ಇಂದಿನ ಯುವಜನತೆ ಮೆದುಳನ್ನು ತಂಪಾಗಿಡಲು ಮತ್ತು ಸ್ಟೈಲಿಶ್‌ ಆಗಿ ಕಾಣಿಸಲು ಹೇರ್‌ ಕೂಲ್ ಶೇಡ್‌ ಇಷ್ಟಪಡುತ್ತಾರೆ. ಬಟ್ಟೆಗಳ ಬಣ್ಣಕ್ಕೆ ತಕ್ಕಂತೆ ಕೂದಲಿನ ಬಣ್ಣ ಬದಲಾಗುತ್ತದೆ. ಕೂಲ್ ಕೂಲ್ ಆಗಿರಲು ಲೈಟ್‌ ಕಲರ್ಸ್‌ ಉಪಯೋಗಿಸಲಾಗುತ್ತದೆ. ಏಕೆಂದರೆ ಕಪ್ಪು ಕೂದಲಿನಲ್ಲಿ ಹೆಚ್ಚು ಉಷ್ಣತೆ ಇರುತ್ತದೆ. ಜನ ಬೇಸಿಗೆಯಲ್ಲಿ ಹೇರ್‌ ಕಲರ್‌ ಬದಲಿಸಲು ಇಚ್ಛಿಸುತ್ತಾರೆ. ನೀವು ಸಹ ಕಲರ್‌ನಿಂದ ಟ್ರೆಂಡಿ ಮತ್ತು ಸ್ಮಾರ್ಟ್ ಲುಕ್‌ ಇಚ್ಛಿಸುತ್ತೀರಾ? ಹಾಗಾದರೆ ಕೆಲವು ವಿಷಯಗಳನ್ನು ಗಮನಿಸಿ.

ಮುಖಕ್ಕೆ ತಕ್ಕಂತೆ

ಮುಖಕ್ಕೆ ತಕ್ಕಂತೆಯೇ ಕೂದಲಿಗೆ ಕಲರ್‌ ಮಾಡಿಸಿ. ನಿಮ್ಮದು ಡಾರ್ಕ್‌ ಕಾಂಪ್ಲೆಕ್ಷನ್‌ ಆಗಿದ್ದರೆ ನ್ಯಾಚುರಲ್, ಏಸ್‌, ಗೋಲ್ಡ್, ಮೋಚಾ, ಗೋಲ್ಡ್ ರೆಡ್‌ ಕಲರ್‌ ಮಾಡಿಸಬಹುದು. ಸ್ಕಿನ್‌ ಕಲರ್‌ಗೆ ತಕ್ಕಂತೆ ಬ್ಯೂಟೀಶಿಯನ್‌ ಕಲರ್‌ ಮಾಡುತ್ತಾರೆ. ಕೂಲ್ ‌ಶೇಡ್ಸ್ ನಲ್ಲಿ ವೈಲೆಟ್‌ ಕಲರ್‌, ಬ್ಲೂ ವೈಲೆಟ್‌ ಕಲರ್‌, ಬ್ಲೂ ಕಲರ್‌, ಬ್ಲೂ ಗ್ರೀನ್‌ ಕಲರ್‌, ಗ್ರೀನ್‌ ಕಲರ್‌ಗಳಿವೆ. ಈ ಕಲರ್‌ಗಳು ಬೇಸಿಗೆಯಲ್ಲಿ ಮೆದುಳನ್ನು ತಂಪಾಗಿಡಲು ಉಪಯೋಗಿಸಲಾಗುತ್ತದೆ.

ಬ್ಯೂಟೀಶಿಯನ್‌ರ ಸಲಹೆ

haircolour2

ಟ್ರೆಂಡಿ ಬ್ಯೂಟೀಶಿಯನ್‌ ಮಾತ್ರ ಇವುಗಳನ್ನು ಉಪಯೋಗಿಸುತ್ತಾರೆ. ಈ ಕಲರ್‌ಗಳಿಂದ ಯಾವುದೇ ಕೆಟ್ಟ ಪ್ರಭಾವ ಉಂಟಾಗುವುದಿಲ್ಲ. ಆದರೆ ಬ್ಯೂಟೀಶಿಯನ್‌ರ ಸಲಹೆ ಪಡೆದೇ ಕಲರ್‌ ಮಾಡಿಸುವುದು ಅಗತ್ಯ. ಜೊತೆಗೆ ಅವರು ಯಾವ ಕಂಪನಿಯ ಕಲರ್‌ ಉಪಯೋಗಿಸುತ್ತಿದ್ದಾರೆಂದು ಗಮನಿಸಿ. ಏಕೆಂದರೆ ಯಾವುದೇ ಸೈಡ್‌ ಎಫೆಕ್ಟ್ ಇರಬಾರದು. ಕೂದಲಿಗೆ ಕಲರ್‌ ಮಾಡಿದ ನಂತರ ಮನೆಯಲ್ಲೇ ಶ್ಯಾಂಪೂ ಮತ್ತು ಕಂಡೀಶನಿಂಗ್‌ ಮಾಡಿಕೊಳ್ಳಿ. ಆದರೆ ಇದರ ಜೊತೆಗೆ ಟ್ರೀಟ್‌ಮೆಂಟ್ ಕೆಲಸ ಮಾಡುವ ಹೇರ್‌ ಸ್ಪಾ ಮತ್ತು ಸೀರಮ್ ನ್ನು ಪಾರ್ಲರ್‌ನಲ್ಲೇ ಮಾಡಿಸಿಕೊಳ್ಳಿ.

ಇಟ್ಸ್ ಟೈಮ್ ಫಾರ್‌ ಹೇರ್‌ ಕಲರ್ಸ್‌ ಇಂದು ಮಾರುಕಟ್ಟೆಯಲ್ಲಿ ಈ ಕೆಳಗಿನ ಹೇರ್‌ ಕಲರ್‌ಗಳ ಸದ್ದು ಹೆಚ್ಚಾಗಿವೆ.

ಕ್ರೇಜಿ ಕಲರ್‌, ನ್ಯಾಚುರಲ್ ಕಲರ್‌, ಏಸ್‌ ಕಲರ್‌, ಗೋಲ್ಡ್ ಕಲರ್‌, ಮೋಚಾ ಕಲರ್‌, ಚಾಕಲೇಟ್‌ ಕಲರ್‌, ಚಾಕಲೇಟ್‌ ಚೆರ್ರಿ ಬ್ರೌನ್‌, ಕಾಪರ್‌, ಚಾಕಲೇಟ್‌ ಚೆರ್ರಿ ಬ್ರೌನ್‌ ರೆಡ್‌, ಗೋಲ್ಡ್, ಗೋಲ್ಡ್ ರೆಡ್‌ ಕಾಪರ್‌.

ಕೆಲವು ಟಿಪ್ಸ್

hair-colour1

ಮೊದಲ ಬಾರಿ ಕಲರ್‌ ಮಾಡಿಸುತ್ತಿದ್ದರೆ ಒಳ್ಳೆಯ ಪಾರ್ಲರ್‌ನಲ್ಲೇ ಹೇರ್‌ ಕಲರ್‌ ಮಾಡಿಸಿ.

ಮೊದಲು ಕೆಲವು ಕೂದಲನ್ನು ಕಲರ್‌ ಮಾಡಿಸಿ. ಕಲರ್‌ ಸೂಟ್‌ ಆದರೆ ಅದರಿಂದಲೇ ಮಾಡಿಸಿ.

ಹೇರ್‌ ಕಲರ್‌ ಆರಿಸುವಾಗ ನಿಮ್ಮ ಸ್ಕಿನ್‌ ಟೋನ್‌ಗೆ ತಕ್ಕ ಹೇರ್‌ ಕಲರ್‌ ಆರಿಸಿ.

ಕೂದಲಿಗೆ ಕಲರ್‌ ಮಾಡುವಾಗ ನಿಮ್ಮ ಕಣ್ಣುಗಳ ಸುರಕ್ಷತೆಯ ಬಗ್ಗೆ ಗಮನ ಕೊಡಿ.

ಯಾವಾಗಲೂ ಒಳ್ಳೆಯ ಬ್ರ್ಯಾಂಡೆಡ್‌ ಕಲರನ್ನೇ ಉಪಯೋಗಿಸಿ.

ಹೆಚ್ಚು ಬಿಸಿಲಿನಿಂದಾಗಿ ಕಲರ್‌ ಮಾಡಿದ ಕೂದಲು ಹಾಳಾಗುತ್ತದೆ. ಅದನ್ನು ಬಿಸಿಲಿನಿಂದ ರಕ್ಷಿಸಿ.

- ಕೆ. ಸುವರ್ಣಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ