ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 2025ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಬಾರಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ 17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಥ್ಲೆಟಿಕ್ಸ್ ವಿಭಾಗದಲ್ಲಿ ತೇಜಸ್ವಿನ್ ಶಂಕರ್, ಪ್ರಿಯಾಂಕಾ ಗೋಸ್ವಾಮಿ ಮತ್ತು ಮೊಹಮ್ಮದ್ ಅಜ್ಮಲ್, ಬಾಕ್ಸಿಂಗ್ನಲ್ಲಿ ನರೇಂದ್ರ ಬೆರ್ವಾಲ್, ಚೆಸ್ನಲ್ಲಿ ವಿದಿತ್ ಸಂತೋಷ್ ಗುಜರಾತಿ ಮತ್ತು ದಿವ್ಯಾ ಜಿತೇಂದ್ರ ದೇಶಮುಖ್, ಕಿವುಡರ ಶೂಟಿಂಗ್ ವಿಭಾಗದಲ್ಲಿ ಧನುಷ್ ಶ್ರೀಕಾಂತ್, ಹಾಕಿಯಲ್ಲಿ ರಾಜ್ಕುಮಾರ್ ಪಾಲ್ ಮತ್ತು ಲಾಲ್ರೆಮ್ಸಿಯಾಮಿ, ಕಬಡ್ಡಿಯಲ್ಲಿ ಸುರ್ಜೀತ್ ಮತ್ತು ಪೂಜಾ, ಪ್ಯಾರಾ ಶೂಟಿಂಗ್ನಲ್ಲಿ ರುದ್ರಾಂಶ್ ಖಂಡೇಲ್ವಾಲ್, ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಏಕ್ತಾ ಭ್ಯಾನ್, ರೋಯಿಂಗ್ನಲ್ಲಿ ಅರವಿಂದ್ ಸಿಂಗ್, ಶೂಟಿಂಗ್ನಲ್ಲಿ ಅಖಿಲ್ ಶಿಯೋರನ್, ಬ್ಯಾಡ್ಮಿಂಟನ್ನಲ್ಲಿ ತ್ರೀಸಾ ಜಾಲಿ ಮತ್ತು ಪುಲ್ಲೇಲ ಗಾಯಕತ್ರಿ ಗೋಪಿಚಂದ್ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.
ತರಬೇತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಥ್ಲೆಟಿಕ್ಸ್ ತರಬೇತುದಾರ ಪರ್ವೀರ್ ಸಿಂಗ್, ಬಾಕ್ಸಿಂಗ್ ತರಬೇತುದಾರ ಛೋಟೆ ಲಾಲ್ ಯಾದವ್ ಮತ್ತು ಶೂಟಿಂಗ್ ತರಬೇತುದಾರ್ತಿ ನೇಹಾ ಚವಾಣ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಜೀವಮಾನ ಸಾಧನೆ ವಿಭಾಗದಲ್ಲಿ ಬಾಕ್ಸಿಂಗ್ ತರಬೇತುದಾರ ಧರ್ಮೇಂದ್ರ ಸಿಂಗ್ ಯಾದವ್ ಮತ್ತು ಕುಸ್ತಿ ತರಬೇತುದಾರ ವೀರೇಂದ್ರ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗಿದೆ.
ಇನ್ನು ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಪುಣೆಯ ಆರ್ಮಿ ಪ್ಯಾರಾಲಿಂಪಿಕ್ ನೋಡ್ ಸಂಸ್ಥೆಗೆ ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹನ ಪ್ರಶಸ್ತಿ ನೀಡಲಾಗಿದೆ. ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕ್ರೀಡಾ ಕಾರ್ಯದರ್ಶಿ ಹರಿ ರಂಜನ್ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





