ಉದ್ಯೋಗ ಸೃಷ್ಟಿಗೆ ಪೂರಕವಾಗುವಂತೆ ಕೈಗಾರಿಕೆಗಳಲ್ಲಿ ಅಪ್ರೆಂಟೀಸ್‌ಗಳ ಮಿತಿ ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಸಮೀಪದ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಘಟಕದಲ್ಲಿ ತಾಂತ್ರಿಕ ಇಂಟರ್ನ್ ತರಬೇತಿ ಕಾರ್ಯಕ್ರಮ (TITP) ಉದ್ಘಾಟಿಸಿ ಅವರು ಮಾತನಾಡಿದರು.
ಅಪ್ರೆಂಟಿಸ್‌ಶಿಪ್ ಮಿತಿ ಹೆಚ್ಚಿಸುವುದರಿಂದ ಉದ್ಯೋಗ ಮತ್ತು ತರಬೇತಿಗೆ ಅವಕಾಶ ಒದಗಿಸಿದಂತಾಗುತ್ತದೆ. ಇದು ಆಕಾಂಕ್ಷಿಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ ಎಂದು ಹೇಳಿದರು.
ಕೈಗಾರಿಕೆಗಳ ಒಟ್ಟು ಕಾರ್ಯಪಡೆಯಲ್ಲಿ ಶೇಕಡ 15ರಷ್ಟು ಮಾತ್ರ ಅಪ್ರೆಂಟಿಸ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮಿತಿ ಹೆಚ್ಚಿಸಿದರೆ ಕೌಶಲ್ಯಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದಂತಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸೋನಲ್ ಮಿಶ್ರಾ ಅವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೋನಲ್ ಮಿಶ್ರಾ, ಕರ್ನಾಟಕದ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕೇಂದ್ರೀಯ ಅಪ್ರೆಂಟಿಸ್ ಕೌನ್ಸಿಲ್ ಮುಂದಿಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಜಾಗತಿಕ ಕೌಶಲ್ಯ ತರಬೇತಿ (ಜಿಎಸ್‌ಟಿ) ಯೋಜನೆಯಡಿ 100 ಟೊಯೋಟಾ ಕೌಶಲ್ಯ ಅಪ್ರೆಂಟಿಸ್‌ಗಳನ್ನು ಜಪಾನ್‌ಗೆ ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಇದು ಕರ್ನಾಟಕದ ಯುವಕರಿಗೆ  "ಗ್ರಾಮೀಣದಿಂದ ಜಾಗತಿಕ ಮಟ್ಟಕ್ಕೆ ಪ್ರಯಾಣಿಸುವ ಅವಕಾಶ" ಒದಗಿಸಿದೆ ಎಂದು ತಿಳಿಸಿದರು.
ಇದೇ ವೇಳೆ ಜಾಗತಿಕ ಕೌಶಲ್ಯ ತರಬೇತಿ (ಜಿಎಸ್‌ಟಿ) ಯೋಜನೆಯಡಿ 100 ಟೊಯೋಟಾ ಕೌಶಲ್ಯ ಅಪ್ರೆಂಟಿಸ್‌ಗಳನ್ನು ಜಪಾನ್‌ಗೆ ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಇದು ಕರ್ನಾಟಕದ ಯುವಕರಿಗೆ  "ಗ್ರಾಮೀಣದಿಂದ ಜಾಗತಿಕ ಮಟ್ಟಕ್ಕೆ ಪ್ರಯಾಣಿಸುವ ಅವಕಾಶ" ಒದಗಿಸಿದೆ ಎಂದು ತಿಳಿಸಿದರು.
ಗ್ರಾಮೀಣ ಕರ್ನಾಟಕದ ಪ್ರತಿಭೆಗಳು, ಬಿಡದಿ ಘಟಕದಲ್ಲಿ ಮೂರು ವರ್ಷಗಳಿಂದ ತರಬೇತಿ ಪಡೆದಿದ್ದರು. ಇವರು ಜಪಾನ್‌ನಲ್ಲಿರುವ ಐಚಿ ಟೊಯೋಟಾ ಉತ್ಪಾದನಾ ಘಟಕದಲ್ಲಿ 10 ತಿಂಗಳ ಕಾಲ ತರಬೇತಿ ಪಡೆಯಲಿದ್ದಾರೆ. ಒಂದು ತಿಂಗಳ ತರಬೇತಿ ನಂತರ, ತಾಂತ್ರಿಕ ಪರಿಣತಿ ನೀಡಲಾಗುವುದು. ಜಾಗತಿಕ ಮೌಲ್ಯಗಳು ಮತ್ತು ವೃತ್ತಿಪರತೆಯನ್ನು ಅಳವಡಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿ. ಪದ್ಮನಾಭ ಮತ್ತು ಜಿ. ಶಂಕರ ಹೇಳಿದರು.
ಇಂಗ್ಲಿಷ್, ಜಪಾನೀಸ್ ತರಬೇತಿ: ಇಂಡೋ-ಜಪಾನ್ ತಾಂತ್ರಿಕ ಇಂಟರ್ನ್ ತರಬೇತಿ ಕಾರ್ಯಕ್ರಮದ ಮೂಲಕ ತಾಂತ್ರಿಕ ಕೌಶಲ್ಯಗಳು, ಸಾಂಸ್ಕೃತಿಕ ತಿಳಿವಳಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೂ ಆದ್ಯತೆ ನೀಡಲಾಗಿದೆ. ಎಲ್ಲಾ ಅಪ್ರೆಂಟೀಸ್‌ಗಳು ಇಂಗ್ಲಿಷ್ ಮತ್ತು ಜಪಾನೀಸ್ ಭಾಷೆ ಕೂಡ ಕಲಿತಿದ್ದಾರೆ. ಮಹತ್ವಾಕಾಂಕ್ಷಿ ಯೋಜನೆಯಡಿ ಆಟೋ ಕ್ಷೇತ್ರದ ಜ್ಞಾನದ ಜೊತೆಗೆ, ನಾಗರಿಕ ಮೌಲ್ಯ, ಪರಸ್ಪರ ಸಾಂಸ್ಕೃತಿಕ ಸಹಯೋಗ ಗೌರವಿಸುವ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರುವ ಅವಕಾಶ ಕಲ್ಪಿಸಲಾಗಿದೆ.




 
  
         
    





 
                
                
                
                
                
               