ಅಡ್ವಾನ್ಸ್ಡ್ ಹೇರ್‌ ಕಟಿಂಗ್‌, 3D ಹೈಲೈಟಿಂಗ್‌, ಕೆರಾಟಿನ್‌ ಸ್ಮೂಥ್‌ನಿಂಗ್‌ ಟ್ರೀಟ್‌ಮೆಂಟ್‌, ಟೆಂಪರರಿ ರೋಲರ್‌ ಸೆಟಿಂಗ್ ಇತ್ಯಾದಿಗಳ ಬಗ್ಗೆ ವಿವರವಾಗಿ ತಿಳಿಯೋಣವೇ?

ಅಡ್ವಾಸ್ಡ್ ಹೇರ್‌ ಕಟ್‌ ಇದರಲ್ಲಿ ಹಲವು ಬಗೆ ಉಂಟು. ಅಂದ್ರೆ ಡೈಮಂಡ್‌ ಕಟ್‌, ಲಾಂಗ್‌ ಹೇರ್‌ ಕಟ್‌, ಗ್ರಾಜುಯೇಷನ್‌ ಕಟ್ ಇತ್ದಾದಿ. ಇದರಲ್ಲಿ ಕೂದಲನ್ನು 4 ವಿಭಾಗ ಮಾಡಿ ಕಿವಿಯಿಂದ ಕಿವಿಗೆ ಪಾರ್ಟಿಂಗ್‌ ಮಾಡುತ್ತಾರೆ. ನಂತರ ಅದರಲ್ಲಿ ಮಲ್ಟಿ ಲೇಯರಿಂಗ್‌ ಮಾಡಲಾಗುತ್ತದೆ. ಇದಾದ ಮೇಲೆ ಟೆಕ್ಸ್ ಚರೈಸಿಂಗ್‌ ಮಾಡುತ್ತಾರೆ. ಇದರಿಂದಾಗಿ ಲೈಟ್‌ ಆದ ಕೂದಲು ಸಹ ಹೆವಿ ಎನಿಸುತ್ತದೆ, ಅದರಲ್ಲಿ ಹೆಚ್ಚಿನ ಬೌನ್ಸ್ ಬರುತ್ತದೆ.

3D ಹೈಲೈಟಿಂಗ್

ಇದರಲ್ಲಿ ಮೊದಲು ಕೂದಲನ್ನು ಪ್ರಿವೈಂಟ್‌ ಮಾಡುತ್ತಾರೆ. ಅದಾದ ಮೇಲೆ 3D (ರೆಡ್‌, ಗ್ರೀನ್‌, ಬ್ಲೂ ತರಹ 3 ಬಗೆಯ ಬಣ್ಣ ಬೆರೆಸುತ್ತಾರೆ) ಹೈಲೈಟಿಂಗ್‌ ಮಾಡುತ್ತಾರೆ. ಇದರಿಂದಾಗಿ ಕೂದಲು ಸ್ಟೈಲಿಶ್‌ಅಟ್ರಾಕ್ಟಿವ್ ‌ಎನಿಸುತ್ತದೆ.

ಕೆರಾಟಿನ್ಸ್ಮೂಥಿಂಗ್ಟ್ರೀಟ್ಮೆಂಟ್

ಈ ಟ್ರೀಟ್‌ಮೆಂಟ್‌ನಲ್ಲಿ ಎಲ್ಲಕ್ಕೂ ಮೊದಲು ಕೂದಲಿಗೆ ಶ್ಯಾಂಪೂ ಮಾಡುತ್ತಾರೆ. ಇದಾದ ಮೇಲೆ ಅದನ್ನು 80% ಒಣಗಿಸಲಾಗುತ್ತದೆ. ನಂತರ ಕೂದಲಿಗೆ ಸೆಕ್ಷನ್‌ ಟು ಸೆಕ್ಷನ್‌ ಟ್ರೀಟ್‌ಮೆಂಟ್‌ ಅಪ್ಲೈ ಮಾಡಿ, 45 ನಿಮಿಷ ಹಾಗೇ ಬಿಡುತ್ತಾರೆ. ಇದಾದ ಮೇಲೆ 100% ಬ್ಲೋ ಡ್ರೈ ಮಾಡುತ್ತಾರೆ. ನಂತರ ಫೈನ್‌ ಫೈನಾದ ಅಂದ್ರೆ ಅತಿ ತೆಳು ಸೆಕ್ಷನ್‌ ತೆಗೆದುಕೊಂಡು ಐರನಿಂಗ್ ಮಾಡಲಾಗುತ್ತದೆ. ಅಮೇಲೆ ಕ್ಲೈಂಟ್‌ನ್ನು 2 ದಿನಗಳ ನಂತರ ಕರೆದು, ಶ್ಯಾಂಪೂ ಮಾಡಿ, ಕಂಡೀಶನರ್‌ ಮತ್ತು ಮಾಸ್ಕ್ ಹಾಕುತ್ತಾರೆ. ನಂತರ ಕೋಲ್ಡ್ ಡ್ರೈಯರ್‌ನಿಂದ ಒಣಗಿಸಿ, ಸೀರಮ್ ಹಚ್ಚುತ್ತಾರೆ. ಇದು ಕೂದಲನ್ನು 30%ವರೆಗೂ ಸ್ಟ್ರೇಟ್ ಮಾಡುತ್ತದೆ ಹಾಗೂ ರಿಪೇರಿಂಗ್‌ ಕೆಲಸವನ್ನೂ ಮಾಡುತ್ತದೆ.

ಎಚ್ಚರಿಕೆ : ಯಾವುದೇ ಉತ್ತಮ ಕಂಪನಿಯ ಶ್ಯಾಂಪೂ ಮತ್ತು ಕಂಡೀಶನರ್‌ನ್ನು ಮಾತ್ರವೇ ಬಳಸಬೇಕು, ಆಗ ಮಾತ್ರ ಹೆಚ್ಚು ಕಾಲ ಕೂದಲನ್ನು ಸ್ಟ್ರೇಟ್‌ ಆಗಿರಿಸಲು ಸಾಧ್ಯ.

ಓಲಾ ಪ್ಲೇಕ್ಸ್

ಇದರಲ್ಲಿ ಕಲರ್ಡ್‌ ರೀಬೌಂಡಿಂಗ್‌ ಮಾಡಲಾದ ಕೂದಲಿಗೆ ಟ್ರೀಟ್‌ಮೆಂಟ್‌ ನೀಡಿ ಅದನ್ನು ಸ್ಮೂಥ್‌ಸಿಲ್ಕಿ ಮಾಡಲಾಗುತ್ತದೆ.

ಟೆಂಪರರಿ ರೋಲರ್ಸೆಟಿಂಗ್

ಕೂದಲಿಗೆ ಮೊದಲೇ ಹೇರ್‌ ಸ್ಪ್ರೇ ಹಾಕುತ್ತಾರೆ. ನಂತರ ಸೆಕ್ಷನ್‌ ಟು ಸೆಕ್ಷನ್‌ ರೋಲರ್‌ ಹಾಕುತ್ತಾರೆ. ಇದರಿಂದಾಗಿ ಸ್ಟ್ರೇಟ್‌ ಕೂದಲು ಗುಂಗುರು ಹಾಗೂ ಹೆವಿ ಆಗಿಬಿಡುತ್ತದೆ.

stylish-hair

3D ಬೇಬಿ ಲಾಂಗ್ಬ್ರೆಡ್ಹೇರ್ಡೂ

ಈ ಹೇರ್‌ ಸ್ಟೈಲ್ ಆರಂಭಿಸಿದ ನಂತರ ಮುಂದೆ ಪಫ್‌ ಆಗಿ ಮುಂದುವರಿಯುತ್ತದೆ. ಅದಾದ ಮೇಲೆ ಅದಕ್ಕೆ 3D ಲೇಯರ್‌ ತೆಗೆದು, ಕೆಲವು ಕೂದಲನ್ನು ಫ್ರಂಟ್‌ ಸ್ಟೈಲಿಂಗ್‌ಗಾಗಿ ಬಿಡುತ್ತಾರೆ. ಹಿಂದುಳಿದ ಬಾಕಿ ಕೂದಲನ್ನು ಒಂದಾದ ಮೇಲೆ ಒಂದರಂತೆ ಲೇಯರ್‌ ತೆಗೆದು ಅದರಿಂದ ಕರ್ಲ್ಸ್ ‌ನಂಥ ಆಕಾರ ಕೊಡುತ್ತಾರೆ. ಪರಸ್ಪರ ಒಂದರ ಮೇಲೆ ಒಂದನ್ನು ಈ ರೀತಿಯಲ್ಲಿ ಅಲಂಕರಿಸಿ ನೀವು ಬ್ಯೂಟಿಫುಲ್ ಹೇರ್‌ ಡೂ ಮಾಡಿಸಬಹುದು. ಕೊನೆಯಲ್ಲಿ ನಿಮ್ಮಿಷ್ಟದ ಹೇರ್‌ ಆ್ಯಕ್ಸೆಸರೀಸ್‌ ಯಾ ಹೇರ್‌ ಜ್ಯೂವೆಲರಿಯಿಂದ ಇದನ್ನು ಅಲಂಕರಿಸಿ. ಕರ್ಲ್ ನಡುವಿನ ಖಾಲಿ ಜಾಗವನ್ನು ಆ್ಯಕ್ಸೆಸರೀಸ್‌ ಅಳವಡಿಸಿ ಅದನ್ನು ಇನ್ನಷ್ಟು ಮನಮೋಹಕ ಮಾಡಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ