ಶ್ರದ್ಧೆ ಅಂದ್ರೆ ಹೀಗಿರಬೇಕು

ಭೂಮೀ ಪೆಡ್ನೇಕರ್‌ ತನ್ನನ್ನು ತಾನು ಸ್ಲಿಮ್ & ಟ್ರಿವ್‌ ಮಾಡಿಕೊಂಡದ್ದು ಮಾತ್ರವಲ್ಲ, ಬದಲಿಗೆ ಫಿಟ್‌ಟೋನ್ಡ್ ಸಹ ಆಗಿದ್ದಾಳೆ. ಅತಿ ನಿಷ್ಠೆಯಿಂದ ವ್ಯಾಯಾಮ, ಆರೋಗ್ಯಕರ ಡಯೆಟ್‌ ಗೆ ಮೊರೆಹೋಗಿ ತಾನು ಬಯಸಿದ ಮೈಕಟ್ಟು ಪಡೆದಿದ್ದಾಳೆ. ಸೆಲೆಬ್ರಿಟೀಸ್‌ ಗಾಗಿ ಮಹಾ ಗುಂಪುಗಳ ಮಧ್ಯೆ ನುಗ್ಗಿ ತಮ್ಮ ಕೈ ಕಾಲು ಮುರಿಸಿಕೊಳ್ಳುವ ಮಂದಿ, ಅಂಥ ಶ್ರದ್ಧೆಯನ್ನು ತಮ್ಮನ್ನು ತಾವು ಫಿಟ್‌ ಆಗಿರಿಸಿಕೊಳ್ಳುವಲ್ಲಿ ತೋರಿಸಿದರೆ, ಕನಿಷ್ಠ ಭಾಗ ಅರ್ಧದಷ್ಟು ಭಾರತೀಯರು ಎಷ್ಟೊ ಫಿಟ್‌ & ಫೈನ್‌ ಆಗುತ್ತಾರೆ. ಜಿಮ್ ಗೆ ಹೋಗಿ ಗಾಸಿಪ್‌ ಮಾಡೋದು, ಟ್ರೇನರ್‌ ಜೊತೆ ಫ್ಲರ್ಟ್‌ ಮಾಡೋದು ಬಿಟ್ಟು ತರುಣಿಯರು ಫಿಟ್‌ ನೆಸ್‌ ನತ್ತ ಗಮನ ಕೊಟ್ಟರೆ ಭೂಮೀ ತರಹ ಸ್ಲಿಮ್ ಆಗುವುದರಲ್ಲಿ  ಸಂದೇಹವಿಲ್ಲ. ಭೂಮೀಯ ಈ ಶ್ರದ್ಧೆ ಎಂಥವರೂ ಮೆಚ್ಚತಕ್ಕದ್ದು!

Jhuka-Nahi-Pushpa

ಯಾರಿಗೂ ಸೋಲದ ಪುಷ್ಪಾ!

ಮೊದಲು `ಪುಷ್ಪಾ' ಬಂತು, ಇದೀಗ `ಪುಷ್ಪಾ-2' ಆಹಾ ಓಹೋ ಎಂದು ಸಕ್ಸೆಸ್‌ ಆಯ್ತು. ಅಬ್ಬಬ್ಬಾ.... ಅಲ್ಲು ಅರ್ಜುನ್‌ ನನ್ನು ಹಿಡಿಯುವವರೇ ಇಲ್ಲ! ಸಿನಿಮಾ ಶಾಸ್ತ್ರಜ್ಞರ ಅಂಕಿಸಂಖ್ಯೆಗಳ ಪ್ರಕಾರ `ಪುಷ್ಪಾ-2' 1500 ಕೋಟಿ ಕ್ಲಬ್‌ ಗೂ ಸೇರಿದ್ದಾಯ್ತು! ಇದೆಲ್ಲದರ ಮಧ್ಯೆ ಅರ್ಜುನ್‌ ಜೇಲ್ ‌ಗೆ ಹೋಗಿ ಬರುವಂತಾದದ್ದು ಮಾತ್ರ ವಿಷಾದನೀಯ. ಈತನ ಯಾವ ಕೈವಾಡ ಇಲ್ಲದ ವಿಷಯದಲ್ಲಿ ಅರ್ಜುನ್‌ ನನ್ನು ಗೋಳಾಡಿಸಲಾಯಿತು. ಆಂಧ್ರದ ಒಂದು ಸ್ಥಳೀಯ ಥಿಯೇಟರ್‌ ಗೆ ಹೋಗುವ ಈತನ ಪ್ರೋಗ್ರಾಂ ಮೊದಲೇ ಫಿಕ್ಸ್ ಆಗಿತ್ತು. ಅಂದು ಅಲ್ಲಿನ ಶೋಗೆ ಬಂದಿದ್ದವರಿಗೆಲ್ಲ ಇದು ಚೆನ್ನಾಗಿಯೇ ಗೊತ್ತಿತ್ತು. ಈತನಿಗಾಗಿ ಮುಗಿಬೀಳುವ ಫ್ಯಾನ್ಸ್ ಗೆ ಕೊರತೆಯಿಲ್ಲ, ದೊಂಬಿ ಗಲಭೆ ಆಗಬಹುದೆಂಬುದು ಅಪೇಕ್ಷಿತ. ಹಾಗಿರುವಾಗ ಇರುಳು ಕಂಡ ಬಾವಿಯಲ್ಲಿ ಹಗಲ್ಲೇಕೆ ಹಾರಬೇಕು? ಯಾರಿಗೆ ದೊಂಬಿಗಲಭೆ ಬೇಡವೋ ಅಲ್ಲಿಗೆ ಹೋಗಲೇಬಾರದಿತ್ತು ಎಂಬುದೇ ವಾಸ್ತವ. ಅಲ್ಲಿ ಆ ನೂಕುನುಗ್ಗಲ ನಡುವೆ ಈತನನ್ನು ನೋಡಲು ಹೋಗಿ ಕಾಲ್ತುಳಿತಕ್ಕೆ ಸಿಲುಕಿ ಒಬ್ಬ ಹೆಂಗಸು ಸತ್ತದ್ದು ತೀರಾ ವಿಷಾದನೀಯ! ಹಾಗೆಂದು ಅರ್ಜುನ್ ಅವರಿಗೆಲ್ಲ ಹಾಗೆ ಗಲಭೆ ಮಾಡಲು ಹೇಳಿದ್ದನೇ? ತಾನೇನೋ ಅತಿ ಆದರ್ಶವಾದಿ ಎಂಬಂತೆ ಸರ್ಕಾರ ಇವನನ್ನು ಬಂಧಿಸಿ ಒಳಗಿರಿಸಲು ನೋಡಿದರೂ, `ಪುಷ್ಪಾ' ಯಾರಿಗೂ ಸೋಲಲಿಲ್ಲ!

Aesi-Masti-Aap-Bhi-Karo

ಇಂಥ ಮೋಜು ಮಸ್ತಿ ಯಾರಿಗೆ ಬೇಡ?

ಚರ್ಚು, ಮಂದಿರ, ಮಸೀದಿಗಳಿಗೆ ಹೋಗಿ ಉದ್ದುದ್ದ ಸಾಲುಗಳಲ್ಲಿ ನಿಂತು ಆ ನೂಕು ನುಗ್ಗಲಲ್ಲಿ ತೂರಾಡಿ, ಜೇಬಿಗೆ ಕತ್ತರಿ ಹಾಕಿಸಿಕೊಂಡು ಇನ್ನಿಲ್ಲದ ಬವಣೆ ಪಡುವುದಕ್ಕೆ ಬದಲಾಗಿ, ನೀವು ನಿಮ್ಮ ಬೆಸ್ಟ್ ಫ್ರೆಂಡ್ಸ್ ಜೊತೆಗೂಡಿ ಯಾವುದಾದರೂ ಮೋಜು ಮಸ್ತಿ ಭರಿತ ಲೋಕೇಶನ್‌ ಗೆ ಹೋಗಿ ಹಾಯಾಗಿ ಪಾರ್ಟಿ ಎಂಜಾಯ್‌ ಮಾಡಿ. ಇದರಿಂದ ಹುಡುಗಿಯರಿಗೆ ಸಿಗುವ ಮಜಾನೇ ಬೇರೇ! ಇಲ್ಲಿ ಯಾರೂ ನಿಮ್ಮ ಡ್ರೆಸ್‌ ಕೋಡ್‌ ಬಗ್ಗೆ ಖಂಡಿಸುವವರಿಲ್ಲ, ಪತಿ/ಬಂಧುಗಳ ಕಾಟವಿಲ್ಲ. ಹೀಗಾಗಿಯೇ ದಿಶಾ ಪಠಾನಿ, ಥೈಲೆಂಡ್‌ ಪ್ರವಾಸದ ನೆಪದಲ್ಲಿ ತನ್ನ ಬೆಸ್ಟ್ ಫ್ರೆಂಡ್ಸ್ ಜೊತೆಗೂಡಿ ಅಲ್ಲಿಗೆ ಹೋದಳು. ನೀವು ಇರವಂತೆ ಏಕೆ ಮೋಜು ಮಸ್ತಿಯಲ್ಲಿ ಮುಳುಗಬಾರದು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ