2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದೆ.
ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಅವರ ಅದ್ಭುತ ಆಟದಿಂದ 339 ರನ್‌ಗಳ ಬೃಹತ್ ಗುರಿ ಬೆನ್ನತ್ತಿ, ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಭಾರತ ಕಾದಾಟ ನಡೆಸಲಿದೆ. ಇದು 8 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಮೊದಲ ಸೋಲು. 2025 ರ ಮಹಿಳಾ ವಿಶ್ವಕಪ್‌ನಲ್ಲಿ (Women’s World Cup 2025) ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇಡೀ ವಿಶ್ವ ಕ್ರಿಕೆಟ್ ನಿರೀಕ್ಷಿಸದ ಪವಾಡ ಸೃಷ್ಟಿಸಿದೆ. ಮಹಿಳಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ ತಂಡ (India vs Australia) ಮೂರನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ 89 ರನ್‌ಗಳ ಇನ್ನಿಂಗ್ಸ್ ಮತ್ತು ಜೆಮಿಮಾ ರೊಡ್ರಿಗಸ್ ಅವರ ಶತಕದಿಂದ ಭಾರತ 339 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಭಾರತಕ್ಕೆ ಈ ಗೆಲುವು ಸ್ಮರಣೀಯವಾಗಿದ್ದು, ಬರೋಬ್ಬರಿ 8 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಪಂದ್ಯವನ್ನು ಸೋತ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಇತ್ತ ಮೊದಲ ಬಾರಿಗೆ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಇಷ್ಟು ದೊಡ್ಡ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಹರ್ಮನ್ ಪಡೆ ಸೃಷ್ಟಿಸಿದೆ.
2025 ರ ಮಹಿಳಾ ವಿಶ್ವಕಪ್‌ನಲ್ಲಿ (Women’s World Cup 2025) ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಇಡೀ ವಿಶ್ವ ಕ್ರಿಕೆಟ್ ನಿರೀಕ್ಷಿಸದ ಪವಾಡ ಸೃಷ್ಟಿಸಿದೆ. ಮಹಿಳಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ ತಂಡ (India vs Australia) ಮೂರನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ 89 ರನ್‌ಗಳ ಇನ್ನಿಂಗ್ಸ್ ಮತ್ತು ಜೆಮಿಮಾ ರೊಡ್ರಿಗಸ್ ಅವರ ಶತಕದಿಂದ ಭಾರತ 339 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾಯಿತು. ಭಾರತಕ್ಕೆ ಈ ಗೆಲುವು ಸ್ಮರಣೀಯವಾಗಿದ್ದು, ಬರೋಬ್ಬರಿ 8 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಪಂದ್ಯವನ್ನು ಸೋತ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಇತ್ತ ಮೊದಲ ಬಾರಿಗೆ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಇಷ್ಟು ದೊಡ್ಡ ರನ್ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಹರ್ಮನ್ ಪಡೆ ಸೃಷ್ಟಿಸಿದೆ.
ಅಜೇಯ ಓಟಕ್ಕೆ ಬ್ರೇಕ್: ಈ ಗೆಲುವಿನೊಂದಿಗೆ ಭಾರತವು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಎಂಟು ವರ್ಷಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ . ಆಸ್ಟ್ರೇಲಿಯಾ ತಂಡವು 2017 ರಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಸೋತಿತ್ತು. ಅಂದಿನಿಂದ ಒಂದೂ ಪಂದ್ಯವನ್ನು ಸೋತಿರಲಿಲ್ಲ. ಅಚ್ಚರಿಯೆಂದರೆ 2017 ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು, ಭಾರತ ಮಹಿಳಾ ತಂಡ. ಭಾರತ- ಆಫ್ರಿಕಾ ನಡುವೆ ಪ್ರಶಸ್ತಿ ಫೈಟ್: ಇದೀಗ 2025 ರ ಮಹಿಳಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿರುವ ಟೀಂ ಇಂಡಿಯಾ ನವೆಂಬರ್ 2, 2025 ರಂದು ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಜಗತ್ತಿಗೆ ಹೊಸ ವಿಶ್ವ ಚಾಂಪಿಯನ್ ಸಿಗಲಿದೆ. ಫೈನಲ್ ಪಂದ್ಯ ಕೂಡ ಇದೇ ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.
ಭಾರತ- ಆಫ್ರಿಕಾ ನಡುವೆ ಪ್ರಶಸ್ತಿ ಫೈಟ್: ಇದೀಗ 2025 ರ ಮಹಿಳಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿರುವ ಟೀಂ ಇಂಡಿಯಾ ನವೆಂಬರ್ 2, 2025 ರಂದು ನಡೆಯಲಿರುವ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಜಗತ್ತಿಗೆ ಹೊಸ ವಿಶ್ವ ಚಾಂಪಿಯನ್ ಸಿಗಲಿದೆ. ಫೈನಲ್ ಪಂದ್ಯ ಕೂಡ ಇದೇ ನವಿ ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಲಿದೆ.
3ನೇ ಬಾರಿಗೆ ಫೈನಲ್ ಆಡಲಿರುವ ಭಾರತ: ಭಾರತ ತಂಡವು ಮೂರನೇ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಇದಕ್ಕೂ ಮೊದಲು, ಭಾರತ ತಂಡವು 2005 ಮತ್ತು 2017 ರಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು. ಹಾಗೆಯೇ ಈ ಪಂದ್ಯದಲ್ಲಿ 338 ರನ್ ಗುರಿ ಬೆನ್ನಟ್ಟುವ ಮೂಲಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ನಾಕೌಟ್‌ನಲ್ಲಿ (ಪುರುಷ ಅಥವಾ ಮಹಿಳಾ) 300 ಕ್ಕಿಂತ ಹೆಚ್ಚು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡ ಎನ್ನಿಸಿಕೊಂಡಿದೆ. 2015 ರ ಪುರುಷರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ 298 ರನ್ ಗುರಿ ಬೆನ್ನಟ್ಟಿದ್ದು, ಇದುವರೆಗಿನ ಅತ್ಯಧಿಕ ಚೇಸ್ ಆಗಿತ್ತು.




 
  
         
    





 
                
                
                
                
                
               