ತಮ್ಮದೇ ಮದುವೆಯಲ್ಲಿ ಯಾರಿಗೇ ಆದರೂ ಸುಂದರವಾಗಿ ಕಾಣಬೇಕೆಂಬ ಬಯಕೆ ಇರುವುದು ಸಹಜ. ಸೌಂದರ್ಯ ಎದ್ದು ತೋರಬೇಕಾದರೆ ಉಡುಗೆ ತೊಡುಗೆಯ ಜೊತೆಗೆ ಮೇಕಪ್‌ನ ಪಾತ್ರ ಹಿರಿದಾಗಿರುತ್ತದೆ.

ವಿವಿಧ ಪ್ರದೇಶ, ಪದ್ಧತಿಗಳಿಗೆ ಅನುಗುಣವಾಗಿ ಮೇಕಪ್‌ ಮಾಡುವ ರೀತಿಯು ಕೊಂಚ ವಿಭಿನ್ನವಾಗಿರುತ್ತದೆ. ಗೃಹಶೋಭಾದ  ಫೇಬ್‌ ಸೆಮಿನಾರ್‌ನಲ್ಲಿ ಮೇಕಪ್‌ ಆರ್ಟಿಸ್ಟ್ ಶಿವಾನಿ ಗೌಡ ಅವರು ಇಂಡಿಯನ್‌ ಮತ್ತು ಪಾಕಿಸ್ತಾನಿ ಬ್ರೈಡಲ್ ಮೇಕಪ್‌ನ ವಿಧಾನಗಳನ್ನು ತಿಳಿಸಿದರು.

ಇಂಡಿಯನ್‌ ಬ್ರೈಡಲ್ ಮೇಕಪ್‌

ಐ ಮೇಕಪ್‌ : ಮೇಕಪ್‌ನ್ನು ಕಣ್ಣಿನಿಂದ ಪ್ರಾರಂಭಿಸಿ, ಏಕೆಂದರೆ ಮುಖದ ಮೊದಲ ಆಕರ್ಷಣೆ ಕಣ್ಣುಗಳೇ ಆಗಿರುತ್ತವೆ. ಎಲ್ಲಕ್ಕಿಂತ ಮೊದಲು ಕ್ರೀಜ್‌ ಲೈನ್‌ ಎಳೆಯಿರಿ ಮತ್ತು ಅದನ್ನು ಬ್ಲೆಂಡ್‌ ಮಾಡಿ, ಲೈಟ್‌ ಕಲರ್‌ನಿಂದ ಪ್ರಾರಂಭಿಸಿ ಡಾರ್ಕ್‌ ಕಲರ್‌ ಮಾಡುತ್ತಾ ಬ್ಲೆಂಡ್‌ ಮಾಡಿ. ಔಟರ್‌ ಕಾರ್ನರ್ಸ್‌ಗೆ ಸ್ಮೋಕಿ ಲುಕ್‌ ಒದಗಿಸಲು ಡಾರ್ಕ್‌ ಬ್ರೌನ್‌ ಕಲರ್‌ ಬಳಸಬಹುದು.

ಬ್ರೈಡಲ್ ಮೇಕಪ್‌ನಲ್ಲಿ ಗೋಲ್ಡನ್‌ ಗ್ಲಿಟರ್‌ನ ಬಳಕೆ ಚೆನ್ನಾಗಿರುತ್ತದೆ. ಮಸ್ಕರಾ ಹಚ್ಚಿ ಆರ್ಟಿಫಿಶಿಯಲ್ ಐ ಲ್ಯಾಶೆಸ್‌ ಹಾಕಿರಿ. ಇದರಿಂದ ಕಣ್ಣುಗಳು ದೊಡ್ಡದಾಗಿ ಕಾಣುತ್ತವೆ. ನಂತರ ವಾಟರ್‌ ಲೈನ್‌ಗೆ ಕಾಜಲ್ ಸೇರಿಸಿ ಸ್ವಲ್ಪ ಸ್ಮಡ್ಜ್ ಮಾಡಿ. ಇದರಿಂದ  ಕಣ್ಣುಗಳ ಸೌಂದರ್ಯ ಹೆಚ್ಚುತ್ತದೆ.

ಬೇಸ್‌ ಸಿದ್ಧಪಡಿಸಿ : ಮೊದಲು ಚರ್ಮವನ್ನು ಮಾಯಿಶ್ಚರೈಸ್‌ ಮಾಡಿ. ಆಯ್ಲಿ ಸ್ಕಿನ್‌ ಆದರೆ ಹೆಚ್ಚು ಮಾಯಿಶ್ಚರೈಸರ್‌ ಬೇಡ. ಆಮೇಲೆ ಪ್ರೈಮರ್‌ ಹಚ್ಚಿ. ನಂತರ ಕಲೆಗಳು ಕಾಣದಂತೆ ಎಫೆಕ್ಟೆಡ್‌ ಏರಿಯಾವನ್ನು ಕನ್ಸೀಲ್ ‌ಮಾಡಿ. ಈಗ ಕ್ರೀಮ್ ಬೇಸ್ಡ್ ಫೌಂಡೇಶನ್‌ನ್ನು ಚರ್ಮಕ್ಕೆ ಚೆನ್ನಾಗಿ ಹಚ್ಚಿ. ಆಮೇಲೆ ಟ್ರಾನ್ಸ್ ಲೂಶನ್‌ ಪೌಡರ್‌ನಿಂದ ಮೇಕಿಂಗ್‌ ಮಾಡಿ. ಇದರಿಂದ ಕಾಜಲ್ ಹರಡುವುದಿಲ್ಲ ಮತ್ತು ಮೇಕಪ್‌ ಹೆಚ್ಚು ಕಾಲ ಉಳಿಯುತ್ತದೆ. ಈಗ ಮುಖಕ್ಕೆ ಸುಂದರ ಶೇಪ್‌ ಕೊಟ್ಟು ಮುಖದ ಫೀಚರ್ಸ್ ಎದ್ದು ಕಾಣುವಂತೆ ಮಾಡಲು ಫೇಸ್‌ ಕಾಂಟೂರಿಂಗ್‌ ಮಾಡಿ. ನಂತರ ಬ್ಲಶರ್‌ ಹಚ್ಚಿ. ಆಮೇಲೆ ಚೀಕ್‌ ಬೋನ್ಸ್ ಏರಿಯಾವನ್ನು ಹೈಲೈಟ್‌ ಮಾಡಿ.

ಲಿಪ್‌ ಮೇಕಪ್‌ : ಮೊದಲು ತುಟಿಗಳಿಗೆ ಲಿಪ್‌ ಬಾಮ್ ಹಚ್ಚಿ ಮೃದುಗೊಳಿಸಿ. ಈಗ ಲಿಪ್‌ ಪೆನ್ಸಿಲ್‌ನಿಂದ ಶೇಪ್‌ ಕೊಟ್ಟು ಅದೇ ಬಣ್ಣದ ಲಿಪ್‌ಸ್ಟಿಕ್‌ ಹಚ್ಚಿ. ಮೇಕಪ್‌ ಆದ ನಂತರ ಫಿಕ್ಸಿಂಗ್‌ ಸ್ಪ್ರೇ ಮಾಡಿ. ಇದರಿಂದ ಮೇಕಪ್‌ ಹೆಚ್ಚು ಕಾಲ ಉಳಿದಿರುತ್ತದೆ.

ಪಾಕಿಸ್ತಾನಿ ಬ್ರೈಡಲ್ ಮೇಕಪ್

ಇದರಲ್ಲಿ ಕೆಲವು ಅಂಶಗಳ ಹೊರತು ಉಳಿದುದೆಲ್ಲ ಇಂಡಿಯನ್‌ ಬ್ರೈಡಲ್ ಮೇಕಪ್‌ನಂತೆಯೇ ಇರುತ್ತದೆ.

ಪಾಕಿಸ್ತಾನಿ ಬ್ರೈಡಲ್ ಮೇಕಪ್‌ನಲ್ಲಿ ಈ ವಿಷಯಗಳನ್ನು ಗಮನಿಸಿ :

ಇದರಲ್ಲಿ ಐ ಲೈನರ್‌ನ್ನು ದಪ್ಪನಾಗಿ ಹಚ್ಚಲಾಗುತ್ತದೆ.

ಕಟ್‌ ಅಂಡ್‌ ಕ್ರೀಸ್‌ ಐ ಮೇಕಪ್‌ ಮಾಡಲಾಗುತ್ತದೆ.

ಹೆವಿ ಐ ಲ್ಯಾಶೆಸ್‌ ಬಳಸಲಾಗುತ್ತದೆ.

ಕಣ್ಣುಗಳ ಮೇಲೆ  ಗ್ಲಿಟರ್‌ ಮತ್ತು ಪಿಗ್ಮೆಂಟ್ಸ್ ಬಳಸಲಾಗುತ್ತದೆ.

ಫೇಸ್‌ ಕಾಂಟೂರಿಂಗ್‌ ಕೊಂಚ ಡಾರ್ಕ್‌ ಆಗಿರುತ್ತದೆ.

ಹೇರ್‌ ಸ್ಟೈಲ್ ಸಹ ಹೆವಿಯಾಗಿರುತ್ತದೆ. ಹೈಪಫ್‌, ಸ್ಟಫಿಂಗ್‌ ಮತ್ತು ಎಕ್ಸ್ ಟೆನ್ಶನ್‌ಗಳನ್ನು ಬಳಸಲಾಗುತ್ತದೆ.

-  ಪಿ. ಅಂಜಲಿ 

ಹೇರ್‌ ಬನ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ