ವಯಸ್ಸು ಮೀರಿದ ಮಹಿಳೆಯರು ಒಮ್ಮೊಮ್ಮೆ ಹೊಳೆಯುವ ಮೇಕಪ್‌ ಮತ್ತು ಉಡುಪುಗಳಿಂದಾಗಿ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ. ಕೆಳಗಿನ ಸೂಚನೆಗಳನ್ನು ಪಾಲಿಸಿದರೆ ಅಂತಹ ಮಹಿಳೆಯರೂ ಕೂಡ ಫಿಟ್‌ ಆಗಿ ಯುವತಿಯರಂತೆ ಕಾಣಿಸಬಹುದು……!

ನಿಮ್ಮ ಸಂಬಂಧಿಕರು, ಚಿಕ್ಕಮ್ಮ, ಸೋದರತ್ತೆ, ಅತ್ತಿಗೆ, ಅಕ್ಕ, ತಂಗಿ ಅಥವಾ ನಿಮ್ಮ ನೆರೆಹೊರೆಯ ಆಂಟಿಗಳ ಹೊಳೆಯುವ ಮೇಕಪ್‌ ಕಂಡು ಈ ಮುದಿಗೂಬೆಗೇನ್ಬಂತು? ಎಂದು ಗೊಣಗುತ್ತಾರೆ. 65 ವರ್ಷದ ಚಿಕ್ಕಮ್ಮನ ತುಟಿಗಳ ಮೇಲೆ ಗಾಢ ಕೆಂಪು ಬಣ್ಣದ ಲಿಪ್‌ಸ್ಟಿಕ್‌ ಕಂಡು ಬಲವಂತವಾಗಿ ನಗುವುದು ಸ್ವಾಭಾವಿಕವೇ. ಸ್ಥೂಲಕಾಯದ ಮಮ್ಮಿ, ಪೆನ್ಸಿಲ್‌ ಹೀಲ್‌ನ ಸ್ಯಾಂಡಲ್ಸ್ ಧರಿಸಿ ವೈಯಾರದಿಂದ ನಡೆಯುತ್ತಾಳೆ. ಇನ್ನೇನು ಬೀಳುವಂತೆ ನಡೆಯುತ್ತಿರುತ್ತಾಳೆ. ಅದನ್ನು ಕಂಡು ಎಲ್ಲರಿಗೂ ಒಳ್ಳೆಯ ಮೋಜಿನ ದೃಶ್ಯ ಕಂಡುಬರುತ್ತದೆ.

ಗಾಢ ಶ್ಯಾಮಲವರ್ಣದ, ಸ್ಥೂಲಕಾಯದ ಚಿಕ್ಕಮ್ಮ ಯಾವುದಾದರೂ ಪಾರ್ಟಿಯಲ್ಲಿ ಹಳದಿ ಸೀರೆ ಉಟ್ಟಿರುವುದನ್ನು ಕಂಡು ಜೋರಾಗಿ ನಗುತ್ತಾರೆ. ಹಲವಾರು ಸಂದರ್ಭಗಳಲ್ಲಿ ವಯಸ್ಸಾದ ಮಹಿಳೆಯರು ಸಂಬಂಧಿಕರು ಮತ್ತು ನೆರೆಯವರ ಉಡುಪು ಮತ್ತು ಮೇಕಪ್‌ ಕಂಡು ನಗುವಿನೊಂದಿಗೆ ನಾಚಿಕೆಯನ್ನೂ ಅನುಭವಿಸುತ್ತಿರುತ್ತಾರೆ.

ಅಂದಹಾಗೆ ಹೆಚ್ಚಿನ ಮಹಿಳೆಯರಿಗೆ ತಮ್ಮ ಜೀವನದ ವಸಂತ ಸಾಕಷ್ಟು ವರ್ಷಗಳ ಮೊದಲೇ ತೀರಿಹೋಗಿದೆ ಎಂದು ತಿಳಿಯುವುದೇ ಇಲ್ಲ. ಹೆಚ್ಚುತ್ತಿರುವ ಹಾಗೂ ಇಳಿಯಸ್ಸಿನ ಅನುಭವ ಆಗುವುದೇ ಇಲ್ಲ ಅಥವಾ ಅವರು ತಮ್ಮ ವಯಸ್ಸು ಹಾಗೂ ನೆರಿಗೆಗಳನ್ನು ಮುಚ್ಚಲು ಹೊಳೆಯುವ ಉಡುಪು ಧರಿಸಬಹುದು ಹಾಗೂ ಗಾಢ ಮೇಕಪ್‌ ಮಾಡಿಕೊಳ್ಳುತ್ತಿರಬಹುದು.

ವಿಷಯ ಏನೇ ಇರಲಿ, ಹೆಚ್ಚುತ್ತಿರುವ ವಯಸ್ಸನ್ನು ಮೇಕಪ್‌ ಮತ್ತು ಬಣ್ಣಬಣ್ಣದ ಬಟ್ಟೆಗಳಿಂದ ಮುಚ್ಚಿಕೊಳ್ಳುವ ಅವರ ವಿಧವಿಧವಾದ ಪ್ರಯತ್ನಗಳು ಹಲವು ಬಾರಿ ಅವರನ್ನು ನಗೆಪಾಟಲಿಗೆ ಗುರಿ ಮಾಡುತ್ತವೆ.

ವಯಸ್ಸಿಗೆ ತಕ್ಕಂತೆ ಧರಿಸುವುದು ಅಗತ್ಯ

ಬ್ಯೂಟಿ ಎಕ್ಸ್ ಪರ್ಟ್‌ ಸೀಮಾ ಹೀಗೆ ಹೇಳುತ್ತಾರೆ, ಹೆಚ್ಚುತ್ತಿರುವ ವಯಸ್ಸಿನ ಮಹಿಳೆಯರು ಕಾಲದ ಹೊಡೆತಗಳನ್ನು ಸೋಲಿಸಿ ತಾವು ಯಾವಾಗಲೂ ತರುಣಿಯರಾಗಿರಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು. ವಯಸ್ಸಿಗೆ ತಕ್ಕಂತೆ ಮೇಕಪ್‌ ಹಾಗೂ ಉಡುಪು ಧರಿಸುವುದರಿಂದ ಅವರು ಯಾವಾಗಲೂ ಸ್ಮಾರ್ಟ್‌ ಆಗಿರಬಹುದು. ಅಂತಹ ಉಡುಪಿನಿಂದ ಅವರು ತಮ್ಮನ್ನು ರಾಯಲ್ ಎಂದುಕೊಳ್ಳುತ್ತಾರೆ. ಅವರ ಸಂಬಂಧಿಕರು ಮತ್ತು ಗೆಳೆಯರೂ ಸಹ ಪಾರ್ಟಿಗಳಲ್ಲಿ ಅವರನ್ನು ತಮಾಷೆ ಮಾಡುವುದಿಲ್ಲ. ವಯಸ್ಸಿಗೆ ತಕ್ಕಂತೆ ಉಡುಪನ್ನು ಬದಲಿಸುವುದು ಅವಶ್ಯಕ.

ಮೇಕಪ್‌ ಮತ್ತು ಬಟ್ಟೆಗಳ ಆಯ್ಕೆ

40-45 ವರ್ಷಗಳ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ನಿರ್ಲಕ್ಷ್ಯದಿಂದಿರುವುದನ್ನು ನೋಡಬಹುದು. ಅದರಿಂದಾಗಿ ಅವರ ಶರೀರ ಕುರೂಪ ಹಾಗೂ ಸ್ಥೂಲವಾಗುತ್ತದೆ. ಕುರೂಪಿ ಶರೀರದ ಮೇಲೆ ಯಾವುದೇ ರೀತಿಯ ಉಡುಪು ಒಪ್ಪುವುದಿಲ್ಲ.

ಫ್ಯಾಷನ್‌ ಡಿಸೈನರ್‌ ಅನಿತಾ ಹೀಗೆ ಹೇಳುತ್ತಾರೆ, ನಗರಗಳಲ್ಲಿ ವಯಸ್ಸು ಮೀರಿದ ಮಹಿಳೆಯರು ದಪ್ಪಗಾಗಿದ್ದೂ, ಜೀನ್ಸ್ ಟಾಪ್‌ ಹಾಗೂ ಲೆಗ್ಗಿಂಗ್ಸ್ ಇತ್ಯಾದಿ ಧರಿಸುತ್ತಾರೆ. ಅಂತಹ ಮಹಿಳೆಯರಿಗೆ ವಯಸ್ಸು ಮತ್ತು ಶರೀರದ ರಚನೆಗೆ ತಕ್ಕಂತೆ ಅಂತಹ ಉಡುಪು ಒಪ್ಪುವುದಿಲ್ಲ ಎಂದು ಹೇಳುವವರು ಯಾರು?

ನಗೆಪಾಟಲು

40ನೇ ವಯಸ್ಸಿನ ನಂತರ ಮಹಿಳೆಯರಿಗೆ ಎಕ್ಸ್ ಟ್ರಾ ಕೇರ್‌ ಅಗತ್ಯವಿದೆ. ಆಹಾರ ಸರಿಯಾಗಿ ಸೇವಿಸಿ ನಿಯಮಿತವಾಗಿ ಎಕ್ಸರ್‌ಸೈಜ್‌ ಮಾಡಿ ಅವರು ಶರೀರವನ್ನು ಸದೃಢ ಹಾಗೂ ಸ್ಮಾರ್ಟ್‌ ಆಗಿ ಮಾಡಿಕೊಳ್ಳಬಹುದು.

ಪೇಂಟಿಂಗ್‌ ಆರ್ಟಿಸ್ಟ್ ಆರತಿ ಹೀಗೆ ಹೇಳುತ್ತಾರೆ, ವಯಸ್ಸು ಮೀರಿದ ಮಹಿಳೆಯರು ತಮ್ಮನ್ನು ಸುಂದರವಾಗಿ ಕಾಣಿಸಿಕೊಳ್ಳುವ ಬದಲು ಸ್ಮಾರ್ಟ್‌ ಹಾಗೂ ರಾಯಲ್ ಆಗಿ ಕಾಣಿಸಲು ಪ್ರಯತ್ನಿಸಬೇಕು. ಇದರಿಂದ ಕುಟುಂಬ ಹಾಗೂ ಸಮಾಜದಲ್ಲಿ ಅವರ ಪರ್ಸನಾಲಿಟಿಯ ಬಗ್ಗೆ ಪ್ರಶಂಸೆ ಸಿಗುತ್ತದೆ. ಹೆವಿ ಮೇಕಪ್‌ ಮಾಡಿಕೊಂಡ ಹೆಚ್ಚಿನ ಮಹಿಳೆಯರು ನಗೆಪಾಟಲಿಗೆ ಗುರಿಯಾಗುತ್ತಾರೆ.

40 ವರ್ಷದ ನಂತರ ಮೇಕಪ್‌ ಮತ್ತು ಡ್ರೆಸ್ಸಿಂಗ್‌ ಪರ್ಸನಾಲಿಟಿ ಹೊಳೆಯುವಂತೆ ಮಾಡಬೇಕು. ದಿ. ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಪರ್ಸನಾಲಿಟಿ ನೆನಪು ಮಾಡಿಕೊಳ್ಳಿ. ತೆಳು ಬಣ್ಣದ ಸೀರೆಯನ್ನು ಶಿಷ್ಟತೆಯಿಂದ ಧರಿಸಿ, ಕೂದಲಿನ ಮಧ್ಯೆ ನಾಜೂಕಾಗಿ ಬಿಟ್ಟ ಬಿಳಿಯ ಕೂದಲು ಅವರ ಹಿರಿಮೆಯನ್ನು ಇನ್ನಷ್ಟು ಪಟ್ಟು ಹೆಚ್ಚಿಸಿತ್ತು.

ಬ್ಯೂಟೀಶಿಯನ್‌ ಸಂಜನಾ ಹೀಗೆ ಹೇಳುತ್ತಾರೆ, ತಮ್ಮನ್ನು ಹೆಚ್ಚು ಸುಂದರವಾಗಿ ಹಾಗೂ ವಿಭಿನ್ನವಾಗಿ ಕಾಣಿಸಿಕೊಳ್ಳಲು ವಯಸ್ಸು ದಾಟಿದ ಮಹಿಳೆಯರು ಹೊಳೆಯುವ ಬಟ್ಟೆಗಳನ್ನು ಧರಿಸುತ್ತಾರೆ. ಕಣ್ಣುಗಳಿಗೆ ಚುಚ್ಚುವಂತಹ ಮೇಕಪ್‌ ಮಾಡಿಕೊಳ್ಳುತ್ತಾರೆ. ಮಹಿಳೆಯರು ತಮ್ಮ ಸ್ಕಿನ್‌ ಟೋನ್‌ಗೆ ಅನುಗುಣವಾಗಿಯೇ ಮೇಕಪ್‌ ಹಾಗೂ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ನಿಮ್ಮನ್ನು ಫಿಟ್‌ ಆಗಿಡುವುದು ಹೇಗೆ?

ಸ್ಕಿನ್‌ ಸ್ಪೆಷಲಿಸ್ಟ್ ಡಾಕ್ಟರ್‌ ಪ್ರಕಾಶ್‌ ಹೀಗೆ ಹೇಳುತ್ತಾರೆ, ವಯಸ್ಸು ಹೆಚ್ಚಾದಂತೆ ಚರ್ಮದ ಬಿಗಿತ ಕಡಿಮೆಯಾಗುತ್ತದೆ. ಕಣ್ಣುಗಳ ಬಳಿ ಡಾರ್ಕ್‌ ಸರ್ಕಲ್ಸ್ ಉಂಟಾಗುತ್ತವೆ. ಕಲೆಗಳು ಮತ್ತು ನೆರಿಗೆಗಳು ಹೆಚ್ಚಾಗುತ್ತವೆ.

ನಿಯಮಿತವಾಗಿ ಫೇಶಿಯಲ್, ಬಾಡಿ ಮಸಾಜ್‌ ಇತ್ಯಾದಿ ಟ್ರೀಟ್‌ಮೆಂಟ್‌ಗಳ ಮೂಲಕ ಹೆಚ್ಚುತ್ತಿರುವ ವಯಸ್ಸಿನಲ್ಲಿ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡಬಹುದು. ಆದರೆ ಅವುಗಳಿಂದ ಸಂಪೂರ್ಣವಾಗಿ ರಕ್ಷಿಸಿಕೊಳ್ಳಲಾಗುವುದಿಲ್ಲ. ಜಂಕ್‌ಫುಡ್‌ ಬದಲು ಆರೋಗ್ಯಕರ ಆಹಾರ ಸೇವಿಸಿ ಮತ್ತು ಯಾರಾದರೂ ಡಯೇಟಿಶಿಯನ್‌ರಿಂದ ಡಯೆಟ್‌ ಚಾರ್ಟ್‌ ಮಾಡಿಸಿ ಅದರಂತೆ ಅನುಸರಿಸಿ.

ಇದನ್ನೂ ಗಮನಿಸಿ

ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಲು ವಯಸ್ಸು ಮೀರಿದ ಮಹಿಳೆಯರು ಹೊಳಪಿನ ಬಟ್ಟೆಗಳನ್ನು ಧರಿಸುವುದರ ಜೊತೆ ಜೊತೆಗೆ ಹೆವಿ ಮೇಕಪ್‌ ಮಾಡಿಕೊಳ್ಳುತ್ತಾರೆ. ಆದರೆ ದೈಹಿಕ ಫಿಟ್ನೆಸ್‌ ಬಗ್ಗೆ ನಿರ್ಲಕ್ಷ್ಯತೆ ತೋರಿಸುತ್ತಾರೆ. ನೀವು ಶಾರೀರಿಕವಾಗಿಯೂ ಫಿಟ್‌ ಆಗಿದ್ದರೆ ಮಾತ್ರ ಬ್ಯೂಟಿ ಕ್ವೀನ್‌ ಆಗಬಹುದು. ಅದಕ್ಕಾಗಿ ಉತ್ತಮ ಡಯೆಟ್‌ ಹಾಗೂ ನಿಯಮಿತ ವ್ಯಾಯಾಮ ಅಗತ್ಯವಿದೆ. ಒಂದು ವೇಳೆ ಶರೀರ ಸದೃಢವಾಗಿದ್ದರೆ ಯಾವುದೇ ಸಂದರ್ಭದಲ್ಲೂ ನೀವು ಹೊಳೆಯುವ ಉಡುಪು ಧರಿಸಿದರೂ ಅದು ಕೆಟ್ಟದೆನಿಸುವುದಿಲ್ಲ. ಕುರೂಪಿ ಶರೀರದ ಮೇಲೆ ಹೊಳೆಯುವ ಉಡುಪುಗಳನ್ನು ಧರಿಸಿದರೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ.

ಆರೋಗ್ಯವಾಗಿದ್ದುಕೊಂಡೇ ಮಹಿಳೆಯರು ತಮ್ಮನ್ನು ಎಲ್ಲ ರೀತಿಯಿಂದ ಫಿಟ್‌ ಮತ್ತು ಹಿಟ್‌ ಆಗಿಟ್ಟುಕೊಳ್ಳಬಹುದು. ಸ್ಮಾರ್ಟ್‌ ಶರೀರದ ಮೇಲೆ ವಯಸ್ಸಿಗೆ ತಕ್ಕಂತೆ ರಾಯಲ್ ಉಡುಪು ಮತ್ತು ತೆಳು ಮೇಕಪ್‌ನೊಂದಿಗೆ ಅವರು ಪಾರ್ಟಿಗಳಲ್ಲಿ ಜೀವಂತಿಕೆಯಿಂದ, ವೈಭವದಿಂದ ಪ್ರಭಾವಿಗಳಾಗಿ ಕಂಡುಬರುತ್ತಾರೆ. ಆದ್ದರಿಂದ ಚಿಕ್ಕಮ್ಮಂದಿರು, ಅತ್ತಿಗೆಯರು, ಸೋದರತ್ತೆಯರು ಮತ್ತು ಎಲ್ಲ ಆಂಟಿಯರಲ್ಲಿ ಪ್ರಾರ್ಥನೆ ಏನೆಂದರೆ ನಿಮ್ಮ ವಯಸ್ಸಿಗೆ ತಕ್ಕಂತೆ ಉಡುಪು ಮತ್ತು ಮೇಕಪ್‌ ನಿಮ್ಮದಾಗಿಸಿಕೊಳ್ಳಿ ಮತ್ತು ಸ್ಮಾರ್ಟ್‌ ಎನ್ನಿಸಿಕೊಳ್ಳಿ, ಬ್ಯೂಟಿ ಕ್ವೀನ್‌ ಎಂದು ಕರೆಸಿಕೊಳ್ಳಲು ಅಂಧಾನುಕರಣೆ ಬೇಡ.

– ಕೆ. ಸುಮನಾ 

– ತೆಳು ಬಣ್ಣ ಹಾಗೂ ಸ್ಕಿನ್‌ ಟೋನ್‌ಗೆ  ತಕ್ಕಂತೆ ಉಡುಪು ಧರಿಸಿ.

– ಶರೀರದ ರಚನೆಗೆ ತಕ್ಕಂತೆ ಉಡುಪುಗಳನ್ನು ಆಯ್ಕೆ ಮಾಡಿ.

– ನಿಯಮಿತವಾಗಿ ವ್ಯಾಯಾಮ ಮಾಡಿ.

– ಹೊಟ್ಟೆ, ಸೊಂಟ, ಎದೆ, ಕತ್ತು  ಇತ್ಯಾದಿಗಳ ವ್ಯಾಯಾಮ ಮಾಡಿ.

– ಸಮಯಕ್ಕೆ ಸರಿಯಾಗಿ ಊಟ ಮಾಡಿ. ರಾತ್ರಿ ಊಟದ ನಂತರ ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ.

– ಜಂಕ್‌ ಫುಡ್‌ ಬದಲು ಹೆಲ್ದಿ ಫುಡ್‌ ತೆಗೆದುಕೊಳ್ಳಿ.

– ಮಲಗುವ ಮೊದಲು ಸ್ಕಿನ್‌ಗೆ ಕ್ಲೆನ್ಸರ್‌ ಹಾಕಿ ಸ್ವಚ್ಛಗೊಳಿಸಿ.

– ಯಾವ ಕಾಯಿಲೆಯನ್ನು ಅಲಕ್ಷಿಸದೆ ಕೂಡಲೇ ಚಿಕಿತ್ಸೆ ಮಾಡಿಸಿ.

– ಮನೆ, ಕುಟುಂಬದ ಕೆಲಸದ ಒತ್ತಡದಲ್ಲಿ ಆಹಾರದ ಬಗ್ಗೆ ನಿರ್ಲಕ್ಷ್ಯ ಬೇಡ.

– ಸುಂದರವಾಗಿ ಅಲ್ಲ. ಸ್ಮಾರ್ಟ್‌ ಆಗಿ ಕಾಣಲು ಪ್ರಯತ್ನಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ