ದಿನೇದಿನೇ ಮೇಕಪ್ ಮಾಡಿಕೊಳ್ಳುವುದು ಇದ್ದೇ ಇದೆ. ಆದರೆ ನೀವು ಬಯಸಿದಂಥ ಆ ಪರ್ಫೆಕ್ಟ್ ಲುಕ್ಸ್ ಬಂದಿದೆಯೇ? ಹಾಗಿದ್ದರೆ ಈ ಸಲಹೆಗಳನ್ನು ಮರೆಯದೆ ಅನುಸರಿಸಿ.....?
ನೀವು ನಿಮ್ಮ ಮೇಕಪ್ ಕಿಟ್‌ನಲ್ಲಿ ಲಭ್ಯವಿರುವ ಪ್ರಾಡಕ್ಟ್ಸ್ ನಿಂದಲೇ ಡಿಫರೆಂಟ್ ಮೇಕಪ್ ಮಾಡಿಕೊಳ್ಳಬಹುದು. ಬನ್ನಿ, ತಜ್ಞರ ಸಲಹೆಯಂತೆ ಅದನ್ನು ಪಡೆಯುವ ವಿಧಾನ ಅರಿಯೋಣ :
ಗ್ಲಾಸಿ ಮೇಕಪ್ ಫೇಸ್ : ಮೇಕಪ್ ಮಾಡುವ ಮೊದಲು ಅಗತ್ಯವಾಗಿ ಸ್ಕ್ರಬಿಂಗ್ ಮತ್ತು ಕ್ಲೆನ್ಸಿಂಗ್ ಮಾಡಿಸಿ. ನೀವು ಮೊದಲೇ ಫೇಶಿಯಲ್ ಮಾಡಿಸಿದ್ದರೆ, ಆಗ ಕೇವಲ ಕ್ಲೀನಿಂಗ್ ಮಾಡಿಸಿ. ನಿಮ್ಮ ಮುಖ ಡ್ರೈ ಆಗಿ ಕಾಣಿಸದಿರಲು, ಮೇಕಪ್ ಹೆಚ್ಚು ಕಾಲ ಉಳಿಯಬೇಕೆಂದರೆ, ಉತ್ತಮ ಕಂಪನಿಯ ಮಾಯಿಶ್ಚರೈಸರ್ ಬಳಸಬೇಕು. ಸಾಮಾನ್ಯವಾಗಿ ಮಹಿಳೆಯರು ಮಾಯಿಶ್ಚರೈಸರ್ ಅಥವಾ ಯಾವುದೇ ಬ್ಯೂಟಿ ಪ್ರಾಡಕ್ಟ್ ಇರಲಿ, ಅದನ್ನು ಕೈಗಳಲ್ಲಿ ಉಜ್ಜಿಕೊಂಡು ಮುಖಕ್ಕೆ ಸವರುತ್ತಾರೆ. ಆದರೆ ಪ್ರತಿಯೊಂದಕ್ಕೂ ಒಂದು ವಿಧಾನವಿದೆ. ಆದ್ದರಿಂದ ಕೈಗಳಲ್ಲಿ ಉಜ್ಜುವ ಬದಲು ಮುಖಕ್ಕೆ ಹಾಕಿ ಮಿಕ್ಸ್ ಮಾಡಿ. ಹೀಗಾಗಿ ಅದು ಮುಖದ ಮೇಲೆ ಸಮನಾಗಿ ಹರಡುತ್ತದೆ.
ಈಗ ಮುಖಕ್ಕೆ ಗ್ಲಾಸಿ ಫಿನಿಶಿಂಗ್ ಬರಲು ಸ್ಟ್ರೋಕ್ ಕ್ರೀಂ ಹಚ್ಚಿರಿ. ಇದನ್ನು ಹಚ್ಚಿದ ಬಳಿಕ ಬ್ರಶ್‌ನಿಂದ ಫೌಂಡೇಶನ್ ಹಚ್ಚಿಕೊಂಡು ಮಿಕ್ಸ್ ಮಾಡಿ. ಕೇವಲ ಬೆರಳುಗಳಿಂದಲೇ ಫೌಂಡೇಶನ್ ಹಚ್ಚಿ ಸೆಟ್ ಮಾಡಬೇಡಿ. ಇದಕ್ಕಾಗಿ ಸದಾ ಬ್ರಶ್ ಅಥವಾ ಒದ್ದೆ ಸ್ಪಾಂಜ್ ಬಳಸಿರಿ. ಇದಾದ ಮೇಲೆ ಟ್ರಾನ್ಸ್ ಪರೆಂಟ್ ಪೌಡರ್ ಬಳಸಿರಿ. ಇದನ್ನು ಬಳಸಲು, ಪಫ್ ಮೇಲೆ ಪೌಡರ್ ಉದುರಿಸಿ ಮುಖಕ್ಕೆ ಹಚ್ಚಬೇಕು. ಕೊನೆಯಲ್ಲಿ ಮುಖಕ್ಕೆ ಸ್ಮೂತ್ ಲುಕ್ ನೀಡಲು ಪ್ರೆಸಿಂಗ್ ಪೌಡರ್ ಹಚ್ಚಿ, ಬ್ರಶ್‌ನಿಂದ ಚೆನ್ನಾಗಿ ಮಿಕ್ಸ್ ಮಾಡಿ.
ಐ ಮೇಕಪ್ : ಎಲ್ಲರೂ ನಾರ್ಮಲ್ ಐ ಮೇಕಪ್ ಮಾಡುತ್ತಿರುತ್ತಾರೆ. ಆದರೆ ಪಾರ್ಟಿಯಲ್ಲಿ ತುಸು ಡಿಫರೆಂಟ್ ಸ್ಟೈಲಿಶ್ ಆಗಿರಲು, ಸ್ಮೋಕಿ ಐ ಮೇಕಪ್ ಮಾಡಲು ಕಂಗಳಿಗೆ ಐ ಪ್ರೈಮರ್ ಅಪ್ಲೈ ಮಾಡಿ. ಇದು ಐ ಶ್ಯಾಡೋBನ್ನು ಬ್ಲಾಕ್ ಮಾಡುತ್ತದೆ. ಇದನ್ನು ಬಳಸಿದ 1-2 ನಿಮಿಷಗಳಲ್ಲೇ ಐ ಬ್ರೋಸ್‌ನ ಶೇಪಿಂಗ್ ಮಾಡಿ. ಇತ್ತೀಚೆಗೆ ದಪ್ಪ ಐ ಬ್ರೋಸ್‌ನ ಫ್ಯಾಷನ್ ಇನ್ ಆಗಿದೆ. ಎಲ್ಲಿಯರೆಗೂ ಐ ಬ್ರೋಸ್‌ನ್ನು ದಟ್ಟವಾಗಿ ಎತ್ತಿ ತೋರಿಸಲ್ಲವೋ, ಅಲ್ಲಿಯವರೆಗೂ ಐ ಮೇಕಪ್ ಆಕರ್ಷಕ ಎನಿಸಲಾರದು. ಐ ಬ್ರೋ ಪೆನ್ಸಿಲ್ ನಿಂದ ಐ ಬ್ರೋಸ್‌ನ್ನು ಡಾರ್ಕ್ ಮಾಡುತ್ತಾ ಒಂದು ಶೇಪ್ ಕೊಡಿ. ಒಂದೇ ಕಡೆ ಹೆಚ್ಚು ಉಜ್ಜಬಾರದೆಂದು ಗಮನಿಸಿ. ಕೆಲವು ಮಹಿಳೆಯರು, ಯಾವ ಜಾಗದಲ್ಲಿ ಐ ಬ್ರೋಸ್ ದಟ್ಟಾಗಿಲ್ಲವೋ ಅಲ್ಲಿ ಪೆನ್ಸಿಲ್‌ನ್ನು ಹೆಚ್ಚು ಉಜ್ಜುತ್ತಾರೆ. ಹಾಗೆ ಮಾಡಬೇಡಿ, ಬದಲಿಗೆ ಇಡೀ ಐ ಬ್ರೋ ಒಂದೇ ಸಮಾನಾಗಿ ತೀಡಬೇಕು.
ಐ ಬ್ರೋಸ್‌ನ ಶೇಪಿಂಗ್ ನಂತರ ಕಂಗಳನ್ನು ಹೈಲೈಟ್ ಮಾಡಲು, ಐ ಬ್ರೋಸ್ ಕೆಳಗೆ ಫೌಂಡೇಶನ್ನಿನ ಒಂದು ತೆಳು ಲೈನ್ ಎಳೆಯಿರಿ. ಈಗ ಕಂಗಳ ಮೇಲೆ ಲೈನರ್ ಎಳೆಯಿರಿ, ಈ ಲೈನರ್ ತೆಳು ಬದಲು ದಪ್ಪ ಇರಬೇಕು. ಆಗ ಮಾತ್ರ ಕಂಗಳಿಗೆ ಸ್ಮೋಕಿ ಎಫೆಕ್ಟ್ ಬರಲು ಸಾಧ್ಯ. ಲೈನರ್ ಎಳೆಯು ಸಮಯದಲ್ಲಿ ಗಮನಿಸಬೇಕಾದುದು ಎಂದರೆ ಮುಂದಿನ ಪಾಯಿಂಟ್ ಹಾಗೇ ಬಿಟ್ಟಿರಬೇಕು. ಇದಾದ ಮೇಲೆ ಬ್ರಶ್ಶಿನಿಂದ ಎಡ್ಜೆಸ್‌ನ್ನು ಸ್ಮಜ್ ಮಾಡಿಕೊಳ್ಳಿ. ಅಂದರೆ ಲೈನರ್‌ನ್ನು ಬೇಗ ಬೇಗ ಸ್ಮಜ್ ಮಾಡಿಕೊಳ್ಳಬೇಕು. ಏಕೆಂದರೆ, ಜೆಲ್ ಲೈನರ್ ಬೇಗ ಒಣಗಿ ಹೋಗುತ್ತದೆ. ಇದಾದ ಮೇಲೆ ಚಾಕಲೇಟ್ ಶೇಡ್‌ನ ಐ ಶ್ಯಾಡೋ ಹಚ್ಚಿ, ಬ್ರಶ್ಶಿನಿಂದ ಬ್ಲಾಂಡಿಂಗ್ ಮಾಡಿ. ಇದರ ಮೇಲೆ ಐ ಶ್ಯಾಡೋ ಪೌಡರ್ ಉದುರಿಸಿ. ಇದು ಬೇಸ್‌ನ್ನು ಲಾಕ್ ಮಾಡಿಡುತ್ತದೆ. ಎಲ್ಲಾದರೂ ಎಡ್ಜೆಸ್ ಬಂದುಬಿಟ್ಟರೆ ಗೋಲ್ಡನ್ ಶ್ಯಾಡೋನಿಂದ ಸ್ಮಜ್ ಮಾಡಿ.ಇದಾದ ಮೇಲೆ ಕಂಗಳಿಗೆ ಕಾಜಲ್ ತೀಡಿರಿ. ಕಾಜಲ್‌ನ್ನು ಒಳಭಾಗಕ್ಕೆ ತೀಡಬೇಡಿ, ಬದಲಿಗೆ ಹೊರಭಾಗಕ್ಕೆ ಫ್ರಂಟ್ ಬ್ಯಾಕ್ ಸ್ಟೈಲ್‌ನಲ್ಲಿ ತೀಡಿರಿ. ಇದರಿಂದ ಕಂಗಳಲ್ಲಿ ನೀರು ಜಿನುಗದು. ಒಂದು ಪಕ್ಷ ಕಣ್ಣಿಂದ ನೀರು ಜಿನುಗಿದರೆ, ಕಂಗಳ ಕಾರ್ನರ್‌ನಲ್ಲಿ ಇಯರ್‌ಬಡ್ ಆಡಿಸಿ. ಅದು ನೀರನ್ನು ಹೀರಿಕೊಳ್ಳುತ್ತದೆ. ಐ ಮೇಕಪ್‌ನಲ್ಲಿ ಕಾಜಲ್ ಮತ್ತು ಲೈನರ್ ಎಷ್ಟು ಹೆಚ್ಚು ಬ್ಲ್ಯಾಕ್ ಆಗಿರುತ್ತದೋ, ಮೇಕಪ್ ಅಷ್ಟೇ ಆಕರ್ಷಕವಾಗಿ ಕಾಣುತ್ತದೆ. ಆದ್ದರಿಂದ ಕಾಜಲ್ ಮೇಲೆ ಜೆಲ್ ಲೈನರ್ ಹಚ್ಚಿರಿ.