ಗ್ಲಾಸಿ ಲಿಪ್ಸ್ ನಿಂದ ತುಟಿಗಳಿಗೆ ಹೊಸದೊಂದು ಡಿಫರೆಂಟ್‌ ಲುಕ್ಸ್ ಸಿಗುತ್ತದೆ. ಇದನ್ನು ಎಲ್ಲಾ ಹೆಂಗಸರೂ ಬಹಳ ಇಷ್ಟಪಡುತ್ತಾರೆ. ಸೌಂದರ್ಯ ತಜ್ಞೆಯರು ಈ ಕುರಿತಾಗಿ ಹೇಳುವುದೆಂದರೆ, ಲಿಪ್‌ ಕಲರ್‌ ಟ್ರೆಂಡ್‌ ಆಗಾಗ ಬದಲಾಗುತ್ತಿರುತ್ತದೆ. ಹಿಂದೆಲ್ಲ ಜನ ಹೆಚ್ಚು ಗಾಢ, ಹೊಳೆ ಹೊಳೆಯುವ ಬಣ್ಣವನ್ನಷ್ಟೇ ಬಯಸುತ್ತಿದ್ದರು. ಈಗ ಅದರ ಬದಲಾಗಿ ಜನ ಮ್ಯಾಟಿ ಲುಕ್‌ ಹೆಚ್ಚು ಬಯಸುತ್ತಾರೆ. ಇದೀಗ ಗ್ಲಾಸಿ ಹೈ ಶೈನ್‌ ಮತ್ತೆ ವಾಪಸ್ಸು ಮರಳಿದೆ. ಹೆಚ್ಚು ಮಂದಿ ಸಿನಿಮಾ ನಟಿಯರು ಇದನ್ನೇ ಮೆಚ್ಚುತ್ತಾರೆ.

ಅಸಲಿಗೆ ಗ್ಲಾಸಿ ಲಿಪಪ್ಸ್ ನಿಂದ ಮುಖಕ್ಕೆ ಒಂದು ಅನೂಹ್ಯ ಗೆಟಪ್‌ ಬರುತ್ತದೆ, ಇದರಿಂದಾಗಿ ಮುಖ ತಂತಾನೇ ಹೆಚ್ಚು ಕಳೆಗಟ್ಟುತ್ತದೆ. ಇದರಲ್ಲಿ ಲಿಪ್‌ಸ್ಟಿಕ್‌ ಬಣ್ಣ ಬಹುತೇಕ ಲೈಟ್‌ ಇರುತ್ತದೆ. ಗ್ಲಾಸಿ ಲಿಪ್ಸ್ ನಲ್ಲಿ 3 ಬಗೆಯ ಟ್ರೆಂಡ್‌ ಚಾಲ್ತಿಯಲ್ಲಿದೆ.

ಮಿರರ್‌ ಫಿನಿಶ್‌ ಯಾ ಗ್ಲಾಸ್‌ ಫಿನಿಶ್‌. ಇದರಲ್ಲಿ ಪ್ರಾಡಕ್ಟ್ ನ್ನು ಲಿಪ್‌ಗ್ಲಾಸ್‌ನೆರವಿನಿಂದ ಹಚ್ಚಾಗುತ್ತದೆ.

ರಿಚ್‌ ಕಲರ್‌ಕ್ರೀಂ ಗ್ಲಾಸ್‌. ಇದನ್ನು ಹಚ್ಚಿಕೊಳ್ಳಲು ಯಾವುದೇ ಕಷ್ಟವಿಲ್ಲ, ಸುಲಭವಾಗಿ ಆಗುತ್ತದೆ.

ಲಿಪ್‌ ಪ್ಲಂಪರ್‌ಇದನ್ನು ಬಳಸುವುದರಿಂದ ಪೌಟ್‌ ಶೈನ್‌ ಆಗುತ್ತದೆ ಮತ್ತು ಲಿಪ್‌ಸ್ಟಿಕ್‌ ಲಾಂಗ್‌ ಲಾಸ್ಟಿಂಗ್‌ ಆಗಿರುತ್ತದೆ.

ಗ್ಲಾಸಿ ಲಿಪ್‌ ಮೇಕಪ್‌ನ್ನು ಈ ರೀತಿ ಮಾಡಬಹುದು :

ಮೊದಲು ತುಟಿಗಳನ್ನು ಶುಚಿಗೊಳಿಸಿ ಸಿದ್ಧಪಡಿಸಿ.

ಲೈಟ್‌ ಬಣ್ಣದ ಲಿಪ್‌ಕಲರ್‌ ಬಳಸಿಕೊಳ್ಳಿ.

ಲಿಪ್‌ ಗ್ಲಾಸ್‌ನ್ನು ಬೆರಳುಗಳ ತುದಿಯಿಂದ ತುಟಿಗಳ ಮೇಲೆ ಹಚ್ಚಿಕೊಳ್ಳಿ.

ಗ್ಲಾಸಿ ಲಿಪ್‌ ಕಲರ್‌ ಜೊತೆ ಮೇಕಪ್‌ನ್ನು ಆದಷ್ಟು ಕನಿಷ್ಠವಾಗಿರಿಸಿ, ಆಗ ಇದು ತುಟಿ ಮೇಲೆ ಆದಷ್ಟೂ ಉತ್ತಮವಾಗಿ ಮೂಡಿಬರುತ್ತದೆ.

ನ್ಯೂಡ್‌ ಕಲರ್‌ ಇತ್ತೀಚೆಗೆ ಬಹಳ ಚಾಲ್ತಿಯಲ್ಲಿದೆ. ಏಕೆಂದರೆ ಈ ಬಣ್ಣ ಯಾವುದೇ ಬಗೆಯ ಸ್ಕಿನ್‌ಟೋನ್‌ಗೆ ಸುಲಭವಾಗಿ ಹೊಂದುತ್ತದೆ. ಯಾರ ಚರ್ಮದ ಬಣ್ಣ ಗೋಧಿ ಇರುತ್ತದೋ, ಅವರೂ ಸಹ ಇದನ್ನು ಬಳಸಬಹುದು. ಇದನ್ನು ಹೊರತುಪಡಿಸಿ ಇನ್ನಷ್ಟು ಕ್ಲಾಸಿಕ್‌ ಬಣ್ಣಗಳಿವೆ. ಇವು ಸದಾ ಚಾಲ್ತಿಯಲ್ಲಿರುತ್ತವೆ. ಉದಾ : ಕೆಂಪು, ಗುಲಾಬಿ, ಪರ್ಪಲ್ ಇತ್ಯಾದಿ.

ಇದನ್ನು ಹೊರತುಪಡಿಸಿ ಓಂಬ್ರೆ ಕಲರ್‌ ಸಹ ಟ್ರೆಂಡ್‌ನಲ್ಲಿದೆ. ಏಕೆಂದರೆ ಇದರ ಒಂದು ವಿಶಿಷ್ಟ ಕಾಂತಿ ತುಟಿಗಳ ಮೇಲೆ ಸಹಜವಾಗಿ ಮೂಡಿಬರುತ್ತದೆ. ಜನ ಈಗಲೂ ಈ ಕುರಿತಾಗಿ ಹೊಸ ಹೊಸ ಪ್ರಯೋಗ ಮಾಡುತ್ತಿರುತ್ತಾರೆ. ಇದರಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಬಹಳಷ್ಟು ಅವಕಾಶಗಳಿವೆ. ಓಂಬ್ರೆಯಲ್ಲಿ ಪಿಂಕ್‌ ರೆಡ್‌, ಬ್ರೌನ್‌ ರೆಡ್‌, ನ್ಯೂಡ್‌ ಬ್ರೌನ್‌ ಇತ್ಯಾದಿ ಬೆರೆಸಿ ವಿಭಿನ್ನ ಬಣ್ಣ ಪಡೆಯಬಹುದು. ಇದು ಆಕರ್ಷಕ ಮಾತ್ರವಲ್ಲ, ಸುಂದರವಾಗಿಯೂ ಇರುತ್ತದೆ.

ಗೋಲ್ಡನ್‌ ಲಿಪ್‌ ಲುಕ್‌ ಪಡೆಯಲು ನೀವು ಮಾರ್ಕೆಟ್‌ನಿಂದ ಗೋಲ್ಡನ್‌ ಪೌಡರ್‌ಯಾ ಲಿಪ್‌ಸ್ಟಿಕ್‌ ಕೊಂಡು ಬಳಸಬೇಕು ಅಥವಾ ಗ್ಲಿಟರ್‌ ಸಹ ಇತ್ತೀಚೆಗೆ ಸುಲಭವಾಗಿ ಸಿಗುತ್ತದೆ. ಇದನ್ನು ತುಟಿಗಳ ಮೇಲೆ ಸಿಂಪಡಿಸಿ ಗೋಲ್ಡನ್‌ ಲಿಪ್‌ ಲುಕ್‌ ಪಡೆಯಬಹುದು. ಇದರ ಹೊರತಾಗಿ ಗೋಲ್ಡ್ ಪಿಗ್ಮೆಂಟ್‌ ಪೌಡರ್‌ ಬಳಸಿ ಅದನ್ನೂ ಸಹ ಬ್ಲೆಂಡ್‌ ಮಾಡಬಹುದು.

- ಜಿ. ಸುಮಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ