ಮುಖದಲ್ಲಿನ ಕಲೆ, ಸುಕ್ಕು, ನಿರಿಗೆಗಳಿಂದ ಮುಕ್ತಿ ಪಡೆಯಲು ಇಲ್ಲಿವೆ ಸುಲಭ ಸಾಧ್ಯ ಮನೆ ಮದ್ದು. ಏನದು......?

ರಿಂಕಲ್ಸ್ ನಿಂದ ಮುಕ್ತಿ ಪಡೆಯಲು ಕೇವಲ ಮೆಡಿಕಲ್ ಟ್ರೀಟ್‌ ಮೆಂಟ್‌ ಒಂದೇ ದಾರಿ ಎಂದು ಭಾವಿಸದಿರಿ. ಇದಕ್ಕಾಗಿ ನಮ್ಮ ಅಜ್ಜಿ ಕಾಲದ ಮನೆ ಮದ್ದು ಬಹಳ ಸರಳವಾಗಿದೆ. ಆ ಉಪಾಯಗಳ ಕುರಿತು ವಿವರವಾಗಿ ತಿಳಿಯೋಣವೇ.....?

ಕೊಬ್ಬರಿ ಎಣ್ಣೆ ನಿಮ್ಮ ಕಂಗಳ ಕೆಳಗೆ ಅಥವಾ ಮುಖ, ಮೈನಲ್ಲಿ ಎಲ್ಲೇ ಸುಕ್ಕುಗಳಿರಲಿ, ಆ ಭಾಗಕ್ಕೆ ರಾತ್ರಿ ಮಲಗುವ ಮುನ್ನ ಪ್ರತಿದಿನ ಕೊಬ್ಬರಿ ಎಣ್ಣೆ (ಚಳಿಗೆ ಅದು ಗಟ್ಟಿ ಆಗಿದ್ದರೆ ಇನ್ನೂ ಉತ್ತಮ!) ಹಚ್ಚಲು ಮರೆಯಬೇಡಿ. ಇದರಿಂದ ನಿಮಗೆ ಸಹಜ ಮೈಕಾಂತಿ ಕೂಡುತ್ತದೆ. ಇದು ಕಲೆ, ನಿರಿಗೆ, ಸುಕ್ಕುಗಳ ನಿವಾರಣೆಗೆ ಎತ್ತಿದ ಕೈ. ಏಕೆಂದರೆ ಇದರಲ್ಲಿ ನಮ್ಮ ಚರ್ಮಕ್ಕೆ ಬೇಕಾದ ನೈಸರ್ಗಿಕ, ಅಮೂಲ್ಯ ಮಾಯಿಶ್ಚರೈಸರ್‌ ಹಾಗೂ ಹೈಡ್ರೇಟಿಂಗ್‌ ಗುಣಗಳು ಧಾರಾಳ ಅಡಗಿವೆ.

ವಿಟಮಿನ್‌ ಮುಖದಿಂದ ರಿಂಕಲ್ಸ್ ತೊಲಗಿಸಲು ವಿಟಮಿನ್‌ಬೇಕೇಬೇಕು. ಇದರ ಕ್ಯಾಪ್ಸೂಲ್ ‌ನಲ್ಲಿನ ಅಂಶಕ್ಕೆ ತುಸು ಹಾಲಿನ ಕೆನೆ ಬೆರೆಸಿ, ಆಯಾ ಭಾಗಕ್ಕೆ ನೀಟಾಗಿ ಹಚ್ಚಿಕೊಳ್ಳಿ. ಲೈಟ್‌ ಆಗಿ ಮಸಾಜ್‌ ಮಾಡಿ. ಇದು ಚರ್ಮವನ್ನು ಸಹಜವಾಗಿ ಮಾಯಿಶ್ಚರೈಸ್ ಗೊಳಿಸಿ, ಅದನ್ನು ಹೈಡ್ರೇಟ್‌ ಮಾಡಲು ಅತ್ಯಗತ್ಯವಾದ ಆ್ಯಂಟಿ ಆಕ್ಸಿಡೆಂಟ್ಸ್ ಅಂಶಗಳನ್ನು ಹೇರಳವಾಗಿ ಹೊಂದಿದೆ. ಇದು ಚರ್ಮಕ್ಕೆ ಆ್ಯಂಟಿ ಇನ್‌ ಫ್ಲಮೇಟರಿ ಫೋಟೋಪ್ರೊಟೆಕ್ಟಿವ್ ‌ಎಫೆಕ್ಟ್ ಸಹ ನೀಡುತ್ತದೆ. ಇದು ಚರ್ಮದ ಶಕ್ತಿಯನ್ನು ರಿನ್ಯೂ ಮಾಡಿ ರಿಂಕಲ್ಸ್ ನಿಂದ ಮುಕ್ತಿ ನೀಡುತ್ತದೆ.

ಎಗ್ವೈಟ್

ಮೊಟ್ಟೆಯ ಬಿಳಿ ಭಾಗದಿಂದಲೂ ನಿರಿಗೆ ಸುಕ್ಕುಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮೊಟ್ಟೆ ಒಡೆದು, ಅದರ ಬಿಳಿ ಭಾಗವನ್ನು ಬೇರೆ ಮಾಡಿ ಚೆನ್ನಾಗಿ ಗೊಟಾಯಿಸಿ. ನಂತರ ಅದನ್ನು ಮುಖದ ಮೇಲೆ ಹಚ್ಚಿಕೊಳ್ಳಿ. ಇದು ಚರ್ಮದಲ್ಲಿ ಬಿಗಿತ ತಂದು, ಸದೃಢಗೊಳಿಸುತ್ತದೆ. ಇದು ಸಣ್ಣ ಪುಟ್ಟ ಥಿನ್‌ ಲೈನ್ಸ್ ನ್ನು ಸಹ ತಗ್ಗಿಸುತ್ತದೆ. ಇದು ರೋಮರಂಧ್ರ (ಪೋರ್ಸ್‌)ಗಳನ್ನು ತೆರೆಸಿ, ಚರ್ಮದ ಹೆಚ್ಚುವರಿ ಸೀಬಮ್ ನ್ನು ಹೀರಿಕೊಳ್ಳುತ್ತದೆ.

ಆ್ಯಲೋವೇರಾ (ಲೋಳೆಸರ)

ಮೊಟ್ಟೆ ಬಿಳಿ ಭಾಗಕ್ಕೆ ತಾಜಾ ಆ್ಯಲೋವೇರಾ ಜೆಲ್ ‌ಸೇರಿಸಿ ಪೇಸ್ಟ್ ಮಾಡಿ, ನಿಧಾನವಾಗಿ ಇದರಿಂದ ಮುಖ ಪೂರ್ತಿ ಮಸಾಜ್ ಮಾಡಿ. ಇದು ವಿಟಮಿನ್‌ಗೆ ಉತ್ತಮ ರಿಚ್‌ ಸೋರ್ಸ್‌ ಆಗಿದೆ. ಇದು ಚರ್ಮಕ್ಕೆ ಬೂಸ್ಟರ್‌ ನ ಕೆಲಸ ಮಾಡುತ್ತದೆ. ಮೊಟ್ಟೆ ಜೊತೆ ಇದು ಇನ್ನೂ ಪರಿಣಾಮಕಾರಿ! ಇದು ತನ್ನ ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿ ಇನ್‌ ಫ್ಲಮೇಟರಿ ಘಟಕಗಳಿಗಳಿಂದಾಗಿ ಡ್ರೈ ಸ್ಕಿನ್‌ ನ್ನು ಎಷ್ಟೋ ಸ್ಮೂಥ್‌ ಆಗಿಸುತ್ತದೆ.

ಗ್ರೀನ್ಟೀ

ಮುಖದ ರಿಂಕಲ್ಸ್ ತೊಲಗಿಸಲು, ನೀವು ಗ್ರೀನ್‌ ಟೀ ಜೊತೆ ಜೇನುತುಪ್ಪ ಬೆರೆಸಿ ಬಳಸಿಕೊಳ್ಳಿ. ಗ್ರೀನ್‌ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ತುಂಬಿದ್ದು, ನಮ್ಮ ದೇಹವನ್ನು ನೀಟಾಗಿ ಶುಭ್ರಗೊಳಿಸಿ, ರಿಂಕಲ್ಸ್ ತೊಲಗಿಸಿ, ಚರ್ಮದ ಸಡಿಲತೆಯನ್ನು ಬಿಗಿಗೊಳಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ