ಸೆಲಿಬ್ರಿಟಿ ತರಹ ಎದ್ದು ಕಾಣಿಸಬೇಕು, ಗ್ಲಾಮರಸ್‌ ಲುಕ್ಸ್ ಇರಬೇಕು ಎಂದು ಯಾರಿಗೆ ತಾನೇ ಅನಿಸುವುದಿಲ್ಲ? ಆದರೆ ಎಷ್ಟೋ ಸಲ ಇದಕ್ಕಾಗಿ ಯಾವ ಸಲಹೆ ಅನುಸರಿಸಬೇಕೆಂದು ಗೊತ್ತಿಲ್ಲದೆ, ಲುಕ್ಸ್ ನಲ್ಲಿ ಕೆಲವು ಕುಂದುಕೊರತೆ ಉಳಿದುಬಿಡುತ್ತದೆ. ಇದಕ್ಕಾಗಿ ನಾವು ಯಾವ ರೀತಿ ಮೇಕಪ್‌ ಮಾಡಿಕೊಳ್ಳಬೇಕು? ಯಾವುದು ಬೇಕು? ಯಾವುದು ಬೇಡ? ಬನ್ನಿ ತಿಳಿಯೋಣ :

ಆಯೇಶಾ ಲುಕ್ಸ್

ಹಾಗೆ ನೋಡಿದರೆ ಆಯೇಶಾ ಎಲ್ಲಾ ಲುಕ್ಸ್ ನಲ್ಲೂ ಬಲು ಸ್ವೀಟ್‌ ಎನಿಸುತ್ತಾಳೆ. ಆದರೆ ಈ ಲುಕ್‌ನಲ್ಲಿ ತನ್ನ ಲ್ಯಾಶೆಸ್‌ಗೆ ವಿಸ್ಪೀ ಸ್ಪೈಡರ್‌ ಲುಕ್‌ ನೀಡಿ, ರಾಜಕುಮಾರಿಯ ಕಳೆ ಪಡೆದಿದ್ದಾಳೆ. ಇಂಥ ಲುಕ್ಸ್ ಗಾಗಿ ಕಂಗಳಿಗೆ ನ್ಯಾಚುರಲ್ ಬೇಸ್‌ ನೀಡಿ. ಇನ್ನರ್‌ ಕಾರ್ನರ್‌ನಲ್ಲಿ ಕ್ರೀಂ ಮತ್ತು ಔಟರ್‌ ಕಾರ್ನರ್‌ನಲ್ಲಿ ಕ್ಯಾರೆಮಲ್ ಶೇಡ್ಸ್ ತೀಡಿ ಬ್ಲೆಂಡ್‌ ಮಾಡಿ, ಆಗ ಯಾವ ಲೈನೂ ಹೆಚ್ಚುವರಿಯಾಗಿ ಕಾಣಿಸದು. ಲ್ಯಾಶೆಸ್‌ನ್ನು ಲ್ಯಾಶ್‌ ಜಾಯಿನರ್‌ನಿಂದ ಜಾಯಿನ್‌ ಮಾಡಿ. ಲ್ಯಾಶ್‌ ಜಾಯಿನರ್‌ನ ಬಳಕೆಯಿಂದ ಲ್ಯಾಶೆಸ್‌ ಸಹಜವಾದ ದಟ್ಟ ಲುಕ್ಸ್ ಪಡೆಯುತ್ತವೆ. ಜೊತೆಗೆ ಕಂಗಳ ಆಕಾರ ಸ್ಪಷ್ಟ ಡಿಫೈನ್‌ ಆಗುತ್ತದೆ. ಇದಕ್ಕಾಗಿ ಆ್ಯಂಗ್ಯುಲರ್‌ ಬ್ರಶ್‌ನ ಸಹಾಯದಿಂದ ಬ್ಲ್ಯಾಕ್‌ ಐ ಶ್ಯಾಡೋವನ್ನು ರೆಪ್ಪೆಗಳ ಮೇಲೆ ತೀಡಿರಿ. ಈಗ ಲ್ಯಾಶ್‌ ಫೈಬರ್‌ನಿಂದ ಲ್ಯಾಶೆಸ್‌ನ್ನು ಪೋರ್ಟ್‌ ಮಾಡಬಹುದು ಹಾಗೂ ಮಸ್ಕರಾ ಹಚ್ಚಿ ಸ್ಪೈಡರ್‌ ಲುಕ್‌ ನೀಡಿ. ಲ್ಯಾಶೆಸ್‌ ಬಳಸುವಾಗ ಮುಖದ ಮೇಕಪ್‌ ಲೈಟ್‌ ಆಗಿರಲಿ. ನೀವು ಬಯಸಿದರೆ ಲಿಪ್‌ಸ್ಟಿಕ್‌ನ್ನು ಹೈಲೈಟ್‌ ಮಾಡಿ ಮುಖದಲ್ಲಿ ಹೆಚ್ಚಿನ ಗ್ಲೋ ತರಬಹುದು.

ಐಶ್‌ ಲುಕ್ಸ್

ಸುಪರ್ಬ್ ಲಿಪ್‌ ಕಲರ್‌ ಹೊರತುಪಡಿಸಿ ಐಶ್‌ಳ ಮತ್ತೊಂದು ಜನಪ್ರಿಯ ಲುಕ್‌ ಎಂದರೆ, ಆಕೆಯ ಕೂದಲಲ್ಲಿ ಮೂಡಿದ ಲೂಸ್‌ ವರ್ಕ್ಸ್‌. ಇದಕ್ಕಾಗಿ ಕೂದಲಿಗೆ ಮೂಸ್‌ ಹಚ್ಚಿ ವರ್ಕ್‌ ಮಾಡಿ. ಅದನ್ನು ಸೆಟ್‌ ಆಗಿಸಲು ಮೇಲ್ಭಾಗದಿಂದ  ಪ್ರೊಟೆಕ್ಷನ್ ಸ್ಪ್ರೇ ಹಚ್ಚಬೇಕು. ಮುಖದಲ್ಲಿ ಈ ರೇಡಿಯಂಟ್‌ ಲುಕ್‌ ಮ್ಯಾಟಿಫೈಯಿಂಗ್‌ ಫಿನಿಶ್‌ಗಾಗಿ ಲಿಕ್ವಿಡ್‌ ಮೂಸ್‌ ಬಳಸಿರಿ. ಪಿಂಕ್‌ ಬ್ಲಶ್‌ ಆನ್‌ನಿಂದ ಚೀಕ್‌ಬೋನ್ಸ್ ಹೈಲೈಟ್‌ ಮಾಡಿ. ಕಂಗಳಿಗೆ ಲೈಟ್‌ ಸ್ಮೋಕಿ ಲುಕ್ಸ್ ನೀಡಿ, ಅದು ನಿಮ್ಮ ಡಾರ್ಕ್‌ ಬ್ಲೂ ಡ್ರೆಸ್‌ಗೆ ಹೆಚ್ಚು ಹೊಂದುತ್ತದೆ. ಐ ಬ್ರೋಸ್‌ನ್ನು ಡಾರ್ಕ್‌ ಬ್ರೌನ್‌ ಪೆನ್ಸಿಲ್‌ನಿಂದ ಡಿಫೈನ್‌ ಮಾಡಿ. ಅಪ್ಪರ್‌ ಲೋಯರ್‌ ಲಿಡ್‌ ಮೇಲೆ ಜೆಲ್ ಲೈನರ್‌ ಹಾಗೂ ಲ್ಯಾಶೆಸ್‌ಗೆ ಮಸ್ಕರಾ ಕೋಟ್ಸ್ ಹಚ್ಚಿ, ಐ ಮೇಕಪ್‌ ಕಂಪ್ಲೀಟ್‌ ಮಾಡಿ. ಸಾಫ್ಟ್ ಲುಕ್ಸ್ ನ್ನು ಸಾಫ್ಟ್ ಆಗಿ ಇರಿಸಿಕೊಳ್ಳಲು, ತುಟಿಗಳಿಗೆ ಫ್ರೆಂಚ್‌ ರೋಸ್‌ ಶೇಡ್‌ನಿಂದ ಸೀಲ್‌ ಮಾಡಿ. ಇನ್ನೇನು....? ಬಂತಲ್ಲ ಐಶ್‌ ಲುಕ್ಸ್!

ಗೌರಿ ಲುಕ್ಸ್

ಶಾರೂಖ್‌ ಪತ್ನಿ ಗೌರಿ ತಾನೇ ಡಿಸೈನರ್‌. ಹೀಗಾಗಿಯೇ ಆಕೆಯ ಡ್ರೆಸ್ಸಿಂಗ್‌ ಸ್ಟೈಲ್ ನಟಿ ಅಲ್ಲದಿದ್ದರೂ ಗ್ಲಾಮರಸ್‌ ಆಗಿಯೇ ಇರುತ್ತದೆ. ಈಕೆಯ ಲುಕ್ಸ್ ಗಾಗಿ, ವೆಲ್ವೆಟ್‌ ಫಿನಿಶ್‌ಗಾಗಿ ಬೇಸ್‌ಗೆ ಟಿಂಟಿಡ್‌ ಮೂಸ್‌ ಹಚ್ಚಿರಿ. ಇದು ಪೋರ್ಸ್‌ನ್ನು ಕ್ಲೋಸ್‌ ಮಾಡಿ ಸ್ಕಿನ್‌ಗೆ ಸ್ಮೂತ್‌ ಫಿನಿಶ್‌ ಸಹ ನೀಡುತ್ತದೆ. ಕಂಗಳ ಮೇಲೆ ನ್ಯೂಟ್ರಲ್ ಬೇಜ್‌ ಯಾ ವೆನಿಲಾ ಶೇಡ್‌ನ ಐ ಶ್ಯಾಡೋ ಬಳಸಿರಿ ಹಾಗೂ ಬ್ಲ್ಯಾಕ್‌ ಜೆಲ್‌ ಲೈನರ್‌ನಿಂದ ಕಂಗಳಿಗೆ ಬೆಕ್ಕಿನ ಕಂಗಳ ಸೊಬಗು ನೀಡಿ. ಇದು ಸುಲಭವಾಗಿ ಸ್ಮಜ್‌ ಆಗುತ್ತದೆ, ವಾಟರ್‌ಪ್ರೂಫ್‌ ಆದಕಾರಣ ಹರಡುವುದೂ ಇಲ್ಲ. ಕೂದಲಿಗೆ ಮಾಡಿದಂತೆಯೇ ಸ್ಟ್ರೋಕ್‌ ನೀಡುತ್ತಾ ಹುಬ್ಬಿಗೆ ಬ್ರೌನ್‌ ಪೆನ್ಸಿಲ್‌ ಬಳಸಿರಿ. ಹೀಗೆ ಮಾಡುವುದರಿಂದ ಐ ಬ್ರೋಸ್‌ ಬೋಲ್ಡ್ ಆಗುತ್ತದೆ. ವಾಟರ್‌ ಲೈನ್‌ ಮೇಲೆ ಕಾಜಲ್ ಮತ್ತು ಲ್ಯಾಶೆಸ್‌ ಮೇಲೆ ಮಸ್ಕರಾದ ಕೋಟ್ಸ್ ನಿಂದ ಐ ಮೇಕಪ್‌ ಕಂಪ್ಲೀಟ್‌ ಮಾಡಿ. ಚೀಕ್ಸ್ ಮತ್ತು ಲಿಪ್ಸ್ ಗೆ ಇಂಥ ರೇಡಿಯಂಟ್‌ ಲುಕ್ಸ್ ಗಾಗಿ, ಲಿಪ್‌  ಚೀಕ್‌ ಸ್ಟೋನ್‌ ಬಳಸಿರಿ. ಇದೊಂದು 2 ಇನ್‌ 1 ಪ್ರಾಡಕ್ಟ್. ಇದು ಜೆಲ್ ಬೇಸ್ಡ್ ಆಗಿದ್ದು, ಮುಖಕ್ಕೆ ಸಾಕಷ್ಟು ಲೈಟ್‌ ಪಿಂಕಿಶ್‌ ಲುಕ್‌ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ