ಈ ಸ್ಟೈಲಿಶ್ ಲುಕ್‌ನ ವಿಶೇಷವೇನೆಂದರೆ ಇದು ಎಲ್ಲ ಬಾಡಿ ಟೈಪ್‌ನ ಹುಡುಗಿಯರಿಗೂ ಒಪ್ಪುತ್ತದೆ.
ಕ್ರಾಪ್ ಟಾಪ್ ನಂತರ ಈಗ ಕ್ರಾಪ್ ಪ್ಯಾಂಟ್‌ಗಳ ಟ್ರೆಂಡ್ ಫ್ಯಾಷನ್ ನಲ್ಲಿದೆ. ಈ ಕ್ರಾಪ್ ಪ್ಯಾಂಟ್‌ಗಳನ್ನು ಕುಲೋಟ್ಸ್ ಎಂದು ಕರೆಯುತ್ತಾರೆ. ಫ್ಯಾಷನ್‌ನ ಈ ಕಲ್ಪನೆಯೂ ವಿಭಿನ್ನವಾಗಿದೆ. ಹೊಸ ಸ್ಟೈಲ್ ಪ್ಯಾಂಟ್‌ನಂತಹ ಕುಲೋಟ್ಸ್ ಇಂದು ಫ್ಯಾಷನ್ ಟ್ರೆಂಡ್‌ನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ದೊಡ್ಡ ವಿಶೇಷತೆಯೆಂದರೆ ಈ ಪ್ಯಾಂಟ್ ತೆಳು ಕಾಯದವರಿಗೆ ಹಾಗೂ ಕುಳ್ಳಗಿರುವವರಿಗೆ ಎಲ್ಲ ರೀತಿಯ ಬಾಡಿ ಟೈಪ್‌ನ ಯುವತಿಯರಿಗೂ ಒಪ್ಪುತ್ತದೆ.
ಮೊದಲ ನೋಟದಲ್ಲಿ ನೀವು ಇದನ್ನು ಇಷ್ಟಪಡದಿರಬಹುದು. ಆದರೆ ಇದನ್ನು ಅಲಕ್ಷಿಸುವುದಲ್ಲ. ಒಂದು ವೇಳೆ ನೀವು ಈ ಹೊಸ ಲುಕ್‌ನ ಪ್ಯಾಂಟ್‌ನ್ನು ಧರಿಸಲು ಹಿಂಜರಿಯುತ್ತಿದ್ದರೆ ಆರಂಭದಲ್ಲಿ ಮೊಣಕಾಲುವರೆಗಿನ ಕುಲೋಟ್ಸ್ ತೆಗೆದುಕೊಳ್ಳಿ. ಮೊದಲ ಬಾರಿ ಅದನ್ನು ಧರಿಸುವಾಗ ಕಷ್ಟವಾಗದಂತೆ ನೋಡಿಕೊಳ್ಳಲು ಪ್ರಿಂಟೆಡ್ ಕುಲೋಟ್ಸ್ ತೆಗೆದುಕೊಳ್ಳುವ ಬದಲು ಸಿಂಗಲ್ ಮತ್ತು ಡಾರ್ಕ್ ಕಲರ್, ಉದಾಹರಣೆಗೆ ಕಪ್ಪು, ನೀಲಿ ಅಥವಾ ಕಂದು ಬಣ್ಣದ ಕುಲೋಟ್ಸ್ ತೆಗೆದುಕೊಳ್ಳಿ.
ಯಾವುದರ ಜೊತೆ ಧರಿಸೋದು?
ಕುಲೋಟ್ಸ್ ನ್ನು ಯಾವುದೇ ಟಾಪ್‌ನೊಂದಿಗೆ ಧರಿಸಬಹುದು. ನಿಮ್ಮನ್ನು ನೀವು ಯಾವ ಲುಕ್‌ನಲ್ಲಿ ನೋಡಲು ಇಚ್ಛಿಸುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ನೀವು ಹೈ ಲೇಟೆಸ್ಟ್ ಕುಲೋಟ್ಸ್ ಆರಿಸಿಕೊಂಡರೆ, ಅದನ್ನು ನೀವು ಒಂದು ಸ್ಟೈಲಿಶ್ ಕ್ರಾಪ್ ಟಾಪ್‌ನೊಂದಿಗೆ ಪೇರ್ ಮಾಡಬಹುದು. ಇದಕ್ಕೆ ಪ್ರತಿಯಾಗಿ ನೀವು ಲೋ ವೇಸ್ಟ್ ಮತ್ತು ಆ್ಯಂಕಲ್ ಲೆಂತ್‌ನ ಕುಲೋಟ್ಸ್ ಆರಿಸಿಕೊಂಡರೆ ಅದನ್ನು ನೀ ಲೆಂತ್ ಕುರ್ತಿಯೊಂದಿಗೆ ಧರಿಸಬಹುದು. ಕುಲೋಟ್ಸ್ ಧರಿಸುವ ಈ ಸ್ಟೈಲ್ ವೆಸ್ಟರ್ನ್ ಎಥ್ನಿಕ್‌ನ ಫ್ಯಾಷನ್ ಲುಕ್ ಕೊಡುತ್ತದೆ.
ಮಾರುಕಟ್ಟೆಯಲ್ಲಿ ಏ ಲೈನ್ ಸ್ಕರ್ಟ್‌ನಂತಹ ಕುಲೋಟ್ಸ್ ಕೂಡ ಲಭ್ಯವಿವೆ. ಅವನ್ನು ಫಾರ್ಮಲ್ ಅಥವಾ ಸ್ಟೈಲಿಶ್ ಶರ್ಟ್‌ನೊಂದಿಗೆ ಪೇರ್ ಮಾಡಬಹುದು. ಫ್ಯಾಷನ್ ಟ್ರೆಂಡ್ಸ್ ನಲ್ಲಿ ಮೊದಲಿನಿಂದಲೇ ಎಲ್ಲರ ಫೇವರಿಟ್ ಆಗಿರುವ ಕುಲೋಟ್ಸ್ ನೊಂದಿಗೆ ಸ್ಟೈಲ್ ಅಪ್ ಮಾಡಬಹುದು.
ಯಾವಾಗ ಮತ್ತು ಎಲ್ಲಿ ಧರಿಸುವುದು
ಹಲವಾರು ಲೆಂತ್, ಸ್ಟೈಲ್ ಮತ್ತು ಪ್ಯಾಟರ್ನ್‌ಗಳಲ್ಲಿ ಲಭ್ಯವಿರುವ ಕುಲೋಟ್ಸ್ ಸ್ಟೈಲಿಶ್ ಆಗಿ ಕಾಣುವುದಲ್ಲದೆ, ಅದನ್ನು ಧರಿಸುವುದು ಸಹ ಸಾಕಷ್ಟು ಕಂಫರ್ಟೆಬಲ್ ಆಗಿರುತ್ತದೆ. ಹೀಗಾಗಿ ಇದನ್ನು ಯಾವುದೇ ಜಾಗಕ್ಕೂ ಸುಲಭವಾಗಿ ಕ್ಯಾರಿ ಮಾಡಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಇದು ಬಹಳ ಆರಾಮದಾಯಕವಾಗಿರುತ್ತದೆ. ಅವನ್ನು ನೀವು ಡೇ ಪಾರ್ಟಿ, ನೈಟ್ ಔಟಿಂಗ್ ಹಾಗೂ ಆಫೀಸ್‌ಗೆ ಸಹ ಧರಿಸಿ ಹೋಗಬಹುದು. ಒಂದು ವೇಳೆ ನೀವು ಆಫೀಸ್‌ಗೆ ಕುಲೋಟ್ಸ್ ಧರಿಸಿ ಹೋಗಲು ಇಚ್ಛಿಸಿದರೆ ಫಾರ್ಮಲ್ ಲುಕ್ ಇರುವ ಕುಲೋಟ್ಸ್ ನ್ನೇ ಆರಿಸಿ. ಅದನ್ನು ಫಾರ್ಮಲ್ ಶರ್ಟ್ ಅಥವಾ ಟಾಪ್‌ನೊಂದಿಗೆ ಪೇರ್ ಮಾಡಿ. ಫಾರ್ಮಲ್ ಲುಕ್‌ಗಾಗಿ ನೀವು ಮಾನೋಕ್ರೊಮ್ಯಾಟಿಕ್ ಕಲರ್‌ನ ಕುಲೋಟ್ಸ್ ಟ್ರೈ ಮಾಡಿ. ಅದರ ಜೊತೆ ನೀವು ಬ್ಲೇಝರ್ ಕೂಡ ಧರಿಸಬಹುದು. ಬ್ಲೇಝರ್ ಹಾಗೂ ಕುಲೋಟ್ಸ್ ಹೆಸರು ಕೇಳಲು ಕಷ್ಟವಾಗಬಹುದು. ಆದರೆ ಅದು ನಿಮಗೆ ಸ್ಟೈಲಿಶ್ ಪ್ರೊಫೆಷನ್ ಲುಕ್ ಕೊಡುತ್ತದೆ.
ಬಾಲಿವುಡ್‌ನಲ್ಲಿ ಕುಲೋಟ್ಸ್ ನ ಜಾದೂ
`ಪೀಕೂ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೊದಲ ಬಾರಿ ಹಲವಾರು ದೃಶ್ಯಗಳಲ್ಲಿ ಕುಲೋಟ್ಸ್ ಧರಿಸಿದ್ದಾರೆ. ಆಗ ಇದನ್ನು ನೀ ಲೆಂತ್ ಕುರ್ತಿಗಳೊಂದಿಗೆ ಪೇರ್ ಮಾಡುವ ಟ್ರೆಂಡ್ ಇತ್ತು. ಈಗ ದೀಪಿಕಾ ಅಲ್ಲದೆ, ಆಲಿಯಾ ಭಟ್ ಕೂಡ `ಶಾನ್‌ದಾರ್’ ಚಿತ್ರದ ಪ್ರಮೋಶನ್‌ನಲ್ಲಿ ಫಾರ್ಮಲ್ ಲುಕ್‌ನ ಕುಲೋಟ್ಸ್ ನಲ್ಲಿ ಕಾಣಿಸಿಕೊಂಡರು. ಅಂದಿನಿಂದ ಕುಲೋಟ್ಸ್ ನೊಂದಿಗೆ ಫ್ಯಾಷನ್ ಎಕ್ಸ್ ಪೆರಿಮೆಂಟ್‌ನ ಸರಣಿ ಆರಂಭವಾಯಿತು. ಈಗ ಈ ಸ್ಟೈಲಿಶ್ ಪ್ಯಾಂಟ್‌ನ್ನು ಬಾಲಿವುಡ್‌ನ ಇತರ ನಟಿಯರೂ ಬೇರೆ ಬೇರೆ ಈವೆಂಟ್‌ಗಳಲ್ಲಿ ಬೇರೆ ಬೇರೆ ಟಾಪ್ಸ್ ನೊಂದಿಗೆ ಕ್ಯಾರಿ ಮಾಡುವುದನ್ನು ನೋಡಬಹುದು.
ಒಂದು ಫೋಟೋಶೂಟ್ ಸಂದರ್ಭದಲ್ಲಿ ಸೋನಂ ಕಪೂರ್ ಕಾಮಿಕ್ಸ್ ಪ್ರಿಂಟ್‌ನಲ್ಲಿ ಕಾಣಿಸಿಕೊಂಡರು. ಅನೇಕ ಹೆಸರಾಂತ ಫ್ಯಾಷನ್ ಡಿಸೈನರ್‌ಗಳು ಕುಲೋಟ್ಸ್ ನ್ನು ಫ್ಯಾಷನ್ ಇಂಡಸ್ಟ್ರಿಯಲ್ಲಿ ನ್ಯೂ ಎಂಟ್ರಿ ಎಂದು ಒಪ್ಪುವುದಿಲ್ಲ. ಅವರ ಪ್ರಕಾರ ಕುಲೋಟ್ಸ್ ನ ಫ್ಯಾಷನ್ 70ರ ದಶಕದಿಂದಲೇ ಪ್ರಚಲಿತವಾಗಿದೆ. ಈಗ ಹೊಸ ಲುಕ್ ಮತ್ತು ಸ್ಟೈಲ್‌ನೊಂದಿಗೆ ಅದು ವಾಪಸ್ ಬಂದಿದೆಯಷ್ಟೆ.
ಕುಲೋಟ್ಸ್ ಇತಿಹಾಸ
ಸ್ಕರ್ಟ್‌ನಂತೆ ಕಾಣಿಸುವ ಕುಲೋಟ್ಸ್ ವಾಸ್ತವದಲ್ಲಿ ಒಂದು ಶರ್ಟ್ ಪ್ಯಾಂಟ್‌ನಂತೆಯೇ ಇರುತ್ತದೆ. ಫ್ರಾನ್ಸ್ ನ 3ನೇ ಹೆನ್ರಿಯ ಆಡಳಿತದ ಕಾಲದಲ್ಲಿ ಕುಲೋಟ್ಸ್ ಬಹಳ ಜನಪ್ರಿಯವಾಗಿತ್ತು. ನಂತರ ವಿಕ್ಟೋರಿಯನ್ ಯುಗದಲ್ಲಿ ಮಹಿಳೆಯರಿಗೆ ಪ್ಯಾಂಟ್ ಧರಿಸುವ ಸ್ವಾತಂತ್ರ್ಯಬೇಕಾಗಿದ್ದಾಗ ಸ್ಕರ್ಟ್‌ನಂತಹ ಪ್ಯಾಂಟ್ ರೂಪದಲ್ಲಿ ಕುಲೋಟ್ಸ್ ರೂಢಿಗೆ ಬಂತು. ಅಂದಿನಿಂದ ಇಂದಿನವರೆಗೆ ಇದರ ಡಿಸೈನ್, ಪ್ಯಾಟರ್ನ್ ಮತ್ತು ಸ್ಟೈಲ್‌ನಲ್ಲಿ ಹಲವಾರು ಬದಲಾವಣೆಗಳು ಬಂದಿವೆ. ಕುಲೋಟ್ಸ್ ನ ಫ್ಯಾಷನ್ ಕಳೆದ ವರ್ಷದಿಂದಲೇ ಹಾಟ್‌ಲಿಸ್ಟ್ ನಲ್ಲಿ ಸೇರಿಕೊಂಡಿದೆ.
ಕುಲೋಟ್ಸ್ ನದೇ ಒಂದು ಸ್ವರೂಪ ಡಿವೈಡೆಡ್ ಸ್ಕರ್ಟ್ ಆಗಿದೆ. ಹೆಚ್ಚಿನ ಭಾರತೀಯ ಶಾಲೆಗಳಲ್ಲಿ ಹುಡುಗಿಯರು ಡಿನೈಡೆಡ್ ಸ್ಕರ್ಟ್‌ನ್ನೇ ಯೂನಿಫಾರಂ ರೂಪದಲ್ಲಿ ಧರಿಸಬೇಕಾಗುತ್ತದೆ.
– ಸಿ. ಚಿತ್ರಾ
ಗಮನಿಸಿ
– ಕಡಿಮೆ ಎತ್ತರದ ಮಹಿಳೆಯರು ಕುಲೋಟ್ಸ್ ಧರಿಸುವುದಿದ್ದರೆ ಆ್ಯಂಕಲ್ ಲೆಂತ್‌ನದ್ದು ಆರಿಸಬೇಕು. ಅದನ್ನು ಹೈ ಹೀಲ್ಸ್ ಅಥವಾ ಲೆಜ್ ಸ್ಯಾಂಡಲ್ಸ್ ನೊಂದಿಗೆ ಪೇರ್ ಮಾಡಿಕೊಳ್ಳಬೇಕು. ಆಗ ಬಹಳಷ್ಟು ಸ್ಟೈಲಿಶ್ ಲುಕ್ ಕಂಡುಬರುತ್ತದೆ.
– ಉದ್ದನೆಯ ಮಹಿಳೆಯರಿಗೆ ಬಾಟಮ್ ಫ್ಲೇರ್ ಲುಕ್‌ನ ಕುಲೋಟ್ಸ್ ಚೆನ್ನಾಗಿ ಒಪ್ಪುತ್ತವೆ. ತೆಳ್ಳಗಿನ ಮಹಿಳೆಯರಿಗೆ ಮಿಡಲ್ ಲೆಂತ್ ಕುಲೋಟ್ಸ್ ಸ್ಟೈಲಿಶ್ ಲುಕ್ ಕೊಡುತ್ತವೆ. ಕುಲೋಟ್ಸ್ ನ್ನು ಟೀ ಸ್ಟಾಪ್ ಶೂಸ್ ಅಥವಾ ಪೀಪ್ ಟಾಪ್‌ನೊಂದಿಗೆ ಧರಿಸಬಹುದು.
– ಒಂದು ವೇಳೆ ನಿಮ್ಮಲ್ಲಿ ಬ್ಲ್ಯಾಕ್ ಕುಲೋಟ್ಸ್ ಇದ್ದರೆ, ಅದನ್ನು ವೈಟ್ ಟ್ಯಾಂಕ್ ಟಾಪ್ ಅಥವಾ ವೈಟ್ ಜಂಪರ್‌ನೊಂದಿಗೆ ಧರಿಸಿ. ಈ ಕಾಂಬಿನೇಷನ್ ಬಹಳಷ್ಟು ಟ್ರೆಂಡಿ ಲುಕ್ ಕೊಡುತ್ತದೆ.
– ಪ್ರಿಂಟೆಡ್ ಕುಲೋಟ್ಸ್ ನ್ನು ಎಂದೂ ಪ್ರಿಂಟೆಡ್ ಟಾಪ್‌ನೊಂದಿಗೆ ಧರಿಸಬೇಡಿ. ಅದನ್ನು ಸಿಂಗಲ್ ಕಲರ್ ಟಾಪ್‌ನೊಂದಿಗೆ ಮಾತ್ರ ಪೇರ್ ಮಾಡಿ.