ಸೀಕ್ವೆನ್ಸ್ ವರ್ಕ್‌ನಿಂದ ಸುಸಜ್ಜಿತಗೊಂಡ ಈ ಬ್ಯೂಟಿಫುಲ್ ಲಹಾಂಗಾ ಚೋಲಿಗೆ ಹೊಳೆಹೊಳೆಯುವ ಗೋಲ್ಡನ್‌ ಮತ್ತು ಸಿಲ್ವರ್‌ ಎಂಬ್ರಾಯಿಡರಿ, ಅದನ್ನು ಮತ್ತಷ್ಟು ಗಾರ್ಜಿಯಸ್‌ ಆಗಿಸಿದೆ. ಇದು ಸಮ್ಮರ್‌ ವೆಡ್ಡಿಂಗ್‌ ಪಾರ್ಟಿಗೆ ಬಿಲ್‌ಕುಲ್‌ ಪರ್ಫೆಕ್ಟ್ ಎನಿಸಿದೆ.

ಕಲರ್‌ಫುಲ್ ಲಹಂಗಾದ ಜೊತೆ ಪೀಕಾಕ್‌ ಬ್ಲೂ ಬಣ್ಣದ ಡೀಪ್‌ನೆಕ್‌ ಚೋಲಿ ಮತ್ತು ಮ್ಯಾಚಿಂಗ್‌ ದುಪಟ್ಟಾ, ಈ ಸುಂದರಿಯ ಸೌಂದರ್ಯ ಹೆಚ್ಚಿಸಿ ಇವಳನ್ನು ಬೆಳದಿಂಗಳ ಬಾಲೆಯನ್ನಾಗಿಸಿದೆ!

ನೆಟ್‌ಸ್ಲೀವ್ ವುಳ್ಳ ಡಿಸೈನರ್‌ ಚೋಲಿ ಜೊತೆ ಈ ಸ್ಟೈಲಿಶ್‌ ಲಹಂಗಾ ಇರಲಿ ಅಥವಾ ರೆಡ್‌ ಮೇಲೆ ಗೋಲ್ಡನ್‌ ವರ್ಕ್‌ನ ಕಸೂತಿಯುಳ್ಳ ಲಹಂಗಾ ಇರಲಿ, ಇಂಥ ಸುಮನೋಹರ ಉಡುಗೆಗಳ ಮೇಲೆ ಪಾರ್ಟಿಗೆ ಬಂದವರೆಲ್ಲರ ಕಣ್ಣು ನೆಟ್ಟಿರುತ್ತದೆ.

ಹೆವಿ ವರ್ಕ್‌ನಿಂದ ಸಿಂಗರಿಸಲ್ಪಟ್ಟ ಮಲ್ಟಿ ಕಲರ್ಡ್‌, ಅಲ್ಟ್ರಾಪಾಶ್‌, ಬ್ಯೂಟಿಫುಲ್ ಲಹಂಗಾಚೋಲಿ ಎಲ್ಲರ ಕಣ್ಣು ಕುಕ್ಕುವಂತಿದೆ.

Tags:
COMMENT