ಈ ಜೀವನ ಸುಖವಾಗಿರಲು....
ಇತ್ತೀಚೆಗೆ ನಮ್ಮ ದೇಶದ ಒಂದು ಹೈಕೋರ್ಟ್, ಒಬ್ಬ ದುಃಖಿತ ಪತಿಗೆ ಡೈವೋರ್ಸ್ ಕುರಿತಾಗಿ ತೀರ್ಪು ನೀಡುತ್ತಾ, ಯಾವ ಪತ್ನಿ ಪತಿಗೆ ಸೆಕ್ಸ್ ಸುಖ ನೀಡಲು ನಿರಾಕರಿಸುತ್ತಾಳೋ, ಅದು ಹಿಂದೂ ವಿವಾಹ ಕಾಯಿದೆ 1955ರ ಪ್ರಕಾರ ಕ್ರುಯಾಲಿಟಿ ಎನಿಸುತ್ತದೆ. ಪತಿಪತ್ನಿ ಸಂಬಂಧ ಸೆಕ್ಸ್ ನ್ನು ಆಧರಿಸಿದೆ. ಈ ತೀರ್ಪು ತುಸು ವಿಚಿತ್ರ ಅನಿಸಬಹುದು, ಯಾವ ರೀತಿ ಗಂಡು ವಿವಾಹೇತರ ಸಂಬಂಧದಲ್ಲಿ ಸೆಕ್ಸ್ ಸುಖ ನೀಡುವ, ಪಡೆಯುವ ಹಕ್ಕು ಹೊಂದಿದ್ದಾನೋ, ಅದೇ ರೀತಿ ಹೆಣ್ಣೂ ಹೊಂದಿರುತ್ತಾಳೆ.
ಸೆಕ್ಸ್, ಮಕ್ಕಳ ಜನನ ಮಾತ್ರವೇ ಮದುವೆಯ ಉದ್ದೇಶ ಎಂಬ ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಇದು ನಮ್ಮ ಧರ್ಮ, ಅದರ ಮಾನ್ಯತೆ, ಸಂಸ್ಕಾರಗಳ ಕೊಡುಗೆ ಆಗಿದೆ. ನಮ್ಮ ದೇಶದ ಪ್ರತಿ ಧರ್ಮ ಹೆಣ್ಣಿಗೆ ನೀಡುವ ಆದೇಶ ಎಂದರೆ, ಮದುವೆ ಮಾಡಿಕೊಳ್ಳಿ, ಪತಿಗೆ ಗುಲಾಮರಾಗಿರಿ, ಅವನಿಗೂ ಸೆಕ್ಸ್, ಮಕ್ಕಳ ನಂಬಿಕೆ ನೀಡಿ ಇತ್ಯಾದಿ. ಇದನ್ನೇ ಈ ಹೈಕೋರ್ಟ್ ಸಹ ಹೇಳಿದೆ.
ವಿವಾಹದ ಕಾನೂನು ಕಟ್ಟಳೆ, ಇದರ ಮೂಲ ಉದ್ದೇಶ ಏನೇ ಇರಲಿ, ಇಂದು ಕಾನೂನಿನ ಕಟ್ಟುನಿಟ್ಟು ಹೇಗಿದೆ ಎಂದರೆ, ಪತಿ ಪತ್ನಿ ಸಂಬಂಧ, ಒಬ್ಬ ವ್ಯಕ್ತಿ ಹಾಗೂ ಅವನ ದೇಶದ ಜೊತೆಗಿನ ಹಕ್ಕು ಎಂಬಂತೆ ಆಗಿಹೋಗಿದೆ. ಅಂದ್ರೆ ದೇಶದ ಏಕೈಕ ಕರ್ತವ್ಯ ನಾಗರಿಕರು ನೆಲೆ ನಿಲ್ಲಲು ಒಪ್ಪಿಗೆ ನೀಡುವುದಕ್ಕಿಂತ ಹೆಚ್ಚಾಗಿ ಅವರ ಸುರಕ್ಷತೆ, ನೌಕರಿಯ ಗ್ಯಾರಂಟಿ, ಶಿಕ್ಷಣದ ಅವಕಾಶ, ಆರೋಗ್ಯ ಕಾಳಜಿ, ಸಾರಿಗೆ ಸಂವಹನಕ್ಕಾಗಿ ಬೇಕಾದ ಅನುಕೂಲ..... ಇತ್ಯಾದಿಗಳಂತೆಯೇ ವಿವಾಹ ಎಂಬುದು ಪತಿಪತ್ನಿಯರನ್ನು ಪರಸ್ಪರ ಬೆಸೆಯುವುದಲ್ಲದೆ, ಸಮಾಜಕ್ಕೆ ಸಂಬಂಧಿಸಿದ ಬಹಳಷ್ಟು ಹಕ್ಕುಗಳನ್ನೂ ನೀಡುತ್ತದೆ.
ಇದೊಂದು ಕೇವಲ ಧಾರ್ಮಿಕ ಕಾಂಟ್ರಾಕ್ಟ್ ಆಗಿ ಉಳಿದಿಲ್ಲ, ಇದೀಗ ಕಾನೂನುಬದ್ಧ ಕಾಂಟ್ರಾಕ್ಟ್ ಆಗಿದೆ. ಇದನ್ನು ವಿಶ್ವದೆಲ್ಲೆಡೆ ಯಾವುದೇ ಧರ್ಮ ಮುರಿಯಲಾಗದು, ಅಂಥ ಕಾಂಟ್ರಾಕ್ಟ್ ಇದು. ಇಸ್ಲಾಮಿಕ್ ದೇಶಗಳಲ್ಲೂ ತಲಾಖ್ ನ ಡಿಕ್ರಿಗಾಗಿ, ಯಾವುದಾದರೂ ಕೋರ್ಟ್ ಗೆ ಹೋಗಲೇಬೇಕು.
ಮದುವೆ ಅಂದ್ರೆ ಸೆಕ್ಸ್ ಅನುಭವಿಸಲು ಲೈಸೆನ್ಸ್ ಆಗಿ ಉಳಿದಿಲ್ಲ. ಇದು ಜೊತೆ ಜೊತೆಗೆ ವಾಸಿಸಲು, ಪರಸ್ಪರ ರೆಪ್ರೆಸೆಂಟ್ ಮಾಡಲು ಹಕ್ಕು ಒದಗಿಸುತ್ತದೆ. ಒಬ್ಬ ಸಂಗಾತಿ ಸತ್ತರೆ ಯಾ ಅಂಗವಿಕಲರಾದರೆ, ಅವರ ಹಕ್ಕೆಲ್ಲ ಕಟ್ಟಿಕೊಂಡ ಸಂಗಾತಿಗೆ ತಕ್ಷಣ ತಂತಾನೇ ವರ್ಗವಾಗುತ್ತದೆ. ಹಾಗಾಗಿ ಮದುವೆಯನ್ನು ಸೆಕ್ಸ್ ಗೆ ಮೂಲ ಎಂದು ಭಾವಿಸುವುದು ಈ ದೃಷ್ಟಿಯಿಂದ ತಪ್ಪು ಮಾತ್ರವಲ್ಲ, ಭಯಂಕರ ಅಪರಾಧವಾದೀತು, ಆದರೆ ಕೋಟ್ಯಂತರ ಹೆಂಗಸರು, ತಾವು ಗಂಡನಿಗೆ ಸೆಕ್ಸ್ ಸುಖ ನೀಡಲೇಬೇಕೆಂಬ ಭ್ರಮೆಯಲ್ಲೇ ಬದುಕುತ್ತಿದ್ದಾರೆ.
ಎಷ್ಟೋ ಹೆಂಗಸರು ಯಾವುದೋ ಕಾರಣಕ್ಕೆ ಈ ಸುಖ ನೀಡಲಾಗದಿದ್ದರೆ ಅಂದ್ರೆ ತಮ್ಮ ರೋಗ, ಸ್ಥೂಲತೆ, ದೂರ ಇರಬೇಕಾದ ಅನಿವಾರ್ಯತೆ, ಪತಿಯ ಅನಗತ್ಯ ಬೇಡಿಕೆಗಳು ಇತ್ಯಾದಿ ಪೂರೈಸಲಾಗದಿದ್ದರೆ ಬಹಳ ಗಿಲ್ಟ್ ಫೀಲ್ ಮಾಡಿಕೊಳ್ಳುತ್ತಾರೆ. ಮದುವೆಯ ಅರ್ಥ ಸದಾ ಜೊತೆಗಿರುವುದು ಮುಖ್ಯ, ಇದು ಬೇರೆ ಎಲ್ಲಾ ವಿಧಗಳಿಗಿಂತಲೂ ಅತ್ಯಗತ್ಯ. ಮದುವೆ ಅಂದ್ರೆ ಕೇವಲ ಒಬ್ಬ ವಿಧ್ಯುಕ್ತ ಲೈಂಗಿಕ ಸಂಗಾತಿಯನ್ನು ಪಡೆಯುವುದಷ್ಟೇ ಅಲ್ಲ, ಜೀವನದ 2-3 ಗಂಟೆಗಳಿಗೂ ಹೆಚ್ಚು ಕಾಲ ಪರಸ್ಪರ ಜೊತೆ ನೀಡಿ, ಪರಸ್ಪರ ಅವಲಂಬಿತ ಆಗಿರುತ್ತಾರೆ.





