ನಮ್ಮ ದೇಶ ವಿಭಿನ್ನ ಪರಂಪರೆಗಳ ಜೊತೆ ಜೊತೆಯಲ್ಲೇ ಉಡುಗೆಗಳಲ್ಲೂ ಎಣಿಸಲಾಗದ ವೈವಿಧ್ಯತೆಗಳನ್ನು ಹೊಂದಿದೆ. ನಮ್ಮ ದೇಶ ವಿವಿಧ ಬಗೆಯ ಭಾಷೆ, ಆಹಾರ ವಿಹಾರ, ಸಂಪ್ರದಾಯ, ಸಂಸ್ಕೃತಿಗಳ ಜೊತೆ ಉಡುಗೆತೊಡುಗೆಯಲ್ಲೂ ಅಷ್ಟೇ ಖ್ಯಾತಿ ಗಳಿಸಿದೆ. ಉಪಖಂಡವೇ ಆಗಿರುವ ನಮ್ಮ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ನಿಮಗೆ ಫ್ಯಾಷನ್ನಿನಲ್ಲಿ ವೈವಿಧ್ಯಮಯ ಬಣ್ಣ, ವಿನ್ಯಾಸ, ಗೆಟಪ್ ಎದ್ದು ಕಾಣಿಸುತ್ತವೆ.
ನಾವಿಲ್ಲಿ ಕೇವಲ ಉಡುಗೆಗಳ ವಿಚಾರ ತೆಗೆದುಕೊಂಡರೆ, ಭಾರತದಲ್ಲಿ ಪ್ರತಿಯೊಂದು ಸಂದರ್ಭಕ್ಕೂ ವಿವಿಧ ಬಗೆಯ ಔಟ್‌ಫಿಟ್ಸ್ ಲಭ್ಯವಿವೆ. ಆದರೆ ಟ್ರೆಂಡ್ ಸ್ಟೈಲ್ ಸಂಗಮದ ವಿಚಾರ ಬಂದಾಗ ಔಟ್‌ಫಿಟ್‌ನ ರೂಪುರೇಷೆಗಳು ಬದಲಾಗುತ್ತವೆ. ಪಾರಂಪರಿಕ ಆಗಿದ್ದರೂ ಅವಕ್ಕೆ ಫ್ಯಾಷನೆಬಲ್ ಟ್ಯಾಗ್ ಸುತ್ತಿಕೊಳ್ಳುತ್ತದೆ.
ಉಡುಗೆ ಹಳತು ಗೆಟಪ್ ಹೊಸತು
ಹಿಂದಿನ ಇತಿಹಾಸ ಗಮನಿಸಿದರೆ, ಇಡೀ ಭಾರತವನ್ನು ವಿಭಿನ್ನ ರಾಜಮನೆತನಗಳು ಆಳಿಕೊಂಡು ಬಂದಿವೆ. ಹೀಗೆ ಪ್ರತಿಯೊಬ್ಬರ ಆಡಳಿತ ಕಾಲದಲ್ಲೂ ಉಡುಗೆ ತೊಡುಗೆಗಳು ಬದಲಾಗುತ್ತಲೇ ಹೋದವು. ರಜಿಯಾ ಸುಲ್ತಾನಳ ಉಡುಗೆಯಿಂದ ಪ್ರಭಾವಿತಗೊಂಡು ರಜಿಯಾ ಸೂಟ್ ಮತ್ತು ಮೊಘಲರ ಕಾಲದಲ್ಲಿ ಅನಾರ್ಕಲಿಯ ಕಾರಣ ಅನಾರ್ಕಲಿ ಸೂಟ್ ಇಲ್ಲಿಯವರೆಗೆ ಭಾರತದಲ್ಲಿ ಮಹಿಳೆಯರ ಫ್ಯಾಷನ್ನಿನ ಅವಿಭಾಜ್ಯ ಅಂಗವಾಗಿವೆ.
ಹಾಗೆ ನೋಡಿದರೆ ಇವೆರಡೂ ಹಳೆಯ ಕಾಲದ ಉಡುಗೆಗಳು, ಆದರೆ ಇಂದಿನ ಫ್ಯಾಷನ್ ಇವಕ್ಕೆ ಬೇಕುಬೇಕಾದ ಚಮಕ್ ನೀಡಿದೆ. ಇವುಗಳ ರೂಪುರೇಷೆಗಳಲ್ಲೂ ಬೇಕಾದಷ್ಟು ಬದಲಾವಣೆ ಆಗಿವೆ. ತನ್ನ ಹೊಸ ಗೆಟಪ್‌ನಲ್ಲಿ ಇಂಥ ಸೂಟ್ ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಬಹಳ ಉಪಯುಕ್ತ ಅನಿಸುತ್ತದೆ. ಆದರೆ ಇಂಥವನ್ನು ಯಾವುದೇ ಬರ್ತ್‌ಡೇ ಅಥವಾ ಅಫಿಶಿಯಲ್ ಪಾರ್ಟಿಗೆ ಧರಿಸಿದರೆ, ಅದು ಫ್ಯಾಷನ್ ಬ್ಲಂಡರ್ ಆಗುತ್ತದಷ್ಟೆ.
ವೆಸ್ಟರ್ನ್ ಫ್ಯಾಷನ್
ನಂತರ ಬಂದ ಬ್ರಿಟಿಷರ ಆಡಳಿತದಿಂದಾಗಿ ಭಾರತೀಯರ ಫ್ಯಾಷನ್ ಸೈನ್ಸ್ ಸಮೃದ್ಧಗೊಂಡಿತು. ಹೀಗಾಗಿಯೇ ಭಾರತೀಯ ಮಹಿಳೆಯರು ವೆಸ್ಟರ್ನ್ ಫ್ಯಾಷನ್‌ನಲ್ಲಿ ಅತಿ ರಮ್ಯವಾಗಿ ಹೊಳೆಯುತ್ತಿದ್ದಾರೆ. ಇತ್ತೀಚೆಗಂತೂ ಪ್ರತಿ ತಿಂಗಳೂ ಮಾರ್ಕೆಟ್‌ನಲ್ಲಿ ಹೊಸ ಫ್ಯಾಷನ್ ಕಾಣಸಿಗುತ್ತದೆ. ಪ್ರತಿ ಹೊಸ ಡ್ರೆಸ್‌ನ್ನೂ ಒಮ್ಮೊಮ್ಮೆ ಟ್ರೈ ಮಾಡಿ ನೋಡಿ, ನಂತರ ನಿಮಗೆ ಸೂಕ್ತವಾಗುವುದನ್ನೇ ಕೊಳ್ಳಬೇಕು. ಆದರೆ ಯಾವ ಔಟ್‌ಫಿಟ್‌ನ್ನು ಯಾವ ಸಂದರ್ಭಕ್ಕೆ ಧರಿಸಬೇಕು ಎಂಬ ಪರಿಜ್ಞಾನ ಇರಬೇಕಾದುದು ಅತ್ಯಗತ್ಯ.
ಎಷ್ಟೋ ಹುಡುಗಿಯರು ಲಂಚ್ ಇರುವಂಥ ಮಧ್ಯಾಹ್ನದ ಪಾರ್ಟಿಗೆ ಈವ್ನಿಂಗ್ ಗೌನ್ ಧರಿಸಿ ಹೊರಟುಬಿಡುತ್ತಾರೆ. ಹೆಸರೇ ಸೂಚಿಸುವಂತೆ ಇದನ್ನು ಸಂಜೆಯ ಪಾರ್ಟಿಗಳಿಗೆ ಮಾತ್ರ ಧರಿಸಿ ಹೊರಟರೆ ಒಳ್ಳೆಯದು. ಇತ್ತೀಚೆಗೆ ಈಬೆ ಕಂಪನಿ 1000 ಮಹಿಳೆಯರ ಜೊತೆ ನಡೆಸಿದ ಸಮೀಕ್ಷೆಯಿಂದ, ಸುಮಾರು ಶೇ.15 ಮಹಿಳೆಯರು ತಿಳಿಯದೆ ಇಂಥ ತಪ್ಪು ಮಾಡುತ್ತಾರೆ.
ಚಿರಯೌವನ ಉಳಿಸುವ ಫ್ಯಾಷನ್
ಆಧುನಿಕ ಲೇಟೆಸ್ಟ್ ಫ್ಯಾಷನ್ ನಿಮ್ಮನ್ನು ಸದಾ ಅಪ್ ಟು ಡೇಟ್ ಆಗಿಡಬೇಕು. ಆದರೆ ಅಪ್ ಟು ಡೇಟ್ ಆಗುವ ಧಾವಂತದಲ್ಲಿ ಮಹಿಳೆಯರು ತಮ್ಮ ಪರ್ಸನಾಲಿಟಿಗೆ ಯಾವುದು ಸೂಟ್ ಆಗುತ್ತದೋ ಇಲ್ಲವೋ ಎಂದು ನೋಡಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಗೃಹಿಣಿಯರಿಗೆ ಫ್ಯಾಷನ್ ಎಂದರೆ ಬಣ್ಣ ಬಣ್ಣದ ಸೀರೆಗಳು ಅಥವಾ ಸಲ್ವಾರ್‌ಸೂಟ್, ಚೂಡೀದಾರ್‌ಗಳು. ಸೀರೆಯಷ್ಟಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವ ಮಹಿಳೆಯರು ಫ್ಯಾಷನೆಬಲ್ ಅಲ್ಲ ಅಂತಲ್ಲ. ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ಸೀರೆಗಳ ಸಾವಿರಾರು ಪ್ಯಾಟರ್ನ್ಸ್ ಲಭ್ಯವಿವೆ. ಈಗ ಸೀರೆಗಳಲ್ಲೂ ಆಧುನಿಕ ಡಿಸೈನರ್ಸ್ ಬೇಕಾದಷ್ಟು ಕ್ರಿಯೇಟಿವಿಟಿ ತೋರ್ಪಡಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಡ್ರೇಪಿಂಗ್‌ನ ವೈವಿಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸೀರೆಗಳ ಡಿಸೈನಿಂಗ್ ಮಾಡಲಾಗುತ್ತದೆ. ಆದರೆ ಸಾವಿರಾರು ಮಹಿಳೆಯರು ಇಂದಿಗೂ ಸಹ ಅದೇ ಹಳೆಯ ರೀತಿಯಲ್ಲಿ ಒಂದೇ ತರಹ ಸೀರೆ ಉಡುತ್ತಾ, ಫ್ಯಾಷನ್ ಓಟದಲ್ಲಿ ಹಿಂದೆ ಉಳಿದುಬಿಡುತ್ತಾರೆ.
ಔಟ್‌ಫಿಟ್ಸ್ ಮಾತ್ರವಲ್ಲದೆ ಆ್ಯಕ್ಸೆಸರೀಸ್ ಕುರಿತಾಗಿಯೂ ಮಹಿಳೆಯರು ಎಷ್ಟೋ ಸಲ ಹಲವಾರು ತಪ್ಪುಗಳನ್ನು ಮಾಡಿಬಿಡುತ್ತಾರೆ.
ಕೇವಲ ಔಟ್‌ಫಿಟ್ಸ್ ಚೆನ್ನಾಗಿದ್ದುಬಿಟ್ಟರೆ ಅಷ್ಟೇ ಸಾಲದು, ಆ್ಯಕ್ಸೆಸರೀಸ್ ಔಟ್‌ಫಿಟ್ಸ್ ಲುಕ್ಸ್ ಎನ್‌ಹ್ಯಾನ್ಸ್ ಮಾಡುತ್ತವೆ. ಆದರೆ ಇನ್ನು ಸಮರ್ಪಕವಾಗಿ ಮತ್ತು ಸೀಮಿತ ರೂಪದಲ್ಲಿ ಆರಿಸಬೇಕು. ಆದರೆ ಎಷ್ಟೋ ಮಹಿಳೆಯರು ಔಟ್‌ಫಿಟ್ ಮತ್ತು ಆ್ಯಕ್ಸೆಸರೀಸ್ ಆರಿಸುವಾಗ, ಅವಕ್ಕೆ ಹೊಂದಾಣಿಕೆಯನ್ನೇ ಗಮನಿಸುವುದಿಲ್ಲ. ಉದಾ : ಹೇರ್ ಆ್ಯಕ್ಸೆಸರೀಸ್‌ನ್ನು ಟ್ರೆಡಿಶನಲ್ ಔಟ್‌ಫಿಟ್ ಜೊತೆ ಧರಿಸಬೇಕು, ಅವನ್ನು ಹೋಗಿ ಕ್ಯಾಶ್ಯುಯೆಲ್ ಜೊತೆ ಧರಿಸಿದರೆ ಅದು ಫ್ಯಾಷನ್ ಮಿಸ್ಟೇಕ್ ಆಗುತ್ತದೆ.
– ಅನುರಾಧಾ
ಅತಿ ಹೆಚ್ಚು ಫಂಕಿ ಲುಕ್ಸ್ ವುಳ್ಳ ಫುಟ್‌ವೇರ್ ಧರಿಸುವುದನ್ನು ತಪ್ಪಿಸಿ. ಇದು ನಿಮಗೆ ಫ್ಯಾಷನೆಬಲ್ ಲುಕ್‌ಗಿಂತ ಅಧಿಕ ಚೈಲ್ಡಿಶ್ ಲುಕ್ ಕೊಡುತ್ತದೆ.
ಅನಿಮಲ್ ಪ್ರಿಂಟ್ಸ್ ಟ್ರೆಂಡ್‌ನಲ್ಲಿದೆ ಎಂಬುದೇನೋ ಸರಿ, ಆದರೆ ಅವು ಕ್ಯಾಶ್ಯುಯೆಲ್ ಪ್ರಿಂಟ್ಸ್ ಆಗಿರಬೇಕೆಂಬುದನ್ನು ಗಮನಿಸಿ. ಪ್ರೊಫೆಶನಲ್ ಟ್ರೆಡಿಶನ್ ಔಟ್‌ಫಿಟ್ಸ್ ನಲ್ಲಿ ಇವನ್ನು ಬೆರೆಸಬಾರದು.
ಇನ್ನರ್‌ವೇರ್‌ನ್ನು ಔಟ್‌ವೇರ್ ಮೇಲೆ ಪ್ಲಾಂಟ್‌ಗೊಳಿಸುವ ಫ್ಯಾಷನ್ ಈಗ ಹಳೆಯದಾಯಿತು ಹಾಗೂ ಇದು ಅಸಹ್ಯಕರವಾಗಿಯೂ ಕಾಣಿಸುತ್ತದೆ. ಆದ್ದರಿಂದ ನಿಮ್ಮ ಬ್ರಾದ ಸ್ಟ್ರಾಪ್ ಮತ್ತು ಪ್ಯಾಂಟಿ ಔಟ್‌ವೇರ್‌ನಿಂದ ಮುಚ್ಚಿರಬೇಕು ಎಂಬುದನ್ನು ಗಮನಿಸಿ.
ಜ್ಯೂವೆಲರಿ ಧರಿಸುವುದು ನಿಮ್ಮ ಹವ್ಯಾಸವಾದರೆ, ಸಂದರ್ಭಕ್ಕೆ ತಕ್ಕಂತೆ ಅದನ್ನು ಧರಿಸಬೇಕು. ಮಾರುಕಟ್ಟೆಯಲ್ಲಿ ಹಲವು ವೈವಿಧ್ಯಮಯ ಡಿಸೈನ್ಸ್ ಲಭ್ಯವಿವೆ, ಆದರೆ ಇವನ್ನು ನಿಮ್ಮ ಡ್ರೆಸ್ ಪ್ಯಾಟರ್ನ್‌ಗೆ ತಕ್ಕಂತೆ ಆರಿಸಬೇಕು.
ನೀವು ಎಷ್ಟೇ ಉತ್ತಮ ಡ್ರೆಸ್ ಧರಿಸಿದ್ದರೂ, ಉತ್ತಮ ಮೇಕಪ್ ಮತ್ತು ಹೇರ್‌ಸ್ಟೈಲ್ ಕಡೆ ಗಮನ ಹರಿಸದಿದ್ದರೆ, ನೀವು ಫ್ಯಾಷನೆಬಲ್ ಬದಲು ಬಫೂನ್ ಎನಿಸುವಿರಿ.