ಈ ಸ್ಟೈಲಿಶ್‌ ಲುಕ್‌ನ ವಿಶೇಷವೇನೆಂದರೆ ಇದು ಎಲ್ಲ ಬಾಡಿ ಟೈಪ್‌ನ ಹುಡುಗಿಯರಿಗೂ ಒಪ್ಪುತ್ತದೆ.

ಕ್ರಾಪ್‌ ಟಾಪ್‌ ನಂತರ ಈಗ ಕ್ರಾಪ್‌ ಪ್ಯಾಂಟ್‌ಗಳ ಟ್ರೆಂಡ್‌ ಫ್ಯಾಷನ್‌ ನಲ್ಲಿದೆ. ಈ ಕ್ರಾಪ್‌ ಪ್ಯಾಂಟ್‌ಗಳನ್ನು ಕುಲೋಟ್ಸ್ ಎಂದು ಕರೆಯುತ್ತಾರೆ. ಫ್ಯಾಷನ್‌ನ ಈ ಕಲ್ಪನೆಯೂ ವಿಭಿನ್ನವಾಗಿದೆ. ಹೊಸ ಸ್ಟೈಲ್ ಪ್ಯಾಂಟ್‌ನಂತಹ ಕುಲೋಟ್ಸ್ ಇಂದು ಫ್ಯಾಷನ್‌ ಟ್ರೆಂಡ್‌ನ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ದೊಡ್ಡ ವಿಶೇಷತೆಯೆಂದರೆ ಈ ಪ್ಯಾಂಟ್‌ ತೆಳು ಕಾಯದವರಿಗೆ ಹಾಗೂ ಕುಳ್ಳಗಿರುವವರಿಗೆ ಎಲ್ಲ ರೀತಿಯ ಬಾಡಿ ಟೈಪ್‌ನ ಯುವತಿಯರಿಗೂ ಒಪ್ಪುತ್ತದೆ.

ಮೊದಲ ನೋಟದಲ್ಲಿ ನೀವು ಇದನ್ನು ಇಷ್ಟಪಡದಿರಬಹುದು. ಆದರೆ ಇದನ್ನು ಅಲಕ್ಷಿಸುವುದಲ್ಲ. ಒಂದು ವೇಳೆ ನೀವು ಈ ಹೊಸ ಲುಕ್‌ನ ಪ್ಯಾಂಟ್‌ನ್ನು ಧರಿಸಲು ಹಿಂಜರಿಯುತ್ತಿದ್ದರೆ ಆರಂಭದಲ್ಲಿ ಮೊಣಕಾಲುವರೆಗಿನ ಕುಲೋಟ್ಸ್ ತೆಗೆದುಕೊಳ್ಳಿ. ಮೊದಲ ಬಾರಿ ಅದನ್ನು ಧರಿಸುವಾಗ ಕಷ್ಟವಾಗದಂತೆ ನೋಡಿಕೊಳ್ಳಲು ಪ್ರಿಂಟೆಡ್‌ ಕುಲೋಟ್ಸ್ ತೆಗೆದುಕೊಳ್ಳುವ ಬದಲು ಸಿಂಗಲ್ ಮತ್ತು ಡಾರ್ಕ್‌ ಕಲರ್‌, ಉದಾಹರಣೆಗೆ ಕಪ್ಪು, ನೀಲಿ ಅಥವಾ ಕಂದು ಬಣ್ಣದ ಕುಲೋಟ್ಸ್ ತೆಗೆದುಕೊಳ್ಳಿ.

ಯಾವುದರ ಜೊತೆ ಧರಿಸೋದು?

ಕುಲೋಟ್ಸ್ ನ್ನು ಯಾವುದೇ ಟಾಪ್‌ನೊಂದಿಗೆ ಧರಿಸಬಹುದು. ನಿಮ್ಮನ್ನು ನೀವು ಯಾವ ಲುಕ್‌ನಲ್ಲಿ ನೋಡಲು ಇಚ್ಛಿಸುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ನೀವು ಹೈ ಲೇಟೆಸ್ಟ್ ಕುಲೋಟ್ಸ್ ಆರಿಸಿಕೊಂಡರೆ, ಅದನ್ನು ನೀವು ಒಂದು ಸ್ಟೈಲಿಶ್‌ ಕ್ರಾಪ್‌ ಟಾಪ್‌ನೊಂದಿಗೆ ಪೇರ್‌ ಮಾಡಬಹುದು. ಇದಕ್ಕೆ ಪ್ರತಿಯಾಗಿ ನೀವು ಲೋ ವೇಸ್ಟ್ ಮತ್ತು ಆ್ಯಂಕಲ್ ಲೆಂತ್‌ನ ಕುಲೋಟ್ಸ್ ಆರಿಸಿಕೊಂಡರೆ ಅದನ್ನು ನೀ ಲೆಂತ್‌ ಕುರ್ತಿಯೊಂದಿಗೆ ಧರಿಸಬಹುದು. ಕುಲೋಟ್ಸ್ ಧರಿಸುವ ಈ ಸ್ಟೈಲ್‌ ವೆಸ್ಟರ್ನ್‌ ಎಥ್ನಿಕ್‌ನ ಫ್ಯಾಷನ್‌ ಲುಕ್‌ ಕೊಡುತ್ತದೆ.

ಮಾರುಕಟ್ಟೆಯಲ್ಲಿ ಏ ಲೈನ್‌ ಸ್ಕರ್ಟ್‌ನಂತಹ ಕುಲೋಟ್ಸ್ ಕೂಡ ಲಭ್ಯವಿವೆ. ಅವನ್ನು ಫಾರ್ಮಲ್ ಅಥವಾ ಸ್ಟೈಲಿಶ್‌ ಶರ್ಟ್‌ನೊಂದಿಗೆ ಪೇರ್‌ ಮಾಡಬಹುದು. ಫ್ಯಾಷನ್‌ ಟ್ರೆಂಡ್ಸ್ ನಲ್ಲಿ ಮೊದಲಿನಿಂದಲೇ ಎಲ್ಲರ ಫೇವರಿಟ್‌ ಆಗಿರುವ ಕುಲೋಟ್ಸ್ ನೊಂದಿಗೆ ಸ್ಟೈಲ್ ಅಪ್‌ ಮಾಡಬಹುದು.

ಯಾವಾಗ ಮತ್ತು ಎಲ್ಲಿ ಧರಿಸುವುದು

ಹಲವಾರು ಲೆಂತ್‌, ಸ್ಟೈಲ್‌ ಮತ್ತು ಪ್ಯಾಟರ್ನ್‌ಗಳಲ್ಲಿ ಲಭ್ಯವಿರುವ ಕುಲೋಟ್ಸ್ ಸ್ಟೈಲಿಶ್‌ ಆಗಿ ಕಾಣುವುದಲ್ಲದೆ, ಅದನ್ನು ಧರಿಸುವುದು ಸಹ ಸಾಕಷ್ಟು ಕಂಫರ್ಟೆಬಲ್ ಆಗಿರುತ್ತದೆ. ಹೀಗಾಗಿ ಇದನ್ನು ಯಾವುದೇ ಜಾಗಕ್ಕೂ ಸುಲಭವಾಗಿ ಕ್ಯಾರಿ ಮಾಡಬಹುದು. ವಿಶೇಷವಾಗಿ ಬೇಸಿಗೆಯಲ್ಲಿ ಇದು ಬಹಳ ಆರಾಮದಾಯಕವಾಗಿರುತ್ತದೆ. ಅವನ್ನು ನೀವು ಡೇ ಪಾರ್ಟಿ, ನೈಟ್‌ ಔಟಿಂಗ್‌ ಹಾಗೂ ಆಫೀಸ್‌ಗೆ ಸಹ ಧರಿಸಿ ಹೋಗಬಹುದು. ಒಂದು ವೇಳೆ ನೀವು ಆಫೀಸ್‌ಗೆ ಕುಲೋಟ್ಸ್ ಧರಿಸಿ ಹೋಗಲು ಇಚ್ಛಿಸಿದರೆ ಫಾರ್ಮಲ್ ಲುಕ್‌ ಇರುವ ಕುಲೋಟ್ಸ್ ನ್ನೇ ಆರಿಸಿ. ಅದನ್ನು ಫಾರ್ಮಲ್ ಶರ್ಟ್‌ ಅಥವಾ ಟಾಪ್‌ನೊಂದಿಗೆ ಪೇರ್‌ ಮಾಡಿ. ಫಾರ್ಮಲ್ ಲುಕ್‌ಗಾಗಿ ನೀವು ಮಾನೋಕ್ರೊಮ್ಯಾಟಿಕ್‌ ಕಲರ್‌ನ ಕುಲೋಟ್ಸ್ ಟ್ರೈ ಮಾಡಿ. ಅದರ ಜೊತೆ ನೀವು ಬ್ಲೇಝರ್‌ ಕೂಡ ಧರಿಸಬಹುದು. ಬ್ಲೇಝರ್‌ ಹಾಗೂ ಕುಲೋಟ್ಸ್ ಹೆಸರು ಕೇಳಲು ಕಷ್ಟವಾಗಬಹುದು. ಆದರೆ ಅದು ನಿಮಗೆ ಸ್ಟೈಲಿಶ್‌ ಪ್ರೊಫೆಷನ್‌ ಲುಕ್‌ ಕೊಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ