– ರಾಘವೇಂದ್ರ ಅಡಿಗ ಎಚ್ಚೆನ್.
“ರೋಣ” ಚಿತ್ರದ ಟ್ರೇಲರ್ ಜನಪ್ರಿಯತೆ ಗಳಿಸುತ್ತಿದೆ. ಚಿತ್ರದ ಟ್ರೇಲರ್ ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಮೆಚ್ಚಿ, ಚಿತ್ರತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ನಗರದ ಉತ್ಸವ್ ಲೆಗಸಿಯಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ಪ್ರಭಾಕರ್ ಪ್ರಮುಖ ಅತಿಥಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಪ್ರಭಾಕರ್ , ಗ್ರಾಮೀಣ ಭಾಗದ ರಂಗಭೂಮಿ ಪ್ರತಿಭೆಗಳು ಬಹಳ ಆಸಕ್ತಿಯಿಂದ ಒಂದು ಉತ್ತಮ ಚಿತ್ರವನ್ನು ಮಾಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳು ಟ್ರೇಲರ್ ವೀಕ್ಷಿಸಿ ತಂಡಕ್ಕೆ ಶುಭವನ್ನ ಹಾರೈಸಿದರು. ನಾನು ಕೂಡ ತಂಡಕ್ಕೆ ಶುಭ ಕೋರುತ್ತೇನೆ. ಟ್ರೇಲರ್ ಬಹಳ ಕುತೂಹಲಕಾರಿಯಾಗಿದೆ, ಸಂಗೀತ ಚೆನ್ನಾಗಿದೆ ಎಂದರು.

ರೋಣ ಚಿತ್ರವನ್ನು ನಟ ಮತ್ತು ನಿರ್ಮಾಪಕ ರಘು ರಾಜ ನಂದ ನಿರ್ಮಿಸಿದ್ದಾರೆ. ಚೊಚ್ಚಲ ನಿರ್ದೇಶಕ ಸತೀಶ್ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಅರಂಭಿಸಿದ್ದಾರೆ. ಇದು ಹಳ್ಳಿ ಸೊಗಡಿನಲ್ಲಿ ಸಾಗುವ ವಿಶಿಷ್ಟ ಕಥೆಯಾಗಿದ್ದು, ಸಂಬಂಧಗಳ ಬೆಸುಗೆ, ಧಾರ್ಮಿಕ, ರಾಜಕೀಯ ಮತ್ತು ವೈಜ್ಞಾನಿಕ ವಿಚಾರಗಳ ಸಂಗಮವನ್ನು ಚಿತ್ರಿಸುತ್ತದೆ.
ನಿರ್ದೇಶಕ ಸತೀಶ್ ಕುಮಾರ್ ಅವರು ತಮ್ಮ ಚೊಚ್ಚಲ ಪ್ರಯತ್ನದ ಬಗ್ಗೆ ಮಾತನಾಡಿ, ಇದು ಅಪ್ಪ-ಮಗನ ಭಾವನಾತ್ಮಕ ಕಥೆ. ಹಳ್ಳಿ ಸೊಗಡಿನೊಂದಿಗೆ ವೈಜ್ಞಾನಿಕ, ಧಾರ್ಮಿಕ, ರಾಜಕೀಯ, ಸ್ನೇಹ ಮತ್ತು ಪ್ರೇಮದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಚಿತ್ರವನ್ನು 65 ದಿನಗಳಲ್ಲಿ ಹೊಸಕೋಟೆ ಸೇರಿದಂತೆ ಹಲವೆಡೆ ಚಿತ್ರೀಕರಿಸಲಾಗಿದೆ.

ಬಿ. ಆರ್. ಕೆ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರದಲ್ಲಿ ತಮ್ಮ ರಂಗಭೂಮಿ ಗುರುಗಳಾದ ಸದಾಶಿವ ನೀನಾಸಂ ಅವರು ಅಭಿನಯಿಸಿರುವುದು ಗಮನಾರ್ಹ. ನಮ್ಮ ಚಿತ್ರದಲ್ಲಿ ಎಲ್ಲಾ ರೀತಿಯ ಅಂಶಗಳಿವೆ. ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ರಘು ರಾಜ ನಂದರು ಭರವಸೆ ತಾಳಿದರು.
ನಾನು ನಗರದ ವಿದ್ಯಾವಂತ ಹುಡುಗಿಯ ಪಾತ್ರದಲ್ಲಿದ್ದೇನೆ, ಅವಳು ಹಳ್ಳಿಗೆ ಬಂದು ಅಲ್ಲಿ ನಡೆಯುವ ಘಟನೆಗಳನ್ನು ಎದುರಿಸುತ್ತಾಳೆ. ಇಡೀ ತಂಡ ಬಹಳ ಶ್ರಮಪಟ್ಟಿದೆ, ಎಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಚಿತ್ರದ ನಾಯಕಿ ಪ್ರಕೃತಿ ಪ್ರಸಾದ್
ಚಿತ್ರದ ಛಾಯಾಗ್ರಹಣ ಅರುಣ್ ಕುಮಾರ್, ಗಗನ್ ಬದೇರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಜ್ಞಾನೇಶ್ ಬಿ ಮಠದ್ ಸಂಕಲನ ಮಾಡಿದ್ದಾರೆ. ಶರತ್ ಲೋಹಿತಾಶ್ವ, ಮಾಲೂರು ವಿಜಯ್, ಚಿಲ್ಲರ್ ಮಂಜು, ಗೀತಾ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ರೋಣ ಚಿತ್ರವನ್ನು ನವೆಂಬರ್ 7ರಂದು ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿವೆ.




 
  
         
    




 
                
                
                
                
               