ಗರ್ಭಾವಸ್ಥೆಯಂತಹ ಸೂಕ್ಷ್ಮ ಸ್ಥಿತಿ ಇರುವಾಗ ಯಾವ ರೀತಿಯ ಆಹಾರ ಸೇವಿಸುವುದರಿಂದ ಗರ್ಭಿಣಿ ಮತ್ತು ಅವಳ ಮಗುವಿಗೆ ಹೆಚ್ಚು ಲಾಭ ಎಂಬುದನ್ನು ವಿವರವಾಗಿ ಗಮನಿಸೋಣವೇ…….?

ಐವಿಎಫ್‌ ಮೂಲಕ ನಿಮ್ಮ ಗರ್ಭದಲ್ಲಿ ಒಂದು ಅಥವಾ ಹೆಚ್ಚು ಮಕ್ಕಳಿದ್ದರೆ ನೀವು ಎಂತಹ ಪರಿಸ್ಥಿತಿಯಲ್ಲೂ ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ನಿಮ್ಮದಾಗಿಸಿಕೊಳ್ಳಬೇಕು. ಏಕೆಂದರೆ ನಿಮಗೆ ಗರ್ಭಾವಸ್ಥೆಯ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಬಾರದು ಮತ್ತು ನೀವು ನಿಮ್ಮ ಮಗುವಿಗೆ ಉತ್ತಮ ಆರಂಭವನ್ನು ಕೊಡುವಂತಿರಬೇಕು.

ಹೆಲ್ದಿ ಡಯೆಟ್

ಆ ಸಂದರ್ಭದಲ್ಲಿ ನಿಮಗೆ ಹಸಿವಾದರೆ ತಾಜಾ ಹಣ್ಣುಗಳು, ಕಡಿಮೆ ಕೊಬ್ಬು ಇರುವ ಮೊಸರು ಅಥವಾ ಚೀಸ್‌, ಸ್ಯಾಂಡ್‌ವಿಚ್‌, ಮಾಂಸ, ಮೀನು ಇತ್ಯಾದಿ ಸೇವಿಸಿ. ಗರ್ಭದಲ್ಲಿ ಅವಳಿ ಮಕ್ಕಳಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ತಿನ್ನುವ ಅಗತ್ಯವಿಲ್ಲ. ಒಂದು ವೇಳೆ ನಿಮಗೆ ಅವಳಿ ಮಕ್ಕಳಿದ್ದರೆ, ನಿಮ್ಮ ಶರೀರದಲ್ಲಿ ರಕ್ತದ ಕೊರತೆ ಇದ್ದರೆ ಡಾಕ್ಟರ್‌ ನಿಮಗೆ ಐರನ್‌ ಸಪ್ಲಿಮೆಂಟ್ಸ್ ತೆಗೆದುಕೊಳ್ಳಲು ಹೇಳುತ್ತಾರೆ.

ಒಂದಕ್ಕಿಂತ ಹೆಚ್ಚು ಭ್ರೂಣಗಳು ಗರ್ಭದಲ್ಲಿದ್ದರೂ ತಾಯಿ ಆರೋಗ್ಯವಾಗಿದ್ದು ಆರೋಗ್ಯವಂತ ಮಕ್ಕಳಿಗೆ ಜನ್ಮ ಕೊಡಬಹುದು. ಆದರೆ ಈ ಸ್ಥಿತಿಯಲ್ಲಿ ತಾಯಿ ಮತ್ತು ಮಗುವಿಗೆ ಕೊಂಚ ಅಪಾಯ ಆಗಬಹುದು. ಅದರ ಬಗ್ಗೆ ಜಾಗರೂಕರಾಗಿರಬೇಕು. ನಿರ್ಧರಿಸಿದ ದಿನಾಂಕದಂದು ವೈದ್ಯರನ್ನು ಭೇಟಿಯಾಗುವುದು ಅಗತ್ಯ.

ಗಮನದಲ್ಲಿಡಿ, ಒಟ್ಟಿಗೆ ಹಲವು ಮಕ್ಕಳು ಜನಿಸುವಂತೆ ಗರ್ಭಧಾರಣೆ ಮಾಡಿಸುವುದು ವೈದ್ಯರ ಕೈಯಲ್ಲಿ ಇಲ್ಲ. ಐವಿಎಫ್‌ ಪ್ರಕ್ರಿಯೆಯ ಸಂದರ್ಭದಲ್ಲಿ ಏಕಕಾಲಕ್ಕೆ 1 ಕ್ಕಿಂತ ಹೆಚ್ಚು ಭ್ರೂಣಗಳನ್ನು ವರ್ಗಾಯಿಸುವುದು ಮತ್ತು ಕಸಿ ಮಾಡುವುದು ಒಂದು ಸ್ವನಿಯಂತ್ರಿತ ಪ್ರಕೃತಿಯಾಗಿದೆ. ಅದನ್ನು ಬದಲಿಸಲು ಆಗುವುದಿಲ್ಲ. ಅದರಲ್ಲಿ ಹಸ್ತಕ್ಷೇಪ ಮಾಡಲೂ ಆಗುವುದಿಲ್ಲ.

– ಡಾ. ಮೃದುಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ