ಜೆಮೀಮಾ ರೋಡ್ರಿಗಸ್ ಅವರ ಅಜೇಯ ಶತಕ ಹಾಗೂ ಹರ್ಮನ್ಪ್ರೀತ್ ಕೌರ್ ಅವರ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡವು 2025 ರ ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ.
ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಭಾರತಕ್ಕೆ 339 ರನ್‌ಗಳ ಬೃಹತ್ ಸವಾಲನ್ನು ಒಡ್ಡಿತ್ತು. ಗುರಿ ದೊಡ್ಡದಿದ್ದರಿಂದ ಹರ್ಮನ್ ಪಡೆ ಈ ಸವಾಲನ್ನು ಬೆನ್ನಟ್ಟಲು ಸಾಧ್ಯವೇ ಎಂಬ ಅನುಮಾನಗಳಿದ್ದವು. ಆದಾಗ್ಯೂ, ಬಲಿಷ್ಠ ಆಸ್ಟ್ರೇಲಿಯಾದೆದುರು ಸ್ಮರಣೀಯ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವು ಇತಿಹಾಸ ಸೃಷ್ಟಿಸಿದೆ. ಈಗ ವಿಶ್ವಕಪ್ ಟ್ರೋಫಿಗಾಗಿ ಟೀಂ ಇಂಡಿಯಾ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಬ್ಯಾಟರ್ ಜೆಮೀಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಜೆಮೀಮಾ ರೋಡ್ರಿಗಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಭಾರತ ಮಹಿಳಾ ತಂಡದ ಇತಿಹಾಸ ಸೃಷ್ಟಿಗೆ ಕಾರಣಕರ್ತರಾದವರು ಜೆಮೀಮಾ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಬ್ಯಾಟರ್ ಜೆಮೀಮಾ 134 ಎಸೆತಗಳಲ್ಲಿ 14 ಬೌಂಡರಿಗಳ ಸಹಾಯದಿಂದ 127 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ ಜೆಮೀಮಾ ರೋಡ್ರಿಗಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಭಾರತ ಮಹಿಳಾ ತಂಡದ ಇತಿಹಾಸ ಸೃಷ್ಟಿಗೆ ಕಾರಣಕರ್ತರಾದವರು ಜೆಮೀಮಾ ಎಂಬುದರಲ್ಲಿ ಎರಡು ಮಾತಿಲ್ಲ.
ಜೆಮೀಮಾ ಕ್ರಿಕೆಟ್ ಬದುಕಿನ ಹಾದಿ ಎಂದಿಗೂ ಸುಲಭವಾಗಿರಲಿಲ್ಲ. ಹಲವಾರು ಏಳುಬೀಳುಗಳ ನಡುವೆ ನಡೆದು ಬಂದ ಜೆಮೀಮಾ, ಫಾರ್ಮ್ ನಲ್ಲಿದ್ದಾಗಲೇ ಆಕೆಯ ತಂದೆಯ ಮೇಲೆ ಮತಾಂತರ ಆರೋಪ ಹೊರಿಸಿ ಮುಂಬೈನ ಪ್ರಸಿದ್ಧ ಕ್ಲಬ್ ಒಂದಕ್ಕೆ ಆಕೆಯ ಸದಸ್ಯತ್ವ ಮತ್ತು ಪ್ರವೇಶ ನಿರಾಕರಿಸಲಾಗಿತ್ತು. ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ರೇಸ್ ನಲ್ಲಿರುವಾಗಲೇ ಈ ಸಮಸ್ಯೆ ಆಕೆಯನ್ನು ಕಾಡಿತ್ತು. ಮತ್ತೆ ಸಾಲು ಸಾಲು ಸೋಲುಗಳು. ತಂಡವನ್ನು ಹಲವಾರು ಪಂದ್ಯ ಗೆಲ್ಲಿಸಿಕೊಟ್ಟಿದ್ದರೂ ಆಕೆಗೆ ವಿಶ್ವಕಪ್ ಪ್ಲೇಯಿಂಗ್ ಇಲೆವನಿನಲ್ಲಿ ಅವಕಾಶ ನಿರಾಕರಿಸಲಾಗಿತ್ತು.
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ರೇಸ್ ನಲ್ಲಿರುವಾಗಲೇ ಈ ಸಮಸ್ಯೆ ಆಕೆಯನ್ನು ಕಾಡಿತ್ತು. ಮತ್ತೆ ಸಾಲು ಸಾಲು ಸೋಲುಗಳು. ತಂಡವನ್ನು ಹಲವಾರು ಪಂದ್ಯ ಗೆಲ್ಲಿಸಿಕೊಟ್ಟಿದ್ದರೂ ಆಕೆಗೆ ವಿಶ್ವಕಪ್ ಪ್ಲೇಯಿಂಗ್ ಇಲೆವನಿನಲ್ಲಿ ಅವಕಾಶ ನಿರಾಕರಿಸಲಾಗಿತ್ತು.
ಮಾನಸಿಕವಾಗಿ ಕುಗ್ಗಿ ಹೋಗಿ ಹತಾಶಳಾಗಿದ್ದ ಜೆಮೀಮಾಗೆ ಅದು ಅತ್ಯಂತ ನೋವು ನೀಡಿತ್ತು. ಭಾರತೀಯ ಮಹಿಳಾ ತಂಡ ಮೊದಲೇ ಸೇನಾ ತಂಡಗಳ ವಿರುದ್ಧ ಗೆಲ್ಲುವ ಮಾನಸಿಕ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ. ಅಂತಹ ಸಂಧಿಗ್ಧತೆಯಲ್ಲಿ ತಂಡದಲ್ಲಿ ಆಲ್ ರೌಂಡರ್ಗಳಿಗೆ ಮಣೆ ಹಾಕಬೇಕೆನ್ನುವ ಒತ್ತಡ ಆಯ್ಕೆ ಸಮಿತಿಯವರಿಗೆ ಇದ್ದುದರಿಂದ ಅತೀ ಪ್ರಮುಖ ಪಂದ್ಯವಾಗಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಜೆಮೀಮಾಗೆ ಅವಕಾಶ ಸಿಕ್ಕಿರಲಿಲ್ಲ. ಆಗ ಹರ್ಲಿನ್ ಮತ್ತೆ ವಿಫಲರಾಗಿದ್ದರು.  ಮುಂದೆ ನೂಝಿಲ್ಯಾಂಡ್ ಪಂದ್ಯ ದಲ್ಲಿ ಜೆಮೀಮಾಗೆ ಅವಕಾಶ ನೀಡಲೇ ಬೇಕಾಯಿತು. ಜೆಮೀಮಾ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ನ್ಯೂಝಿಲ್ಯಾಂಡ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಅವರ ರನ್ ಕೊಡುಗೆ ಕಾರಣವಾಯಿತು.
ಮುಂದೆ ನೂಝಿಲ್ಯಾಂಡ್ ಪಂದ್ಯ ದಲ್ಲಿ ಜೆಮೀಮಾಗೆ ಅವಕಾಶ ನೀಡಲೇ ಬೇಕಾಯಿತು. ಜೆಮೀಮಾ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. ನ್ಯೂಝಿಲ್ಯಾಂಡ್ ವಿರುದ್ಧ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಅವರ ರನ್ ಕೊಡುಗೆ ಕಾರಣವಾಯಿತು.
ಈ ದಿನ ಭಾರತಕ್ಕೂ ನಿರ್ಣಾಯಕ ಅವಕಾಶ. ಬೆಟ್ಟದಂತಹ ಸವಾಲು ಎದುರಿಸಬೇಕಾಯಿತು. ಎರಡು ವಿಕೆಟ್ ಅತೀ ಬೇಗನೆ ಬಿದ್ದಾಗ ಇನ್ನೂ ಇನ್ನಿಂಗ್ಸ್ ತನ್ನ ತವರಿನ ಮಡಿಲಲ್ಲಿ ಕಟ್ಟತೊಡಗಿದ್ದವಳಿಗೆ ಆಘಾತ ಕಾದಿತ್ತು. ಆಸ್ಟ್ರೇಲಿಯಾದ ಲೆಗಿ ಕಿಂಗ್ ಎಸೆತವನ್ನು ಸ್ವೀಪ್ ಮಾಡಲು ಪ್ರಯತ್ನಿಸಿದಾಗ ಬ್ಯಾಟನ್ನು ವಂಚಿಸಿದ ಚೆಂಡು ಕಾಲಿಗೆ ಬಡಿದಾಗ ಇಡೀ ಆಸ್ಟ್ರೇಲಿಯಾ ತಂಡವೇ ಕುಣಿದು ಕುಪ್ಪಳಿಸಿತ್ತು. ಆದರೆ ಅಂಪೈರ್ ತೀರ್ಪನ್ನು ಪುರಸ್ಕರಿಸಿರಲಿಲ್ಲ. ಆಸಿಸ್ ತೀರ್ಪನ್ನು ಚಾಲೆಂಜ್ ಮಾಡಿತು. ಪರಿಣಾಮ ಚೆಂಡು ವಿಕೆಟ್ ಗಿಂತಲೂ ಹೆಚ್ಚು ಎತ್ತರಕ್ಕೆ ಪುಟಿದದ್ದು ಸ್ಪಷ್ಟವಾಗಿತ್ತು. ಜೆಮೀಮಾಗೆ ಹೋದ ಜೀವ ಬಂದಂತಾಯಿತು. ಮುಂದೆ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುತ್ತಲೇ ಹೋದರು. ಒಂದು ಕಡೆ ಅನುಭವಿ ಆಟಗಾರರು ವಿಕೆಟ್ ಒಪ್ಪಿಸುತ್ತಲೇ ಇದ್ದರು. ತಾಳ್ಮೆ ಕಳೆದುಕೊಳ್ಳದೆ ಜೆಮೀಮಾ ಗೆದ್ದು ಇತಿಹಾಸ ಸೃಷ್ಟಿಸಿ ಬಿಡುವುದರಲ್ಲಿದ್ದರು. ನಿರ್ಣಾಯಕ ಹಂತದಲ್ಲಿ ಬೌಲರ್ ನೇರ ತಲೆಯ ಮೇಲೆ ಬಾರಿಸಿ ಹೊಡೆಯಲು ಪ್ರಯತ್ನಿಸಿದ ಜೆಮೀಮಾಳ ಸುಲಭ ಕ್ಯಾಚ್ ಪಂದ್ಯದ ಚಿತ್ರಣ ಬದಲಿಸುವುದರಲ್ಲಿತ್ತು. ಆದರೆ ಆಸ್ಟ್ರೇಲಿಯಾ ಆ ಅವಕಾಶವನ್ನು ಡ್ರಾಪ್ ಮಾಡುವುದರ ಮೂಲಕ ಪಂದ್ಯವನ್ನೇ ಬಿಟ್ಟುಕೊಟ್ಟಿತ್ತು. ಅಲ್ಲಿಂದ ನಡೆದದ್ದು ಇತಿಹಾಸ.




 
  
         
    





 
                
                
                
                
                
               