ಮಾನ್‌ ಸೂನ್‌ ನಲ್ಲಿ ಪಿಂಪಲ್ಸ್ ಹಾಗೂ ಆಯ್ಲಿ ಸ್ಕಿನ್‌ ನ ಸಮಸ್ಯೆಗಳಿಂದ ಮುಕ್ತಿ ಹೊಂದುವುದು ಹೇಗೆ ಎಂದು ವಿವರವಾಗಿ ತಿಳಿಯೋಣವೇ...?

ಮಳೆಗಾಲದ ದಿನಗಳು ಬಿರು ಬೇಸಿಗೆಯಿಂದ ಹಿತಕರ ಸುಖಾನುಭವ ನೀಡಿದರೂ, ನಮ್ಮ ಚರ್ಮಕ್ಕೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದರಿಂದ ಚರ್ಮ ಬೇಗ ಆಯ್ಲಿ ಆಗುತ್ತದೆ. ಹಾಗಾಗಿ ಚರ್ಮದಲ್ಲಿ ಆ್ಯಕ್ನೆ, ರಾಶೆಸ್‌, ಮೊಡವೆಗಳು ಮಾಮೂಲಿ ಆಗಿಬಿಡುತ್ತವೆ. ಸಕಾಲಕ್ಕೆ ಎಚ್ಚೆತ್ತು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ, ಮುಂದೆ ಚರ್ಮಕ್ಕೆ ದೊಡ್ಡ ಹಾನಿ ತಪ್ಪಿದ್ದಲ್ಲ. ಹಾಗಾದರೆ ಈ ಸಮಸ್ಯೆಗೆ ಏನೇನು ಮನೆಮದ್ದುಗಳಿವೆ ಎಂದು ವಿವರವಾಗಿ ತಿಳಿದುಕೊಳ್ಳೋಣವೇ.....? : ಹೆಸರುಕಾಳು ಮೆಂತ್ಯದ ಸ್ಕಿನ್‌ ಕ್ಲೆನ್ಸಿಂಗ್‌ ಪೌಡರ್‌ : ಮಳೆಗಾಲದಲ್ಲಿ ಎಲ್ಲಕ್ಕಿಂತ ಮುಖ್ಯವಾದುದು ಎಂದರೆ, ಚರ್ಮವನ್ನು ನಿಯಮಿತವಾಗಿ ಸ್ವಚ್ಛ ಶುಭ್ರವಾಗಿ ಇರಿಸಿಕೊಳ್ಳುವಿಕೆ. ಆಗ ಬೆವರು, ಧೂಳು, ಕೊಳೆ ಇತ್ಯಾದಿ ಅದರ ಮೇಲೆ ಜಮೆಗೊಳ್ಳುವ ತೊಂದರೆ ತಗ್ಗುತ್ತದೆ. ಆಗ ರೋಮರಂಧ್ರ ಕ್ಲೋಸ್‌ ಆಗುವ ರಗಳೆ ಇಲ್ಲ. ಇದಕ್ಕಾಗಿ ಈ ಕೆಳಗಿನಂತೆ ಸ್ಪೆಷಲ್ ಸ್ಕಿನ್‌ ಕ್ಲೀನಿಂಗ್ ಪೌಡರ್‌ ತಯಾರಿಸಿ, ಇಡೀ ಮಳೆಗಾಲ ಪೂರ್ತಿ ಬಳಸಿರಿ.

ವಿಧಾನ : ಹೆಸರುಕಾಳು, ಕಡಲೆಕಾಳು, ಮೆಂತ್ಯ (ತಲಾ 2-2 ಚಮಚ, ಹುರಿಯದೇ ಹಾಗೆಯೇ ಇದನ್ನು ಪುಡಿ ಮಾಡಿಡಿ) ಪೌಡರ್ ಬೆರೆಸಿ ಒಂದು ಏರ್‌ ಟೈಟ್‌ಕಂಟೇನರ್‌ ಗೆ ತುಂಬಿಸಿಡಿ. ಪ್ರತಿದಿನ ಬೆಳಗ್ಗೆ ಎದ್ದು ತಣ್ಣೀರಲ್ಲಿ ಮುಖ ತೊಳೆದು, ಒಂದು ಚಮಚ ಈ ಮಿಶ್ರಣಕ್ಕೆ ಗುಲಾಬಿ ಜಲ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆ ಹಾಗೇ ಬಿಟ್ಟು, ನಂತರ ಮೃದುವಾಗಿ ಮಸಾಜ್ ಮಾಡಿ, ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಡೀಪ್‌ ಕ್ಲೆನ್ಸಿಂಗ್‌ ಮಾಡುತ್ತದೆ, ಆ್ಯಕ್ನೆ ಮೊಡವೆಗಳ ಗೊಡವೆ ತಪ್ಪಿಸುತ್ತದೆ.

ರಾತ್ರಿ ನಿಂಬೆ ರಸಕ್ಕೆ ಸೈಂಧವ ಲವಣ ಬೆರೆಸಿ ಕುಡಿಯಿರಿ.

ಬೆಳಗ್ಗೆ ಹನೀ ಎಗ್‌ ಪ್ಯಾಕ್‌ ಹಚ್ಚಿಕೊಳ್ಳಿ : ಹೊಳೆಹೊಳೆಯುವ ಚರ್ಮ ಹಾಗೂ ಅದರ ಆಂತರಿಕ ಡೀಪಾಕ್ಸ್ ಗಾಗಿ ಈ ಉಪಾಯ ಅನುಸರಿಸುವುದು ಬಲು ಹಿತಕರ. ಇದು ದೇಹದ ಆಂತರಿಕ ಭಾಗದ ಉಷ್ಣತೆ ತಗ್ಗಿಸುತ್ತದೆ, ಅದರಿಂದ ಚರ್ಮದ ಮೇಲ್ಭಾಗದಲ್ಲಿ ಉತ್ತಮ ಪರಿಣಾಮ ಕಾಣುತ್ತದೆ.

ವಿಧಾನ : ರಾತ್ರಿ ಮಲಗುವ ಮುನ್ನ 1 ಲೋಟ ತಣ್ಣೀರಿಗೆ ಅರ್ಧ ಸಣ್ಣ ಚಮಚ ಸೈಂಧವ ಲವಣ, 1 ಹೋಳು ನಿಂಬೆಹಣ್ಣು ಹಿಂಡಿಕೊಂಡು ಚೆನ್ನಾಗಿ ಕದಡಿ ಕುಡಿಯಿರಿ. ಇನ್ನೊಂದು ಹೋಳು ನಿಂಬೆಹಣ್ಣನ್ನು ಹಿಂಡಿಕೊಂಡು, ಇದಕ್ಕೆ 1 ಚಮಚ ಜೇನುತುಪ್ಪ ಹಾಗೂ ಮೊಟ್ಟೆಯ ಹಳದಿ ಭಾಗ ಬೆರೆಸಿ ಚೆನ್ನಾಗಿ ಗೊಟಾಯಿಸಿ, ಮಾರನೇ ಬೆಳಗ್ಗೆ ಮುಖಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಹೀಗೆ 6-8 ವಾರಗಳ ಕಾಲ, ಪ್ರತಿದಿನ ಸತತ ಮುಂದುವರಿಸಿ. ಇದರಿಂದ ಚರ್ಮ ಎಷ್ಟೋ ತಿಳಿಯಾಗಿ, ಹೊಳಪು ಗಳಿಸುತ್ತದೆ. ಈ ಆರೈಕೆ ಚರ್ಮದ ಡೀಪ್‌ ಕ್ಲೆನ್ಸಿಂಗ್‌ ಗೆ ಪೂರಕ, ಇದರಿಂದ ಮುಖದಲ್ಲಿನ ರಾಶೆಸ್‌, ಆ್ಯಕ್ನೆ, ಮೊಡವೆಗಳ ರಗಳೆ ತಪ್ಪುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ