ಕಥೆ -  ಶ್ರೀನಾಥ್‌ ಎಚ್‌.ಸಿ.

ಎಲ್ಲರಂತೆ ಮಾಮೂಲಾಗಿ ಅಲ್ಲದೆ, ತಾನೂ ಆದರ್ಶ ವಿವಾಹವಾಗಬೇಕು ಎಂದು ಆಸೆಪಟ್ಟಿದ್ದ ರಾಕೇಶನಿಗೆ ತಾಯಿ ರಾಧಮ್ಮ ಅತಿಯಾದ ಹುಚ್ಚು ಬೇಡ ಎಂದು ಅಡ್ಡಿಪಡಿಸಿದರು. ಮುಂದೆ ಪವಾಡದಂತೆ ರಾಕೇಶ್‌ ಒಬ್ಬ ಅಂಗವಿಕಲ ಹುಡುಗಿಯನ್ನು ಮದುವೆ ಆದದ್ದಾದರೂ ಹೇಗೆ.....?

``ಗಂಟೆ 8 ಆಯ್ತು ಎದ್ದೇಳು ರಾಕೇಶ್‌, ದಿನಾ ಆಫೀಸಿಗೆ ಲೇಟ್‌ ಆಯ್ತು ಅಂತ ಓಡ್ತೀಯಾ....?'' ಎಂದು ರಾಧಮ್ಮ ಕೂಗುತ್ತಿದ್ದಂತೆ, ರಾಕೇಶ್‌ ಕಣ್ಣು ಕೈ ಉಜ್ಜಿಕೊಂಡು ಮುಖಕ್ಕೆ ಒತ್ತಿ ರಾಯರ ಫೋಟೋಗೆ ನಮಸ್ಕರಿಸಿ ಎದ್ದು ಕುಳಿತ.

ನಂತರ ಅವನು ಬೇಗ ಸಿದ್ಧನಾಗಿ ತಿಂಡಿಗೆ ಬಂದು ಕೂತಾಗ ರಾಧಮ್ಮ ನಿಧಾನವಾಗಿ, ``ರಾಕೇಶ್‌, ಒಂದು ಒಳ್ಳೆ ಜಾತಕ ಬಂದಿದೆ. ತುಂಬಾ ಚೆನ್ನಾಗಿ ಹೊಂದಿಕೊಂಡಿದೆ. ಹುಡುಗಿ ತುಂಬಾ ಚೆನ್ನಾಗಿದ್ದಾಳೆ ನೋಡೋ ಇಲ್ಲಿ.....'' ಎಂದು ತೋರಿಸಿದರು.

ಅಮ್ಮನ ಒತ್ತಾಯಕ್ಕೆ ಫೋಟೋ ಕಡೆ ನೋಡಿದ ರಾಕೇಶ್‌, ``ಹೌದಮ್ಮಾ.... ತುಂಬಾ ಚೆನ್ನಾಗಿದ್ದಾಳೆ. ಆದರೆ ನನಗೆ ಈಗ 28 ವರ್ಷ. ಇನ್ನು ಎರಡು ವರ್ಷವಾದರೂ ಸ್ವಲ್ಪ ಆರಾಮವಾಗಿ ಇರುತ್ತೇನೆ. ಅಲ್ಲಿಯವರೆಗೂ ನನ್ನನ್ನು ಕಾಡಿಸಬೇಡ.....'' ಎಂದು ಕಡ್ಡಿ ತುಂಡಾದಂತೆ ಹೇಳಿಬಿಟ್ಟ.

ರಾಧಮ್ಮ ದುಃಖ ತಡೆಯಲಾರದೆ, ``ಯಾಕೋ ಹೀಗೆ ಮಾಡ್ತೀಯಾ....? ನಿನಗೆ 28 ಆದರೆ ನನಗೆ 60 ಕಣೋ, ನಾನು ಇನ್ನು ಎಷ್ಟು ದಿಸ ಅಂತ ನಾನು ಗಟ್ಟಿಯಾಗಿ ಇರೋಕಾಗುತ್ತೆ...? ಅದೂ ಅಲ್ಲದೆ ಇರೋ ಒಬ್ಬ ಮಗನ ಮದುವೆ ಕಣ್ತುಂಬ ನೋಡಿ, ಒಂದೆರಡು ಮೊಮ್ಮಕ್ಕಳನ್ನು ಆಡಿಸಿಕೊಟ್ಟು ನಂತರ ಕಣ್ಮುಚ್ಚಬೇಕು ಎಂಬುದು ನನ್ನ ಆಸೆ, ಯಾಕೋ ನೀನು ನನ್ನನ್ನು ಅರ್ಥ ಮಾಡಿಕೊಳ್ಳಲ್ಲ....? ನಿಮ್ಮಪ್ಪ ನಿನ್ನನ್ನು ನನ್ನ ಜವಾಬ್ದಾರಿಗೆ ಒಪ್ಪಿಸಿ ಹೋಗಿಬಿಟ್ಟರು. ಬೇಗ ನಿನಗೊಂದು ಮದುವೆ ಮಾಡಿದರೆ ನನ್ನ ಜವಾಬ್ದಾರಿ ಮುಗಿಯುತ್ತದೆ. ಆಮೇಲೆ ರಾಮಕೃಷ್ಣ ಅಂತ ಇರುತ್ತೇನೆ,'' ಎಂದು ಗೋಳಾಡಿದರು.

ಯಾಕೋ ರಾಕೇಶನಿಗೆ ಅಮ್ಮನ ಬಗ್ಗೆ ಕನಿಕರವಾಯಿತು, ``ಸರಿಯಮ್ಮಾ..... ಇನ್ನೊಂದು ವರ್ಷವಾದರೂ ಸಮಯ ಕೊಡು,'' ಎಂದ.

ರಾಧಮ್ಮನರ ಮನಸ್ಸಿಗೆ ಏನೋ ಒಂದು ರೀತಿ ಅಲ್ಪ ಸಮಾಧಾನ ಆದಂತಾಗಿ, ``ನೋಡು ರಾಕೇಶ್‌, ಇನ್ನು ಆರು ತಿಂಗಳಿಗೆ ಹುಡುಗಿ ಹುಡುಕುತ್ತೇನೆ. ಹುಡುಗಿ ಸೆಟ್‌ ಆದ ಮೇಲೆ ಮದುವೆ ಮಾಡಲು ಅವರಿಗೆ ಆರು ತಿಂಗಳ ಸಮಯವಾದರೂ ಕೊಡಬೇಕಾಗುತ್ತದೆ. ಅಲ್ಲಿಗೆ ನಿನ್ನ ಒಂದು ವರ್ಷದ ವಾಯಿದೆ ತೀರುತ್ತದೆ. ಇನ್ನು ಹೆಚ್ಚು ತರಲೆ ಮಾಡಬೇಡ,'' ಎಂದು ತುಸು ಗಂಭೀರವಾಗಿ ಹೇಳಿದರು.

jabjab-wah-muskraye-story

ಸರಿ ಎಂದು ತಲೆ ಅಲ್ಲಾಡಿಸಿ ಬೈಕ್‌ ಏರಿ ಆಫೀಸಿಗೆ ಹೊರಟ. ಸಂಜೆ ಆಫೀಸ್‌ ನಿಂದ ಬರುವಾಗ ಟೌನ್‌ ಹಾಲ್ ‌ಬಳಿ ವಿಜಯಾನಂದ ಸ್ವಾಮಿಗಳ ಪ್ರವಚನ ನಡೆಯುತ್ತಿತ್ತು. ಅವರೆಂದರೆ ರಾಕೇಶನಿಗೆ ಬಹಳ ಇಷ್ಟ. ಅವರು ಸ್ವಾಮಿಗಳಾಗಿದ್ದರೂ ಕೂಡ ಜನರಿಗೆ ಉಪಯುಕ್ತವಾಗುವಂತ ಲೌಕಿಕ ಸಲಹೆ, ಸಮಸ್ಯೆಗಳಿಗೆ ಉಪಾಯಗಳನ್ನು ಕೊಡುತ್ತಿದ್ದರು.

ಅಂದು ಸ್ವಾಮೀಜಿ, ಮದುವೆಯ ಬಗ್ಗೆ ಮಾತನಾಡುತ್ತಾ, `ಎಲ್ಲಾ ಹುಡುಗರು ಚೆನ್ನಾಗಿರುವ ಹುಡುಗಿ ಬೇಕು, ದುಡಿಯೋ ಹುಡುಗಿ ಬೇಕು, ಅದು ಬೇಕು, ಇದು ಬೇಕು ಇತ್ಯಾದಿ ಬಯಕೆಗಳ ಬೆಟ್ಟವನ್ನೇ ಹೊತ್ತಿರುತ್ತಾರೆ. ಅದೇ ಪ್ರಕಾರ ಹುಡುಗಿಯರು ಕೂಡ ಹುಡುಗ ಚೆನ್ನಾಗಿರಬೇಕು, ದೊಡ್ಡ ಕೆಲಸದಲ್ಲಿರಬೇಕು, ಸಿಕ್ಕಾಪಟ್ಟೆ ಸಂಬಳ ಬರಬೇಕು, ಕಾರು, ಬಂಗಲೆ ಇತ್ಯಾದಿ ಇರಬೇಕು.... ಹೀಗೆ ಎಲ್ಲರೂ ಅತಿಯಾದ ಆಸೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಬಿಟ್ಟರೆ ಅವರೆಲ್ಲಾ ಹೇಗೆ ತಮ್ಮ ಗುರಿ ಸಾಧಿಸಲು ಸಾಧ್ಯ....?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ