ, ಆಗ ನಮ್ಮ ಮನಸ್ಸು ' *ಆಲ್ಟ್ರುಯಿಸ್ಟಿಕ್ ಆತಂಕ'* ಕ್ಕೆ (Altruistic Anxiety) ಒಳಗಾಗುತ್ತದೆ. ಅಂದರೆ, ಇದಕ್ಕೆ ಮನಃಶಾಸ್ತ್ರಜ್ಞರು *'ಸೂಕ್ಷ್ಮ ಸಂಕೇತಗಳ ಗ್ರಹಿಕೆ'* (Micro-Cues) ಎನ್ನುತ್ತಾರೆ.

ನಮ್ಮ ಜಾಗೃತ ಮನಸ್ಸು ಗಮನಿಸದ ಎಷ್ಟೋ ಸಣ್ಣ ಬದಲಾವಣೆಗಳನ್ನು ನಮ್ಮ ಉಪಪ್ರಜ್ಞೆ ಗ್ರಹಿಸುತ್ತದೆ. ಉದಾಹರಣೆಗೆ ತಂದೆಯೊಬ್ಬರು ಮಗಳ ಜೊತೆ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಮಗಳು *"ನಾನು ಚೆನ್ನಾಗಿದ್ದೇನೆ"* ಎಂದೇ ಹೇಳಿರುತ್ತಾಳೆ. ಆದರೆ ಅವಳ ಧ್ವನಿಯಲ್ಲಿದ್ದ ಸಣ್ಣ ನಡುಕ ಅಥವಾ ಮಾತನಾಡಲು ತಡಕಾಡಿದ ಸೂಕ್ಷ್ಮ ಶೈಲಿಯನ್ನು ತಂದೆಯ ಉಪಪ್ರಜ್ಞೆ ಮನಸ್ಸು ಗ್ರಹಿಸುತ್ತದೆ. ಫೋನ್ ಇಟ್ಟ ನಂತರ ತಂದೆಗೆ *"ಏನೋ ಸರಿಯಿಲ್ಲ"* ಎಂದು ಮನಸ್ಸು ತಳಮಳಿಸಲು ಆರಂಭಿಸುತ್ತದೆ. ನಂತರ ವಿಚಾರಿಸಿದಾಗ ಮಗಳು ದೊಡ್ಡ ಸಂಕಷ್ಟದಲ್ಲೋ ಅಥವಾ ಕಾಯಿಲೆಯಲ್ಲೋ ಇರುವುದು ಬೆಳಕಿಗೆ ಬರುತ್ತದೆ. ಇದನ್ನು ನಾವು *'ಆರನೇ ಇಂದ್ರಿಯ ಅಥವಾ ಮೂರನೇ ಕಣ್ಣು'* ಅಂತಾ ಅಂದುಕೊಳ್ಳುತ್ತೇವೆ.

ಇನ್ನು ನಮ್ಮ ಭಾವನೆಗಳು ಸಾಂಕ್ರಾಮಿಕ ರೋಗಗಳಂತೆ ಹರಡಬಲ್ಲವು ಎಂಬುದನ್ನು ಮನಃಶಾಸ್ತ್ರಜ್ಞರು ನಿರೂಪಿಸಿದ್ದಾರೆ. ಇದನ್ನು *'ಎಮೋಷನಲ್ ಕಂಟೇಜಿಯನ್'* ಎನ್ನಲಾಗುತ್ತದೆ. ಒಬ್ಬ ವ್ಯಕ್ತಿಯ ಸುತ್ತಲಿರುವ *'ನೆಗೆಟಿವ್ ಎನರ್ಜಿ'* ಅಥವಾ ತೀವ್ರ ಆತಂಕದ ಅಲೆಗಳು ಅವರ ಜೊತೆಗಿರುವವರ ಮೇಲೂ ಪ್ರಭಾವ ಬೀರುತ್ತವೆ. ಉದಾಹರಣೆಗೆ ನೀವು ಮನೆಯಲ್ಲಿ ತುಂಬಾ ಖುಷಿಯಾಗಿ ಇರುತ್ತೀರಿ. ಆದರೆ ಕಚೇರಿಗೆ ಬಂದ ಕ್ಷಣದಿಂದ ನೀವು ಡಿಸ್ಟರ್ಬ್ ಆಗುತ್ತೀರಿ.  ಕಾರಣ ಅಲ್ಲಿರುವ ಆ ನಕಾರಾತ್ಮಕ ಭಾವನೆಗಳು ನಿಮ್ಮ ಮನದಲ್ಲಿ ಸೇರುತ್ತವೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಮನಸ್ಸು ಕೂಡ ಕಾರಣವಿಲ್ಲದೆ ಸರಿ ಇಲ್ಲದಂತಾಗುತ್ತದೆ!!.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ