ಸೀದಾಸಾದಾ ಜೀವನದಲ್ಲಿ ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಕಲ್ಲು ರಪ್ಪನೆ ಬಡಿದಂತಾಗುವ ಸಂದರ್ಭ ಎಂದರೆ ಇದೇ ಇರಬೇಕು.
ಆದು ಯಾವಾಗ ಅಂತೀರಾ? ಯಾವುದಾದರೂ ಪಾರ್ಟಿ, ಸಮಾರಂಭ ವೃಥಾ ಹೊರಗಿನ ಓಡಾಟದ ಮಧ್ಯೆ ನಿಮ್ಮನ್ನು ಕಂಡು ಯುವಕ ಯುವತಿಯರು, `ಆಲ್ಲಿ ನೋಡು... ಪೂರ್ವಕಾಲದ ಪುಟ್ಟಮ್ಮನ ಹಾಗೆ....' ಎಂದಾಗ ನೋವು ಅನುಭವಿಸಿದವರಿಗೇ ಗೊತ್ತು. ಕಾಲೇಜು, ಆಫೀಸ್, ಇತರ ಸಾಮಾಜಿಕ ಸಂದರ್ಭಗಳಲ್ಲಿ ಇದು ಆಗುತ್ತಿರುತ್ತದೆ.
ಇಂಥ ವ್ಯಂಗ್ಯದ ಮಾತುಗಳಿಂದ ಅದನ್ನು ಕೇಳಿಸಿಕೊಂಡ ಪ್ರತಿಭಾನ್ವಿತ ಯುವತಿಯ ಆತ್ಮವಿಶ್ವಾಸವೇ ಹಾರಿಹೋಗುತ್ತದೆ. ಆದರೆ ಅದನ್ನಾಡಿದವರು 2 ನಿಮಿಷದಲ್ಲಿ ಅದನ್ನು ಮರೆತುಬಿಡುತ್ತಾರೆ. ಈ ವ್ಯಂಗ್ಯೋಕ್ತಿ ಎಷ್ಟು ದಿನಗಳಾದರೂ ಕುಟುಕುತ್ತಲೇ ಇರುತ್ತದೆ. ಇದರ ಪರಿಣಾಮ ಆ ಯುವತಿಯ ಇಡೀ ವ್ಯಕ್ತಿತ್ವದ ಮೇಲಾಗಿ ಅವಳು ಕೀಳರಿಮೆಯಿಂದ ಕುಗ್ಗಿಹೋಗುತ್ತಾಳೆ. ಇಂಥವರಿಗಾಗಿಯೇ ಇಲ್ಲಿವೆ ಸಲಹೆಗಳು.
ಇದನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ನೀವು ಯೋಚಿಸಬಹುದು. ದೃಢ ಆತ್ಮವಿಶ್ವಾಸ, ಸಾಧಿಸಿ ತೋರಿಸುತ್ತೇನೆ ಎಂಬ ಛಲ ನಿಮ್ಮನ್ನು ಈ ವ್ಯಂಗ್ಯದಿಂದ ಪಾರು ಮಾಡುತ್ತದೆ. ಅದಕ್ಕಾಗಿ ನೀವು ಕಟ್ಟುನಿಟ್ಟಾಗಿ ಈ ಕ್ರಮಗಳನ್ನು ಅನುಸರಿಸಿದರೆ ಆಯಿತು.
ಸತ್ಯವನ್ನು ಮನಗಾಣಿರಿ
ಇಂದು ಸುಮಾರು ಶೇ.40ಕ್ಕೂ ಹೆಚ್ಚು ಮಂದಿ ಹೇಗಿರುತ್ತಾರೆಂದರೆ, ಪ್ರತಿಭಾಶಾಲಿಗಳಾಗಿದ್ದರೂ ತಮ್ಮ ಕೀಳರಿಮೆ, ಝೀರೋ ಕಾನ್‌ಫಿಡೆನ್ಸ್ ಲೆವೆಲ್‌ನಿಂದ, ಅಸಲಿಗೆ ತಾವು ಯಾವ ಮಟ್ಟದಲ್ಲಿ ಇರಬೇಕಾಗಿತ್ತೋ, ಆ ಮಟ್ಟದಲ್ಲಿ ಇರದೆ, ಜೀವನದ ಯಾವುದೇ ತಿರುವಿನಲ್ಲಿ, ಅದು ಕಾಲೇಜಿನ ವಿದ್ಯಾರ್ಥಿ ಜೀವನ ಅಥವಾ ಸಂದರ್ಶನಕ್ಕೆ ಹೋದಾಗ, ಸಾಮಾಜಿಕ ಸಮಾರಂಭ ಮುಂತಾದೆಡೆ ತಮ್ಮ ಪರ್ಸನಾಲ್ಟಿ, ಕಾಂಪ್ಲೆಕ್ಷನ್, ಡ್ರೆಸ್‌ಸೆನ್ಸ್, ಆರ್ಥಿಕ ಕೊರತೆ, ಹಿಂಜರಿಕೆಯ ಸ್ವಭಾವಗಳಿಂದಾಗಿ ತಮ್ಮ ಸಹಪಾಠಿ, ಸಹೋದ್ಯೋಗಿಗಳ ಬಳಿ ಇಂಥ ಮಾತು ಕೇಳಬೇಕಾಗುತ್ತದೆ. ಆ ಘಟನೆ ನಡೆದು, ಅನೇಕ ದಿನಗಳ ನಂತರ ಅದರ ಕುರಿತು ಚಿಂತಿಸಿದರೆ, ನಿಮ್ಮನ್ನು ಹಾಗೆ ಆಡಿಕೊಂಡವರು ತಮ್ಮ ಪಾಡಿಗೆ ತಾವು ಹಾಯಾಗಿದ್ದಾರೆ.
ನೀವು ಇದ್ದೀರೋ ಇಲ್ಲವೋ ಎಂಬುದು ಕೂಡ ಅವರಿಗೆ ಮರೆತುಹೋಗಿರುತ್ತದೆ. ಹಾಗಿರುವಾಗ ಎಂದೋ ಯಾರೋ ಆಡಿದ ಮಾತಿಗೆ ನೀವೇಕೆ ಅಷ್ಟು ನೊಂದುಕೊಳ್ಳಬೇಕು?
ಕೆಲವರಂತೂ ಇದನ್ನೇ ಆಳವಾಗಿ ಯೋಚಿಸುತ್ತಾ ಡಿಪ್ರೆಶನ್‌ಗೆ ಒಳಗಾಗುತ್ತಾರೆ. ನಿಮ್ಮ ಅಮೂಲ್ಯ ಜೀವನದ ಕ್ಷಣಗಳನ್ನು ಇಂಥ ಕ್ಷುಲ್ಲಕ ಟೀಕೆ ಟಿಪ್ಪಣಿಗಳ ಕುರಿತು ಯೋಚಿಸುತ್ತಾ ನಿಮ್ಮ ಮನಶ್ಶಾಂತಿ ಹಾಳುಮಾಡಿಕೊಳ್ಳುವಿರಾ? ಈಗ ಮುಂದೇನು ಮಾಡಬೇಕೆಂದು ಯೋಚಿಸಿ. ಜೀವನದುದ್ದಕ್ಕೂ ಹೀಗೆ ಯೋಚಿಸುತ್ತಾ ಇರುವುದೇ ಅಥವಾ ಕಳೆದುಕೊಂಡ ಆತ್ಮವಿಶ್ವಾಸ ಮರಳಿ ಪಡೆಯುವುದೇ?
ಫ್ಯಾಷನ್ ಸ್ಟೈಲಿಸ್ಟ್ ಆಗಿರಿ ಪೂರ್ವ ಕಾಲದ ಪುಟ್ಟಮ್ಮನನ ಟೈಪ್ ಎಂದರೆ, ನೀವು ನಿಮ್ಮ ಪರ್ಸನಾಲ್ಟಿ ಡ್ರೆಸ್ ಸೆನ್ಸ್ ಕಾರಣ ಗುಂಪಿನಲ್ಲಿ ಎಲ್ಲೋ ಹಿಂದುಳಿದಿದ್ದೀರಿ ಎಂದರ್ಥ. ಬೋಲ್ಡ್ ಬೂಟ್ಟಿೞುಲ್ ಎನಿಸಲು ಗುಂಪಿನಲ್ಲಿ ಹಿಂದುಳಿಯಬಾರದು, ಮುನ್ನುಗ್ಗಿ ಬರಬೇಕು. ನೀವು ನಿಮ್ಮ ವಾರ್ಡ್ ರೋಬ್‌ನಿಂದ ಹೊಳೆಯುವ, ನಕ್ಷತ್ರ ಬುಟ್ಟಾಗಳ, ಔಟ್‌ಡೇಟೆಡ್ ಸಡಿಲ ವಸ್ತ್ರಗಳನ್ನು ಹೊರಗೆ ತೆಗೆದು, ಅದರ ಜಾಗದಲ್ಲಿ ನಿಮ್ಮ ಫಿಗರ್‌ಗೆ ತಕ್ಕಂಥ ಲೇಟೆಸ್ಟ್ ಫ್ಯಾಷನ್ನಿನ ಡ್ರೆಸ್ ಆರಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಪತ್ರಿಕೆಗಳನ್ನು, ಟಿ.ವಿ ಕಾರ್ಯಕ್ರಮ, ಲೋಕಲ್ ಶಾಪಿಂಗ್‌ನ ನೆರವು ಪಡೆಯಿರಿ.