ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಹೆಂಗಸರು ದುಪಟ್ಟಾ, ಸೆರಗು, ಸ್ಕಾರ್ಫ್, ಸನ್ ಗ್ಲಾಸೆಸ್, ಛತ್ರಿ ಇತ್ಯಾದಿಗಳ ಮೊರೆ ಹೋಗುತ್ತಾರೆ. ಏಕೆಂದರೆ ಬಿಸಿಲಿನ ತಿರುಗಾಟದಿಂದ ಟ್ಯಾನಿಂಗ್ ಸಮಸ್ಯೆ ಕಾಡುತ್ತದೆ. ಮುಂದೆ ಈ ಟ್ಯಾನಿಂಗ್ ಹಲವಾರು ಚರ್ಮ ರೋಗಳಿಗೆ ತಯಾರಾಗುತ್ತದೆ. ಚರ್ಮ ತಜ್ಞರು ಈ ಅನ್‌ಈವೆನ್ ಟ್ಯಾನ್ ಕುರಿತಾಗಿ ವಿವರಿಸುತ್ತಾ, ದೇಹದ ತೆರೆದ ಭಾಗಗಳು ಸತತ ಬಿಸಿಲಿನ ಸಂಪರ್ಕಕ್ಕೆ ಬರುವುದರಿಂದ, ಅಲ್ಲಿ ಟ್ಯಾನಿಂಗ್ ಕಾಟ ತಪ್ಪದು. ಮುಖ್ಯವಾಗಿ ಟ್ಯಾನಿಂಗ್‌ನ ಪರಿಣಾಮವನ್ನು ಮುಖ, ಕುತ್ತಿಗೆ, ಬೆನ್ನು, ತೋಳುಗಳ ಬಳಿ ಕಾಣಬಹುದು. ಟ್ಯಾನಿಂಗ್‌ಗೆ ಬೇಗ ಬಲಿಯಾಗುವವರು ಶ್ಯಾಮಲ ವರ್ಣದವರು. ಅವರ ಚರ್ಮದಲ್ಲಿ ಹೆಚ್ಚಿನಂಶ ಮೆಲನಿನ್ ಇದೆ. ಬಿಸಿಲಿನ ಓಡಾಟದಿಂದ ಇಂಥವರಿಗೆ ಬೇಗ ಸನ್‌ಬರ್ನ್ ಆಗುತ್ತದೆ, ಇದರಿಂದಾಗಿ ಇವರ ಚರ್ಮ ಸೋತುಹೋದಂತೆ ಕಂಡುಬರುತ್ತದೆ. ಬಿಸಿಲಿಗೆ ಹೊರಡುವ ಮೊದಲು ದೇಹದ ತೆರೆದ ಭಾಗಗಳಿಗೆ 20 ಅಥವಾ 30 SPFನ ಸನ್‌ಸ್ಕ್ರೀನ್ ಅಗತ್ಯ ಹಚ್ಚಿಕೊಳ್ಳಿ. ಬಹಳ ಹೊತ್ತು ಬಿಸಿಲಿನ ಓಡಾಟವಿದೆ ಎಂದರೆ, 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್ ಹಚ್ಚುತ್ತಿರಿ. ತುಂಬು ತೋಳಿನ ಉಡುಗೆ ಧರಿಸಲು ಮರೆಯದಿರಿ.
ಚರ್ಮದಿಂದ ಟ್ಯಾನ್ ತೊಲಗಿಸಲು ಹಲವು ವಿಧಾನಗಳಿವೆ. ಆದರೆ ಅದರ ಬದಲಾಗಿ, ಟ್ಯಾನಿಂಗ್‌ನಿಂದ ಬಚಾವಾಗುವುದೇ ಮೇಲು. ಸನ್‌ಸ್ಕ್ರೀನ್, ಕ್ಲೆನ್ಸರ್, ಟೋನರ್, ಮಾಯಿಶ್ಚರೈಸರ್, ನೈಟ್ ಸೀರಮ್ ಇತ್ಯಾದಿ ಟ್ಯಾನಿಂಗ್ ತಡೆಯಲು ಪೂರಕವಾಗಿವೆ.
ಕೆಮಿಕಲ್ ಟ್ರೀಟ್‌ಮೆಂಟ್‌ನ ಪರಿಣಾಮ
ಎಷ್ಟೋ ಸಲ ಟ್ಯಾನಿಂಗ್‌ನ ಪರಿಣಾಮ ತೀವ್ರ ತರವಾದಾಗ ನಾವು ಕೆಮಿಕಲ್ ಟ್ರೀಟ್‌ಮೆಂಟ್‌ಗೆ ಮೊರೆ ಹೋಗಬೇಕಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಹಲವು ಬಗೆಯ ಕೆಮಿಕಲ್, ಲೇಸರ್ ಚಿಕಿತ್ಸೆಗಳು ಲಭ್ಯವಿವೆ.
ಕೆಮಿಕಲ್ ಪೀಲ್ : ಈ ಟೆಕ್ನಿಕ್ ಮೂಲಕ ಮುಖ, ಕುತ್ತಿಗೆ, ಕೈಗಳ ಚರ್ಮದ ಮೇಲಾಗಿರುವ ಟ್ಯಾನಿಂಗ್ ಪರಿಣಾಮವನ್ನು ಕಡಿಮೆ ಮಾಡಬಹುದಾಗಿದೆ. ಇದರ ಮೂಲಕ ಸೀಮಿತ ರೂಪದಲ್ಲಿ ಟಾಕ್ಸಿನ್ ಕೆಮಿಕಲ್ ಸಲ್ಯೂಷನ್‌ನ್ನು ಚರ್ಮಕ್ಕೆ ಹಚ್ಚಲಾಗುತ್ತದೆ. ಇದರಿಂದಾಗಿ ಚರ್ಮದ ಮೇಲ್ಭಾಗದ ಟಿಶ್ಯು ಸತ್ತುಹೋಗುತ್ತದೆ, ಹಾಗಾಗಿ ಅದರ ಪದರ ಡೆಡ್ ಸ್ಕಿನ್‌ಆಗಿ ಉದುರಿಹೋಗುತ್ತದೆ. ಇದರಿಂದ ಡ್ರೈ ಸ್ಕಿನ್ ಅತಿ ಮೃದುವಾಗುತ್ತದೆ, ಟ್ಯಾನಿಂಗ್ ಮರೆಯಾಗುತ್ತದೆ ಹಾಗೂ ಕಾಂತಿ ಹೆಚ್ಚುತ್ತದೆ. ಕೆಮಿಕ್ ಪೀಲ್ ವಿಧದ್ದಾಗಿರುತ್ತದೆ. ಲಂಚ್ ಟೈಂ ಪೀಲ್, ಮೀಡಿಯಂ ಪೀಲ್ ಮತ್ತು ಡೀಪ್ ಪೀಲ್.
ಫೋಟೋ ಫೇಶಿಯಲ್ : ಟ್ಯಾನಿಂಗ್ ಸಮಸ್ಯೆಯಿಂದ ಮುಕ್ತಿ ಕೊಡಿಸುವಲ್ಲಿ ಫೋಟೋ ಫೇಶಿಯಲ್ ಬಲು ಉಪಯುಕ್ತ. ಸನ್ ಡ್ಯಾಮೇಜ್‌ನಿಂದ ಚರ್ಮಕ್ಕೆ ಎಷ್ಟು ದೊಡ್ಡ ಮೊತ್ತದ ಹಾನಿ ಆಗುತ್ತದೆಂದರೆ ವೈದ್ಯಕೀಯ ಚಿಕಿತ್ಸೆ ಪಡೆಯಲೇಬೇಕಾಗುತ್ತದೆ. ಇದನ್ನು ಮಾಡಿಸುವುದರಿಂದ ಮೃತ ಚರ್ಮಕ್ಕೆ ಜೀವ ಬಂದಂತೆ ಆಗುತ್ತದೆ. ಆದರೆ ಈ ಫೇಶಿಯಲ್‌ನ್ನು ಮಾಡಿಸುವ ಮೊದಲು ಅಗತ್ಯವಾಗಿ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಕಾರ್ಬನ್ ಫೇಶಿಯಲ್ : ಚರ್ಮದ ಕಾಂತಿಯನ್ನು ಸದಾ ಕಾಪಾಡಿಕೊಳ್ಳಲು ಇದನ್ನು ಮಾಡಿಸಬೇಕಾದುದು ಅನಿವಾರ್ಯ. ಇದನ್ನು ಮಾಡಿಸುವುದರಿಂದ ಚರ್ಮದಲ್ಲಿ ಹೆಚ್ಚಿನ ಕಾಂತಿ ಮೂಡುತ್ತದೆ ಹಾಗೂ ಇದು ಮೊದಲಿಗಿಂತ ಹೆಚ್ಚಿನ ಹೊಳಪನ್ನು ತುಂಬುತ್ತದೆ. ಇತ್ತೀಚೆಗೆ ಕಾರ್ಬನ್ ಫೇಶಿಯಲ್ ಹೆಚ್ಚು ಚಾಲ್ತಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಇದು ಮೂರು ಬಗೆಯ ಚರ್ಮ ಅಂದ್ರೆ ಆಯ್ಲಿ, ನಾರ್ಮಲ್, ಡ್ರೈ ಸ್ಕಿನ್ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಇದೊಂದು ನಾನ್ ಇನ್‌ವೇಸಿವ್ ಪ್ರಕ್ರಿಯೆ ಆಗಿದ್ದು, ಇದನ್ನು ಚಾರ್ ಕೋಲ್ ಫೇಶಿಯಲ್ ಯಾ ಚಾರ್ ಕೋಲ್ ಪೀಲ್ ಎಂದೂ ಹೇಳುತ್ತಾರೆ. ಈ ಫೇಶಿಯಲ್‌ನಲ್ಲಿ ದ್ರವ ಕಾರ್ಬನ್ನಿನ ಪದರವನ್ನು ಮುಖದ ಮೇಲೆ ಹಾಕುತ್ತಾರೆ. ಅದು ರೋಮ ರಂಧ್ರದಲ್ಲಿ ಆಳವಾಗಿ ಬೇರೂರುತ್ತದೆ. ಈ ಫೇಶಿಯಲ್ ಚರ್ಮದಿಂದ ಡೆಡ್ ಸ್ಕಿನ್ ಸೆಲ್ಸ್ ಬ್ಲ್ಯಾಕ್ ಹೆಡ್ಸ್ ನ್ನು ಸಂಪೂರ್ಣ ತೊಲಗಿಸುತ್ತದೆ.