ಬೆಳಕಿನ ಹಬ್ಬ ದೀಪಾವಳಿಯನ್ನು ಸ್ವಾಗತಿಸಲು ನೀವು ಮನೆಯ ಸ್ವಚ್ಛತೆ ಸಿಂಗಾರಗಳಿಗಾಗಿ ನಿಮ್ಮ ಸಮಯ, ಶ್ರಮಗಳನ್ನು ಮುಡಿಪಾಗಿಡುತ್ತೀರಲ್ಲವೇ? ಈ ವಿಶೇಷ ಉತ್ಸವಕ್ಕೆ ಕೇವಲ ಗೃಹಾಲಂಕಾರ ಮತ್ತು ರುಚಿಕರ ತಿನಿಸುಗಳ ತಯಾರಿಕೆಯಷ್ಟೇ ಸಾಲದು. ನಿಮ್ಮ ರೂಪಾಲಂಕಾರ ಮತ್ತು ಪರ್ಸನಾಲಿಟಿಯ ಬೆಡಗೂ ಜೊತೆಗಿರಬೇಕು. ಸಡಗರವನ್ನು ತರುವ ಈ ಹಬ್ಬದ ದಿನಗಳಲ್ಲಿ ನಿಮ್ಮ ಸೌಂದರ್ಯವನ್ನು ಕಳೆಗಟ್ಟಿಸಲು ನಾವು ಫೆಸ್ಟಿವ್ ಮೇಕಪ್‌ ಲುಕ್ಸ್ ಜೊತೆಗೆ ಕೆಲವು ವಿಶೇಷ ಮೇಕಪ್‌ ಪ್ರಾಡಕ್ಟ್ಸ್ ನ್ನು ಸಹ ಇಲ್ಲಿ ಪರಿಚಯಿಸುತ್ತಿದ್ದೇವೆ.

ದೀಪಾವಳಿ ಹಬ್ಬಕ್ಕಾಗಿ ನೀವು ಈಗಾಗಲೇ ಹೊಸ ಬಟ್ಟೆಗಳನ್ನು ಕೊಂಡಿರಬಹುದು. ಆದರೆ ಕೇವಲ ಹೊಸ ಉಡುಪುಗಳಷ್ಟೇ ನಿಮ್ಮನ್ನು ಆಕರ್ಷಕಗೊಳಿಸಲಾರವು. ನಿಮ್ಮ ಮುಖ ಮೇಕಪ್‌ ರಹಿತವಾಗಿದ್ದರೆ, ಎಂತಹ ಬೆಲೆಬಾಳುವ ಉಡುಪುಗಳೂ ಸಹ ನಿಮ್ಮ ಮುಖಕ್ಕೆ ಕಳೆ ನೀಡಲಾರವು. ಬದಲಾಗಿ ಸರಿಯಾದ ರೀತಿಯಲ್ಲಿ ಮೇಕಪ್‌ ಮಾಡಿಕೊಂಡಿದ್ದರೆ, ಸಾಧಾರಣ ಉಡುಪಿನಲ್ಲೂ  ಸಹ ನಿಮ್ಮ ರೂಪ ಲಾವಣ್ಯ ಕಂಗೊಳಿಸಬಲ್ಲದು. ವಾಸ್ತವವಾಗಿ, ಮೇಕಪ್‌ ಮುಖದ ಕುಂದುಗಳನ್ನು ಮರೆಮಾಚಿ, ಮುಖದ ಸೌಂದರ್ಯವನ್ನು ಎತ್ತಿ ತೋರಿಸುತ್ತದೆ. ಅಂದರೆ, ಮೇಕಪ್‌ ಮಾಡಿದ ಮುಖ ಸುಂದರವಾಗಿ ಕಾಣಿಸದೆ ಇರಲು ಸಾಧ್ಯವೇ ಇಲ್ಲ. ಈ ಸಲದ ದೀಪಾವಳಿಯಂದು, ಮೇಕಪ್‌ ಆರ್ಟಿಸ್ಟ್ ಕ್ರಿಸ್ಚೋಫರ್ ಫರ್ನಾಂಡಿಸ್‌ ತಿಳಿಸಿಕೊಟ್ಟಿರುವ ಡಿಫರೆಂಟ್‌ ಫೆಸ್ಟಿವ್ ಲುಕ್ಸ್ ನ ಮೇಕಪ್‌ಗಳನ್ನು ಮಾಡಿ ನೋಡಿ. ಆದರೆ ನೀವು  ಮೇಕಪ್‌ ಮಾಡಿಕೊಳ್ಳುವಾಗೆಲ್ಲ ಈ ಮಾತುಗಳನ್ನು ಗಮನದಲ್ಲಿಡಬೇಕಾದ್ದು ಅವಶ್ಯಕ.

Aishwarya_Sakhuja

ಬ್ಯಾಲೆನ್ಸ್ಡ್ ಲುಕ್‌ಗಾಗಿ

ಈ 6 ಫೆಸ್ಟಿವ್‌ ಲುಕ್ಸ್ ಗಳನ್ನು ಟ್ರೈ ಮಾಡಿ ನೋಡಿ :

ಜ್ಯೂವಿಯಲ್‌ ಲುಕ್ಸ್ : ಇದಕ್ಕೆ ಐ ಮೇಕಪ್‌ ನಿಂದ ಪ್ರಾರಂಭಿಸಿ. ಮೊದಲು ಐಲಿಡ್‌ ಮೇಲೆ ಶಾಂಪೇನ್‌ ಶೇಡ್‌ನ ಐ ಶ್ಯಾಡೋ ಹಚ್ಚಿ. ನಂತರ ಜ್ಯೂವೆಲ್‌ ಟೋನ್‌ನ ಜೆಲ್ ಅಥವಾ ಲಿಕ್ವಿಡ್‌ ಐ ಲೈನರ್‌ ಹಚ್ಚಿ. ಒಂದು ಕೋಟ್‌ ಬ್ಲಾಕ್‌ ಮಸ್ಕರಾ ಹಚ್ಚಿ ಐ ಮೇಕಪ್‌ ಪೂರ್ಣಗೊಳಿಸಿ. ಲಿಪ್‌ ಮೇಕಪ್‌ಗಾಗಿ ಫ್ರೆಶ್‌ ಟೋನ್ಡ್  ಲಿಪ್‌ಗ್ಲಾಸ್‌ ಹಚ್ಚಿ. ನಂತರ ಪಿಂಕ್‌ ಅಥವಾ ಬ್ರೌನ್‌ಶೇಡ್‌ನ ಬ್ಲಶ್‌ ಆನ್‌ ಹಚ್ಚಿ  ಚೀಕ್‌ ಬೋನ್‌ಗಳನ್ನು ಲೈಟ್‌ ಮಾಡಿ.

ಶಿಮರ್‌ ಗರ್ಲ್ ಲುಕ್ಸ್ : ಮೊದಲು ಐ ಬ್ರೋಸ್‌ ಬೋನ್‌ ಮೇಲೆ ಲೈಟ್‌ ಶೇಡ್‌ನ ಶಿಮರ್‌ ಐ ಶ್ಯಾಡೋ  ಹಚ್ಚಿ. ಯಾವ ಶೇಡ್‌ನ ಐ ಶ್ಯಾಡೋ ಹಚ್ಚುತ್ತೀರೋ ಅದರ ಡಾರ್ಕ್‌ಶೇಡ್‌ನ ಐ ಲೈನರ್‌ ಬಳಸಿ. ಆಗ ಐ ಶ್ಯಾಡೋ ಮತ್ತು ಐ ಲೈನರ್‌ಗಳ ಶೇಡ್‌ಗಳು ಎದ್ದು ಕಾಣುತ್ತವೆ. ಅಂದರೆ, ಸೀ ಗ್ರೀನ್‌ ಬಣ್ಣದ ಐ ಶ್ಯಾಡೋ ಆರಿಸಿಕೊಂಡರೆ, ಐ ಲೈನರ್‌ ಡಾರ್ಕ್‌ ಗ್ರೀನ್‌ನದಾಗಿರಲಿ. ತುಟಿಗಳಿಗೆ ಲಿಪ್‌ಗ್ಲಾಸ್‌ ಮತ್ತು ಚೀಕ್‌ ಬೋನ್ಸ್ ಗೆ ಫ್ರೆಶ್‌ ಶೇಡೆಡ್‌ ಬ್ಲಶರ್‌ ಆರಿಸಿಕೊಳ್ಳಿ.

sana-khan-hot

ಬೋಲ್ಡ್ ಲುಕ್ಸ್ : ನೀವು ಬಿಳಿ ಚರ್ಮದವರಾಗಿದ್ದು ಪಿಂಕಿಶ್‌, ರೂಬಿ ಅಥವಾ ಗೋದಿ ಬಣ್ಣದ ಮೇಕಪ್‌ ಆರಿಸಿಕೊಂಡಿದ್ದರೆ ಡಾರ್ಕ್‌ ಬರ್ಗಂಡಿ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳಿ. ಐ ಮೇಕಪ್‌ಗೆ ಸ್ನೋಲೈಟ್‌ ಶೇಪ್‌ನ ಐ ಶ್ಯಾಡೊ ಮತ್ತು ಲೈಟ್‌ ಶೇಪ್‌ನ ಐ ಲೈನರ್‌ ಹಚ್ಚಿ ಬ್ಲ್ಯಾಕ್‌ ಮಸ್ಕರಾ ಹಚ್ಚಿ  ಐ ಮೇಕಪ್‌ ಪೂರ್ಣಗೊಳಿಸಿ. ಚೀಕ್‌ ಬೋನ್‌ನ್ನು ನ್ಯಾಚುರಲ್ ಶೇಡ್‌ನ ಬ್ಲಶರ್‌ನಿಂದ ಹೈಲೈಟ್‌ಗೊಳಿಸಿ.

ಶೈನಿ ಸಿಲ್ವರ್‌ ಲುಕ್ಸ್ : ಲಿಪ್‌ ಮೇಕಪ್‌ಗೆ ಹೆವಿ ಲುಕ್‌ ನೀಡಲು ಡಾರ್ಕ್‌ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚಿ. ಈಗ ಐ ಮೇಕಪ್‌ಗೆ ಸಿಲ್ವರ್‌ ಐ ಶ್ಯಾಡೋ ಮತ್ತು ಗ್ರೇ ಶೇಡ್‌ನ ಐ ಲೈನರ್‌ ಹಚ್ಚಿ. ಜೊತೆಗೆ ಸಿಲ್ವರ್‌ ಮಸ್ಕರಾ ಹಚ್ಚಿ. ಚೀಕ್‌ ಬೋನ್ಸ್ ಗೆ ಲೈಟ್‌ ಶೇಡ್‌ನ್ನು ಆರಿಸಿಕೊಳ್ಳಿ.

ಗೋಲ್ಡನ್‌ ಗ್ಲೋ ಲುಕ್ಸ್ :  ಕಣ್ಣೆವೆಗಳಿಗೆ ಗೋಲ್ಡನ್‌ ಶೇಡ್‌ನ ಐ ಶ್ಯಾಡೋ ಹಚ್ಚಿ. ನಂತರ ಡಾರ್ಕ್‌ ಚಾಕೊಲೇಟ್‌ ಶೇಡ್‌ನ ಐ ಲೈನರ್‌ ಹಚ್ಚಿ. ತುಟಿಗಳಿಗೆ ಪಿಂಕ್‌ ಅಥವಾ ಗೋಲ್ಡನ್‌ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚಿ. ಕಡೆಯಲ್ಲಿ ನ್ಯಾಚುರಲ್ ಬ್ಲಶರ್‌ನಿಂದ ಚೀಕ್‌ಬೋನ್ಸ್ ನ್ನು ಹೈಲೈಟ್‌ ಮಾಡಿ. ಗೋಲ್ಡನ್‌ ಗ್ಲೋಗಾಗಿ, ಇವುಗಳಲ್ಲದೆ ಕಾಪರ್‌ ಅಥವಾ ಜಿಂಜರ್‌ಬ್ರೆಡ್‌ ಶೇಡ್‌ಗಳನ್ನೂ ಐ, ಲಿಪ್ಸ್ ಮತ್ತು ಚೀಕ್ಸ್ ಮೇಕಪ್‌ಗೆ ಬಳಸಬಹುದು.

ಚಾಕೋ ಲುಕ್ಸ್ : ಕಾಪರ್‌ ಶೇಡ್‌ನ  ಐ  ಶ್ಯಾಡೋ ಮತ್ತು ಕಣ್ಣಿನ ಕೊನೆಗೆ ಡಾರ್ಕ್‌ ಬ್ರೌನ್‌ ಕಲರ್‌ನ ಐ ಲೈನರ್‌ ಹಚ್ಚಿ. ಕಣ್ಣೆವೆಯ ಮೇಲ್ಭಾಗ ಮತ್ತು ಕೆಳಭಾಗಗಳಿಗೆ ಬ್ಲ್ಯಾಕ್‌ ಕಲರ್‌  ಪೆನ್ಸಿಲ್ ಐ ಲೈನರ್‌ ಬಳಸಿ. 2 ಕೋಟ್‌  ಬ್ಲಾಕ್‌ ಮಸ್ಕರಾ ಹಚ್ಚಿ. ತುಟಿಗಳಿಗೆ ಗೋಲ್ಡನ್‌ ಬ್ರೌನ್‌ ಲಿಪ್‌ಸ್ಟಿಕ್‌/ಲಿಪ್‌ಗ್ಲಾಸ್‌ ಲೇಪಿಸಿ.

Barkha_Bist

ವಿಶೇಷ ಮೇಕಪ್‌ ಪ್ರಾಡಕ್ಟ್ಸ್

ನೀವು ದಿನ ಬಳಸುವ ಮೇಕಪ್‌ ಶೇಡ್‌ಗಳಿಂದಲೇ ನಿಮಗೆ ಫೆಸ್ಟಿವ್‌ ಲುಕ್‌ ದೊರೆಯುದೆಂದು ತಿಳಿದಿದ್ದರೆ, ಅದು ತಪ್ಪು ಗ್ರಹಿಕೆ. ಫೆಸ್ಟಿವ್ ಲುಕ್ಸ್ ಗಾಗಿ ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಕೆಲವು ವಿಶೇಷ ಮೇಕಪ್‌ ಸಾಮಗ್ರಿಗಳಿಗೆ ಸ್ಥಳಾವಕಾಶ ಮಾಡಿಕೊಡಿ. ಆ ಮೇಕಪ್‌ ಪ್ರಾಡಕ್ಟ್ಸ್ ಯಾವುದೆಂದು ತಿಳಿಯೋಣ ಬನ್ನಿ :

ಮೂಸ್‌ : ಬೇಸ್‌ ಮೇಕಪ್‌ಗಾಗಿ ಕಾಂಪ್ಯಾಕ್ಟ್ ಮತ್ತು ಫೌಂಡೇಶನ್‌ಗೆ ಬದಲು ಮೂಸ್‌ ಬಳಸಿ. ಮೇಕಪ್‌ ಪ್ರಾರಂಭಿಸು ಮೊದಲು ಫೇಸ್‌ವಾಶ್‌ನಿಂದ ಮುಖವನ್ನು ತೊಳೆಯಿರಿ. ನಂತರ ಮುಖಕ್ಕೆ ಮೂಸ್‌ ಹಚ್ಚುವ ಮೂಲಕ ಮೇಕಪ್‌ನ ಬೇಸ್‌ ಸಿದ್ಧಗೊಳಿಸಿ. ನಿಮ್ಮ ಸ್ಕಿನ್‌ಟೋನ್‌ನ್ನು ಗಮನದಲ್ಲಿರಿಸಿಕೊಂಡು ಮೂಸ್‌ ಆಯ್ಕೆ ಮಾಡಿಕೊಳ್ಳಿ.

ಲೈಟ್‌ ಐ ಶ್ಯಾಡೊ : ಐ ಮೇಕಪ್‌ಗೆ ಕ್ಲೀನ್‌ಬೇಸ್‌ ಒದಗಿಸಲು ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ  ಲೈಟ್‌ ಐ ಶ್ಯಾಡೊ ಇಟ್ಟುಕೊಂಡಿರಿ. ಐ ಮೇಕಪ್‌ ಪ್ರಾರಂಭಿಸುವ ಮೊದಲು ಐ ಬ್ರೋಸ್‌ ಬೋನ್‌ ಮೇಲೆ ಲೈಟ್‌ ಐ ಶ್ಯಾಡೊ ಹಚ್ಚಿ. ನಂತರ ನಿಮಗೆ ಬೇಕಾದ ಐ ಶ್ಯಾಡೊ ಮತ್ತು ಐ ಲೈನರ್‌ ಬಳಸಿ. ಹೀಗೆ ಮಾಡುವುದರಿಂದ ಐಬ್ರೋಸ್‌ ಸಹ ಹೈಲೈಟ್‌ ಆಗುವುದು.

ಜೆಟ್‌ ಬ್ಲ್ಯಾಕ್‌ ಐ ಲೈನರ್‌ : ಐ ಮೇಕಪ್‌ಗೆ ಕೆಲವೇ ಕ್ಷಣಗಳಲ್ಲಿ ಡ್ರೆಮಾಟಿಕ್‌ ಲುಕ್‌ ಉಂಟು ಮಾಡಲು ಜೆಟ್‌ ಬ್ಲ್ಯಾಕ್‌ ಐ ಲೈನರ್‌ನ್ನು ಮರೆಯದೆ ಕೊಳ್ಳಿರಿ. ಇದನ್ನು ಹಚ್ಚಿದರೆ ಐ ಶ್ಯಾಡೊ ಮತ್ತು ಮಸ್ಕರಾದ ಅಗತ್ಯವೇ ಇರುವುದಿಲ್ಲ. ಜೆಟ್‌ ಬ್ಲ್ಯಾಕ್‌ ಐ ಲೈನರ್‌ನಿಂದ ಐ ಮೇಕಪ್‌ಗೆ ಸ್ಮೋಕಿ ಎಫೆಕ್ಟ್ ದೊರೆಯುತ್ತದೆ.

ಶಿಮರ್‌ ಬ್ಲಶರ್‌ : ಫೆಸ್ಟಿವ್‌ ಸೀಸನ್‌ನಲ್ಲಿ ನಿಮ್ಮ ಮುಖ ಸೌಂದರ್ಯಕ್ಕೆ ಗ್ಲ್ಯಾಮ್ ಟಚ್‌ ನೀಡಲು ಶಿಮರ್‌ ಬ್ಲಶರ್‌ ಬಳಸಿ. ಶಿಮರ್‌ ಬ್ಲಶ್‌ಆನ್‌ ಹಚ್ಚುವುದರಿಂದ ಐ ಮೇಕಪ್‌ ಮತ್ತು ಲಿಪ್‌ ಮೇಕಪ್‌ಗಾಗಿ ಹೆಚ್ಚು ಶ್ರಮ ಪಡಬೇಕಾಗುವುದಿಲ್ಲ. ಇದು ಮುಖಕ್ಕೆ ಶೈನಿಂಗ್‌ ನೀಡುತ್ತದೆ.

ನ್ಯೂಡ್‌ ಲಿಪ್‌ ಕಲರ್‌ : ಲಿಪ್‌ಸ್ಟಿಕ್‌ನ ಡಾರ್ಕ್‌ ಶೇಡ್ಸ್ ತುಟಿಗಳಿಗೆ ಬೋಲ್ಡ್ ಲುಕ್‌ ನೀಡುವುದೆಂಬುದೇನೋ ಸರಿಯೇ. ಆದರೆ ಲಿಪ್‌ ಮೇಕಪ್‌ನ್ನು ಹೈಲೈಟ್‌ ಮಾಡುವ ಈ ಫಾರ್ಮುಲಾ ಸಾಕಷ್ಟು ಹಳೆಯದಾಗಿಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಲಿಪ್‌ಸ್ಟಿಕ್‌ನ ನ್ಯೂಡ್‌ ಶೇಡ್ಸ್ ಡಿಮ್ಯಾಂಡ್‌ನಲ್ಲಿದೆ. ಪೀಚ್‌, ಪಿಂಕ್‌ನಂತಹ ಲಿಪ್‌ಸ್ಟಿಕ್‌ ಶೇಡ್‌ಗಳು ಹಾಟ್‌ ಲುಕ್‌ ನೀಡಬಲ್ಲವು.

ಗ್ಲಿಟರ್‌ ಫಾರ್‌ ಹೇರ್‌ : ಕಣ್ಣು ಮತ್ತು ತುಟಿಗಳ ಮೇಕಪ್‌ನ ಜೊತೆಗೆ ಕೂದಲ ಮೇಲಿನ ಗ್ಲಿಟರ್‌ ನಿಮಗೆ ಫೆಸ್ಟಿವ್‌ ಲುಕ್‌ ನೀಡಬಲ್ಲದು. ಆದ್ದರಿಂದ ನಿಮ್ಮ ಮೇಕಪ್‌ ಬಾಕ್ಸ್ ನಲ್ಲಿ ಗ್ಲಿಟರ್‌ ಸ್ಪ್ರೇಗೆ ಸ್ಥಳಾವಕಾಶವಿರಲಿ. ಸಿಲ್ವರ್‌ ಮತ್ತು ಗೋಲ್ಡನ್‌ ಅಲ್ಲದೆ ಇತರೆ ಬಣ್ಣಗಳ ಹೇರ್‌ ಗ್ಲಿಟರ್‌ ದೊರೆಯುತ್ತದೆ. ನಿಮಗೆ ಇಷ್ಟವಾದರೆ ನೀವು ಅವುಗಳನ್ನೂ ಆರಿಸಿಕೊಳ್ಳಬಹುದು.

ಬ್ಯಾಲಿರೀನಾ ಪಿಂಕ್‌ ನೇಲ್ ಪೇಂಟ್‌ : ಡಾರ್ಕ್‌ ಮತ್ತು ನಿಯಾನ್‌ ಶೇಡ್‌ನ ನೇಲ್‌ ಪೇಂಟ್‌ಗೆ ವಿದಾಯ ಹೇಳಿ, ಫೆಸ್ಟಿವ್ ಲುಕ್ಸ್ ಗಾಗಿ ಬ್ಯಾಲರೀನಾ ಪಿಂಕ್‌ ನೇಲ್ ಪೇಂಟ್‌ನ್ನು ಕೊಂಡು ತನ್ನಿ. ಹೆವಿ ಮೇಕಪ್‌ನೊಂದಿಗೆ ಉಗುರಿಗೆ ಹಚ್ಚಿರುವ ಈ ಲೈಟ್‌ ಶೇಡ್‌ನ ನೇಲ್ ಪೇಂಟ್‌ ನಿಮ್ಮ ಸೌಂದರ್ಯಕ್ಕೆ ಮೆರುಗು ನೀಡುತ್ತದೆ.

ಮೇಕಪ್‌ನಿಂದ ನಿಮ್ಮ ಚೆಲುವು ಹೆಚ್ಚುವುದೆಂಬುದೇನೋ ನಿಜ. ಆದರೆ ಮೇಕಪ್‌ ಮಾಡಿಕೊಳ್ಳುವಾಗ ಆಗುವ ಕೆಲವು ತಪ್ಪುಗಳು ನಿಮ್ಮ ಮುಖದ ಅಂದವನ್ನು ಕೆಡಿಸಬಹುದು. ಆದ್ದರಿಂದ ಮೇಕಪ್‌ ಪ್ರಾಡಕ್ಟ್ ನ್ನು ಬುದ್ಧಿವಂತಿಕೆಯಿಂದ ಬಳಸಿ.

– ಪಿ. ಪೂರ್ಣಿಮಾ 

– ದೀಪಾಳಿಯ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಸುದೀರ್ಘವಾಗಿ ಮನೆಯನ್ನು ಸಿಂಗರಿಸುವುದರ ಜೊತೆ ಜೊತೆಗೆ ನೀವು ಅಂದವಾಗಿ ಸಿಂಗರಿಸಿಕೊಳ್ಳಿ. ಆಗ ಹಬ್ಬದ ಸಂಭ್ರಮ ಸದಾ ಹಸಿರಾಗಿರುತ್ತದೆ……

ಗ್ಲಿಟರ್‌ ಐ ಶ್ಯಾಡೊ ಬಳಸುತ್ತೇನೆ

“ಮ್ಯಾಟ್‌ ಫಿನಿಶ್‌ ಮೇಕಪ್‌ನಿಂದ ಒಳ್ಳೆಯ ಲುಕ್‌ ಬರುತ್ತದೆ. ಇದು ಪ್ರತಿಯೊಂದು ಫೇಸ್‌ ಟೈಪ್‌ಗೂ ಹೊಂದಿಕೆಯಾಗುತ್ತದೆ. ಆದ್ದರಿಂದ ನಾನು ಹೆಚ್ಚಾಗಿ ಮ್ಯಾಟ್‌ ಫಿನಿಶ್‌ ಮೇಕಪ್‌ ಪ್ರಾಡಕ್ಟ್ಸ್ ನ್ನೇ ಬಳಸುತ್ತೇನೆ. ದೀಪಾವಳಿಯನ್ನು ರಾತ್ರಿಯ ಸಮಯದಲ್ಲಿ ಆಚರಿಸುವುದರಿಂದ ಮೇಕಪ್‌ಗೆ ಕೊಂಚ ಗ್ಲಿಟರ್‌ ಕೂಡ ಬೇಕಾಗುತ್ತದೆ. ಅದಕ್ಕಾಗಿ ಐ ಮೇಕಪ್‌ಗೆ ನಾನು ಗ್ಲಿಟರ್‌ ಐ ಶ್ಯಾಡೊ ಬಳಸುತ್ತೇನೆ. ತುಟಿಗಳಿಗೆ ನ್ಯಾಚುರಲ್ ಟಚ್‌ ತರಲು ಮ್ಯಾಟ್‌ ಫಿನಿಶ್‌ನ ಪಿಂಕ್‌ ಶೇಡ್‌ ಲಿಪ್‌ಸ್ಟಿಕ್‌ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ.”

– ಅಂಕಿತಾ ಶರ್ಮ

ಹಬ್ಬದಲ್ಲಿ ನ್ಯಾಚುರಲ್ ಮೇಕಪ್‌ ಇಷ್ಟ

“ಶೂಟಿಂಗ್‌ಗಾಗಿ ಹೆವಿ ಮೇಕಪ್‌ ಮಾಡುವುದರಿಂದ ಉಳಿದ ಸಮಯದಲ್ಲಿ ನ್ಯಾಚುರಲ್ ಮೇಕಪ್‌ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ದೀಪಾವಳಿಯಂದು ನ್ಯಾಚುರಲ್ ಲುಕ್ಸ್ ಗಾಗಿ ಐ ಮೇಕಪ್‌ಗೆ ಕಾಜಲ್ ಮತ್ತು ಮಸ್ಕರಾ ಬಳಸುತ್ತೇನೆ ಮತ್ತು ತುಟಿಗಳ ನ್ಯಾಚುರಲ್ ಲುಕ್ಸ್ ಗೆ ಲಿಪ್‌ಬಾಮ್ ಮತ್ತು ಲಿಪ್‌ಗ್ಲಾಸ್‌ ಹಚ್ಚುತ್ತೇನೆ.”

– ಮೋನಾ ಸಿಂಗ್‌

ಟ್ರೆಡಿಶನಲ್ ಲುಕ್ಸ್ ಇಷ್ಟ

“ದೀಪಾವಳಿಯ ದಿನ ಪ್ಯೂರ್‌ ಟ್ರೆಡಿಶನಲ್ ಲುಕ್ಸ್ ಇಷ್ಟಪಡುತ್ತೇನೆ. ಬೆಳಗ್ಗೆ ಹಳದಿ ಬಣ್ಣದ ಸಾಂಪ್ರದಾಯಿಕ ಸೀರೆ ಮತ್ತು ಸಂಜೆ ಕೆಂಪು ಬಣ್ಣದ ಸೀರೆ ಉಡುತ್ತೇನೆ ಮತ್ತು ಜೊತೆಗೆ ಚಿನ್ನದ ಆಭರಣಗಳನ್ನು ಧರಿಸುತ್ತೇನೆ. ಮುಖದ ಸೌಂದರ್ಯಕ್ಕಾಗಿ ಕಣ್ಣಿಗೆ ಕಾಜಲ್, ತುಟಿಗೆ ಲಿಪ್‌ಸ್ಟಿಕ್‌ ಮತ್ತು ಹಣೆಗೆ ಪುಡಿ ಕುಂಕುಮ ಮತ್ತು ಪಾದಗಳಿಗೆ ಅಲ್ತಾ ಹಚ್ಚಿಕೊಳ್ಳುತ್ತೇನೆ. ಸ್ವಾಭಾವಿಕ ಸೌಂದರ್ಯಕ್ಕಾಗಿ ಹಬ್ಬಕ್ಕೆ ಒಂದು ದಿನ ಮೊದಲು ಮುಖಕ್ಕೆ ಅರಿಶಿನ ಮತ್ತು ಮುಲ್ತಾನಿ ಮಿಟ್ಟಿಯನ್ನೂ ಲೇಪಿಸುತ್ತೇನೆ. ಇದರಿಂದ ಮುಖಕ್ಕೆ ಕಾಂತಿ ದೊರೆಯುತ್ತದೆ. ಅಲ್ಲದೆ ಮೇಕಪ್‌ನ ಇನ್ನೊಂದು ಕೋಟ್‌ನ ಅಗತ್ಯವಿರುವುದಿಲ್ಲ.”

– ನೇಹಾ ಮರ್ದಾ

ಹಬ್ಬ ಯಾವುದೇ ಇರಲಿ, ಆ ದಿನದಂದು ನೀವು ಅತ್ಯಂತ ಸುಂದರವಾಗಿ ಕಾಣುವ ಅವಕಾಶವನ್ನು ಖಂಡಿತ ಕಳೆದುಕೊಳ್ಳಬೇಡಿ…..

ಪೂರ್ತಿ ಫೋಕಸ್‌ ಐ ಮೇಕಪ್‌ನೆಡೆಗೆ

“ದೀಪಾವಳಿಯಲ್ಲಿ ಇಂಡಿಯನ್‌ ಔಟ್‌ಫಿಟ್‌ ತೊಡುವುದರಿಂದ ನನ್ನ ಪೂರ್ತಿ ಗಮನ ಐ ಮೇಕಪ್‌ನೆಡೆ ಇರುತ್ತದೆ. ನನ್ನ ಅಭಿಪ್ರಾಯದಲ್ಲಿ ಕಣ್ಣುಗಳು ಮುಖದ ಆಕರ್ಷಣೆಯ ಕೇಂದ್ರಬಿಂದು. ಮೇಕಪ್‌ನಿಂದ ಅವುಗಳನ್ನು ಮತ್ತಷ್ಟು ಆಕರ್ಷಕಗೊಳಿಸಬಹುದು. ಕಣ್ಣುಗಳಿಗೆ ಸ್ಮೋಕಿ ಲುಕ್‌ ನೀಡಲು ನಾನು ಬ್ಲ್ಯಾಕ್‌ ಕಲರ್‌ನ ಥಿಕ್‌ ಐ ಲೈನರ್‌ ಮತ್ತು ಡಾರ್ಕ್‌ ಬ್ಲ್ಯಾಕ್‌ ಶೇಡ್‌ನ ಮಸ್ಕರಾ ಹಚ್ಚುತ್ತೇನೆ. ಇದರಿಂದ ಐ ಮೇಕಪ್‌ ಹೆವಿಯಾಗಿ ಕಾಣುತ್ತದೆ. ಐ ಮತ್ತು ಲಿಪ್‌ ಮೇಕಪ್‌ ಬ್ಯಾಲೆನ್ಸ್ಡ್ ಲುಕ್ಸ್ ನೀಡಲು ತುಟಿಗಳಿಗೆ ನ್ಯೂಡ್‌ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚುತ್ತೇನೆ.”

– ಐಶ್ವರ್ಯಾ ಸಖೂಜಾ

ಡ್ರೆಸ್‌ಗೆ ಹೊಂದುವ ಲಿಪ್‌ಸ್ಟಿಕ್‌ ಹಚ್ಚುತ್ತೇನೆ

“ಫೆಸ್ಟಿವ್ ಸೀಸನ್‌ಗೆ ಬ್ರೈಟ್‌ ಮೇಕಪ್‌ ಸೂಕ್ತ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ನಾನು ಬ್ರೈಟ್‌ ಮೇಕಪ್‌ ಮಾಡಿಕೊಳ್ಳುತ್ತೇನೆ. ಬೇಸ್‌ ಮೇಕಪ್‌ಗೆ ನ್ಯಾಚುರಲ್ ಲುಕ್‌ ನೀಡುತ್ತೇನೆ. ಲಿಪ್‌ ಮೇಕಪ್‌ಗೆ ಡ್ರೆಸ್‌ಗೆ ಹೊಂದುವಂತಹ ಪಿಂಕ್‌ ಅಥವಾ ಕಾಪರ್‌ ಶೇಡ್‌ನ ಲಿಪ್‌ಸ್ಟಿಕ್‌ ಹಚ್ಚುತ್ತೇನೆ. ಐ ಮೇಕಪ್‌ಗೆ ಶೈನಿ ಎಫೆಕ್ಟ್ ನೀಡಲು ಗ್ಲಿಟರ್‌ ಬಳಸುತ್ತೇನೆ.”

– ಸನಾ ಖಾನ್‌

ಸೀರೆ ಉಡಲು ಇಷ್ಟ

“ದೀಪಾವಳಿ ಹಬ್ಬದಲ್ಲಿ ನಾನು ಸೀರೆ ಉಡಲು ಇಷ್ಟಪಡುತ್ತೇನೆ. ಸೀರೆಯ ಜೊತೆಗೆ ಇಂಡಿಯನ್‌ ಮೇಕಪ್‌ ಸುಂದರವಾಗಿ ಕಾಣುವುದೆಂಬುದು ನನ್ನ ಭಾವನೆ. ಇಂಡಿಯನ್‌ ಮೇಕಪ್‌ಗೆ ತಕ್ಕಂತೆ ಐ ಮೇಕಪ್‌ಗೆ ಡಾರ್ಕ್‌ ಶೇಡ್‌ ಮತ್ತು ಚೀಕ್‌ ಮೇಕಪ್‌ಗೆ ಲೈಟ್‌ ಶೇಡ್‌ ಮೇಕಪ್‌ ಪ್ರಾಡಕ್ಟ್ಸ್ ಬಳಸಬೇಕು. ಆದ್ದರಿಂದ ಐ ಮೇಕಪ್‌ಗೆ ಹೆವಿ ಲುಕ್‌ ನೀಡಲು ನಾನು ಕಾಜಲ್, ಐ ಲೈನರ್‌ ಮತ್ತು ಡಾರ್ಕ್‌ ಶೇಡ್‌ನ ಐ ಶ್ಯಾಡೊ ಬಳಸುತ್ತೇನೆ. ತುಟಿಗಳಿಗೆ ನ್ಯೂಡ್‌ ಶೇಡ್‌ನ ಲಿಪ್‌ಸ್ಟಿಕ್‌ ಮತ್ತು ಚೀಕ್ಸ್ ಹೈಲೈಟ್‌ ಮಾಡಲು ಲೈಟ್‌ ಶೇಡ್‌ನ ಬ್ಲಶ್‌ಆನ್‌ ಹಚ್ಚುತ್ತೇನೆ.”

– ಬರ್ಖಾ ಬಿಷ್ಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ