ಶ್ರೀಗಂಧ ಬಹಳ ದುಬಾರಿಯಾದ ಉರುಲಾಗಿದೆ. ಭಾರತದಲ್ಲಿ ಇದರ ಉಪಯೋಗ ಹೆಚ್ಚು. ಇದು ಬಹಳ ನಿಧಾನವಾಗಿ ಬೆಳೆಯುವುದರಿಂದ ಇದರ ಬೆಲೆ ಹೆಚ್ಚು. ಒಂದು ಗಂಧದ ಮರವನ್ನು ಸಂಪೂರ್ಣವಾಗಿ ಬೆಳೆಸುವಲ್ಲಿ ಅನೇಕ ವರ್ಷಗಳು ಬೇಕಾಗುತ್ತವೆ. ಪುರಾತನ ನಾಗರಿಕತೆಯಲ್ಲಿ ಗಂಧದ ಉಪಯೋಗವನ್ನು ಒಂದಲ್ಲಾ ಒಂದು ಕಡೆ ಅಗತ್ಯವಾಗಿ ನೋಡಬಹುದು.

ಇತ್ತೀಚಿನ ಸೌಂದರ್ಯ ಪ್ರಸಾಧನಗಳಲ್ಲಿ ಬ್ಯೂಟಿ ಪೇಸ್ಟ್ ಅಥವಾ ಸುಗಂಧಿತ ಪರ್ಪ್ಯಮ್ ಗಳಲ್ಲಿ ಗಂಧವನ್ನು ಅಗತ್ಯವಾಗಿ ಉಪಯೋಗಿಸಲಾಗುತ್ತದೆ. ಸ್ಪ್ರೇ, ಸಾಬೂನು ಇತ್ಯಾದಿ ತಯಾರಿಸುವ ಕಂಪನಿಗಳು ತಮ್ಮ ಉತ್ಪನ್ನಗಳಲ್ಲಿ ಗಂಧವನ್ನು ಬಳಸುತ್ತಾರೆ.

ಸೌಂದರ್ಯಷ್ಟೇ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಗಂಧ ಅತ್ಯಮೂಲ್ಯವಾಗಿದೆ. ಗಂಧದ ಗುಣಗಳ ಬಗ್ಗೆ ತಿಳಿಯೋಣ ಬನ್ನಿ.

ಬಿಸಿಲಿನಿಂದ ನಸುಗಪ್ಪಾಗಿರುವ ತ್ವಚೆಯಲ್ಲಿ ಮತ್ತೆ ಕಾಂತಿ ತರಲು ಎಳನೀರು, ಹಸಿ ಹಾಲು, ಸೌತೆಕಾಯಿ ರಸ, ನಿಂಬೆರಸ, ಕಡಲೆಹಿಟ್ಟು ಮತ್ತು ಕೊಂಚ ಗಂಧದ ಪುಡಿ ಬೆರೆಸಿ ಪೇಸ್ಟ್ ತಯಾರಿಸಿ. ಸ್ನಾನ ಮಾಡುವ 1 ಗಂಟೆ ಮೊದಲು ಇದನ್ನು ತ್ವಚೆಗೆ ಹಚ್ಚಿಕೊಳ್ಳಿ. ಹೀಗೆ ವಾರಕ್ಕೆ 2 ಬಾರಿ ಮಾಡಿ. ತ್ವಚೆ ಸ್ವಚ್ಛವಾಗುತ್ತದೆ.

ಗಂಧದಲ್ಲಿ ಆ್ಯಂಟಿ ಬಯಾಟಿಕ್‌ ಅಂಶಗಳಿವೆ. ಜೊತೆಗೆ ತನ್ನ ಪ್ರಾಕೃತಿಕ ಔಷಧೀಯ ಗುಣಗಳಿಂದಾಗಿ ಗಂಧ ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಗಂಧವನ್ನು ಲೇಪಿಸುವುದರಿಂದ ಮೊಡವೆಗಳಷ್ಟೇ ನಿವಾರಣೆಯಾಗುವುದಿಲ್ಲ. ಅದು ತ್ವಚೆಯನ್ನು ಸ್ವಚ್ಛಗೊಳಿಸಿ ಆರ್ದ್ರತೆಯನ್ನು ನೀಡುತ್ತದೆ.

ಯಾವುದೇ ರೀತಿಯ ಗುಳ್ಳೆಗಳು, ಗಾಯಗಳನ್ನು ಗಂಧದ ನಿಯಮಿತ ಉಪಯೋಗದಿಂದ ದೂರ ಮಾಡಬಹುದು.

ಗಂಧದ ಪುಡಿಗೆ ಕಪ್ಪು ಕಡಲೆಕಾಳಿನ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಹಾಲು ಅಥವಾ ಗುಲಾಬಿ ಜಲದೊಂದಿಗೆ ರಾತ್ರಿ ಮುಖಕ್ಕೆ ಹಚ್ಚಿ ಬೆಳಗಿನವರೆಗೂ ಬಿಟ್ಟರೆ ಮೊಡವೆಗಳು ಮಾಯವಾಗುತ್ತವೆ.

ಹೆಚ್ಚಾಗಿ ಬೆವರು ಬರುತ್ತಿದ್ದರೆ ಗಂಧದ ಪುಡಿಯನ್ನು ನೀರಿಗೆ ಬೆರೆಸಿ ದೇಹಕ್ಕೆ ಹಚ್ಚಿದರೆ ಬೆವರು ಹೆಚ್ಚು ಬರುವುದಿಲ್ಲ.

ಗಂಧದ ವಾಸನೆಯನ್ನು ಮೂಸಿ ನೋಡುವುದರಿಂದ ಶ್ವಾಸಕೋಶಗಳು ಸಕ್ರಿಯವಾಗುತ್ತವೆ.

ಗಂಧದೆಣ್ಣೆಯನ್ನು ಸ್ಪ್ರೇ ಮಾಡುವುದರಿಂದ ದೇಹದಲ್ಲಿ ತಂಪುತನ ಉಂಟಾಗುತ್ತದೆ.

ಗಂಧದ ಪುಡಿ ಅಥವಾ ಗಂಧದ ತುಂಡನ್ನು ಉಜ್ಜಿ ಮಾಡಿದ ಪೇಸ್ಟ್ ನ್ನು ಲೇಪಿಸುವುದರಿಂದ ಸೂರ್ಯನ ಕಿರಣಗಳಿಂದ ಪ್ರಭಾವಿತಾದ ತ್ವಚೆಗೆ ತಂಪುತನ ಮತ್ತು ತಾಜಾತನ ಸಿಗುತ್ತದೆ.

ತಣ್ಣೀರಿಗೆ ಕೆಲವು ತೊಟ್ಟು ಗಂಧದೆಣ್ಣೆ ಹಾಕಿ. ಅದೇ ನೀರಿನಿಂದ ದಿನ ಸ್ನಾನ ಮಾಡಿ. ಅದರಿಂದ ನಿಮ್ಮ ತ್ವಚೆಗೆ ಒಂದು ರಕ್ಷಣಾ ಪದರ ಸಿಗುತ್ತದೆ.

ಗಂಧವನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ತ್ವಚೆ ಕೋಮಲವಾಗಿ ಹಾಗೂ ಯೌವನದಿಂದ ಕಂಡುಬರುತ್ತದೆ.

- ವಿನುತಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ