ಆ್ಯಲೋವೇರಾ ಹಲವು ಗುಣಗಳ ಗಣಿ. ಇದರಲ್ಲಿ ಔಷಧಿಗಳ ಭಂಡಾರವೇ ಅಡಗಿದೆ. ಇದು ನಮ್ಮ ದೇಹದ ರೋಗಗಳನ್ನು ದೂರ ಮಾಡುವುದೇ ಅಲ್ಲದೆ, ಜೊತೆಗೆ ಮುಖದ ಅಂದವನ್ನು ಹೆಚ್ಚಿಸುವಲ್ಲಿಯೂ ಪೂರಕ. ಹೆಚ್ಚುತ್ತಿರುವ ಮಾಲಿನ್ಯ ಹಾಗೂ ಸೂರ್ಯನ UV ಕಿರಣಗಳಿಂದ ಚರ್ಮದ ಡ್ರೈನೆಸ್‌ ಹೆಚ್ಚುತ್ತದೆ. ಇದರಿಂದ ಮುಖದ ಕಾಂತಿ ತಗ್ಗುತ್ತದೆ. ಕೂದಲಿನಲ್ಲಿ ಡ್ಯಾಂಡ್ರಫ್‌ ಹೆಚ್ಚುತ್ತದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಆ್ಯಲೋವೇರಾ ರಾಮಬಾಣ ಆಗಲಿದೆ. ಬನ್ನಿ, ಆ್ಯಲೋವೇರಾ ಬಳಸಿಕೊಂಡು ಚರ್ಮವನ್ನು ಇನ್ನಷ್ಟು ಸೊಗಸಾಗಿ ಮಾಡಿಕೊಳ್ಳುವುದು ಹೇಗೆಂದು ತಿಳಿಯೋಣ.

ಡ್ರೈ ಸ್ಕಿನ್‌ : ಇದು ಆಯ್ಲಿ ಸ್ಕಿನ್‌ಗಿಂತ ಹೆಚ್ಚು ನಾಜೂಕಾಗಿರುತ್ತದೆ. ಇದನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಮುಖದ ಮೇಲೆ ಸುಕ್ಕು, ನೆರಿಗೆ, ಫೈನ್‌ ಲೈನ್ಸ್, ರಾಶೆಸ್‌ ಆಗಿಹೋಗುತ್ತದೆ. ಹೀಗಾಗಿ ಇದಕ್ಕೆಲ್ಲ ಆ್ಯಲೋವೇರಾ ಬಳಸಿಕೊಂಡು ಶುಷ್ಕ ತ್ವಚೆಯಿಂದ ಮುಕ್ತಿ ಪಡೆಯಬಹುದು.

ಬಳಸುವ ವಿಧಾನ : ತಾಜಾ ಆ್ಯಲೋವೇರಾ ಕಿತ್ತು ಅದರಿಂದ ಜೆಲ್ ‌ಬೇರ್ಪಡಿಸಿ ಒಂದು ಬಟ್ಟಲಿಗೆ ಹಾಕಿಡಿ. ಇದಕ್ಕೆ 1 ಚಮಚ ಜೇನು ಬೆರೆಸಿಕೊಂಡು, ಈ ಮಿಶ್ರಣವನ್ನು ಡ್ರೈ ಸ್ಕಿನ್‌, ಮಟ್ಟವಾಗಿರುವ ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿರಿ. 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಗ್ಲೋಯಿಂಗ್ಸ್ಕಿನ್ಗಾಗಿ : ಸುಂದರ ಗ್ಲೋಯಿಂಗ್‌ ಚರ್ಮ ಬೇಕೆಂದು ಪ್ರತಿ ಯುವತಿಯೂ ಬಯಸುತ್ತಾಳೆ. ಆದರೆ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ಚರ್ಮ ಕಾಂತಿಯುತ ಆಗುವ ಬದಲು, ಡಲ್ ಮತ್ತು ನಿರ್ಜೀವ ಆಗಿಬಿಡುತ್ತದೆ. ಹೀಗಾಗಿ ಮನೆಯಿಂದ ಹೊರಗೆ ಹೊರಡುವ ಮೊದಲು, ಮುಖವನ್ನು ದುಪಟ್ಟಾದಿಂದ ಮರೆಯಾಗಿಸಿ. ಮುಖದ ಕಾಂತಿ ಸದಾ ಉಳಿದಿರಲು ಆ್ಯಲೋವೇರಾ ಬಳಸಿಕೊಳ್ಳಿ.

ಬಳಸುವ ವಿಧಾನ : ಒಂದು ಬಟ್ಟಲಿಗೆ 2 ಚಮಚ ಅಕ್ಕಿ ಹಿಟ್ಟು ಹಾಕಿಡಿ. ಇದಕ್ಕೆ ಆ್ಯಲೋವೇರಾ ಜೆಲ್ ‌ಬೆರೆಸಿ, ಅದನ್ನು ಡ್ರೈ ಸ್ಕಿನ್‌ಗೆ ಸ್ಕ್ರಬ್‌ ಮಾಡಿ, 30 ನಿಮಿಷಗಳ ನಂತರ ತೊಳೆಯಿರಿ.

ತಲೆ ಹೊಟ್ಟು : ಕೂದಲಿನ ಆರೈಕೆ ಸರಿಯಾಗಿ ಆಗದಿದ್ದರೆ, ಅದರಲ್ಲಿ ಹಲವಾರು ಸಮಸ್ಯೆ ಕಾಣಿಸುತ್ತದೆ. ತಲೆಹೊಟ್ಟು ಅಥವಾ ಡ್ಯಾಂಡ್ರಫ್‌ ಅದರಲ್ಲಿ ಪ್ರಮುಖ. ಕೂದಲಿನಲ್ಲಿ ತಲೆಹೊಟ್ಟು ಹೆಚ್ಚಾದಷ್ಟೂ, ಕೂದಲು ನಿರ್ಜೀವ, ದುರ್ಬಲವಾಗುತ್ತದೆ. ಸಹಜವಾಗಿ ಕೂದಲು ಬೇಗ ಮುರಿದು ಉದುರತೊಡಗುತ್ತದೆ. ಆಗ ತಲೆಯಲ್ಲಿ ಸತತ ನವೆ, ತುರಿಕೆ ಹೆಚ್ಚುತ್ತದೆ. ಹೀಗಾಗಿ ಆ್ಯಲೋವೇರಾ ಹೇರ್‌ ಮಾಸ್ಕ್ ಬಳಸಬೇಕು. ಇದು ಕೂದಲಿಗೆ ಹೆಚ್ಚಿನ ಪೋಷಣೆ ಒದಗಿಸಿ ಅದನ್ನು ಹೆಚ್ಚು ಶುಭ್ರ, ಕಾಂತಿಯುತ ಮಾಡುತ್ತದೆ.

ಬಳಸುವ ವಿಧಾನ : ಆ್ಯಲೋವೇರಾ ಮಾಸ್ಕ್ ಗಾಗಿ ಒಂದು ಬಟ್ಟಲಲ್ಲಿ ತುಸು ಆ್ಯಲೋವೇರಾ ಜೆಲ್ ‌ತೆಗೆದುಕೊಳ್ಳಿ. ಇದಕ್ಕೆ ತುಸು ಕಂಡೀಶನರ್‌, ಆಲಿವ್ ‌ಆಯಿಲ್‌, ಕೊಬ್ಬರಿ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಈ ಮಿಶ್ರಣವನ್ನು ತಲೆಗೆ ತಿಕ್ಕಬೇಕು. ಸುಮಾರು 45-50 ನಿಮಿಷಗಳ ನಂತರ, ಹರ್ಬಲ್ ಶ್ಯಾಂಪೂ ಬಳಸಿ ತಲೆ ತೊಳೆದುಕೊಳ್ಳಿ.

ಮೊಡವೆಗಳಿಂದ ಮುಕ್ತಿ : ಮುಖದಲ್ಲಿ ಮೊಡವೆಗಳು ಉಂಟಾಗಲು ಹಲವು ಕಾರಣಗಳಿವೆ. ಫಾಸ್ಟ್ ಫುಡ್‌, ಹೆಚ್ಚಿನ ಆಯ್ಲಿ ಫುಡ್‌ ಸೇವನೆ ಇತ್ಯಾದಿ. ಮಾಲಿನ್ಯ ಸಹ ಮತ್ತೊಂದು ಪ್ರಮುಖ ಕಾರಣ. ಮಾಲಿನ್ಯದಿಂದ ಮುಖದ ಮೇಲೆ ಧೂಳು ಮಣ್ಣು ಜಮೆಗೊಳ್ಳುತ್ತದೆ. ಆ ಕಾರಣ ಆ್ಯಕ್ನೆ ಮೊಡವೆಗಳು ಹೆಚ್ಚಾಗುತ್ತವೆ. ಆ್ಯಲೋವೇರಾದ ಸೂಕ್ತ ಬಳಕೆಯಿಂದ ಮೊಡವೆಗಳಿಂದ ನಮಗೆ ಮುಕ್ತಿ ಸಿಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ