ಬದಲಾಗುತ್ತಿರುವ  ಹವಾಮಾನಕ್ಕೆ ತಕ್ಕಂತೆ ನಿಮ್ಮ ಮೇಕಪ್‌ನಲ್ಲೂ ಈಗ ಮಾಡರ್ನ್‌ ಬದಲಾವಣೆ ಮಾಡಿಕೊಳ್ಳಿ. ಈಗ ಮಹಿಳೆಯರು ಹಳೆಯ ಫ್ಯಾಷನ್ನಿನ ತರಹ ಹೆವಿ ಓವರ್‌ ಮೇಕಪ್‌ ಬಯಸುವುದಿಲ್ಲ. ಸಿಂಪಲ್ ಸೋಬರ್‌ ಮೇಕಪ್‌ ಅವರಿಗೆ ಇಷ್ಟ.  ಈಗ ಅವರು ಕನಿಷ್ಠ ಮೇಕಪ್‌ನಲ್ಲಿ ಮದುವೆ ಸಮಾರಂಭ, ಪಾರ್ಟಿ ಮುಂತಾದ ಕಡೆ ಫ್ರೆಶ್‌, ಗಾರ್ಜಿಯಸ್‌, ಹಾಟ್‌ ಆಗಿ ಕಂಗೊಳಿಸುತ್ತಾರೆ.

ನ್ಯೂಟ್ರಲ್ ಟ್ರಾನ್ಸ್ ಬೇಸ್‌ ಮೇಕಪ್‌ ಹೇರ್‌ಸ್ಟೈಲ್ ಕುರಿತಾಗಿ ಎಕ್ಸ್ ಪರ್ಟ್ಸ್ ತಿಳಿಸಿರುವ ಸಲಹೆ ಸೂಚನೆಗಳನ್ನು ಗಮನಿಸೋಣವೇ?

ನ್ಯೂಟ್ರಲ್ ಟ್ರಾನ್ಸ್ ಬೇಸ್‌ ಮೇಕಪ್‌: ಇದು ಬಹಳ ಸೌಮ್ಯ ಮತ್ತು ಬ್ರೈಟ್‌ ಆದುದು. ಇದು ಸುಲಭವಾಗಿ ಚರ್ಮದಲ್ಲಿ ವಿಲೀನಗೊಂಡು ಅದನ್ನು ಫ್ರೆಶ್‌, ನ್ಯಾಚುರಲ್, ಪ್ರಾಬ್ಲಮ್ ಕವರ್‌ ಲುಕ್‌ ಒದಗಿಸುವುದಲ್ಲದೆ ಕಂಪ್ಲೀಟ್‌ ಎನಿಸುತ್ತದೆ.

ಕಂಗಳನ್ನು ಹೊರತುಪಡಿಸಿ, ಇಡೀ ಮುಖಕ್ಕೆ ಮೊದಲು ಪ್ರೈಮರ್‌ ಹಚ್ಚಿರಿ. ನಂತರ ಅದಕ್ಕೆ ಸ್ಕಿನ್‌ ಟೋನ್‌ಗೆ ಹೊಂದುವಂಥ ನ್ಯೂಟ್ರಲ್ ಬೇಸ್‌ ಹಚ್ಚಿರಿ. ನಂತರ ತೆಳು ಲೂಸ್‌ ಪೌಡರ್‌ ಹಚ್ಚಿ ಫೈನ್‌ ಟಚ್‌ ನೀಡಿ.

ಕಂಗಳ ಮೇಕಪ್‌ ಹೀಗಿರಲಿ : ಇತ್ತೀಚೆಗೆ ಕಂಗಳ ಮೇಕಪ್‌ನಲ್ಲೂ ಹಲವು ಬಗೆಯ ಪ್ರಯೋಗಗಳು ಕಂಡುಬರುತ್ತಿವೆ. ಈಗ ಕಂಗಳನ್ನು ಕೇವಲ ಗೋಲ್ಡನ್‌ ಯಾ ಪಿಂಕ್‌ ಐ ಶ್ಯಾಡೋಗಳಿಂದ ಮಾತ್ರ ಅಲಂಕರಿಸುವುದಿಲ್ಲ, ಬದಲಿಗೆ ನಿಯಾನ್‌ ಕಲರ್‌ಗೂ ಬಹಳ ಬೇಡಿಕೆ ಇದೆ. ನಿಯಾನ್‌ ಅಂದ್ರೆ ಬ್ರೈಟ್‌, ನ್ಯಾಚುರಲ್ ಕಲರ್‌ ಆಗಿದ್ದು ಇದರಲ್ಲಿ ಗ್ರೀನ್‌, ಯೆಲ್ಲೋ, ಪೀಚ್‌, ಬ್ಲೂ, ಪರ್ಪಲ್, ರೂಬಿ ರೆಡ್‌, ಲೆಮನ್‌, ಗ್ರೀನ್‌ ಇತ್ಯಾದಿ ಸಹಜವಾಗಿ ಬೆರೆಯಬಲ್ಲವು. ನಿಯಾನ್‌ಐ ಶೇಡ್ಸ್ ಜೊತೆ ಕಂಗಳನ್ನು ಡಿಫೈನ್‌ ಮಾಡಲು ನೀವು ಲೈನರ್‌ ವಾಲ್ಯುಮೈಸಿಂಗ್‌ ಮಸ್ಕರಾ ಜೊತೆ ಫೆದರ್‌ ಟಚ್‌ ಆರ್ಟಿಫಿಶಿಯಲ್‌ನ್ನು ಅಗತ್ಯ ಬಳಸಿರಿ. ಇದರಿಂದ ಕಂಗಳು ಅತಿ ಅಂದವಾಗಿ ಕಾಣಿಸುತ್ತವೆ. ನಂತರ ಐ ಲೈನರ್‌ ಬಳಸಿರಿ. ಅಗತ್ಯವೆನಿಸಿದರೆ ಲೈಟ್‌ ಲೈನ್‌ ಏರಿಯಾ ಬಳಿ ಕಾಜಲ್ ತೀಡಿ, ಐಬ್ರೋಸ್‌ ಹೈಲೈಟ್‌ ಮಾಡಿ.

ಚೀಕ್‌ ಬೋನ್ಸ್ ಹೈಲೈಟ್‌ ಮಾಡಿ : ಚೀಕ್ಸ್ ಎದ್ದು ತೋರಲು ಫ್ಲೇರ್‌ ಸಾಫ್ಟ್, ಪಿಂಕ್‌, ಆರೆಂಜ್‌ನಂಥ ಸಾಫ್ಟ್ ಶೇಡ್‌ ಬಳಸಿಕೊಳ್ಳಿ. ಹೆವಿ ಬ್ರಾಂಝ್ ಬಳಸಬೇಡಿ, ಇಲ್ಲದಿದ್ದರೆ ಇದು ಲುಕ್ಸ್ ನ್ನು ಗ್ರೇ ಆಗಿ ತೋರಿಸುತ್ತದೆ. ಫೇಸ್‌ ಆಧಾರದಿಂದ ಚೀಕ್‌ ಬೋನ್ಸ್ ಹೈಲೈಟ್‌ ಮಾಡಿ. ಏಕೆಂದರೆ ಪ್ರತಿಯೊಬ್ಬರ ಫೇಸ್‌ ಕಟ್‌ ಬೇರೆ ಬೇರೆಯೇ ಆಗಿರುತ್ತದೆ. ಹೈಲೈಟ್‌ಗೊಳಿಸಲು ಬ್ರಶ್ಶನ್ನು ಕೆಳಭಾಗದಿಂದ ಮೇಲಕ್ಕೆ ಒಂದೇ ಸ್ಟ್ರೋಕ್‌ನಲ್ಲಿ ಕೈಯಾಡಿಸಿ.

ಲಿಪ್ಸ್ ಗ್ಲಾಮರಸ್‌ ಆಗಿರಲಿ : ಮೇಕಪ್‌ ಮಾಡಿಕೊಳ್ಳುವಾಗ 1-1 ವಸ್ತುವಿನ ಮೇಲೂ ಸಂಪೂರ್ಣ ನಿಗಾವಹಿಸಬೇಕು. ಮುಖ ನೋಡುವ ಜನರ ಗಮನ ತಕ್ಷಣ ತುಟಿ, ಕಂಗಳತ್ತ ಹೋಗುತ್ತದೆ. ಆದ್ದರಿಂದ ಸ್ಪ್ಯಾನಿಶ್‌, ಪ್ಲಮ್, ಬರ್ಗೆಂಡಿ, ರೂಬಿ ರೆಡ್‌, ಪ್ಯಶಿಯಾ ಪಿಂಕ್‌, ಪೀಚ್‌ ಇತ್ಯಾದಿ ಬಣ್ಣಗಳ ಲಿಪ್‌ಸ್ಟಿಕ್‌ಆರಿಸಿ. ಈ ಬಣ್ಣಗಳು ನಿಮ್ಮ ತುಟಿಗಳಿಗೆ ಹೆಚ್ಚಿನ ಗ್ಲಾಮರಸ್‌ ಟಚ್ ನೀಡುತ್ತವೆ. ಬ್ರಶ್ಶಿನ ನೆರವಿನಿಂದ ತುಟಿಗಳ ಔಟ್‌ಲೈನ್‌ ಮಾಡುತ್ತಾ, ಇವನ್ನು ಫಿಲ್‌ಮಾಡಿ.

ಡಿಸೈನರ್‌ನೇಲ್ ಆರ್ಟ್‌: ಉಗುರಿನ ಅಂದ ಹೆಚ್ಚಿಸಲು ಇತ್ತೀಚೆಗೆ ಬಗೆಬಗೆಯ ನೇಲ್ ಆರ್ಟ್ಸ್ ಬಂದಿವೆ. ನಿಮ್ಮ ಇಷ್ಟದಂತೆ ಆರಿಸಿ.

ಮಾಯಿಶ್ಚರೈಸಿಂಗ್‌ ಮರೆಯದಿರಿ : ಚಳಿಗಾಲದಲ್ಲಿ ಕೈಕಾಲು ಒಡೆಯುವಿಕೆ, ಮೈ ಚರ್ಮ ಒರಟಾಗುವಿಕೆ ಸಾಧಾರಣ ವಿಷಯವಾದ್ದರಿಂದ, ಅಗತ್ಯ ಆಗಾಗ ಮಾಯಿಶ್ಚರೈಸಿಂಗ್‌ ಮಾಡುತ್ತಿರಬೇಕು.

ಆಕರ್ಷಕ ಹೇರ್‌ಸ್ಟೈಲ್‌ :  ಮಧ್ಯದಲ್ಲಿ ಬೈತಲೆ ಬರುವಂತೆ ಕೂದಲನ್ನು ನೀಟಾಗಿ ಬಾಚಿರಿ. ಅಗತ್ಯವೆನಿಸಿದರೆ ಬೈತಲೆ ಬೊಟ್ಟು ಇರಿಸಿ, ಬಾಬಿ ಪಿನ್‌ಗಳಿಂದ ಕೂದಲಿನಲ್ಲೇ ಸಿಗಿಸಿಬಿಡಿ. ಈಗ ಮೇಲ್ಭಾಗದ ಕೂದಲನ್ನು ತೆಗೆದು ಸ್ಪ್ರೇ ಮಾಡಿ, ಮತ್ತೆ ಬಾಚಿರಿ. ನಂತರ ರೋಲರ್‌ ಬಿಸಿ ಮಾಡಿ, ಟಾಪ್‌ಕೂದಲಿನ 1-1 ಲಡಿಗಳನ್ನು ರೋಲ್ ಮಾಡಿಕೊಳ್ಳಿ. ಹೀಗೆಯೇ ಟಾಪ್‌ನ ಎರಡೂ ಬದಿಯ ಕೂದಲನ್ನು ರೋಲ್ ಮಾಡುತ್ತಾ ಹೋಗಿ. ರೋಲ್ ಮಾಡಿದ ಲಡಿಗಳನ್ನು ಹಿಂಭಾಗಕ್ಕೆ ಕೊಂಡೊಯ್ದು ಪಿನ್ನುಗಳಿಂದ ಸೆಟ್‌ ಮಾಡಿ. ಈಗ 1-1 ಲಡಿಗಳನ್ನು ಟ್ವಿಸ್ಟ್ ಮಾಡುತ್ತಾ ಪಿನ್‌ ಹಾಕಿಡಿ. ಬೇಕಾದರೆ ಹೇರ್‌ ಆ್ಯಕ್ಸೆಸರೀಸ್‌ ಕೂಡ ಸೇರಿಸಿ.

ರೋಲರ್‌ ಹೇರ್‌ಸ್ಟೈಲ್‌ : ಕೂದಲನ್ನು ನೀಟಾಗಿ ಬಾಚಬೇಕು, ಸ್ಪ್ರೇ ಸಿಂಪಡಿಸಿ. ಈಗ ಪೂರ್ತಿ ಕೂದಲಿನಿಂದ 1-1 ತೆಳುವಾದ ಸೆಕ್ಷನ್‌ ರೋಲ್ ಮಾಡಿ. ಹೀಗೆ ಎಲ್ಲಾ ಕೂದಲಿನ ತೆಳುವಾದ ಸೆಕ್ಷನ್‌ ತೆಗೆದುಕೊಳ್ಳುತ್ತಾ, ರೋಲ್ ಮಾಡಿ ಹಾಗೂ ಪೂರ್ತಿ ರೋಲ್‌ ಮಾಡಿದ ಕೂದಲನ್ನು ಒಂದು ಸೈಡಿಗೆ ತಳ್ಳಿ, ಪಿನ್‌ನಿಂದ ಒನ್‌ ಸೈಡ್‌ ಮಾತ್ರ ಸೆಟ್‌ ಮಾಡಿ. ಮತ್ತೊಂದು ಬದಿ ಕೂದಲ ಒಂದು ಲಡಿಯನ್ನು ಕಿವಿಗಳ ಮೇಲೆ ಇಳಿಬಿಡಿ. ಈಗ ಬ್ಯೂಟಿಫುಲ್ ಆ್ಯಕ್ಸೆಸರೀಸ್‌ನಿಂದ ಅಲಂಕರಿಸಿ.

– ಪ್ರತಿನಿಧಿ    

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ