ಚಳಿಗಾಲದಲ್ಲಿ ಚರ್ಮದ ಡ್ರೈನೆಸ್ ಮಾಮೂಲಿ ಸಮಸ್ಯೆ. ನಿಮ್ಮ ಚರ್ಮ ಸಹ ಈ ದಿನಗಳಲ್ಲಿ ಡ್ರೈ ಆಗತೊಡಗಿದರೆ, ಈ ಸಲಹೆಗಳನ್ನು ಅಗತ್ಯ ಅನುಸರಿಸಿ.......!
ಚಳಿಗಾಲ ದಟ್ಟವಾಗತೊಡಗಿದಂತೆ ಚರ್ಮದ ಡ್ರೈನೆಸ್ ಮಾಮೂಲಿ ಸಮಸ್ಯೆಯಾಗಿ ಕಾಡುತ್ತದೆ. ಈ ಡ್ರೈನೆಸ್ ಹೆಚ್ಚಿದಂತೆ ನವೆ, ಕಡಿತ, ಉರಿ, ರಾಶೆಸ್ ಸಹ ಹೆಚ್ಚುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ನೀವು ಮಾರುಕಟ್ಟೆಯಲ್ಲಿ ದೊರಕುವ ಹಲವು ಬಗೆಯ ಮಾಯಿಶ್ಚರೈಸಿಂಗ್ ಲೋಶನ್, ಕ್ರೀಂ ಯಾ ಆಯಿಲ್ಸ್ ಬಳಸಿ ಪ್ರಯೋಗ ಮಾಡಬೇಕೆಂಬುದು ಪರಿಹಾರವಲ್ಲ.
ಹೀಗಾಗಿ ಈ ಚಳಿಗಾಲದಲ್ಲಿ ವಿಂಟರ್ ಶೀಲ್ಡ್ ನಂತೆ ಕೆಲಸ ಮಾಡಬಲ್ಲ ಮಾಯಿಶ್ಚರೈಸರ್ಸ್ ಬಗ್ಗೆ ಒಂದಿಷ್ಟು ವಿವರವಾಗಿ ತಿಳಿಯೋಣವೇ?
ಅಲ್ಟ್ರಾ ಹೈಡ್ರೇಟಿಂಗ್ ಮಾಯಿಶ್ಚರೈಸರ್ಸ್ ನಲ್ಲಿ ಅಡಗಿರುವ ಉತ್ಕೃಷ್ಟ ಘಟಕಗಳಿಂದಾಗಿ, ದೀರ್ಘಕಾಲ ಇದು ಚರ್ಮದ ಆರ್ದ್ರತೆಯನ್ನು ಲಾಕ್ ಮಾಡುವಂಥ ಸಾಮರ್ಥ್ಯ ಹೊಂದಿರುತ್ತದೆ. ಅಂದ್ರೆ ಇದರಲ್ಲಿನ ಶಿಯಾ ಬಟರ್, ಬಾದಾಮಿ ಎಣ್ಣೆ, ಗ್ಲಿಸರಿನ್, ಸೆರಾಮೈಡ್ಸ್, ಬಯೋಟಿಕ್ಸ್ ಇತ್ಯಾದಿಗಳು ತುಂಬಿದ್ದು, ಇವು ಮೇಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಕೊಡಿಸುತ್ತವೆ. ನಿಮ್ಮ ಚರ್ಮ ಅಗತ್ಯಕ್ಕಿಂತ ಹೆಚ್ಚು ಎನಿಸುವಷ್ಟು ಡ್ರೈ ಆಗಿದ್ದರೆ, ಈ ಘಟಕಗಳಿರುವಂಥ ಮಾಯಿಶ್ಚರೈಸರ್ ಗಳನ್ನು ಮಾತ್ರ ಖರೀದಿಸಿ ಬಳಸಿಕೊಳ್ಳಿ.
ಕ್ರೀಮಿ ಮಿಲ್ಕೀ : ನಿಮಗೆ ತುಸು ಕಡಿಮೆ ಬಜೆಟ್ ನಲ್ಲಿ ಸುದೀರ್ಘಕಾಲ ಬಾಳಿಕೆ ಬರುವಂಥ ಮಾಯಿಶ್ಚರೈಸರ್ ಬೇಕಿದ್ದರೆ, ಕ್ರೀಂ ಯಾ ಮಿಲ್ಕ್ ಬೇಸ್ಡ್ ಮಾಯಿಶ್ಚರೈಸರ್ ಸಹ ಲಭ್ಯವಿದೆ. ಕೆಲವು ಪ್ರಾಡಕ್ಟ್ಸ್ ಬಾಡಿ ವಾಶ್‌ಮಾಯಿಶ್ಚರೈಸರ್ ನ ಕಾಂಬೋದಲ್ಲೂ ಸಿಗುತ್ತದೆ. ನೀವು ಹೊರಗೆ ಆಫೀಸ್ ಕೆಲಸಕ್ಕೆಂದು ಹೋದಾಗ 10-12 ಗಂಟೆಗಳ ಕಾಲ ಮನೆಯಿಂದ ಹೊರಗಿರಬೇಕಾಗುತ್ತದೆ. ಅಲ್ಲೆಲ್ಲ ಮತ್ತೆ ಮತ್ತೆ ಮಾಯಿಶ್ಚರೈಸರ್‌ಹಚ್ಚಿಕೊಳ್ಳಲು ಆಗದು. ಹೀಗಾಗಿ ಈ ಮಿಲ್ಕ್ ಬೇಸ್ಡ್ ಮಾಯಿಶ್ಚರೈಸರ್ ಆರಿಸಿ, ಇದರಲ್ಲಿ ವಿಟಮಿನ್, ಬಾದಾಮಿ ಎಣ್ಣೆ ಅಂಶಗಳು ಧಾರಾಳವಾಗಿವೆ.
ಸ್ಕಿನ್ ಡ್ಯಾಮೇಜ್ ರಿಪೇರ್ : ನಿಮಗೆ ಡ್ರೈನೆಸ್ ನಿಂದ ಉರಿ, ನವೆ, ಕಡಿತ, ತುರಿಕೆ ಹೆಚ್ಚಾದರೆ ಫುಲ್ ಸ್ಲೀವ್ ಡ್ರೆಸ್ ಧರಿಸಲಿಕ್ಕೇ ಕಷ್ಟವಾಗುತ್ತದೆ. ಹೀಗಾದಾಗ ನೀವು ಕೆಲವು ಹರ್ಬಲ್ ಆಪ್ಶನ್ಸ್ ಟ್ರೈ ಮಾಡಬಹುದು. ಆದರೆ ಅವುಗಳಲ್ಲಿ ಜೋಜೋಬಾ ಆಯಿಲ್, ವಿಟಮಿನ್, ವೀಟ್ ಜರ್ಮ್, ಬಾದಾಮಿ ಎಣ್ಣೆ ಇತ್ಯಾದಿ ಅಡಗಿರ ಬೇಕಾದುದು ಅತಿ ಅವಶ್ಯಕ. ಉದಾ : ಹಿಮಾಲಯ ಪ್ರಾಡಕ್ಟ್ಸ್ ನಲ್ಲಿ ಇವೆಲ್ಲ ಲಭ್ಯ.
ನಾನ್ ಕಾಮೆಡೋಜೆನಿಕ್ ಮಾಯಿಶ್ಚರೈಸರ್ : ಯಾವ ಪ್ರಾಡೆಕ್ಟ್ಸ್ ನಲ್ಲಿ ನಿಮ್ಮ ಚರ್ಮಕ್ಕೆ ಹಾನಿಕಾರಕ ಆಗಬಲ್ಲಂಥ ಘಟಕಗಳು ಬೆರೆತಿಲ್ಲವೋ, ಮುಖ್ಯವಾಗಿ ನಿಮ್ಮ ಚರ್ಮದ ಓಪನ್ ಪೋರ್ಸ್ ನ್ನು ಕ್ಲೋಸ್ ಮಾಡುವಂಥದ್ದು! ಈ ತರಹದ ಮಾಯಿಶ್ಚರೈಸರ್ ಜೆಂಟ್ಲಿ ನಿಮ್ಮ ಚರ್ಮದ ಆರ್ದ್ರತೆಯನ್ನು ಅಲ್ಲೇ ಲಾಕ್ ಮಾಡುತ್ತದೆ, ಅದರ ಮೇಲೆ ಒಂದು ಪ್ರೊಟೆಕ್ಟಿವ್ ಪದರ ಉಂಟು ಮಾಡುತ್ತದೆ. ಉದಾ : ಕ್ಯಾಟ್ ಫಿಲ್ ಬ್ರಾಂಡ್‌ನ ಮಾಯಿಶ್ಚರೈಸರ್ ನಾನ್ ಕಾಮೆಡೋಜೆನಿಕ್ ಆಗಿದೆ.
ಸಲಹೆಗಳು
ಬಹುತೇಕ ಮಹಿಳೆಯರು, ತಾವು ಬಾಡೀಗೆ ಹಚ್ಚು ಅದೇ ಮಾಯಿಶ್ಚರೈಸರ್ ನ್ನು ಗಡಿಬಿಡಿಯಲ್ಲಿ ಮುಖಕ್ಕೂ ಹಚ್ಚಿಕೊಳ್ಳುತ್ತಾರೆ. ಫೇಸ್ ಸ್ಕಿನ್ ಬಾಡೀ ಸ್ಕಿನ್ ಗಿಂತ ವಿಭಿನ್ನವಾಗಿರುತ್ತದೆ, ದೇಹದ ಇನ್ನಿತರ ಭಾಗಗಳಿಗೆ ಹೋಲಿಸಿದಾಗ, ಮುಖವನ್ನು ಹೊರಗಿನ ಪರಿಸರಕ್ಕೆ ಒಡ್ಡದೆ, ಸದಾ ಮುಸುಕು ಹಾಕಿಡಲು ಸಾಧ್ಯವಿಲ್ಲ. ಹೀಗಾಗಿ ಬಾಡೀಗೆ ಬಳಸುವ ಅದೇ ಮಾಯಿಶ್ಚರೈಸರ್ ನ್ನು ಮುಖಕ್ಕೆ ಬಳಸಿದರೆ ಸರಿಹೋಗದು. ಹೀಗಾಗಿ ನಿಮ್ಮ ದೇಹಕ್ಕೆ ತಕ್ಕಂತೆ ವಿಂಟರ್ ಕ್ರೀಂ ಆರಿಸಿಕೊಳ್ಳಿ.





