ಪ್ರಕೃತಿ ಹೆಣ್ಣಿಗೆ ನೈಸರ್ಗಿಕ ರೂಪ ಸೌಂದರ್ಯದ ಸಿರಿತನ ನೀಡಿದೆ. ಆದರೆ ಮಹಿಳೆಯರು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಸ್ಟ್ರೆಸ್, ವಯೋಸಹಜ ಗುಣಗಳಿಂದ ಇದರಲ್ಲಿ ಕೊರತೆ ಕಾಣುತ್ತಾರೆ. ಕ್ರಮೇಣ ಅವರು ತಮ್ಮ ನೈಸರ್ಗಿಕ ಸೌಂದರ್ಯ ಕಳೆದುಕೊಳ್ಳುತ್ತಾರೆ. ಅದಾದ ಮೇಲೆ ಹಲವು ಬಗೆಯ ಸ್ಕಿನ್ ಪ್ರಾಬ್ಲಮ್ಸ್ ಅವರನ್ನು ಮುತ್ತಿಕೊಳ್ಳುತ್ತವೆ. ನಂತರ ಅವರು ಶಾರ್ಟ್‌ಕಟ್ ಅನುಸರಿಸಿ ಬ್ಯೂಟಿಪಾರ್ಲರ್, ಹೇರ್ ಸೆಲೂನ್, ಸ್ಪಾ ಇತ್ಯಾದಿಗಳಿಗೆ ಭೇಟಿ ನೀಡುತ್ತಾರೆ. ಇದರಿಂದ ಸಮಯ ಮತ್ತು ಕಷ್ಟಪಟ್ಟು ಗಳಿಸಿದ ಹಣ ಎರಡೂ ಹಾಳು. ಹೀಗೆ ಕೃತಕವಾಗಿ ಎಷ್ಟೇ ಮೇಕಪ್ ಮಾಡಿಸಿಕೊಂಡರೂ ಅವರ ಸೌಂದರ್ಯವೇನೂ ಮರಳಿಬಾರದು. ಅದರ ಬದಲಿಗೆ ಕೆಳಗಿನ ಡೇಲಿ ಟಿಪ್ಸ್ ಫಾಲೋ ಮಾಡಿ ಬೇಸಿಗೆಯಲ್ಲೂ ನಿಮ್ಮ ಸೌಂದರ್ಯ ನಳನಳಿಸುವಂತೆ ಮಾಡಿ.
ಡಾರ್ಕ್ ಮೊಣಕೈ ಮಂಡಿಗಳು
ನೀವು ಬ್ಯಾಲೆನ್ಸ್ಡ್ ಡಯೆಟ್ ಮತ್ತು ನಿಯಮಿತ ವ್ಯಾಯಾಮಗಳಿಂದ ಬ್ಯೂಟಿಫುಲ್ ಫಿಗರ್ ಪಡೆದಿದ್ದರೂ, ನೀವು ಹಾಟ್, ಸೆಕ್ಸೀ ಟೀಶರ್ಟ್, ಸ್ಕರ್ಟ್ ಧರಿಸಲು ಹಿಂಜರಿಯುವಿರಿ. ಹಾಗೆಯೇ ನಿಮ್ಮ ನಯ, ನುಣುಪಾದ ಬಾಹುಗಳ ವೋಡಿ ಬೀರಲು ಸ್ಲೀವ್ ಲೆಸ್ ಡ್ರೆಸೆಸ್ ಧರಿಸಲು ಹಿಂಜರಿಯುವಿರಿ. ಕಾರಣ... ಮಂಡಿ ಮತ್ತು ಮೊಣಕೈ ಡ್ರೈ ಡಾರ್ಕ್ ಆಗಿರುವುದು.
ಈ ಭಾಗಗಳು ಸದಾ ಉಪೇಕ್ಷಿಸಲ್ಪಡುತ್ತವೆ. ಹಾಗಾಗಿ ಈ ಭಾಗದಲ್ಲಿ ಸುಲಭವಾಗಿ ಡೆಡ್ ಸ್ಕಿನ್ ಜಮೆಗೊಳ್ಳುತ್ತದೆ. ಅದರಿಂದಾಗಿ ಅವು ಗಾಢ ಬಣ್ಣಕ್ಕೆ ತಿರುಗುತ್ತವೆ. ಒಂದೇ ಕಡೆ ಮೊಣಕೈ ಊರಿ ಕೆಲಸ ಮಾಡುವ ಅಭ್ಯಾಸವಿರುವವರಿಗೂ ಸಹ ಈ ಭಾಗದ ಚರ್ಮ ಗಾಢ ಹಾಗೂ ಅತಿ ಶುಷ್ಕವಾಗುತ್ತದೆ. ಇದರಿಂದ ಪಾರಾಗಲು, ಮೊಣಕೈ ಊರಿ ಕೆಲಸ ಮಾಡುವ ಅಭ್ಯಾಸ ತಪ್ಪಿಸಿ. ಜೊತೆಗೆ ರಸ ಹಿಂಡಿದ ನಿಂಬೆ ಹೋಳಿನಿಂದ ಈ ಭಾಗಗಳನ್ನು ಆಗಾಗ ಉಜ್ಜುತ್ತಿರಬೇಕು. ಆಮೇಲೆ ತಣ್ಣೀರಿನಿಂದ ತೊಳೆಯಬೇಕು. ಅದನ್ನು ಒರೆಸಿ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ಆ ಭಾಗದ ಚರ್ಮ ಮೃದು ಹಾಗೂ ತಿಳಿಯಾಗುತ್ತದೆ.
ಏಜಿಂಗ್/ಸ್ಲಾಗಿಂಗ್ ನೆಕ್‌ಲೈನ್
ಸಾಮಾನ್ಯವಾಗಿ ಮಹಿಳೆಯರು ಮುಖಕ್ಕೆ ತರತರಹದ ಕ್ರೀಂ, ಲೋಶನ್, ಮಾಯಿಶ್ಚರೈಸರ್ ಹಚ್ಚುತ್ತಿರುತ್ತಾರೆ. ಅದರಿಂದ ಮುಖದ ಕಾಂತಿ ಹೆಚ್ಚುವುದೂ ನಿಜ. ಆದರೆ ಸಾಮಾನ್ಯವಾಗಿ ಕುತ್ತಿಗೆಯನ್ನು ನಿರ್ಲಕ್ಷಿಸುತ್ತಾರೆ, ಅದರ ತ್ವಚೆ ಮುಖಕ್ಕಿಂತಲೂ ತೆಳು ಆಗಿರುತ್ತದೆ. ಸುತ್ತಲೂ ಫ್ಯಾಟಿ ಟಿಶ್ಯು ಸಹ ಕಡಿಮೆ ಇರುತ್ತವೆ. ಹೆಚ್ಚುತ್ತಿರುವ ವಯಸ್ಸಿನೊಂದಿಗೆ ಕುತ್ತಿಗೆಯ ಚರ್ಮದ ಎಲಾಸ್ಟಿಸಿಟಿ ಕಡಿಮೆ ಆಗುತ್ತದೆ. ಪರಿಣಾಮವಾಗಿ ಪ್ರೀಮೆಚ್ಯೂರ್ ಏಜಿಂಗ್, ಫೈನ್‌ಲೈನ್ಸ್ ಮತ್ತು ಡಿಸ್‌ಕಲರೇಶನ್ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಕುತ್ತಿಗೆಯೇ ಹೆಚ್ಚುತ್ತಿರುವ ವಯಸ್ಸನ್ನು ಎತ್ತಿ ತೋರಿಸುವ ಸಾಧನವಾಗಿದೆ.
ಈ ಎಲ್ಲಾ ಸಮಸ್ಯೆಗಳಿಂದ ದೂರವಾಗಲು, ಕುತ್ತಿಗೆಯ ತ್ವಚೆಯನ್ನು ನಿಯಮಿತಯವಾಗಿ ಎಕ್ಸ್ ಫಾಲಿಯೇಟ್ ಮಾಡಿಸಿ. ಯಾವುದೇ ಕ್ರೀಂ ಲೈಟ್‌ನಿಂಗ್ ಅಥವಾ ಆ್ಯಂಟಿಏಜಿಂಗ್‌ನ್ನು ಮುಖಕ್ಕೆ ಹಚ್ಚಿದ ನಂತರ ಕುತ್ತಿಗೆಗೂ ಸವರಬೇಕು. ಡೇಲಿ ಮಾಯಿಶ್ಚರೈಸರ್ ಸಹ ಹಚ್ಚಬೇಕು. ಕೆಳಭಾಗದಿಂದ ಮೇಲಿನೆಡೆಗೆ ಲಘುವಾಗಿ ಕೈಗಳಿಂದ ನೀವುತ್ತಾ, ಬಾದಾಮಿ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿ.