ಪ್ರೇಮಾಳ ವಿವಾಹ ವಾರ್ಷಿಕೋತ್ಸವದ ಪಾರ್ಟಿಗೆ ಅವಳ ಗೆಳತಿಯರೆಲ್ಲ ಒಬ್ಬರನ್ನು ಮೀರಿಸುವಂತೆ ಮತ್ತೊಬ್ಬರು ಡಿಸೈನರ್ ಡ್ರೆಸೆಸ್ ಧರಿಸಿ ಬಂದಿದ್ದರು. ರೇಖಾ ಅಲ್ಲಿಗೆ ಬ್ಲ್ಯಾಕ್ ವೆಸ್ಟರ್ನ್ ಟ್ರೌಸರ್ಸ್ ಮೇಲೆ ಬಹಳ ಗ್ಲಾಮರಸ್ ಟಾಪ್ ಧರಿಸಿದ್ದಳು. ಟಾಪ್‌ನ್ನು ಸಿಲ್ಕ್ ನ ಬ್ಯೂಟಿಫುಲ್ ಹೊಳೆಯುವ ಸ್ಕಾರ್ಫ್‌ನಿಂದ ಅಟ್ಯಾಚ್ ಮಾಡಿದ್ದಳು. ತನ್ನ ಕೂದಲಿಗೂ ಗೋಲ್ಡನ್ ಕಲರ್ ಹಚ್ಚಿಸಿದ್ದಳು. ಇವೆಲ್ಲದರ ಮಧ್ಯೆ ಅವಳ ಗೋಲ್ಡನ್ ಬ್ರೋಚ್ ಬಲು ಆಕರ್ಷಕವಾಗಿತ್ತು. ಎಲ್ಲರೂ ಒಮ್ಮತದಿಂದ ಒಟ್ಟಾಗಿ ರೇಖಾ ಇಂದಿನ ಪಾರ್ಟಿ ಕ್ವೀನ್ ಎಂದು ಘೋಷಿಸಿ ಚಪ್ಪಾಳೆ ತಟ್ಟಿ ಅವಳನ್ನು ಸ್ವಾಗತಿಸಿದರು.
ಅಸಲಿಗೆ ರೇಖಾಳನ್ನು ಪಾರ್ಟಿ ಕ್ವೀನ್ ಮಾಡುವಲ್ಲಿ ಎಲ್ಲಕ್ಕಿಂತ ಮುಖ್ಯ ಪಾತ್ರ ವಹಿಸಿದ್ದು ಎಂದರೆ ಬ್ಯೂಟಿಫುಲ್ ಬ್ರೋಚ್! ಅದು ಅವಳನ್ನು ಇತರರಿಗಿಂತ ವಿಭಿನ್ನವಾಗಿ ತೋರಿಸಿ, ಆಕರ್ಷಣೆಯ ಕೇಂದ್ರಬಿಂದು ಆಗಿಸಿತ್ತು.
ಪಾರ್ಟಿಗಳಿಗೆ ಅತ್ಯಗತ್ಯ ಬ್ರೋಚ್
ಬ್ರೋಚ್ ಎಂಬುದೇನೂ ಅತ್ಯಾಧುನಿಕ ಆ್ಯಕ್ಸೆಸರೀಸ್ ಅಲ್ಲ. ಸೀರೆಯ ಸೆರಗಿನ ಬ್ರೋಚ್‌ನ ಬಳಕೆ ಅನಾದಿ ಕಾಲದಿಂದಲೂ ಇದೆ. ಸೀರೆಯ ಸೆರಗು ಅತ್ತಿತ್ತ ಹಾರಾಡಬಾರದು ಎಂದು ಬ್ರೋಚ್ ನೆರವಿನಿಂದ ಅದಕ್ಕೆ ಲಗಾಮು ಹಾಕುವ ಕ್ರಮವಿದು. ಫ್ಯಾಷನ್ ಬದಲಾದಂತೆ ಬ್ರೋಚ್ ಬಳಕೆ ಪಂಜಾಬಿ ಡ್ರೆಸ್, ಚೂಡೀದಾರ್, ಸಲ್ವಾರ್ ಸೂಟ್‌ಗಳಿಗೂ ಆಗತೊಡಗಿತು. ಸಲ್ವಾರ್ ಸೂಟ್‌ಗೆ ಹೊದೆಯುವ ದುಪಟ್ಟಾಗೆ ಬ್ರೋಚ್ ಸಿಗಿಸಲಾಗುತ್ತಿತ್ತು. ಹೀಗೆ ಮಾಡುವುದರಿಂದ ಸೀರೆಯಲ್ಲದ ಈ ಆಧುನಿಕ ಡ್ರೆಸ್‌ಗಳಿಗೆ ಹೊಸ ಟ್ರೆಂಡಿ ಲುಕ್ಸ್ ಬರುತ್ತದೆ.
ಈಗ ಇದನ್ನು ಪಾರ್ಟಿಗಳಿಗೆ ಧರಿಸುವಂಥ ಆಧುನಿಕ ವೆಸ್ಟರ್ನ್ ಡ್ರೆಸೆಸ್‌ಗೂ ಬಳಸಲಾಗುತ್ತಿದೆ. ಹಿಂದೆಲ್ಲ ಬ್ರೋಚ್ ಡಿಸೈನ್ ಬಲು ಸಾದಾಸೀದಾ ಆಗಿರುತ್ತಿತ್ತು, ಆದರೆ ಫ್ಯಾಷನ್‌ಗೆ ತಕ್ಕಂತೆ ಇದರ ಡಿಸೈನ್‌ನಲ್ಲೂ ವೈವಿಧ್ಯತೆ ಬಂದುಬಿಟ್ಟಿದೆ. ಈ ಬದಲಾವಣೆಯೇ ಬ್ರೋಚ್‌ನ್ನು ಇಂದು ವಾಪಸ್ಸು, ಆಧುನಿಕ ಫ್ಯಾಷನ್‌ಗೆ ಹೊಸ ಟ್ರೆಂಡಿ ಲುಕ್ಸ್ ನೀಡುವಂತೆ ಮಾಡಿದೆ.
ಫ್ಯಾಷನ್ ಜ್ಯೂವೆಲರಿ ಎಕ್ಸ್ ಪರ್ಟ್ಸ್ ಸಲಹೆಯಂತೆ, ಬ್ರೋಚ್‌ನ್ನು ಬಳಸಿ ಸಿಂಪಲ್ ಫ್ಯಾಷನ್‌ನ್ನು ಟ್ರೆಂಡಿಗೊಳಿಸಬಹುದು. ಇದನ್ನು ಧರಿಸುವವರ ಪರ್ಸನಾಲ್ಟಿಗೂ ಇದು ಸ್ಪೆಷಲ್ ಸ್ಟೈಲಿಶ್ ಟಚ್ ನೀಡಲಿದೆ. ಎಷ್ಟೋ ಹೆಂಗಸರು ಬ್ರೋಚ್‌ನ್ನು ಜ್ಯೂವೆಲರಿ ಎಂದೇ ಭಾವಿಸುತ್ತಾರೆ. ಅದನ್ನು ಬೆಳ್ಳಿ, ಚಿನ್ನ, ವಜ್ರಗಳಲ್ಲೇ ಧರಿಸಬೇಕೇನೋ ಎಂದು ಸಂದೇಹಿಸುತ್ತಾರೆ. ಅವೆಲ್ಲ ದುಬಾರಿಯಾದುದರಿಂದ ಅದರ ಗೊಡವೆ ಬೇಡ. ಹೀಗಾಗಿ ಕೃತಕ ಬ್ರೋಚ್‌ಗಳಾದ ಅಲ್ಯುಮಿನಿಯಂ, ಬ್ರಾಸ್, ಕಾಪರ್, ಸ್ಟೀಲ್ ಇತ್ಯಾದಿಗಳ ಅತ್ಯಾಕರ್ಷಕ ಡಿಸೈನ್ ಇರುವುದನ್ನೇ ಆರಿಸಿಕೊಳ್ಳಿ.
ಬಗೆಬಗೆಯ ಬ್ರೋಚ್
ಬದಲಾಗುತ್ತಿರುವ ಫ್ಯಾಷನ್‌ಗೆ ತಕ್ಕಂತೆ ಬ್ರೋಚ್ ತನ್ನದೇ ಆದ ಸ್ಟೈಲಿಶ್ ಸ್ಥಾನ ಭದ್ರಪಡಿಸಿಕೊಂಡಿದೆ. ಇಂದಿನ ಮಾರುಕಟ್ಟೆಯಲ್ಲಿ ಬಗಬಗೆಯ ಬ್ರೋಚ್‌ಗಳು ಲಭ್ಯ. ಇದರಲ್ಲಿ ಅತಿ ಹೆಚ್ಚು ಜನಪ್ರಿಯವೆಂದರೆ ಬಟರ್ ಫ್ಲೈ, ಫ್ಲವರ್ ಶೇಪಿನ. ಫ್ಯಾಷನ್ ಪ್ರಿಯ ಹೆಂಗಸರು ಕೆಲವು ಅನಿಮಲ್ ಶೇಪ್‌ನದನ್ನೂ ಆರಿಸುತ್ತಾರೆ. ತಮ್ಮ ಹೆಸರಿನ ಮೊದಲ ಆಂಗ್ಲ ಅಕ್ಷರದ ಬ್ರೋಚ್‌ನ್ನು ಕೆಲವರು ಬಳಸುತ್ತಾರೆ.
ಹ್ಯಾಂಗಿಂಗ್ ಬ್ರೋಚ್‌ಗಳೂ ಸಹ ಹೆಚ್ಚು ಸೇಲಾಗುತ್ತವೆ. ತಮ್ಮ ಪಾರ್ಟಿ ಡ್ರೆಸ್‌ಗೆ ಮ್ಯಾಚ್ ಆಗುವಂಥ ಬ್ರೋಚ್ ಧರಿಸಲು ಹೆಂಗಸರು ಅದೇ ಫ್ಯಾಬ್ರಿಕ್‌ನಿಂದ ತಯಾರಾದ ಬ್ರೋಚ್‌ನ್ನೂ ಧರಿಸುತ್ತಾರೆ. ಇದರ ವೈಶಿಷ್ಟ್ಯವೆಂದರೆ ಇದು ಡ್ರೆಸ್‌ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ. ಫ್ಯಾಷನ್ನಿನಲ್ಲಿ ಆ್ಯಂಟಿಕ್ ಲುಕ್ಸ್ ಬಯಸುವ ಹೆಂಗಸರು ಆ್ಯಂಟಿಕ್ ಬ್ರೋಚ್‌ಗಳನ್ನು ಬಹಳ ಇಷ್ಟಪಡುತ್ತಾರೆ. ಅವನ್ನು ಅಲಂಕರಿಸಲು ಕೃತಕ ನವರತ್ನಗಳನ್ನು ಬಳಸಲಾಗುತ್ತದೆ. ಇದು ಬಹು ಬಣ್ಣ ಬಣ್ಣದ್ದಾಗಿರುತ್ತದೆ. ಹೀಗಾಗಿ ಅವನ್ನು ಬೇರೆ ಬೇರೆ ಡ್ರೆಸ್‌ಗಳ ಜೊತೆ ಮ್ಯಾಚಿಂಗ್ ಕಾಂಟ್ರಾಸ್ಟ್ ಎರಡೂ ಆಗಿ ಬಳಸಬಹುದು.