- ರಾಘವೇಂದ್ರ ಅಡಿಗ ಎಚ್ಚೆನ್.
ಕೊನೆಗೂ ಅಂತ್ಯವಾಗಿದೆ. ಇಂದು ಬೆಳಗ್ಗೆ 9:35ಕ್ಕೆ ಸರಿಯಾಗಿ ‘ಟಾಕ್ಸಿಕ್’ (Toxic) ಸಿನಿಮಾದ ಬಹುನಿರೀಕ್ಷಿತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ.
ಮಾರ್ಚ್ ಮೊದಲ ವಾರದಲ್ಲಿ ಟ್ರೇಲರ್ ಬಿಡುಗಡೆಯಾಗಲಿದೆ ಎಂಬ ಸುದ್ದಿಯ ನಡುವೆಯೇ, ಚಿತ್ರತಂಡ ಇಂದು ದಿಢೀರ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದೆ.
ಟೀಸರ್ ಹೈಲೈಟ್ಸ್ ಏನು?
ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ನಲ್ಲಿ ಯಶ್ ಯಂಗ್ ಲುಕ್ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಗ್ಲಿಂಪ್ಸ್‌ನಲ್ಲಿ ಕಂಡುಬಂದಿದ್ದ ಹಸಿಬಿಸಿ ದೃಶ್ಯಗಳು ಮತ್ತು ಗುಂಡಿನ ಸದ್ದು ಈ ಟೀಸರ್‌ನಲ್ಲೂ ಮುಂದುವರಿದಿದ್ದು, ಸಿನಿಮಾ ಎಷ್ಟು ‘ಟಾಕ್ಸಿಕ್’ ಆಗಿರಲಿದೆ ಎಂಬುದರ ಸುಳಿವು ನೀಡಿದೆ. ಯಶ್ ಅವರ ‘ರಾಯ’ನ ಲುಕ್ ಮತ್ತು ಸ್ಟೈಲ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
‘ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂಬುದನ್ನು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ. ಇದು ‘ಧುರಂದರ್ 2’ ಚಿತ್ರಕ್ಕೆ ಕೊಟ್ಟ ಕೌಂಟರ್ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಈ ಮೊದಲು ರಿಲೀಸ್ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಲ್ಚಲ್ ಎಬ್ಬಿಸಿತ್ತು. ಲೈಂಗಿಕ ಕ್ರಿಯೆ ನಡೆಸೋ ದೃಶ್ಯವನ್ನು ಟೀಸರ್ನಲ್ಲಿ ತೋರಿಸಿದ್ದು ಅನೇಕರ ಕೋಪಕ್ಕೆ ಕಾರಣ ಆಯಿತು. ಈ ಸಂಬಂಧ ದೂರು ಕೂಡ ದಾಖಲಾಯಿತು. ಆದರೆ, ಅವ್ಯಾವುದು ಟ್ರೇಲರ್ನ ತಡೆಯಲಿಲ್ಲ. ಚಿತ್ರದ ಟೀಸರ್ ಯೂಟ್ಯೂಬ್ ಒಂದರಲ್ಲೇ 100 ಮಿಲಿಯನ್ ವೀಕ್ಷಣೆ ಕಂಡಿತು. ಈಗ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದೆ
ಯಾರ ಪಾತ್ರವೇನು? ಪಾತ್ರ ಪರಿಚಯ ಹೀಗಿದೆ
ಈ ಟೀಸರ್ ಮೂಲಕ ಸಿನಿಮಾದ ಪ್ರಮುಖ ಪಾತ್ರಧಾರಿಗಳ ಪರಿಚಯವನ್ನು ಮಾಡಿಕೊಡಲಾಗಿದೆ. ನಟಿಯರ ದಂಡೇ ಇರುವ ಈ ಸಿನಿಮಾದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಪಾತ್ರಗಳನ್ನು ನೀಡಲಾಗಿದೆ.





