ಸುಡುವ ಬಿರು ಬೇಸಿಗೆಯಲ್ಲಿ ನಮ್ಮ ಸೌಂದರ್ಯ ಸಂವರ್ಧನೆಗಾಗಿ ಸದಾ ಕೂಲ್ ಅಂಡ್ ಫ್ರೆಶ್ ಆಗಿ ನಳನಳಿಸುತ್ತಿರಲು ಏನು ಮಾಡಬೇಕೆಂದು ಅರಿಯೋಣವೇ…….?
ಕಿರಿಕಿರಿ ಎನಿಸುವ ಬಿಸಿಲು, ಧೂಳು ಮಣ್ಣು ಹಾಗೂ ಧಗೆಯಿಂದ ಹಿಂಸೆ ಎನಿಸುವ ಬೇಸಿಗೆ ಮಧ್ಯೆ ನಾವು ಬಹಳ ಸುಸ್ತಾಗಿ, ದಣಿದುಹೋಗುತ್ತೇವೆ. ನಮ್ಮ ತ್ವಚೆ ಮತ್ತು ಕೂದಲು ತಮ್ಮ ನೈಸರ್ಗಿಕ ಚೆಲುವನ್ನು ಕಳೆದುಕೊಳ್ಳುತ್ತವೆ. ಆದರೆ ಕೆಲವೊಂದು ವಿಷಯಗಳನ್ನು ನೆನಪಿಟ್ಟುಕೊಂಡು, ಈ ಕಾಲದಲ್ಲೂ ಅದನ್ನು ಅಳವಡಿಸಿಕೊಂಡರೆ, ಬೇಸಿಗೆಯಲ್ಲೂ ನಾವು ಕೂಲ್ ಅಂಡ್ ಫ್ರೆಶ್ ಆಗಿ ನಳನಳಿಸಬಹುದು.
ಪ್ರತಿದಿನ ಸ್ನಾನ ಮಾಡಿ
ಬೇಸಿಗೆಯಲ್ಲಿ ಪ್ರತಿದಿನ ಸ್ನಾನ ಮಾಡುವುದರಿಂದ ದೇಹದ ದುರ್ವಾಸನೆ, ಸೋಂಕು, ರೋಗಾಣುಗಳು ನಮ್ಮನ್ನು ಕಾಡದಿರುವಂತೆ ರಕ್ಷಣೆ ಪಡೆಯಬಹುದು. ಸ್ನಾನ ನಮ್ಮ ಇಮ್ಯೂನ್ ಸಿಸ್ಟಮ್ ನ್ನು ಹೆಚ್ಚು ಸಕ್ರಿಯವಾಗಿಡಲು ಎಷ್ಟೋ ಸಹಕಾರಿ.
ಈ ಬೇಸಿಗೆಯಲ್ಲಿ ನಮ್ಮ ದೇಹದಿಂದ ಸಾಕಷ್ಟು ಬೆವರು ಹರಿಯುತ್ತದೆ, ಇದರಿಂದಾಗಿ ದೇಹದಲ್ಲಿನ ವಿಷಯುಕ್ತ ಪದಾರ್ಥಗಳು ಹೊರಬರಲು ದಾರಿ ಆಗುತ್ತದೆ. ಜೊತೆಗೆ ಕೀಟಾಣು, ವೈರಸ್ ಇತ್ಯಾದಿಗಳನ್ನೂ ಕೊನೆಗಾಣಿಸುತ್ತದೆ. ಸ್ನಾನ ಮಾಡುವುದರಿಂದ ಚೆನ್ನಾಗಿ ನಿದ್ದೆಯೂ ಬರುತ್ತದೆ. ಒಂದು ಬಕೆಟ್ ನೀರಿಗೆ ಅರ್ಧ ಸಣ್ಣ ಚಮಚ ಕಲ್ಲುಪ್ಪು, ಕೆಲ ಹನಿ ಯೂಡಿಕೊಲೋನ್ ಬೆರೆಸಿ ಸ್ನಾನ ಮಾಡುವುದರಿಂದ ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ತಪ್ಪುತ್ತದೆ. ಇದರಿಂದ ತ್ವಚೆ ಅತಿ ಮೃದು ಮತ್ತು ಹೊಳೆಯುವಂತೆ ಆಗುತ್ತದೆ.
ಮಾಯಿಶ್ಚರೈಸರ್ ಸನ್‌ಸ್ಕ್ರೀನ್‌ನಿಂದ ತ್ವಚೆಯನ್ನು ಸುರಕ್ಷಿತವಾಗಿಡಿ : ಬೇಸಿಗೆಯ ದಿನಗಳಲ್ಲಿ ತ್ವಚೆ ನಿರ್ಜೀವ ಹಾಗೂ ಡ್ರೈ ಎನಿಸುತ್ತದೆ. ಸೂರ್ಯನ ತೀಕ್ಷ್ಣ ಕಿರಣಗಳು ತ್ವಚೆಯನ್ನು ಡೀಹೈಡ್ರೇಟ್ ಡ್ಯಾಮೇಜ್ ಮಾಡುತ್ತವೆ. ಇಂಥ ಸಂದರ್ಭದಲ್ಲಿ ನೀವು ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಕ್ರೀಂ ಬಳಸುವುದು ಲೇಸು. ಮಾಯಿಶ್ಚರೈಸರ್ ನಿಂದ ತ್ವಚೆಯ ಆರ್ದ್ರತೆ ಮತ್ತು ಹೊಳಪು ಹೆಚ್ಚುತ್ತದೆ. ನೈಸರ್ಗಿಕ ವಿಧಾನಗಳಿಂದಲೂ ತ್ವಚೆಗೆ ಮಾಯಿಶ್ಚರೈಸಿಂಗ್ ಮಾಡಬಹುದು.
ಸನ್‌ಸ್ಕ್ರೀನ್‌ನ ಅಗತ್ಯ
ಬ್ಯೂಟಿ ಎಕ್ಸ್ ಪರ್ಟ್ ನಿರ್ಮಲಾ ರಾಘವ್ ಹೇಳುತ್ತಾರೆ, ಸೂರ್ಯನ ಹಾನಿಕಾರಕ UV ಕಿರಣಗಳ ಸಂಪರ್ಕದಿಂದ ತ್ವಚೆಗೆ ಹಾನಿ ಆಗಬಹುದು. ಅದರಿಂದ ತ್ವಚೆ ಸುಡಲೂಬಹುದು. ಹೀಗಿರುವಾಗ ಅಗತ್ಯವಾಗಿ ಸನ್‌ಸ್ಕ್ರೀನ್‌ನ್ನು ಉಪಯೋಗಿಸುತ್ತಿರಬೇಕು. ಇದು ಸೂರ್ಯನ ತೀಕ್ಷ್ಣ ಕಿರಣಗಳಿಂದ ತ್ವಚೆಯನ್ನು ರಕ್ಷಿಸಲು ಉತ್ತಮ ಸುರಕ್ಷಾ ಕವಚವಾಗಿದೆ. ಈ ಬೇಸಿಗೆಯಲ್ಲಿ ಕನಿಷ್ಠ 30 SPF ಯುಕ್ತ ಸನ್‌ಸ್ಕ್ರೀನ್ ಕ್ರೀಮನ್ನು ಬಳಸಬೇಕು. ಮನೆಯಿಂದ ಹೊರಗೆ ಹೊರಡುವ 15-20 ನಿಮಿಷಗಳ ಮೊದಲೇ ಇದನ್ನು ಹಚ್ಚಿಕೊಳ್ಳಬೇಕು.
ಎಚ್ಚರಿಕೆಯಿಂದ ತ್ವಚೆ ಕೂದಲನ್ನು ಸಂರಕ್ಷಿಸಿ
ಈ ಸೀಸನ್‌ನಲ್ಲಿ ತ್ವಚೆಯನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಸನ್‌ಬರ್ನ್, ಉರಿಯೂತ ಮಾತ್ರವಲ್ಲದೆ ತ್ವಚೆಯಲ್ಲಿ ಅಂಟಂಟು ಸಮಸ್ಯೆ, ಸ್ಕಿನ್ ಅಲರ್ಜಿ ಸಮಸ್ಯೆ ಮೂಡುತ್ತದೆ. ಹೀಗಾಗಿ ಈ ರೀತಿ ತ್ವಚೆಯ ರಕ್ಷಣೆಗೆ ಮುಂದಾಗಿ :
- ಸಾಧ್ಯವಿದ್ದಷ್ಟು ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗಲೇಬೇಡಿ. ಸೂರ್ಯನ ನೇರ ಕಿರಣಗಳು ತ್ವಚೆಯ ಕೊಲೋಜನ್ ಎಲಾಸ್ಟಿಕ್ ಟಿಶ್ಯುಗಳಿಗೆ ನಷ್ಟ ಉಂಟು ಮಾಡಿ, ಅವಕ್ಕೆ ಹಾನಿ ಮಾಡುತ್ತವೆ. ಹೊರಗೆ ಹೋಗಲೇಬೇಕಿದ್ದರೆ ಧಾರಾಳ ಸನ್‌ಸ್ಕ್ರೀನ್ ಹಚ್ಚಿ, ಒಂದು ತೆಳು ಬಣ್ಣದ ಛತ್ರಿಯನ್ನೂ ಇರಿಸಿಕೊಳ್ಳಿ.