ಕರ್ನಾಟಕದಲ್ಲಿರುವ ಇಂದಿರಾ ಕ್ಯಾಂಟೀನ್ ನಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 'ಅಟಲ್ ಕ್ಯಾಂಟೀನ್' ಆರಂಭಿಸಲಾಗಿದೆ.

ನಗರದಾದ್ಯಂತ 100 ಸ್ಥಳಗಳಲ್ಲಿ ಕೇವಲ 5 ರೂ.ಗೆ ಪೌಷ್ಟಿಕಾಂಶಯುಕ್ತ ಊಟವನ್ನು ಒದಗಿಸಲು ಅಟಲ್ ಕ್ಯಾಂಟೀನ್ ಗಳನ್ನು ದೆಹಲಿ ಸರ್ಕಾರ ಆರಂಭಿಸಿದೆ.

ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮದಿನದ ಸ್ಮರಣಾರ್ಥ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಬಡವರು, ಕಾರ್ಮಿಕರು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ 100 ಅಟಲ್ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿದ್ದಾರೆ.

ಅಟಲ್ ಕ್ಯಾಂಟೀನ್ ದೆಹಲಿಯ ಆತ್ಮವಾಗಲಿದೆ. ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಇದನ್ನು ಸ್ಥಾಪಿಸಲಾಗಿದೆ ಎಂದು ರೇಖಾ ಗುಪ್ತಾ ಹೇಳಿದ್ದಾರೆ.

ಮೆನುವಿನಲ್ಲಿ ಏನಿದೆ?: ದೆಹಲಿಯಾದ್ಯಂತ 45 ಅಟಲ್ ಕ್ಯಾಂಟೀನ್‌ಗಳು ಗುರುವಾರ ಪ್ರಾರಂಭವಾಗಿವೆ. ಉಳಿದ 55 ಕ್ಯಾಂಟೀನ್‌ಗಳು ಮುಂದಿನ ದಿನಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಈ ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ಎರಡು ಊಟಗಳನ್ನು ನೀಡಲಾಗುತ್ತದೆ. ಬೆಳಗ್ಗೆ 11 ರಿಂದ ಸಂಜೆ 4 ರ ನಡುವೆ ಮತ್ತು ಸಂಜೆ 6:30 ರಿಂದ 9:30 ರ ನಡುವೆ ಸುಮಾರು 500 ಜನರಿಗೆ ಥಾಲಿ ಊಟ ಇರುತ್ತದೆ. ಇದರಲ್ಲಿ ದಾಲ್, ಅನ್ನ, ಚಪಾತಿ, ತರಕಾರಿ ಪಲ್ಯ ಮತ್ತು ಉಪ್ಪಿನ ಕಾಯಿ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಟೋಕನ್ ವ್ಯವಸ್ಥೆ: ಊಟ ವಿತರಣೆಗಾಗಿ ದೆಹಲಿ ಸರ್ಕಾರ ಡಿಜಿಟಲ್ ಟೋಕನ್ ವ್ಯವಸ್ಥೆ ಪರಿಚಯಿಸಿದೆ. ಕೂಪನ್ ಕೊಡುವ ಬದಲು ಡಿಜಿಟಲ್ ಕೂಪನ್ ವ್ಯವಸ್ಥೆ ಮಾಡಲಾಗಿದೆ.

ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್‌ನ (DUSIB) ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ CCTV ಕ್ಯಾಮೆರಾಗಳು ಎಲ್ಲಾ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ