ನಮ್ಮ ಭಾರತ ದೇಶದ ಇತಿಹಾಸದ ವೀರಾಧಿವೀರ ಮತ್ತು ಶೂರಾಧಿಶೂರರ ಪಟ್ಟಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರು ಅಗ್ರಪಂತಿಯಲ್ಲಿ ಕಾಣಸಿಗುತ್ತದೆ. ಶಿವಾಜಿ ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಜನ ಮಾನಸವಲ್ಲದೇ ಅನೇಕ ಇತಿಹಾಸಕಾರರು ಇದನ್ನೇ ನಮೂದಿಸಿದ್ದಾರೆ. ಇಡೀ ದೇಶ ಮುಸಲ್ಮಾನರ ಆಕ್ರಮಣಕ್ಕೆ ಒಳಗಾಗಿದ್ದಾಗ ಬಹುಸಂಖ್ಯಾತ ಹಿಂದೂಗಳ ಪರವಾಗಿ ಮಹಾರಾಷ್ಟ್ರದಲ್ಲಿ ಸ್ವಸಾಮರ್ಥ್ಯದಿಂದ ತನ್ನ ಹದಿನಾರನೇಯ ವಯಸ್ಸಿನಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸನ್ನು ನನಸು ಮಾಡಿದ ಶಿವಾಜಿ ಮಹಾರಾಜರ ಆಗಮನವಾಗದೇ ಇದ್ದರೇ, ಬಹುಶಃ ಇಡೀ ಭಾರತದ ಇಸ್ಲಾಮೀಕರಣವಾಗಿರುತ್ತಿತ್ತು ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ. ಇಸ್ಲಾಮೀಕರಣದ ವಿರುದ್ಧ ತೊಡೆ ತಟ್ಟಿ ನಿಂತು ಧರ್ಮ ಪ್ರತಿಷ್ಠಾಪನಾಗಾಗಿ ಸದಾ ಖಡ್ಗ ಜಳಪಿಸುತ್ತಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಿದ ಶಿವಾಜಿ ಮಹಾರಾಜರು ಹಿಂದೂಗಳ ಹೃದಯದಲ್ಲಿ ಶಾಶ್ವತವಾಗಿ ಸಾಮ್ರಾಟರೆನಿಸಿಕೊಂಡರು. ಹಿಂದೂ ದಿನಚರಿಯ ಪ್ರಕಾರ ಅವರ ಹುಟ್ಟಿದ್ದು ಇಂದಿಗೆ 390 ವರ್ಷಗಳ ಹಿಂದೆ 1630ರ ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಕೃಷ್ಣಪಕ್ಷದ ತೃತೀಯದಂದು. ಅಂತಹ ಪ್ರಾತಃಸ್ಮರಣೀಯರನ್ನು ಮತ್ತು ಹಿಂದೂ ಸಾಮ್ರಾಜ್ಯ ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳನ್ನು ನೆನಪಿಸಿಕೊಡುವ ಸಣ್ಣ ಪ್ರಯತ್ನ.

ವಿಶ್ವದ ಇತಿಹಾಸದ ಶ್ರೇಷ್ಠ ಸಂಘಟಕರಲ್ಲಿ ಶಿವಾಜಿ ಮಹಾರಾಜರೂ ಒಬ್ಬರೆಂದೇ ಪರಿಗಣಿಸಲಾಗಿದೆ. ಮರಾಠರನ್ನು ಪ್ರಬಲ ರಾಷ್ಟ್ರ ಪ್ರೇಮಿಗಳನ್ನಾಗಿ ಎತ್ತಿ ಕಟ್ಟಿದ ವ್ಯಕ್ತಿ . ಆತ ಅತ್ಯುತ್ತಮ ಮಿಲಿಟರಿ ತಂತ್ರಜ್ಞ, ಗೆರಿಲ್ಲ ಯುದ್ಧದಲ್ಲಿ ಚಾಣಾಕ್ಷ , ನುರಿತ ರಾಜತಾಂತ್ರಿಕ ಮತ್ತು ಪ್ರಬುದ್ಧ ಆಡಳಿತಗಾರ. ತನ್ನ ಶತ್ರುಗಳನ್ನು ತನ್ನ ವಿರುದ್ಧ ಒಗ್ಗೂಡಿಸಲು ಅವನೆಂದಿಗೂ ಬಿಡಲೇ ಇಲ್ಲ . ರಾಜತಾಂತ್ರಿಕತೆಯ ಕಾರಣದಿಂದ ಅವನು ತನ್ನ ತಂದೆಯನ್ನು ಬಿಜಾಪುರದ ಸುಲ್ತಾನನಿಂದ ಮುಕ್ತಗೊಳಿಸಿದವನು. ಅಂದಿನ ಕಾಲದಲ್ಲಿ ಪ್ರಭಲನಾಗಿದ್ದ ಮತ್ತು ಶಿವಾಜಿಯ ಪ್ರಮುಖ ಶತ್ರುವಾಗಿದ್ದ ಔರಂಗಜೇಬನಂತಹವನೇ ಶಿವಾಜಿಯ ಶೌರ್ಯವನ್ನು ಪ್ರಶಂಸಿಸುತ್ತಿದ್ದ ಎಂದರೆ ಅವನ ಸಾಮರ್ಥ್ಯ ಹೇಗಿತ್ತು ಎಂಬುದರ ಅರಿವಾಗುತ್ತದೆ ಸತತ ಹತ್ತೊಂಬತ್ತು ವರ್ಷಗಳಿಂದ ಶಿವಾಜಿಯ ವಿರುದ್ಧ ಕಾದಾಡಿದರೂ ಶಿವಾಜಿಯನ್ನು ಆತ ಬಗ್ಗು ಬಡಿಯಲಾಗಲೇ ಇಲ್ಲ. ಅದಕ್ಕೆ ತದ್ವಿರುದ್ಧವಾಗಿ ಶಿವಾಜಿಯು ತನ್ನ ರಾಜ್ಯದ ಗಡಿಯನ್ನು ವಿಸ್ತರಿಸುತ್ತಲೇ ಬಂದಿದ್ದ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ನಗರದ ಬಳಿ ಶಹಾಜಿ ಭೋಸಲೆ ಮತ್ತು ಜೀಜಾಬಾಯಿ ದಂಪತಿಗಳ ಮುದ್ದಿನ ಮಗನಾಗಿ 1630 ಶಿವಾಜಿಯವರು ಜನಿಸಿದರು. ಅವರ ಜನ್ಮ ದಿನಾಂಕದ ವಿಷಯದಲ್ಲಿ ಕೆಲ ಜಿಜ್ಞಾಸೆಗಳಿವೆ. ಅನೇಕ ವಿದ್ವಾಂಸರುಗಳು ಎರಡು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರ ಪ್ರಕಾರ ಫೆಬ್ರವರಿ 19, 1630 ಎಂದರೆ ಇನ್ನು ಹಲವರು ಏಪ್ರಿಲ್ 6, 1627 ಛತ್ರಪತಿ ಶಿವಾಜಿಯ ಜನ್ಮ ದಿನಾಂಕವೆಂದು ಪ್ರಸ್ತಾಪಿಸಿದ್ದಾರೆ. ಈ ವಿವಾದವನ್ನು ಸರಿಪಡಿಸಲು ಮಹಾರಾಷ್ಟ್ರ ಸರ್ಕಾರ 1968 ರಲ್ಲಿ ಇತಿಹಾಸಕಾರರ ಸಮಿತಿಯನ್ನು ರಚಿಸಿತು. ಆ ಸತ್ಯ ಶೋಧನಾ ವರದಿಯ ಪ್ರಕಾರ ,ಶಿವಾಜಿ ಜನಿಸಿದ್ದು ಫಲ್ಗುಣ ಮಾಸದ ಕೃಷ್ಣ ಪಕ್ಷದ ತೃತೀಯ ವಿಕ್ರಮ ಸಂವತ್ಸರ 1686ದಂದು ಇದರ ಪ್ರಕಾರ ಫೆಬ್ರವರಿ 19, 1630 ಕ್ಕೆ ಸಮಾನವಾಗಿದೆ ಹಾಗಾಗಿ ಮಹಾರಾಷ್ಟ್ರ ಸರ್ಕಾರ ಫೆಬ್ರವರಿ 19 ರಂದು ಶಿವಾಜಿ ಜಯಂತಿಯ ಅಂಗವಾಗಿ ರಾಜ್ಯ ಸರ್ಕಾರಿ ರಜಾ ದಿನವಾಗಿ ಘೋಷಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ